ಚೂಪಾದ ಮುಳ್ಳುಗಳ ರಾಶಿ ಮೇಲೆ ನೃತ್ಯ; ತಮಿಳುನಾಡಿನಲ್ಲೊಂದು ವಿಶಿಷ್ಟ ಪದ್ಧತಿ
ತಿರುಪ್ಪುವನಂ ಬಳಿಯ ಹಳ್ಳಿಯಲ್ಲಿ ಪೂಂಗವನಂ ಮುತ್ತುಮಾರಿಯಮ್ಮನ್ ದೇವಾಲಯವಿದೆ. 63 ವರ್ಷದ ನಾಗರಾಣಿ ಅಮ್ಮವರು ಈ ದೇವಾಲಯದ ಆಡಳಿತಾಧಿಕಾರಿ. ಪ್ರತಿ ಮಂಡಲ ಪೂಜೆಯ ಸಮಯದಲ್ಲಿ 48 ದಿನಗಳ ಕಾಲ ಉಪವಾಸ ಆಚರಿಸುವುದು ಮತ್ತು ಜನರಿಗೆ ದೈವಿಕ ಮಾತುಗಳನ್ನು ಹೇಳುವುದು ಇಲ್ಲಿನ ಸಂಪ್ರದಾಯವಾಗಿದೆ. ಈ ವೇಲೆ 7 ಅಡಿ ಎತ್ತರದ ಮುಳ್ಳಿನ ಹಾಸಿಗೆಯನ್ನು ಉಡೈ ಮುಳ್ಳು ಮತ್ತು ಕರುವೇಲ ಮರದ ಮುಳ್ಳಿನಂತಹ ವಸ್ತುಗಳಿಂದ ತಯಾರಿಸಲಾಗುತ್ತದೆ.
ಚೆನ್ನೈ, ಜನವರಿ 2: ತಮಿಳುನಾಡಿನ ಶಿವಗಂಗೈ ಜಿಲ್ಲೆಯ ತಿರುಪ್ಪುವನಂ ಬಳಿಯ ಹಳ್ಳಿಯಲ್ಲಿ ಪೂಂಗವನಂ ಮುತ್ತುಮಾರಿಯಮ್ಮನ್ ದೇವಾಲಯವಿದೆ. 63 ವರ್ಷದ ನಾಗರಾಣಿ ಅಮ್ಮವರು ಈ ದೇವಾಲಯದ ಆಡಳಿತಾಧಿಕಾರಿ. ಪ್ರತಿ ಮಂಡಲ ಪೂಜೆಯ ಸಮಯದಲ್ಲಿ 48 ದಿನಗಳ ಕಾಲ ಉಪವಾಸ ಆಚರಿಸುವುದು ಮತ್ತು ಜನರಿಗೆ ದೈವಿಕ ಮಾತುಗಳನ್ನು ಹೇಳುವುದು ಇಲ್ಲಿನ ಸಂಪ್ರದಾಯವಾಗಿದೆ. ಈ ವೇಲೆ 7 ಅಡಿ ಎತ್ತರದ ಮುಳ್ಳಿನ ಹಾಸಿಗೆಯನ್ನು ಉಡೈ ಮುಳ್ಳು ಮತ್ತು ಕರುವೇಲ ಮರದ ಮುಳ್ಳಿನಂತಹ ವಸ್ತುಗಳಿಂದ ತಯಾರಿಸಲಾಗುತ್ತದೆ. ನಾಗರಾಣಿ ಅಮ್ಮವರು ಭಕ್ತರನ್ನು ಆಶೀರ್ವದಿಸಲು ಆ ಮುಳ್ಳಿನ ಹಾಸಿಗೆಯ ಮೇಲೆ ಕುಳಿತು, ನಿಂತು, ನೃತ್ಯ ಮಾಡುತ್ತಾರೆ!
ಈ ವರ್ಷದ 49ನೇ ಮಂಡಲ ಪೂಜಾ ಉತ್ಸವದ ಅಂಗವಾಗಿ, ದೇವಿಗೆ ಶಂಖ ಅಭಿಷೇಕ ಮಾಡಲಾಯಿತು. ನಂತರ, ದೇವಿಗೆ ದೀಪ ಬೆಳಗಿಸಲಾಯಿತು. ಬಳಿಕ ಉಡೈ ಮುಳ್ಳು, ಇಳಂತೈ ಮುಳ್ಳು, ಮತ್ತು ಕತ್ತಲಿ ಮುಳ್ಳು ಮುಂತಾದ ವಿವಿಧ ರೀತಿಯ ಮುಳ್ಳುಗಳನ್ನು ಹೊಂದಿರುವ 7 ಅಡಿ ಎತ್ತರದ ಮುಳ್ಳಿನ ರಾಶಿಯನ್ನು ದೇವಾಲಯದ ಮುಂಭಾಗದ ನೆಲದಲ್ಲಿ ಜೋಡಿಸಿ ನಾಗರಾಣಿ ದೇವಿಯು ಮುಳ್ಳಿನ ಹಾಸಿಗೆಯ ಮೇಲೆ ಕುಳಿತು ಆಶೀರ್ವಾದ ನೀಡಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಯತೀಂದ್ರ ಸಿದ್ದರಾಮಯ್ಯಗೆ ವಿಶೇಷ ಗೌರವ
ಫ್ರಾನ್ಸ್ನ ಶೃಂಗಸಭೆಯ ಗ್ರೂಪ್ ಫೋಟೋ ವೇಳೆಯೂ ಮೌನವಾಗೇ ನಿಂತ ಟ್ರಂಪ್-ಮೋದಿ
ಬಿಗಿ ಅಪ್ಪುಗೆಯಿಲ್ಲದೆ, ಕೈ ಕುಲುಕಿ ಟ್ರಂಪ್- ಮೋದಿ ಉಭಯಕುಶಲೋಪರಿ
ಬಿಲ್ ಕಟ್ಟಲೂ ಹಣ ಇಲ್ವೇ: ಕತ್ತಲಲ್ಲಿ ಮುಳುಗಿದ ಬೆಳಗಾವಿ ತಹಶೀಲ್ದಾರ್ ಕಚೇರಿ

