AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

RSS​​​ನ್ನು ಅರ್ಥಮಾಡಿಕೊಳ್ಳಲು ವಿಕಿಪೀಡಿಯಾದಲ್ಲಿ ಹುಡುಕುವ ಬದಲು ಅದರ ಜತೆಗೆ ಕೆಲಸ ಮಾಡಿ: ಮೋಹನ್ ಭಾಗವತ್

ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಬಿಜೆಪಿ, ವಿಎಚ್‌ಪಿ ಮತ್ತು ವಿದ್ಯಾಭಾರತಿ ಸಂಸ್ಥೆಗಳು ಸಂಘದ ನಿಯಂತ್ರಣದಲ್ಲಿಲ್ಲ, ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತವೆ ಎಂದು ಸ್ಪಷ್ಟಪಡಿಸಿದ್ದಾರೆ. ಆರ್‌ಎಸ್‌ಎಸ್ ಸ್ವಯಂಸೇವಕರನ್ನು ಸಿದ್ಧಪಡಿಸುತ್ತದೆ, ಆದರೆ ಅವರನ್ನು ರಿಮೋಟ್ ಕಂಟ್ರೋಲ್ ಮಾಡುವುದಿಲ್ಲ. ಸಂಘವನ್ನು ಅದರ ಅಂಗಸಂಸ್ಥೆಗಳ ಮೂಲಕ ಅರ್ಥಮಾಡಿಕೊಳ್ಳುವುದು ತಪ್ಪೆಂದು ಹೇಳಿದ್ದಾರೆ. ಆರ್‌ಎಸ್‌ಎಸ್ ಭಾರತದ 'ಪರಮ ವೈಭವ'ಕ್ಕಾಗಿ ಮೌಲ್ಯ ಮತ್ತು ಗುರಿಗಳೊಂದಿಗೆ ಕೆಲಸ ಮಾಡುವ ವಿಶಿಷ್ಟ ಸಂಸ್ಥೆಯಾಗಿದೆ.

RSS​​​ನ್ನು ಅರ್ಥಮಾಡಿಕೊಳ್ಳಲು ವಿಕಿಪೀಡಿಯಾದಲ್ಲಿ ಹುಡುಕುವ ಬದಲು ಅದರ ಜತೆಗೆ ಕೆಲಸ ಮಾಡಿ: ಮೋಹನ್ ಭಾಗವತ್
ಮೋಹನ್ ಭಾಗವತ್
ಅಕ್ಷಯ್​ ಪಲ್ಲಮಜಲು​​
|

Updated on:Jan 03, 2026 | 8:17 AM

Share

ದೆಹಲಿ, ಜ.3: ಭಾರತೀಯ ಜನತಾ ಪಕ್ಷ (ಬಿಜೆಪಿ), ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಮತ್ತು ವಿದ್ಯಾ ಭಾರತಿಯಂತಹ ಸಂಸ್ಥೆಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ಸಂಘದ ನಿಯಂತ್ರಣದಲ್ಲಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಅವರು ಹೇಳಿದ್ದಾರೆ. ಬಿಜೆಪಿ ಅಥವಾ ವಿಎಚ್‌ಪಿ ಮೂಲಕ ಆರ್‌ಎಸ್‌ಎಸ್ ಅನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಡಿ, ಅವರು ಸ್ವತಂತ್ರವಾಗಿ ಕೆಲಸ ಮಾಡುತ್ತಾರೆ ಮತ್ತು ಸಂಘದ ರಿಮೋಟ್ ಕಂಟ್ರೋಲ್​​​ನಲ್ಲಿ ಇಲ್ಲ. ಒಂದು ಆರ್​​ಎಸ್​​ಎಸ್​​ನ್ನು ಅದರ ಅಂಗ ಸಂಸ್ಥೆಗಳ ಮೂಲಕ ಅರ್ಥಮಾಡಿಕೊಳ್ಳುತ್ತಿದ್ದಾರೆ ಎಂದರೆ ಅದು ಮೂಲಭೂತವಾಗಿ ತಪ್ಪು. ಸಂಘವು ಸ್ವಯಂಸೇವಕರನ್ನು ಅಭಿವೃದ್ಧಿಪಡಿಸುತ್ತದೆ, ಆದರೆ ಅದು ಅವರನ್ನು ಎಂದಿಗೂ ರಿಮೋಟ್ ಕಂಟ್ರೋಲ್ ಮಾಡುವುದಿಲ್ಲ ಎಂದು ಹೇಳಿದ್ದಾರೆ.

ಮಧ್ಯಪ್ರದೇಶದ  ಭೋಪಾಲ್​​​ನಲ್ಲಿ ಮಾತನಾಡಿದ ಅವರು, ಭಾರತದ “ಪರಮ ವೈಭವ” ಕ್ಕಾಗಿ ಕೆಲಸ ಮಾಡಲು ಮೌಲ್ಯಗಳು, ಆಲೋಚನೆಗಳು ಮತ್ತು ಗುರಿಗಳನ್ನು ಮಾತ್ರ ಹೊಂದಿದೆ ಎಂದು ಹೇಳಿದ್ದಾರೆ. ಬಿಜೆಪಿ, ವಿಎಚ್‌ಪಿ, ವಿದ್ಯಾಭಾರತಿ ನಮ್ಮ ಸ್ವಯಂಸೇವಕರಿಂದ ನಡೆಸಲ್ಪಡುತ್ತಿವೆ. , ಅವು ಸ್ವತಂತ್ರವಾಗಿ ಗುರುತಿಸಿಕೊಂಡಿದೆ. ಅದನ್ನು ಯಾರು ನಿಯಂತ್ರಣ ಮಾಡುವುದಿಲ್ಲ. ಈ ಸಂಸ್ಥೆಗಳು ತಮ್ಮದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತವೆ ಮತ್ತು ವಿಭಿನ್ನ ಹಿನ್ನೆಲೆಯ ಜನರೊಂದಿಗೆ ಕೆಲಸ ಮಾಡುತ್ತವೆ ಎಂದು ಹೇಳಿದ್ದಾರೆ. ಅವರು ತಮ್ಮದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಮತ್ತು ವಿವಿಧ ಪ್ರದೇಶಗಳಲ್ಲಿ ಮತ್ತು ವಿವಿಧ ರೀತಿಯಲ್ಲಿ ಸ್ವಯಂಸೇವಕರಲ್ಲದವರೊಂದಿಗೆ ಕೆಲಸ ಮಾಡುತ್ತಾರೆ.

40 ವರ್ಷಗಳ ಹಿಂದೆ ಕೂಡ ಇದೇ ಮಾತನ್ನು ನಾವು ಹೇಳಿದ್ದೇವು, ಆಗ ನಮ್ಮನ್ನು ಅಣಕಿಸಿದ್ದರು. ಇದೀಗ ಅವರೇ ನಮ್ಮನ್ನು ಅರ್ಥ ಮಾಡಿಕೊಳ್ಳುತ್ತಿದ್ದಾರೆ. ಆರ್‌ಎಸ್‌ಎಸ್ ಸಂಘಟನೆಯ ಬಗ್ಗೆ ಬಹಳ ಹಿಂದಿನಿಂದಲೂ ತಪ್ಪು ಮಾಹಿತಿ ಮತ್ತು ತಪ್ಪು ತಿಳುವಳಿಕೆಗಳು ಇದೆ. ಆರಂಭದಿಂದಲೂ ಮತ್ತು ಇಲ್ಲಿಯವರೆಗೆ, ಆರ್‌ಎಸ್‌ಎಸ್ ಬಗ್ಗೆ ಸುಳ್ಳು ಆರೋಪಗಳನ್ನು ಮಾಡುತ್ತ ಬಂದಿದ್ದಾರೆ. ಆದರೆ ಬಹಳ ಕಡಿಮೆ ಜನರು ಆರ್​ಎಸ್​​ಎಸ್​​ ಬಗ್ಗೆ ಸ್ಪಷ್ಟವಾಗಿ ತಿಳಿದುಕೊಂಡಿದ್ದಾರೆ. ಆರ್‌ಎಸ್‌ಎಸ್ ಮತ್ತು ವಿಶ್ವದ ಯಾವುದೇ ಇತರ ಸಂಘಟನೆಯ ನಡುವೆ ಯಾವುದೇ ಹೋಲಿಕೆಗಳನ್ನು ಮಾಡಲು ಸಾಧ್ಯವಿಲ್ಲ. ಅದರ ಕಾರ್ಯವೈಖರಿ ವಿಶಿಷ್ಟವಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಅಶ್ಲೀಲ, ಕಾನೂನುಬಾಹಿರ ವಿಷಯಗಳನ್ನು ಡಿಲೀಟ್ ಮಾಡಿ; ಎಕ್ಸ್​​ನ ಗ್ರೋಕ್​ಗೆ ಕೇಂದ್ರ ಸರ್ಕಾರ ಎಚ್ಚರಿಕೆ

ನಾವು ಪಥ ಸಂಚಲನ ಮತ್ತು ಲಾಠಿಗಳಿಂದ ಕಾರ್ಯಗಳನ್ನು ನಿರ್ವಹಿಸುವುದರಿಂದ, ಆರ್‌ಎಸ್‌ಎಸ್ ಅನ್ನು ಎಂದಿಗೂ ಅರೆಸೈನಿಕ ಪಡೆ ಎಂದು ತಪ್ಪಾಗಿ ಭಾವಿಸಬಾರದು. ಸಂಘ ಸೇವಾ ಚಟುವಟಿಕೆಗಳನ್ನು ನಿರ್ವಹಿಸುತ್ತದೆ. ಆರ್‌ಎಸ್‌ಎಸ್ ಅನ್ನು ಅರ್ಥಮಾಡಿಕೊಳ್ಳಲು, ನೀವು ವಿಕಿಪೀಡಿಯಾದಲ್ಲಿ ಹುಡುಕುವ ಬದಲು, ಆರ್‌ಎಸ್‌ಎಸ್‌ನೊಂದಿಗೆ ಬಂದು ಇರಬೇಕು ಎಂದು ಹೇಳಿದ್ದಾರೆ.

ರಾಷ್ಟ್ರದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ ​​​

Published On - 8:13 am, Sat, 3 January 26