ಉದ್ಯಮದಲ್ಲಿ ಹೊಸ ಸಾಧ್ಯತೆಗಳು ಸೃಷ್ಟಿಯಾಗುವುದು
ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ವಸಂತ ಋತುವಿನ ವೈಶಾಖ ಮಾಸ ಕೃಷ್ಣ ಪಕ್ಷದ ದ್ವಾದಶೀ ತಿಥಿ, ಶನಿವಾರ ಸಂಕಲ್ಪ ತಕ್ಕಂತೆ ಕಾರ್ಯ, ವಿರೋಧಕ್ಕೆ ಯೋಗ್ಯ ತಿರಸ್ಕಾರ, ದಾನದಿಂದ ಕೀರ್ತಿ ಇದು ಇಂದಿನ ಭವಿಷ್ಯ. ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಯಾವ ಫಲ ಎನ್ನುವುದನ್ನು ತಿಳಿದುಕೊಳ್ಳಿ.

ನಿತ್ಯ ಪಂಚಾಂಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು: ವಸಂತ, ಸೌರ ಮಾಸ: ವೃಷಭ, ಮಹಾನಕ್ಷತ್ರ: ಕೃತ್ತಿಕಾ, ಮಾಸ: ವೈಶಾಖ, ಪಕ್ಷ: ಕೃಷ್ಣ, ವಾರ: ಶನಿವಾರ, ತಿಥಿ: ದ್ವಾದಶೀ, ನಿತ್ಯನಕ್ಷತ್ರ: ಅಶ್ವಿನೀ, ಯೋಗ : ಆಯುಷ್ಮಾನ್, ಕರಣ: ಕೌಲವ, ಸೂರ್ಯೋದಯ – 06 : 04 am, ಸೂರ್ಯಾಸ್ತ – 06 : 54 pm, ಇಂದಿನ ಶುಭಾಶುಭಕಾಲ: ರಾಹು ಕಾಲ 09:17 – 10:53, ಯಮಘಂಡ ಕಾಲ 14:06 – 15:42, ಗುಳಿಕ ಕಾಲ 06:04 – 07:41
ತುಲಾ ರಾಶಿ: ವಿಪತ್ತುಗಳನ್ನು ದಕ್ಷತೆಯಿಂದ ಎದುರಿಸಬೇಕಾಗುವುದು. ನಿಮ್ಮ ಮೇಲೆ ನಿಮಗೆ ಪೂರ್ಣಾವಾದ ನಂಬಿಕೆ ಇಡುವ ಮೂಲಕ ಯಶಸ್ಸು ಸಾಧಿಸಬಹುದು. ನಿಮ್ಮಲ್ಲಿರುವ ಗುಣಗಳು ಪ್ರಶಂಸೆಗೆ ಪಾತ್ರವಾಗಲಿದೆ. ಎಂದೊಕ ಮಾಡಿಕೊಂಡ ವಿದೇಶದ ಸಂಪರ್ಕಗಳು ಇಂದು ಪ್ರಯೋಜನವಾಗಲಿದೆ. ಶಿಕ್ಷಣದ ಬಗ್ಗೆ ನಿಮಗಿರುವ ಆಸಕದತಿ ಮತ್ತಷ್ಟು ಅಧಿಕವಾಗಬಹುದು. ಸೂಕ್ತ ಸಮಯಕ್ಕೆ ಚಿಕಿತ್ಸೆಯಿಂದ ಆರೋಗ್ಯ ಚೆನ್ನಾಗಿ ಆಗುವುದು. ಮಕ್ಕಳ ಚಿಂತೆಯಿಂದ ಎಲ್ಲ ಸಂತೋಷಗಳು ಮರೆಯಾಗಲಿವೆ. ಯಾರ ನಕಾರಾತ್ಮಕ ವಿಚಾರವೂ ನಿಮಗೆ ಏನೂ ಮಾಡದು. ಅನವಶ್ಯಕವಾದ ಸಮಸ್ಯೆಗಳು ನಿಮ್ಮನ್ನು ಕಾಡಿಯಾವು. ಪ್ರತಿಕೂಲ ಸಂದರ್ಭಗಳಲ್ಲಿ ನಿಮ್ಮ ಆತ್ಮವಿಶ್ವಾಸವನ್ನು ಉಳಿಸಿಕೊಳ್ಳುವಿರಿ. ಅವ್ಯಕ್ತವಾದ ನೆಮ್ಮದಿಯಿಂದ ಬೀಗಬಹುದು. ಕಿರಿಯರಿಂದ ಆಕಸ್ಮಿಕವಾಗಿ ಗೌರವಕ್ಕೆ ಪಾತ್ರರಾಗುವಿರಿ. ಎಂದೋ ಆದ ಬೇಸರವನ್ನು ಸ್ನೇಹಿತನ ಮುಂದೆ ಇಂದು ಪ್ರಕಟಿಸುವಿರಿ. ಅಸಹಜ ಮಾತುಗಳಿಗೆ ಸ್ಪಂದನೆ ಸಿಗದು. ವಿದ್ಯಾಭ್ಯಾಸದ ಹಿನ್ನಡೆಯು ನಿಮಗೆ ಗೊತ್ತಾಗದು.
ವೃಶ್ಚಿಕ ರಾಶಿ: ನಾಯಕರಾಗಿ ಹೊಸ ಯೋಜನೆಯನ್ನು ಆರಂಭಿಸುವಿರಿ. ಇಂದು ನೀವು ಅನನೂಕುಲ ಸ್ಥಿತಿಯಿಂದ ಹೊರ ಬರುವಿರಿ. ವಿರೋಧಿಗಳ ಸಂಚಿಗೆ ಬಲಿಯಾಗುವ ಸಾಧ್ಯತೆ ಇದೆ. ಸರಿಯಾದ ದಾರಿಯಿಂದ ಮಾತ್ರ ಗೆಲುವು ಸಿಗಲಿದೆ. ಅದರಿಂದ ತೃಪ್ತಿಯೂ ಆಗಲಿದೆ. ಸರ್ಕಾರಿ ಕೆಲಸಗಳು ವಿಳಂಬವಾಗುವುದು. ಅಹಂಕಾರದಿಂದ ಪರರ ಸಲಹೆಯನ್ನು ಸ್ವೀಕರಿಸಲಾರಿರಿ. ನೆಚ್ಚಿನ ಕಲಾವಿದರ ಭೇಟಿಯಾಗಲಿದೆ. ಆಪ್ತರಿಂದ ಉಡುಗೊರೆ ಸಿಗಲಿದೆ. ಸ್ವಲ್ಪ ಆಲಸ್ಯವು ನಿಮ್ಮ ಕೆಲಸವನ್ನು ಹಿಂದಿಕ್ಕುವುದು. ಸ್ವತಂತ್ರವಾಗಿ ಆಲೋಚನೆಗಳನ್ನು ಬೆಳೆಸಿಕೊಳ್ಳುವುದು ಉತ್ತಮ. ನಿಮ್ಮವರ ಅಹಸಜ ವರ್ತನೆ ನಿಮಗೆ ಬೇಸರ ತರಿಸೀತು. ಪ್ರೀತಿಯ ಸೆಳೆತದಿಂದ ಹೊರಬರಲಾಗದು. ಭೂಮಿಯ ಲಾಭವು ಆಗಲಿದ್ದು ಅನೇಕ ದಿನದ ಚಿಂತೆಗಳು ದೂರಾಗುವುದು. ಅಧಿಕ ಆದಾಯಕ್ಕಾಗಿ ಉದ್ಯೋಗವನ್ನು ನೀವು ತ್ಯಾಗಮಾಡುವಿರಿ. ಮಾನಸಿಕ ಅಸಮತೋಲನವನ್ನು ಸರಿ ಮಾಡಿಕೊಳ್ಳುವಿರಿ. ಬಿರುಸು ನುಡಿಯಿಂದ ನಿಮಗೆ ಆಗಬೇಕಾದ ಕಾರ್ಯವು ಆಗದು. ಮಾತಿಗೆ ಸಂಬಂಧಿಸದಂತೆ ದೋಷವು ನಿಮಗೆ ಕಾಣಲಿಕ್ಕೆ ಸಿಗುವುದು.
ಧನು ರಾಶಿ: ಗೃಹನಿರ್ಮಾಣದಲ್ಲಿ ಹಣಕಾಸಿನ ಕೊರತೆ ಇರುವುದು. ಇಂದು ಭೋಗದ ವಸ್ತುಗಳಿಂದ ಖುಷಿ ಪಡುವಿರಿ. ಮಾನಸಿಕ ಸ್ಥಿರತೆಯನ್ನು ಕಾಪಾಡಿಕೊಂಡು ಮುಂದುವರಿಯಿರಿ. ನಿಮ್ಮ ಇಂದಿನ ಲೆಕ್ಕಾಚಾರ ಸರಿಯಾಗಲಿದೆ. ಸಹನೆಯ ನಿಮ್ಮ ಗುಣದಿಂದ ಸಾಕಷ್ಟು ಅನುಕೂಲವನ್ನು ಮಾಡಲಿದೆ. ಆರೋಗ್ಯದಲ್ಲಿ ಸುಧಾರಣೆ ತಂದುಕೊಳ್ಳುವಿರಿ. ಹೊಸತನ್ನು ಕಲಿಯಬೇಕು ಎನದನುವ ತುಡಿತ ಇರಲಿದೆ. ಬಹುದಿನಗಳಿಂದ ಯೋಚಿಸುತ್ತಿದ್ದ ಮಹತ್ವದ ಕಾರ್ಯವೊಂದಕ್ಕೆ ಚಾಲನೆ ನೀಡುವಿರಿ. ಹಿರಿಯರ ಸಲಹೆಯಿಂದ ಪ್ರಯೋಜನವಾಗಲಿದೆ. ಮಾನಸಿಕ ಅಸಮತೋಲನವನ್ನು ಕಾಯ್ದುಕೊಳ್ಳಲು ಸವಾಲಾಗಬಹುದು. ವಾಹನ ಖರೀದಿಗೆ ಆಲೋಚನೆ ಇರಲಿದ್ದು ಸಾಲ ಮಾಡಬೇಕಗಬಹುದು. ನಿಮ್ಮ ವೇಗದ ಮನಸ್ಸನ್ನು ನಿಯಂತ್ರಿಸಬೇಕಾಗುವುದು. ಇಂದು ಮಾಡುವ ಎಲ್ಲ ಕಾರ್ಯಗಳನ್ನೂ ಪೂರ್ಣ ಮಾಡಲಾರಿರಿ. ಇಷ್ಟವಿಲ್ಲದ ವ್ಯಕ್ತಿಗಳ ಜೊತೆ ಇರಲು ಕಸಿವಿಸಿ ಆದೀತು. ಮನೆಯವರ ಸಣ್ಣ ತಪ್ಪುಗಳನ್ನು ನೀವು ಸಹಿಸಲಾರಿರಿ. ವ್ಯಾಪಾರದಲ್ಲಿ ನೀವು ಹಿಂದುಳಿಯುವಿರಿ.
ಮಕರ ರಾಶಿ: ಅಚ್ಚುಕಟ್ಟಾದ ಮಾತಿನಿಂದ ವ್ಯವಹಾರದಲ್ಲಿ ನಂಬಿಕೆ ಹೆಚ್ಚಾಗುವುದು. ಇಂದು ನಿಮ್ಮ ಖರ್ಚು ಅಧಿಕವಾದರೂ ಒಳ್ಳೆಯ ಕಾರ್ಯಕ್ಕೆ ಆಗುತ್ತದೆ. ಬೇಡದ ವಿಷಯಕ್ಕೆ ಚಿಂತೆ ಹೆಚ್ಚಾಗುವುದು. ಹೊಸ ಭರವಸೆಗಳು ಸಂತೋಷವನ್ನು ತರುತ್ತವೆ. ಭೂಮಿಯ ವ್ಯವಹಾರವನ್ನು ಮಾಡಲಿದ್ದೀರಿ. ಭೇಟಿಯಾಗುವ ವ್ಯಕ್ತಿಗಳಿಂದ ನಿಮ್ಮ ಉದ್ಯಮಕ್ಕೆ ಸಹಕಾರಿ. ಸೇವೆ ಮತ್ತು ದಾನದಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಹೊಸ ಸಂಪರ್ಕಗಳು ಪ್ರಯೋಜನಕಾರಿಯಾಗಲಿವೆ. ವಿದೇಶದ ಸಂಪರ್ಕವನ್ನು ಮಾಡಲು ಅವಕಾಶ ಸಿಗಲಿದೆ. ಇದಕ್ಕೆ ಸಂಗಾತಿಯೂ ನಿಮ್ಮನ್ನು ಬೆಂಬಲಿಸುವರು. ಆಲೋಚನೆಗಳು ನಿಧಾನಗತಿಯಲ್ಲಿ ಇರಲಿವೆ. ವಿದ್ಯಾರ್ಥಿಗಳು ಸಹವಾಸದೋಷದಿಂದ ಕೆಡುವ ಸಾಧ್ಯತೆ ಇದೆ. ಯಾರ ಮಾತನ್ನೂ ಕೇಳುವ ಸಾವಧಾನತೆ ಇರೆದು. ಸಂಗಾತಿಯ ಮೇಲೆ ಅನುಮಾನವನ್ನು ನಿಮ್ಮ ರೀತಿಯಲ್ಲಿ ವ್ಯಕ್ತಪಡಿಸುವಿರಿ. ನಿಮ್ಮವರ ಪ್ರೀತಿಯು ನಿಮಗೆ ಕಡಿಮೆ ಆದಂತೆ ಅನ್ನಿಸುವುದು. ಕೃಷಿಯಲ್ಲಿ ಉಪಯುಕ್ತ ಯೋಜನೆಯನ್ನು ಹಾಕಿಕೊಳ್ಳುವಿರಿ. ಮಕ್ಕಳ ಬಗ್ಗೆ ಇರುವ ನಿಮ್ಮ ಚಿಂತೆ ನಿವಾರಣೆ ಆಗುವುದು. ಪ್ರಯಾಣವನ್ನು ಆನಂದಿಸುವಿರಿ. ಬಂಧುಗಳ ಭೇಟಿಯನ್ನು ಮಾಡಲಾಗದು.
ಕುಂಭ ರಾಶಿ: ನಿಮ್ಮ ಮಾನಸಿಕತೆಗೆ ಭಂಗ ಬಂದರೆ ನಿಮಗೆ ಸಹಿಸಲಾಗದು. ನಿಮ್ಮ ಬಯಕೆಗಳನ್ನು ಪೂರೈಸಿಕೊಳ್ಳಲು ಆಗದು. ಉದ್ಯಮದಲ್ಲಿ ಹೊಸ ಸಾಧ್ಯತೆಗಳು ಸೃಷ್ಟಿಯಾಗುವುದು. ನಿಮ್ಮ ಜಾಣ್ಮೆಯಿಂದ ಆದಾಯದ ಪೂರ್ಣಲಾಭವನ್ನು ಮಾಡಿಕೊಳ್ಳುವಿರಿ. ಮನೆಯಲ್ಲಿ ಸಂತೋಷದ ವಾತಾವರಣವು ಇರುತ್ತದೆ. ಸಹೋದರನ ನಡವಳಿಕೆಯಿಂದ ಮನಸ್ಸಿಗೆ ಬೇಸರವಾಗಬಹುದು. ಆರ್ಥಿಕ ಯೋಗವಿದೆ. ತರಾತುರಿಯಲ್ಲಿ ಮಾಡಿದ ಕೆಲಸವು ಹಾನಿಯನ್ನುಂಟು ಮಾಡುತ್ತದೆ. ಮಗುವಿನ ನಡವಳಿಕೆಯು ನೋವನ್ನು ಉಂಟುಮಾಡುತ್ತದೆ. ಭೂಮಿಯ ಖರೀದಿಯಲ್ಲಿ ದುಡುಕುವುದು ಬೇಡ. ನಿಮ್ಮ ಪಿತ್ರಾರ್ಜಿತ ಆಸ್ತಿಯು ನಷ್ಟವಾಗಬಹುದು. ಹಣಕಾಸಿನ ಒತ್ತಡವು ಕಡಿಮೆ ಆಗಲಿದೆ. ಅನಂತರ ನೀವೂ ಹಗುರಾಗಬಹುದು. ಅನಾರೋಗ್ಯದ ಕಾರಣದಿಂದ ನೀವು ಇಂದಿನ ಪ್ರಯಾಣವನ್ನು ನಿಲ್ಲಿಸುವಿರಿ. ಕಳ್ಳತನದ ಭೀತಿಯಿಂದ ವಸ್ತುಗಳನ್ನು ಜೋಪಾನ ಮಾಡಿಕೊಳ್ಳುವಿರಿ. ನಿಮಗೆ ಇರವುದು. ಸಜ್ಜನರಿಗೆ ಕೆಲವು ಅಪವಾದದ ಮಾತುಗಳು ಬರಬಹುದು. ಮತ್ಯಾರಿಗೋ ನೀವು ಸಮಯವನ್ನು ಕೊಡಬೇಕಾಗಬಹುದು.
ಮೀನ ರಾಶಿ: ಯಾರ ಜೊತೆಗೂ ನೇರವಾಗಿ ಸ್ಪರ್ಧಿಸಲು ಇಚ್ಛೆ ಇರದು. ನಿರೀಕ್ಷಿಸದ ಸಹಾಯ ಪರಿಚಿತರಿಂದ ಲಭ್ಯ. ನೀವು ಪ್ರಮುಖ ವ್ಯಕ್ತಿಯ ಸಂಬಂಧವನ್ನು ಬೆಳೆಸುವಿರಿ. ಅದೇ ನಿಮ್ಮ ಸಂಪತ್ತಿನ ಮೂಲವಾಗುತ್ತದೆ. ತ್ವರಿತ ನಿರ್ಣಯದಿಂದ ನಿಂದನೆ. ಸೃಜನಶೀಲತಯಿಂದ ನಿಮ್ಮ ಮನಸ್ಸು ಅರಳುವುದು. ನಿಮ್ಮ ಪ್ರತಿಭೆಯಿಂದ ನೀವು ಅದ್ಭುತಗಳನ್ನು ಮಾಡಲು ಸಾಧ್ಯವಾಗುತ್ತದೆ. ಹಿರಿಯರ ಅನುಭವದಿಂದ ಪ್ರಯೋಜನ ಪಡೆಯುವಿರಿ. ಅನಗತ್ಯ ವಾದಗಳನ್ನು ಮಾಡಿ, ಕುಟುಂಬದ ಸದಸ್ಯರನ್ನು ನೋಯಿಸುವಿರಿ. ಸೋಮಾರಿತನದಿಂದ ಸಮಯವು ವ್ಯರ್ಥವಾಗಲಿದೆ. ಚಂಚಲವಾದ ಮನಸ್ಸನ್ನು ನಿಗ್ರಹಿಸಲು ಪ್ರಯತ್ನಿಸಿ. ನಿಮ್ಮ ಪ್ರಯತ್ನಗಳು ಸಫಲವಾಗಬಹುದು. ಅಗೌರವವನ್ನು ಕೊಟ್ಟಂತೆ ನಿಮಗೆ ಅನ್ನಿಸುವುದು. ಅದನ್ನು ನಿರ್ಲಕ್ಷಿಸಿ ಬೇಕಾದ ಕಡೆಯಲ್ಲಿ ತೊಡಗಿಸಿ. ಸ್ನೇಹಿತರ ಜೊತೆ ಮನಸ್ತಾಪವು ಬರಬಹುದು. ವ್ಯಾಪಾರದ ಏರಿಳಿತಗಳು ನಿಮ್ಮ ಗಮನಕ್ಕೆ ಬಾರದೇ ಹೋಗಬಹುದು. ಆಪ್ತರು ನಿಮ್ಮಿಂದ ಕಾರಣಾಂತರಗಳಿಂದ ದೂರಾಗಬಹುದು. ಇನ್ನೊಬ್ಬರನ್ನು ರಿಪೇರಿ ಮಾಡಲು ಹೋಗಿ ಸಮಯ ಹಾಳಾದೀತು. ಮಕ್ಕಳು ನಡತೆಯನ್ನು ಗಮನಿಸುವುದು ಉತ್ತಮ.
Published On - 1:43 am, Sat, 24 May 25