ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ಖ್ಯಾತ ಖಳನಟ ವಜ್ರಮುನಿ ಅವರು ನಿಧನರಾಗಿದ್ದು 2006ರ ಜನವರಿ 5ರಂದು. ಕೊನೆಯ ದಿನಗಳಲ್ಲಿ ವಜ್ರಮುನಿ ಅವರು ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದರು. ಸಿನಿಮಾಗಳ ನಿರ್ಮಾಣದಿಂದ ನಷ್ಟ ಅನುಭವಿಸಿದ್ದರು. ಅದರಿಂದ ಆರ್ಥಿಕ ಸಂಕಷ್ಟಕ್ಕೆ ವಜ್ರಮುನಿ ಅವರು ಸಿಲುಕಿದ್ದರು. ಆ ಬಗ್ಗೆ ಇಲ್ಲಿದೆ ಪೂರ್ತಿ ವಿವರ..
ಕನ್ನಡ ಚಿತ್ರರಂಗದಲ್ಲಿ (Kannada Film Industry) ನಟ ವಜ್ರಮುನಿ ಅವರು ತಮ್ಮದೇ ಛಾಪು ಮೂಡಿಸಿದ್ದರು. ಬಹುಬೇಡಿಕೆಯ ನಟನಾಗಿ ಅವರು ಮಿಂಚಿದ್ದರು. ಹೀರೋಗಳಿಗಿಂತ ವಜ್ರಮನಿ ಅವರೇ ಹೈಲೈಟ್ ಆಗುತ್ತಿದ್ದ ದಿನಗಳು ಅವು. ಸಿನಿಮಾದಲ್ಲಿ ವಿಲನ್ ಆದರೂ ರಿಯಲ್ ಲೈಫ್ನಲ್ಲಿ ವಜ್ರಮುನಿ ಅವರು ಮೃದು ಸ್ವಭಾವದ ವ್ಯಕ್ತಿ ಆಗಿದ್ದರು. ನಟನಾಗಿ ಫೇಮಸ್ ಆದ ಅವರು ನಿರ್ಮಾಪಕನಾಗಿಯೂ ಅದೃಷ್ಟಪರೀಕ್ಷೆ ಮಾಡಿಕೊಂಡರು. ನಿರ್ಮಾಪಕನಾದ ಬಳಿಕ ಅವರು ಸಾಲದ ಸುಳಿಗೆ ಸಿಲುಕಿದರು. ನಂತರದ ದಿನಗಳಲ್ಲಿ ವಜ್ರಮುನಿ (Vajramuni) ಅವರಿಗೆ ಆರೋಗ್ಯ ಕೈಕೊಟ್ಟಿತು. ಅದರಿಂದಾಗಿ ಅವರ ಕೊನೆಯ ದಿನಗಳು ನರಕ ಸದೃಶ್ಯ ಆಗಿದ್ದವು. ಕಿಡ್ನಿ, ಹೃದಯ ಸಂಬಂಧಿ ಕಾಯಿಲೆಗಳು ಕಾಣಿಸಿಕೊಂಡವು. ಶುಗರ್ ಮತ್ತು ರಕ್ತಹೀನತೆಯಿಂದ ಕಣ್ಣು ಕಾಣದಂತಾಯಿತು. ಕಿವಿ ಕೇಳಿಸುತ್ತಿರಲಿಲ್ಲ. ಅನೇಕ ಕಾಯಿಲೆಗಳಿಂದ ಅವರು 2006ರ ಜನವರಿ 5ರಂದು ನಿಧನರಾದರು. ಅವರು ಇಹಲೋಕ ತ್ಯಜಿಸಿ 20 ವರ್ಷ ಕಳೆದಿದೆ. ವಜ್ರಮುನಿ ರೀತಿಯ ಮತ್ತೋರ್ವ ಖಳನಟ ಕನ್ನಡ ಚಿತ್ರರಂಗದಲ್ಲಿ ಬರಲೇ ಇಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ

