Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರ್​ಬಿಐ ವಿತ್ತೀಯ ನೀತಿ ಪ್ರಕಟ; ನಿಮ್ಮ ಹೋಂ ಲೋನ್, ಕಾರ್ ಲೋನ್, ಬ್ಯಾಂಕ್ ಎಫ್​ಡಿಗಳ ಇಎಂಐ ಮೇಲಾಗುವ ಪರಿಣಾಮಗಳೇನು?

ರೆಪೋ ದರವನ್ನು ಯಥಾಸ್ಥಿತಿಯಲ್ಲಿ ಮುಂದುವರೆಸಲು ಆರ್​ಬಿಐ ನಿರ್ಧಾರ ಮಾಡಿರುವುದರಿಂದ ರೆಪೋ ರೇಟ್ ಜೊತೆಗೆ ಲಿಂಕ್ ಆಗಿರುವ ಹೋಂ ಲೋನ್, ಆಟೋ ಲೋನ್ ದರ ಕೂಡ ಯಥಾಸ್ಥಿತಿಯಲ್ಲಿರಲಿದೆ.

ಆರ್​ಬಿಐ ವಿತ್ತೀಯ ನೀತಿ ಪ್ರಕಟ; ನಿಮ್ಮ ಹೋಂ ಲೋನ್, ಕಾರ್ ಲೋನ್, ಬ್ಯಾಂಕ್ ಎಫ್​ಡಿಗಳ ಇಎಂಐ ಮೇಲಾಗುವ ಪರಿಣಾಮಗಳೇನು?
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Feb 10, 2022 | 3:39 PM

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್​ನ (RBI) ತ್ರೈಮಾಸಿಕ ವಿತ್ತೀಯ ನೀತಿ ಇಂದು ಪ್ರಕಟವಾಗಿದ್ದು, ಸತತ 10ನೇ ಬಾರಿಗೆ ರೆಪೋ ದರ  (Repo Rate) ಯಥಾಸ್ಥಿತಿಯಲ್ಲಿ ಮುಂದುವರೆದಿದೆ. ಆರ್​ಬಿಐನ 6 ಸದಸ್ಯರ ವಿತ್ತೀಯ ನೀತಿ ಸಮಿತಿ ರೆಪೊ ದರವನ್ನು ಹತ್ತನೇ ಬಾರಿಗೆ ಯಥಾಸ್ಥಿತಿಯಲ್ಲಿ ಇರಿಸಿದೆ. ಈ ಕುರಿತು ಆರ್​ಬಿಐ ಗವರ್ನರ್ ಶಕ್ತಕಾಂತ್ ದಾಸ್ ಇಂದು ಘೋಷಣೆ ಮಾಡಿದ್ದು, ಪ್ರಸಕ್ತ ಹಣಕಾಸು ವರ್ಷದ ತ್ರೈಮಾಸಿಕದಲ್ಲಿ ರೆಪೊ ದರ ಶೇ. 4ರಷ್ಟು ಮತ್ತು ರಿವರ್ಸ್ ರೆಪೊ ದರ ಶೇ. 3.35ರಷ್ಟು ಮುಂದುವರಿಯಲಿದೆ. ವಿತ್ತೀಯ ನೀತಿ ಸಮಿತಿ ಸದಸ್ಯರು ರೆಪೊ ದರವನ್ನು ಬದಲಿಸದೆ ಯಥಾಸ್ಥಿತಿ ಮುಂದುವರಿಸಲು ಒಲವು ತೋರಿಸಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

ಕೋವಿಡ್ ಹೊಡೆತದ ಮಧ್ಯೆ ಜಾಗತಿಕ ಮಟ್ಟದಲ್ಲಿ ಆರ್ಥಿಕತೆ ಕುಸಿಯುತ್ತಿದೆ. ಆದರೆ, ಉಳಿದ ದೇಶಗಳಿಗಿಂತ ಭಾರತ ವೇಗವಾಗಿ ಮುನ್ನುಗ್ಗುತ್ತಿದೆ. ಈ ಬಾರಿ ಮಾರ್ಜಿನಲ್ ಸ್ಟ್ಯಾಂಡಿಂಗ್ ಫೆಸಿಲಿಟಿ (MSF) ದರ ಮತ್ತು ಬ್ಯಾಂಕ್ ದರಗಳು ಸಹ 4.25 ಶೇಕಡಾದಲ್ಲಿ ಬದಲಾಗದೆ ಉಳಿದಿವೆ. ಭಾರತವು ಪ್ರಪಂಚದ ಇತರ ಭಾಗಗಳಿಂದ ವಿಭಿನ್ನವಾದ ಚೇತರಿಕೆಯ ಹಾದಿಯನ್ನು ರೂಪಿಸುತ್ತಿದೆ. ಪ್ರಮುಖ ಆರ್ಥಿಕತೆಗಳಲ್ಲಿ ದೇಶವು ವರ್ಷದಿಂದ ವರ್ಷಕ್ಕೆ ವೇಗವಾಗಿ ಬೆಳೆಯುತ್ತಿದೆ ಎಂದಿದ್ದಾರೆ.

ರೆಪೋ ದರವನ್ನು ಯಥಾಸ್ಥಿತಿಯಲ್ಲಿ ಮುಂದುವರೆಸಲು ಆರ್​ಬಿಐ ನಿರ್ಧಾರ ಮಾಡಿರುವುದರಿಂದ ರೆಪೋ ರೇಟ್ ಜೊತೆಗೆ ಲಿಂಕ್ ಆಗಿರುವ ಹೋಂ ಲೋನ್, ಆಟೋ ಲೋನ್ ದರ ಕೂಡ ಯಥಾಸ್ಥಿತಿಯಲ್ಲಿರಲಿದೆ. ಹೀಗಾಗಿ, ಈ ಸಾಗಳ ಮೇಲಿನ ಇಎಂಐನಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಯಾರು ಹೊಸತಾಗಿ ಸಾಲ ಪಡೆಯಲು ಯೋಚಿಸುತ್ತಿದ್ದೀರೋ ಅವರು ಬೇಗ ಬ್ಯಾಂಕ್ ಅನ್ನು ಸಂಪರ್ಕಿಸುವುದು ಉತ್ತಮ. ಬ್ಯಾಂಕ್​ಗಳು ಬಡ್ಡಿ ದರದ ಮೇಲೆ ಫೆಸ್ಟಿವ್ ರಿಯಾಯಿತಿಯನ್ನು ನೀಡುತ್ತಿರುವುದರಿಂದ ಈ ಅವಕಾಶ ಮಿಸ್ ಮಾಡಿಕೊಳ್ಳಬೇಡಿ.

ಈಗ ಹೋಂ ಲೋನ್ ಬಡ್ಡಿ ದರಗಳು ಶೇ. 6.50ರಿಂದ ಆರಂಭವಾಗುತ್ತವೆ. ಕಾರು ಲೋನ್ ಬಡ್ಡಿ ದರ ಶೇ. 7.20ರಿಂದ ಶುರುವಾಗಲಿದೆ. ಹಾಗೇ, ರೆಪೋ ತಟಸ್ಥ ನೀತಿಯಿಂದ ಎಫ್​ಡಿಯ ಡೆಪಾಸಿಟ್ ದರದಲ್ಲೂ ಹೆಚ್ಚಿನ ಬದಲಾವಣೆಯಾಗುವುದಿಲ್ಲ. ಆದರೆ, ಕೆಲವು ಬ್ಯಾಂಕ್​ಗಳು ಇದರಲ್ಲಿ ಬದಲಾವಣೆ ಮಾಡಿಕೊಳ್ಳಬಹುದು. ಹೀಗಾಗಿ, ಎಫ್​ಡಿ ಬುಕ್ ಮಾಡಬೇಕಾದರೆ ಅಥವಾ ಎಫ್​ಡಿಯನ್ನು ಮರುನವೀಕರಣ ಮಾಡಬೇಕಾದರೆ ಕಡಿಮೆ ಅವಧಿಯ ಡೆಪಾಸಿಟ್ ಆಯ್ಕೆಗೆ ಆದ್ಯತೆ ನೀಡುವುದು ಉತ್ತಮ.

ಜಿಡಿಪಿ ಕುರಿತು ಮಾತನಾಡಿದ ದಾಸ್, ಮುಂದಿನ ಹಣಕಾಸು ವರ್ಷ 2022-23ಕ್ಕೆ (FY 23) ನೈಜ ಜಿಡಿಪಿ ಬೆಳವಣಿಗೆಯನ್ನು ಶೇ. 7.8 ಎಂದು ಅಂದಾಜಿಸಲಾಗಿದೆ ಎಂದು ಹೇಳಿದರು. ಪ್ರಸಕ್ತ ಹಣಕಾಸು ವರ್ಷದಲ್ಲಿ (ಎಫ್‌ವೈ 22) ಶೇ. 9.2ರಷ್ಟು ನೈಜ ಜಿಡಿಪಿ ಬೆಳವಣಿಗೆಯು ಆರ್ಥಿಕತೆಯನ್ನು ಕೊರೊನಾ ಸಾಂಕ್ರಾಮಿಕಕ್ಕೂ ಮೊದಲ ಮಟ್ಟಕ್ಕಿಂತ ಮೇಲಕ್ಕೆ ಕೊಂಡೊಯ್ಯುತ್ತದೆ ಎಂದು ಆರ್‌ಬಿಐ ಗವರ್ನರ್ ಹೇಳಿದ್ದಾರೆ.

ಆರ್‌ಬಿಐ ಇ-ರೂಪಾಯಿ ವೋಚರ್‌ಗಳ ಮಿತಿಯನ್ನು 10,000 ರೂ.ನಿಂದ 1 ಲಕ್ಷಕ್ಕೆ ಹೆಚ್ಚಿಸಿದೆ. ಈ ವೋಚರ್‌ಗಳನ್ನು ಈಗ ಒಂದಕ್ಕಿಂತ ಹೆಚ್ಚು ಬಾರಿ ಬಳಸಬಹುದು. ಇ-ರೂಪಾಯಿಯನ್ನು ಎನ್‌ಪಿಸಿಐ ಕಳೆದ ವರ್ಷ ಬಿಡುಗಡೆ ಮಾಡಿತ್ತು. ಸ್ವಯಂಪ್ರೇರಿತ ಧಾರಣ ಯೋಜನೆಯಡಿ ಒಳಹರಿವಿನ ಮಿತಿಯನ್ನು 1.5 ಲಕ್ಷ ಕೋಟಿಯಿಂದ 2.5 ಲಕ್ಷ ಕೋಟಿಗೆ ಹೆಚ್ಚಿಸಲಾಗಿದೆ. ಹಾಗೇ, MSMEಗಳಿಗೆ ವ್ಯಾಪಾರ ಸಾಲಕ್ಕಾಗಿ ಆರ್‌ಬಿಐ ಆದೇಶದ ಮಿತಿಯನ್ನು 1 ಕೋಟಿಯಿಂದ 3 ಕೋಟಿಗೆ ಹೆಚ್ಚಿಸಲಿದೆ. ಆರೋಗ್ಯಕ್ಕಾಗಿ ಆನ್-ಟ್ಯಾಪ್ ಕ್ರೆಡಿಟ್, ಸಂಪರ್ಕ ಸೇವೆಗಳನ್ನು ಮಾರ್ಚ್‌ನಿಂದ ಜೂನ್‌ವರೆಗೆ ವಿಸ್ತರಿಸಲಾಗಿದೆ. ವಿವಿಧ ಅವಧಿಗಳ ವೇರಿಯಬಲ್ ದರದ ರೆಪೊ ಕಾರ್ಯಾಚರಣೆಗಳನ್ನು ಇನ್ನು ಮುಂದೆ ಮತ್ತು ಖಾತರಿಪಡಿಸಿದಾಗ ನಡೆಸಲಾಗುವುದು. ಎರಡನೆಯದಾಗಿ, 14 ದಿನದ ಅವಧಿಯ ವೇರಿಯಬಲ್ ರೇಟ್ ರೆಪೊಗಳು ಮತ್ತು ವೇರಿಯಬಲ್ ರೇಟ್ ರಿವರ್ಸ್ ರೆಪೊಗಳು ಮುಖ್ಯ ದ್ರವ್ಯತೆ ನಿರ್ವಹಣೆ ಸಾಧನವಾಗಿ ಕಾರ್ಯ ನಿರ್ವಹಿಸುತ್ತವೆ.

ಇದನ್ನೂ ಓದಿ: RBI Monetary Policy: ಕೊರೊನಾ ಕಾಟದ ಸಮ್ಮುಖದಲ್ಲಿ ರೆಪೊ ದರ ಸೇರಿದಂತೆ ನೀತಿ ನಿರೂಪಣೆಗಳಲ್ಲಿ ಯಾವುದೇ ಬದಲಾವಣೆ ಮಾಡದೆ ಸ್ಥಿರತೆ ಕಾಯ್ದುಕೊಂಡ ರಿಸರ್ವ್ ಬ್ಯಾಂಕ್!

Personal loan: ವೈಯಕ್ತಿಕ ಸಾಲ ತೆಗೆದುಕೊಳ್ಳುವಾಗ ಈ ತಪ್ಪನ್ನು ಅಪ್ಪಿತಪ್ಪಿಯೂ ಮಾಡಬೇಡಿ

Published On - 3:32 pm, Thu, 10 February 22

Devotional: ಮಹಿಳೆಯರಿಗೆ ಕೈ ಕೆರೆತವಾದ್ರೆ ಏನೆಲ್ಲಾ ಆಗುತ್ತೆ ಗೊತ್ತಾ?
Devotional: ಮಹಿಳೆಯರಿಗೆ ಕೈ ಕೆರೆತವಾದ್ರೆ ಏನೆಲ್ಲಾ ಆಗುತ್ತೆ ಗೊತ್ತಾ?
Daily Horoscope: ಹಣಕಾಸಿನ ವಿಷಯದಲ್ಲಿ ತಾಳ್ಮೆವಹಿಸುವುದು ಒಳ್ಳೆಯದು
Daily Horoscope: ಹಣಕಾಸಿನ ವಿಷಯದಲ್ಲಿ ತಾಳ್ಮೆವಹಿಸುವುದು ಒಳ್ಳೆಯದು
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್