ಈಕ್ವಿಟಿ ಮಾರುಕಟ್ಟೆಗಳು ಹೆಚ್ಚಿನ ಏರಿಳಿತದಿಂದ ಕೂಡಿರುವುದರಿಂದ ಯೋಗ್ಯವಾದ ರಿಟರ್ನ್ಸ್ ಗಳಿಸಲು ಸುರಕ್ಷಿತ ಹೂಡಿಕೆ ಆಯ್ಕೆಗಳು ಭಾರತೀಯ ಹೂಡಿಕೆದಾರರ ಪ್ರಮುಖ ಆದ್ಯತೆ ಆಗಿದೆ. ಅಂತಹ ಹೂಡಿಕೆದಾರರ ಅಗತ್ಯಗಳನ್ನು ಪೂರೈಸಲು, ಹಲವಾರು ಬ್ಯಾಂಕ್‌ಗಳು ನಿಶ್ಚಿತ ಠೇವಣಿಗಳ (Fixed Deposits) ಆಫರ್ಗಳನ್ನು ನೀಡುತ್ತವೆ. ಠೇವಣಿಗಳ ಮೇಲೆ ಉದಾರವಾದ ಲಾಭವನ್ನು ನೀಡುತ್ತವೆ. ಎಫ್‌ಡಿ ಹೂಡಿಕೆದಾರರಿಗೆ ಉತ್ತೇಜನ ನೀಡುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ಕೆಲವು ಬ್ಯಾಂಕ್‌ಗಳು ಬಡ್ಡಿ ದರಗಳನ್ನು ಹೆಚ್ಚಿಸಿವೆ. ಎಫ್‌ಡಿ ಬಡ್ಡಿದರಗಳನ್ನು ಹೆಚ್ಚಿಸಿದ ಮತ್ತೊಂದು ಬ್ಯಾಂಕ್ ಅಂದರೆ, ಅದು ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್. ಈಗ ಬ್ಯಾಂಕ್ ಮಾರ್ಚ್ 10, 2022ರಿಂದ ಜಾರಿಗೆ ಬರುವಂತೆ 3 ವರ್ಷಗಳ ಅವಧಿಗೆ ಠೇವಣಿಗಳ ಮೇಲೆ ಎಫ್‌ಡಿ ಖಾತೆಗೆ ಶೇ 7ರ ರಿಟರ್ನ್ ನೀಡುತ್ತಿದೆ.
ಅಲ್ಲದೆ, ಹಿರಿಯ ನಾಗರಿಕರು ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ನಲ್ಲಿ ತಮ್ಮ ನಿಶ್ಚಿತ ಠೇವಣಿಗಳ ಮೇಲೆ ಹೆಚ್ಚುವರಿ ಶೇ 0.50ರಷ್ಟು ಲಾಭವನ್ನು ಪಡೆಯುತ್ತಾರೆ. ಆದ್ದರಿಂದ ಹಿರಿಯ ನಾಗರಿಕ ಎಫ್‌ಡಿ ಖಾತೆದಾರರು 3 ವರ್ಷಗಳ ಅವಧಿಗೆ ಖಾತೆಯಲ್ಲಿ ಶೇ 7.5 ರಿಟರ್ನ್ಸ್ ಪಡೆಯುತ್ತಾರೆ.
ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್ (SSFB) ಹೊಸ ಎಫ್‌ಡಿ ಬಡ್ಡಿ ದರಗಳು
7ರಿಂದ 14 ದಿನಗಳ ಠೇವಣಿ – ಶೇ 3.25
15 ರಿಂದ 45 ದಿನಗಳ ಠೇವಣಿ- ಶೇ 3.25
46 ದಿನಗಳಿಂದ 90 ದಿನಗಳ ಠೇವಣಿ – ಶೇ 4.25
91 ದಿನಗಳಿಂದ 6 ತಿಂಗಳ ಠೇವಣಿ – ಶೇ 4.75
6 ತಿಂಗಳಿಂದ 9 ತಿಂಗಳ ಮೇಲಿನ ಠೇವಣಿ – ಶೇ 5.25
9 ತಿಂಗಳ ಮೇಲಿನಿಂದ 1 ವರ್ಷಕ್ಕಿಂತ ಕಡಿಮೆ ಅವಧಿ- ಶೇ 5.75
1 ವರ್ಷದಿಂದ 1 ವರ್ಷ 6 ತಿಂಗಳ ಠೇವಣಿ – ಶೇ 6.50
1 ವರ್ಷ 6 ತಿಂಗಳಿಂದ 2 ವರ್ಷಗಳ ಮೇಲಿನ ಠೇವಣಿ – ಶೇ 6.50
2 ವರ್ಷದಿಂದ 3 ವರ್ಷಕ್ಕಿಂತ ಕಡಿಮೆ ಅವಧಿ – ಶೇ 6.25
3 ವರ್ಷಗಳ ಅವಧಿ – ಶೇ 7.0
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಫ್‌ಡಿ ಬಡ್ಡಿ ದರ
ಸಾರ್ವಜನಿಕ ಸ್ವಾಮ್ಯದ ಎಸ್‌ಬಿಐ ಇತ್ತೀಚೆಗೆ ತನ್ನ ಎಫ್‌ಡಿ ಬಡ್ಡಿ ದರಗಳನ್ನು ರೂ 2 ಕೋಟಿಗಿಂತ ಹೆಚ್ಚಿನ ಠೇವಣಿಗಳ ಮೇಲೆ 20ರಿಂದ 40 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿದೆ. ಇತ್ತೀಚಿನ ದರಗಳು ಮಾರ್ಚ್ 10, 2022ರಿಂದ ಜಾರಿಗೆ ಬಂದಿವೆ.
ಇದನ್ನೂ ಓದಿ: ಆರ್ಬಿಐ ವಿತ್ತೀಯ ನೀತಿ ಪ್ರಕಟ; ನಿಮ್ಮ ಹೋಂ ಲೋನ್, ಕಾರ್ ಲೋನ್, ಬ್ಯಾಂಕ್ ಎಫ್ಡಿಗಳ ಇಎಂಐ ಮೇಲಾಗುವ ಪರಿಣಾಮಗಳೇನು?