AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಮ್ಮ ಬೆಂಬಲ ಭಾರತಕ್ಕೆ: ಚೀನಾ-ಪಾಕ್​​ ಸಂಬಂಧ ಬಲಗೊಳ್ಳುತ್ತಿದೆ, ಭಾರತಕ್ಕೆ ಎಚ್ಚರಿಕೆ ನೀಡಿದ ಬಲೂಚಿಸ್ತಾನ

ಬಲೂಚಿಸ್ತಾನದ ನಾಯಕ ಮೀರ್ ಯಾರ್ ಬಲೂಚ್, ಚೀನಾ-ಪಾಕ್ ಮೈತ್ರಿ ಅಪಾಯಕಾರಿ ಬೆಳವಣಿಗೆ ಎಂದು ಭಾರತದ ವಿದೇಶಾಂಗ ಸಚಿವ ಜೈಶಂಕರ್‌ಗೆ ಪತ್ರ ಬರೆದಿದ್ದಾರೆ. ಚೀನಾ ಬಲೂಚಿಸ್ತಾನದಲ್ಲಿ ಮಿಲಿಟರಿ ನಿಯೋಜಿಸುವ ಸಾಧ್ಯತೆಯಿದೆ ಎಂದು ಎಚ್ಚರಿಸಿದ್ದಾರೆ. ಪಾಕ್ ದಬ್ಬಾಳಿಕೆಯಿಂದ ಸ್ವಾತಂತ್ರ್ಯ ಘೋಷಿಸಿದ ಬಲೂಚಿಸ್ತಾನ, ಭಾರತದ ಪ್ರಾದೇಶಿಕ ಭದ್ರತಾ ಕ್ರಮಗಳನ್ನು ಶ್ಲಾಘಿಸಿದೆ. ಭಯೋತ್ಪಾದನೆ ತೊಡೆದುಹಾಕಲು ಭಾರತದ ಸಹಕಾರ ಮತ್ತು ಬೆಂಬಲವನ್ನು ಕೋರಿದೆ.

ನಮ್ಮ ಬೆಂಬಲ ಭಾರತಕ್ಕೆ: ಚೀನಾ-ಪಾಕ್​​ ಸಂಬಂಧ ಬಲಗೊಳ್ಳುತ್ತಿದೆ, ಭಾರತಕ್ಕೆ ಎಚ್ಚರಿಕೆ ನೀಡಿದ ಬಲೂಚಿಸ್ತಾನ
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on: Jan 03, 2026 | 9:36 AM

Share

ಬಲೂಚಿಸ್ತಾನದ ಪ್ರಮುಖ ನಾಯಕ (Baloch Leader) ಮೀರ್ ಯಾರ್ ಬಲೂಚ್, ಪಾಕಿಸ್ತಾನ ಹಾಗೂ ಚೀನಾದ ನಡುವಿನ  ಸಂಬಂಧ ಬಗ್ಗೆ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗ ಮುಕ್ತ ಪತ್ರವೊಂದನ್ನು ಬರೆದಿದ್ದಾರೆ. ಬೀಜಿಂಗ್-ಇಸ್ಲಾಮಾಬಾದ್ ಸಂಬಂಧ ಇನ್ನಷ್ಟು ಗಟ್ಟಿಯಾಗುತ್ತಿದೆ. ಇದು ಅಪಾಯಕಾರಿ ಬೆಳವಣಿಗೆ, ಮುಂದಿನ ಕೆಲವು ತಿಂಗಳುಗಳಲ್ಲಿ ಚೀನಾ ತನ್ನ ಮಿಲಿಟರಿ ಪಡೆಗಳನ್ನು ಪಾಕಿಸ್ತಾನದ ಬಲೂಚಿಸ್ತಾನ್ ಪ್ರದೇಶದಲ್ಲಿ ನಿಯೋಜಿಸಬಹುದು ಎಂದು ಈ ಪತ್ರದಲ್ಲಿ ಹೇಳಿದ್ದಾರೆ. ಬಲೂಚಿಸ್ತಾನ್ ಪಾಕಿಸ್ತಾನದ ನಿಯಂತ್ರಣದಲ್ಲಿ ದಶಕಗಳಿಂದ ದಬ್ಬಾಳಿಕೆಯನ್ನು ಎದುರಿಸಿದೆ. ಹಿಂಸೆ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯನ್ನು ಪಾಕ್​​ ಮಾಡಿದೆ ಎಂದು ಹೇಳಿದ್ದಾರೆ. ಈ ಕಾರಣಕ್ಕೆ ಬಲೂಚಿಸ್ತಾನ್​​ ಮೇ 2025 ರಲ್ಲಿ ಪಾಕಿಸ್ತಾನದಿಂದ ಸ್ವಾತಂತ್ರ್ಯವಾಗಿದೆ ಎಂದು ಘೋಷಣೆ ಮಾಡಿದ್ದರು. 2026 ರ ಮೊದಲ ವಾರದಲ್ಲಿ “ಬಲೂಚಿಸ್ತಾನ್ ಜಾಗತಿಕ ರಾಜತಾಂತ್ರಿಕ ವಾರ” ವನ್ನು ಆಚರಣೆ ಮಾಡಿಕೊಳ್ಳುತ್ತಿದೆ ಎಂದು ಹೇಳಿದ್ದಾರೆ.

ಇನ್ನು ಪಾಕ್​​​ ಹಾಗೂ ಚೀನಾದ ನಡುವಿನ ಸಂಬಂಧದ ಬಗ್ಗೆ ಪತ್ರ ಬರೆಯುವ ಮೂಲಕ ಭಾರತಕ್ಕೆ ಎಚ್ಚರಿಕೆ ನೀಡಿದ್ದಾರೆ. ಇದರ ಜತೆಗೆ ಭಾರತದ ಆಡಳಿತಾತ್ಮಕ ಕೆಲಸವನ್ನು ಹಾಡಿ ಹೊಗಳಿದ್ದಾರೆ. 2025 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ಸರ್ಕಾರವು ತೆಗೆದುಕೊಂಡ ದಿಟ್ಟ ಕ್ರಮಗಳ ಬಗ್ಗೆ ಶ್ಲಾಘಿಸಿದರು. ಕಳೆದ ವರ್ಷ ಏಪ್ರಿಲ್ 22 ರಂದು ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ, ಭಾರತ ಭಯೋತ್ಪಾದನಾ ಕೇಂದ್ರಗಳನ್ನು ನಾಶಮಾಡಲು ಆಪರೇಷನ್ ಸಿಂಧೂರ್ ಮೂಲಕ ತೆಗೆದುಕೊಂಡ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಕ್ರಮವನ್ನು ಧೈರ್ಯ ಮತ್ತು ಪ್ರಾದೇಶಿಕ ಭದ್ರತೆ ಮತ್ತು ನ್ಯಾಯ ನೀಡುವ ಮೂಲಕ ದೃಢ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಹೇಳಿದ್ದಾರೆ.

ಶಾಂತಿ, ಸಮೃದ್ಧಿ, ಅಭಿವೃದ್ಧಿ, ವ್ಯಾಪಾರ, ರಕ್ಷಣೆ, ಭದ್ರತೆ, ಭವಿಷ್ಯದ ಇಂಧನ ಸವಾಲುಗಳು ಮತ್ತು ಗುಪ್ತ ಬೆದರಿಕೆಗಳನ್ನು ತಗ್ಗಿಸುವಂತಹ ಸ್ನೇಹ, ವಿಶ್ವಾಸ ಮತ್ತು ಪರಸ್ಪರ ಹಿತಾಸಕ್ತಿಗಳನ್ನು ಬೆಳೆಸುವಲ್ಲಿ ಭಾರತ ಮತ್ತು ಸರ್ಕಾರಕ್ಕೆ ನಮ್ಮಬೆಂಬಲ ಇದೆ ಎಂದು ಹೇಳಿದ್ದಾರೆ. ಬಲೂಚಿಸ್ತಾನದ ಜನರು ಕಳೆದ ಎಪ್ಪತ್ತೊಂಬತ್ತು ವರ್ಷಗಳಿಂದ ಪಾಕಿಸ್ತಾನದ ಆಕ್ರಮಣ, ಭಯೋತ್ಪಾದಕ ದಾಳಿಯನ್ನು ಸಹಿಸಿಕೊಂಡು ಬಂದಿದೆ. ಈ ಪಿಡುಗನ್ನು ಬೇರು ಸಮೇತ ತೆಗೆಯುವ ಕೆಲಸ ಆಗಬೇಕಿದೆ. ಅದಕ್ಕಾಗಿ ಭಾರತಕ್ಕೆ ನಮ್ಮ ಬೆಂಬಲ ಇದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: RSS​​​ನ್ನು ಅರ್ಥಮಾಡಿಕೊಳ್ಳಲು ವಿಕಿಪೀಡಿಯಾದಲ್ಲಿ ಹುಡುಕುವ ಬದಲು ಅದರ ಜತೆಗೆ ಕೆಲಸ ಮಾಡಿ: ಮೋಹನ್ ಭಾಗವತ್

ಪಾಕಿಸ್ತಾನ ಮತ್ತು ಚೀನಾ ನಡುವಿನ ಹೆಚ್ಚುತ್ತಿರುವ ಕಾರ್ಯತಂತ್ರದ ಮೈತ್ರಿಯನ್ನು ಬಲೂಚಿಸ್ತಾನದ ಜನರು ಅತ್ಯಂತ ಅಪಾಯಕಾರಿ ಎಂದು ಹೇಳಿದೆ. ಬೀಜಿಂಗ್, ಇಸ್ಲಾಮಾಬಾದ್ ಸಹಯೋಗದೊಂದಿಗೆ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ) ಅಂತಿಮ ಹಂತಕ್ಕೆ ಬಂದಿದೆ. ಅದಕ್ಕಾಗಿ ಬಲೂಚಿಸ್ತಾನದ ರಕ್ಷಣಾ ಮತ್ತು ಸ್ವಾತಂತ್ರ್ಯ ಪಡೆಗಳ ಸಾಮರ್ಥ್ಯಗಳನ್ನು ಮತ್ತಷ್ಟು ಬಲಪಡಿಸದಿದ್ದರೆ ಚೀನಾ ಕೆಲವೇ ತಿಂಗಳುಗಳಲ್ಲಿ ಬಲೂಚಿಸ್ತಾನದಲ್ಲಿ ತನ್ನ ಮಿಲಿಟರಿ ಪಡೆಗಳನ್ನು ನಿಯೋಜಿಸಬಹುದು ಎಂದು ಹೇಳಿದ್ದಾರೆ. ಇದು ಬಲೂಚಿಸ್ತಾನಕ್ಕೆ ಮಾತ್ರವಲ್ಲ, ಭಾರತಕ್ಕೂ ತೊಂದರೆ ಎಂದು ಹೇಳಿದ್ದಾರೆ.

ವಿದೇಶಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ