ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಹಿಂದೊಮ್ಮೆ ಗಣಿ ದೂಳಿನಿಂದಲೇ ಸುದ್ದಿಯಾಗಿದ್ದ ಬಳ್ಳಾರಿ, ಸದ್ಯ ರಕ್ತ ರಾಜಕೀಯಕ್ಕೆ ಸಾಕ್ಷಿಯಾಗಿದೆ.ಬರೀ ಟ್ವೆಂಟಿ ಬೈ ಟ್ವೆಂಟಿ ಬ್ಯಾನರ್ ಸಲುವಾಗಿ ಶಾಸಕರಾದ ಜನಾರ್ದನ ರೆಡ್ಡಿ ಹಾಗೂ ಭರತ್ ರೆಡ್ಡಿ ಬೆಂಬಲಿಗರ ನಡುವೆ ಗಲಾಟೆ ನಡೆದಿದೆ. ಕಲ್ಲು ತೂರಾಟ, ಖಾರದ ಪುಡಿ ಎರೆಚಾಟ, ದೊಣ್ಣೆಯಿಂದ ಬಡಿದಾಟ ಇಷ್ಟೇ ಅಲ್ಲ, ಗಾಳಿಯಲ್ಲಿ 12ಕ್ಕೂ ಹೆಚ್ಚು ಸುತ್ತು ಫೈರಿಂಗ್ ಮಾಡಲಾಗಿದೆ. ನಿನ್ನೆ (ಜನವರಿ 01) ರಾತ್ರಿ ಬಳ್ಳಾರಿಯ ಪರಿಸ್ಥಿತಿ ಅದೆಷ್ಟರ ಮಟ್ಟಿಗೆ ಉದ್ವಿಗ್ನಗೊಂಡಿತ್ತು ಅನ್ನೋದಕ್ಕೆ ಕೆಲ ದೃಶ್ಯಗಳೇ ಸಾಕ್ಷಿಯಾಗಿವೆ.
ಬಳ್ಳಾರಿ, ಜನವರಿ 02): ಹಿಂದೊಮ್ಮೆ ಗಣಿ ದೂಳಿನಿಂದಲೇ ಸುದ್ದಿಯಾಗಿದ್ದ ಬಳ್ಳಾರಿ, ಸದ್ಯ ರಕ್ತ ರಾಜಕೀಯಕ್ಕೆ ಸಾಕ್ಷಿಯಾಗಿದೆ.ಬರೀ ಟ್ವೆಂಟಿ ಬೈ ಟ್ವೆಂಟಿ ಬ್ಯಾನರ್ ಸಲುವಾಗಿ ಶಾಸಕರಾದ ಜನಾರ್ದನ ರೆಡ್ಡಿ ಹಾಗೂ ಭರತ್ ರೆಡ್ಡಿ ಬೆಂಬಲಿಗರ ನಡುವೆ ಗಲಾಟೆ ನಡೆದಿದೆ. ಕಲ್ಲು ತೂರಾಟ, ಖಾರದ ಪುಡಿ ಎರೆಚಾಟ, ದೊಣ್ಣೆಯಿಂದ ಬಡಿದಾಟ ಇಷ್ಟೇ ಅಲ್ಲ, ಗಾಳಿಯಲ್ಲಿ 12ಕ್ಕೂ ಹೆಚ್ಚು ಸುತ್ತು ಫೈರಿಂಗ್ ಮಾಡಲಾಗಿದೆ. ನಿನ್ನೆ (ಜನವರಿ 01) ರಾತ್ರಿ ಬಳ್ಳಾರಿಯ ಪರಿಸ್ಥಿತಿ ಅದೆಷ್ಟರ ಮಟ್ಟಿಗೆ ಉದ್ವಿಗ್ನಗೊಂಡಿತ್ತು ಅನ್ನೋದಕ್ಕೆ ಕೆಲ ದೃಶ್ಯಗಳೇ ಸಾಕ್ಷಿಯಾಗಿವೆ. ಇನ್ನು ಇದೇ ವೇಳೆ ಗಾಳಿಯಲ್ಲಿ ಗುಂಡು ಹಾರಿಸಲಾಗಿದ್ದು, ಓರ್ವ ಕಾಂಗ್ರೆಸ್ ಕಾರ್ಯಕರ್ತ ಸಾವನ್ನಪ್ಪಿದ್ದಾನೆ. ಆರಂಭದಲ್ಲಿ ಒಂದು ಬುಲೆಟ್ ಪತ್ತೆಯಾಗಿದ್ದು, ಇದೀಗ ಜನಾರ್ದನ ರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆಯಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

