AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೆನೆಜುವೆಲಾ ಅಧ್ಯಕ್ಷ ಮಡುರೊ, ಅವರ ಪತ್ನಿಯನ್ನು ಸೆರೆಹಿಡಿದಿದ್ದೇವೆ; ದಾಳಿಯ ಬಳಿಕ ಟ್ರಂಪ್ ಘೋಷಣೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವೆನೆಜುವೆಲಾ ವಿರುದ್ಧ ಭಾರೀ ಪ್ರಮಾಣದ ಮಿಲಿಟರಿ ದಾಳಿಯನ್ನು ಯಶಸ್ವಿಯಾಗಿ ನಡೆಸಿರುವುದಾಗಿ ಘೋಷಿಸಿದ್ದಾರೆ. ಇದರ ಪರಿಣಾಮವಾಗಿ ವೆಬೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿಯನ್ನು ಸೆರೆಹಿಡಿಯಲಾಗಿದೆ. ಹಾಗೇ, ಅವರಿಬ್ಬರನ್ನೂ ವೆನೆಜುವೆಲಾದಿಂದ ಹೊರಕ್ಕೆ ಕರೆದೊಯ್ಯಲಾಗಿದೆ. ವೆನೆಜುವೆಲಾದ. ಕ್ಯಾರಕಾಸ್ ಸೇರಿದಂತೆ 4 ನಗರಗಳನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ಟ್ರಂಪ್ ಹೇಳಿದ್ದಾರೆ.

ವೆನೆಜುವೆಲಾ ಅಧ್ಯಕ್ಷ ಮಡುರೊ, ಅವರ ಪತ್ನಿಯನ್ನು ಸೆರೆಹಿಡಿದಿದ್ದೇವೆ; ದಾಳಿಯ ಬಳಿಕ ಟ್ರಂಪ್ ಘೋಷಣೆ
Us President Trump
ಸುಷ್ಮಾ ಚಕ್ರೆ
|

Updated on:Jan 03, 2026 | 6:17 PM

Share

ನವದೆಹಲಿ, ಜನವರಿ 3: ವೆನೆಜುವೆಲಾ ಮೇಲಿನ ದಾಳಿಯ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆಯಾದ ಟ್ರೂತ್ ಸೋಷಿಯಲ್‌ನಲ್ಲಿ ಪೋಸ್ಟ್‌ ಮಾಡುವ ಮೂಲಕ ಈ ದಾಳಿಯನ್ನು ದೃಢಪಡಿಸಿದ್ದಾರೆ. ಟ್ರಂಪ್ ಪ್ರಕಾರ, ಅಮೆರಿಕ ಶನಿವಾರ ರಾತ್ರಿ (ಸ್ಥಳೀಯ ಕಾಲಮಾನದ ಪ್ರಕಾರ) ವೆನೆಜುವೆಲಾದ ರಾಜಧಾನಿ ಕ್ಯಾರಕಾಸ್ ಸೇರಿದಂತೆ 4 ಪ್ರಮುಖ ನಗರಗಳನ್ನು ಗುರಿಯಾಗಿಸಿಕೊಂಡು ಕಾರ್ಯಾಚರಣೆ ನಡೆಸಿತು. ಈ ದಾಳಿಯ ಬಳಿಕ ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿಯನ್ನು ಬಂಧಿಸಿ ದೇಶದಿಂದ ಹೊರಗೆ ಕರೆದೊಯ್ಯಲಾಗಿದೆ ಎಂದು ಟ್ರಂಪ್ ಮಾಹಿತಿ ನೀಡಿದ್ದಾರೆ.

ಅಮೆರಿಕದ ಸಮಯದ ಪ್ರಕಾರ ಶನಿವಾರ ರಾತ್ರಿ ಅಮೆರಿಕವು ವೆನೆಜುವೆಲಾದ ರಾಜಧಾನಿ ಕ್ಯಾರಕಾಸ್ ಸೇರಿದಂತೆ 4 ನಗರಗಳನ್ನು ಗುರಿಯಾಗಿಸಿಕೊಂಡಿತು. ಇವುಗಳಲ್ಲಿ ಕ್ಯಾರಕಾಸ್, ಮಿರಾಂಡಾ, ಅರಾಗುವಾ ಮತ್ತು ಲಾ ಗೈರಾ ಸೇರಿವೆ. ಈ ರಾಜ್ಯಗಳಲ್ಲಿನ ಮಿಲಿಟರಿ ನೆಲೆಗಳ ವಿರುದ್ಧ ಅಮೆರಿಕ 7 ವೈಮಾನಿಕ ದಾಳಿಗಳನ್ನು ನಡೆಸಿತು. ಮೊದಲ ದಾಳಿ ಸ್ಥಳೀಯ ಸಮಯ ಬೆಳಗಿನ ಜಾವ 2 ಗಂಟೆಗೆ ಸಂಭವಿಸಿತು.

ಇದನ್ನೂ ಓದಿ: ವೆನೆಜುವೆಲಾ ಮೇಲೆ ಅಮೆರಿಕದಿಂದ ವೈಮಾನಿಕ ದಾಳಿ; ತುರ್ತು ಪರಿಸ್ಥಿತಿ ಘೋಷಣೆ

ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿಯನ್ನು ಬಂಧಿಸಿ ದೇಶದಿಂದ ಹೊರಗೆ ಕರೆದೊಯ್ಯಲಾಗಿದೆ ಎಂದು ಟ್ರಂಪ್ ಹೇಳಿದ್ದಾರೆ. ಸಂಪೂರ್ಣ ಕಾರ್ಯಾಚರಣೆಯನ್ನು ಅಮೆರಿಕದ ಕಾನೂನು ಜಾರಿ ಸಂಸ್ಥೆಗಳ ಸಹಯೋಗದೊಂದಿಗೆ ನಡೆಸಲಾಯಿತು. ಇದನ್ನು ಅತ್ಯಂತ ಗೌಪ್ಯ ಮತ್ತು ಕಾರ್ಯತಂತ್ರದ ರೀತಿಯಲ್ಲಿ ಕಾರ್ಯಗತಗೊಳಿಸಲಾಯಿತು. ಈ ದಾಳಿಯ ಬಳಿಕ ವೆನೆಜುವೆಲಾದಲ್ಲಿ ರಾಷ್ಟ್ರವ್ಯಾಪಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 6:03 pm, Sat, 3 January 26

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!
ಒಗ್ಗಟ್ಟು ಒಡೆಯುವ ಆಟಗಾರರೇ ಸೌಂದರ್ಯಾ ಮತ್ತು ಕಾವ್ಯಾ? ವಿಡಿಯೋ
ಒಗ್ಗಟ್ಟು ಒಡೆಯುವ ಆಟಗಾರರೇ ಸೌಂದರ್ಯಾ ಮತ್ತು ಕಾವ್ಯಾ? ವಿಡಿಯೋ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್​ಗೆ ಆಗ್ರಹಿಸಿ ರಾಹುಲ್​ಗೆ ಪತ್ರ
ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್​ಗೆ ಆಗ್ರಹಿಸಿ ರಾಹುಲ್​ಗೆ ಪತ್ರ
ಆಟೋದಲ್ಲಿ ಸೋಮನಾಥಪುರ ದೇವಾಲಯಕ್ಕೆ ಬಂದ ರಜನಿಕಾಂತ್
ಆಟೋದಲ್ಲಿ ಸೋಮನಾಥಪುರ ದೇವಾಲಯಕ್ಕೆ ಬಂದ ರಜನಿಕಾಂತ್
ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ ಕಳವು
ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ ಕಳವು
ನಕಲಿ ಔಷಧ ದಂಧೆಯ ಮತ್ತೊಬ್ಬ ಆರೋಪಿ ಬಾಲಸುಬ್ರಮಣಿಯನ್ ಚೆನ್ನೈನಲ್ಲಿ ಬಂಧನ
ನಕಲಿ ಔಷಧ ದಂಧೆಯ ಮತ್ತೊಬ್ಬ ಆರೋಪಿ ಬಾಲಸುಬ್ರಮಣಿಯನ್ ಚೆನ್ನೈನಲ್ಲಿ ಬಂಧನ
ಟಾಸ್ಕ್​ ವಿಷಯಕ್ಕೆ ತಮ್ಮ ತಂಡದ ವೈರತ್ವ ಕಟ್ಟಿಕೊಂಡ ಗಾನವಿ; ಸುಸ್ತು?
ಟಾಸ್ಕ್​ ವಿಷಯಕ್ಕೆ ತಮ್ಮ ತಂಡದ ವೈರತ್ವ ಕಟ್ಟಿಕೊಂಡ ಗಾನವಿ; ಸುಸ್ತು?