
ನವದೆಹಲಿ, ಆಗಸ್ಟ್ 23: ಸಮೀಪಿಸುತ್ತಿರುವ ಹಬ್ಬದ ಸೀಸನ್ ಹಿನ್ನೆಲೆಯಲ್ಲಿ ದೇಶದಲ್ಲಿ ಸಕ್ಕರೆ ಬೆಲೆಯಲ್ಲಿ (Sugar Prices) ತೀವ್ರ ಏರಿಕೆಯಾಗಿದೆ. ಕೇವಲ ಒಂದೇ ತಿಂಗಳಲ್ಲಿ ಅಥವಾ ಕೆಲವೇ ದಿನಗಳಲ್ಲಿ ದೇಶದ ಪ್ರಮುಖ ನಗರಗಳಲ್ಲಿ ಸಕ್ಕರೆ ಬೆಲೆ ಪ್ರತಿ ಕೆ.ಜಿ.ಗೆ ಸುಮಾರು ₹5 ರಿಂದ ₹7 (ಅಥವಾ ಶೇ. 20 ರಷ್ಟು) ವರೆಗೆ ಹೆಚ್ಚಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಸಕ್ಕರೆ ದರವು ಗರಿಷ್ಠ ಮಟ್ಟಕ್ಕೆ ತಲುಪಿದೆ.
ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಸಚಿವಾಲಯ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ, ಜುಲೈ 20ರಂದು ಸಕ್ಕರೆಯ ಸರಾಸರಿ ಬೆಲೆ ಕಿಲೋಗೆ ₹48.18 ಇತ್ತು. ಒಂದು ತಿಂಗಳ ನಂತರ (ಆಗಸ್ಟ್ 20) ಇದರ ಸರಾಸರಿ ಬೆಲೆ ₹55.70 ಆಗಿದೆ. ಒಂದೇ ತಿಂಗಳಲ್ಲಿ ಶೇ. 15ರಷ್ಟು ಬೆಲೆ ಹೆಚ್ಚಳವಾಗಿದೆ.
ಇದನ್ನೂ ಓದಿ: ಹೆಬ್ಬಾಳ-ಸಿಲ್ಕ್ ಬೋರ್ಡ್ ಸುರಂಗ ರಸ್ತೆ ಯೋಜನೆ; ಅದಾನಿ ಗ್ರೂಪ್ ಎಲ್1 ಆಗಿ ಆಯ್ಕೆ; ಕುತೂಹಲ ಮೂಡಿಸಿದ ಅದಾನಿ-ಸಿಎಂ ಭೇಟಿ
ಅಂತಾರಾಷ್ಟ್ರೀಯ ಸಕ್ಕರೆ ಬೆಲೆಗಳೂ ಇದೇ ವೇಳೆ ಹೆಚ್ಚಿವೆ. ಸರ್ಕಾರದ ದತ್ತಾಂಶದ ಪ್ರಕಾರ, ಜೂನ್ 30ರಂದು ಅಂತಾರಾಷ್ಟ್ರೀಯ ಸಕ್ಕರೆ ಬೆಲೆ ಟನ್ಗೆ 474 ಡಾಲರ್ ಇತ್ತು. ಆಗಸ್ಟ್ 20ಕ್ಕೆ ಅದರ ಬೆಲೆ 552 ಡಾಲರ್ಗೆ ಹೋಗಿದೆ. ಎರಡು ತಿಂಗಳಲ್ಲಿ ಬೆಲೆ ಶೇ. 16ರಷ್ಟು ಏರಿದೆ.
ಇದನ್ನೂ ಓದಿ: ಹಬ್ಬದ ಸೀಸನ್ನಲ್ಲಿ ಸಕ್ಕರೆ ಲಭ್ಯತೆ ಖಚಿತಪಡಿಸಲು ಮತ್ತು ಬೆಲೆ ಏರಿಕೆ ನಿಯಂತ್ರಿಸಲು ಸರ್ಕಾರ ಕೈಗೊಂಡ ವಿವಿಧ ಕ್ರಮಗಳೇನು?
ಬೆಲೆ ಏರಿಕೆಯನ್ನು ನಿಯಂತ್ರಿಸಲು ಮತ್ತು ದೇಶೀಯ ಮಾರುಕಟ್ಟೆಯಲ್ಲಿ ಸರಬರಾಜನ್ನು ಸುಧಾರಿಸಲು ಕೇಂದ್ರ ಸರ್ಕಾರವು ಸಕ್ಕರೆ ದಾಸ್ತಾನು ಮಿತಿ (Stockholding limits) ಸೇರಿದಂತೆ ಅಗತ್ಯ ನಿಯಂತ್ರಕ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 2:03 pm, Sun, 23 August 26