AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀವು ಈ ಹಿಂದೆ ಮಾಡಿದ ಹೂಡಿಕೆಗಳು ನಿಮಗೆ ಪ್ರಯೋಜನವನ್ನು ನೀಡಲಿದೆ

ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ವಸಂತ ಋತುವಿನ ವೈಶಾಖ ಮಾಸ ಕೃಷ್ಣ ಪಕ್ಷದ ದ್ವಾದಶೀ ತಿಥಿ, ಶನಿವಾರ ಸಂಕಲ್ಪ ತಕ್ಕಂತೆ ಕಾರ್ಯ, ವಿರೋಧಕ್ಕೆ ಯೋಗ್ಯ ತಿರಸ್ಕಾರ, ದಾನದಿಂದ‌ ಕೀರ್ತಿ ಇದು ಇಂದಿನ ಭವಿಷ್ಯ. ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಯಾವ ಫಲ ಎನ್ನುವುದನ್ನು ತಿಳಿದುಕೊಳ್ಳಿ.

ನೀವು ಈ ಹಿಂದೆ ಮಾಡಿದ ಹೂಡಿಕೆಗಳು ನಿಮಗೆ ಪ್ರಯೋಜನವನ್ನು ನೀಡಲಿದೆ
ದಿನ ಭವಿಷ್ಯ
Follow us
TV9 Web
| Updated By: ವಿವೇಕ ಬಿರಾದಾರ

Updated on: May 24, 2025 | 1:38 AM

ನಿತ್ಯ ಪಂಚಾಂಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು: ವಸಂತ, ಸೌರ ಮಾಸ: ವೃಷಭ, ಮಹಾನಕ್ಷತ್ರ: ಕೃತ್ತಿಕಾ, ಮಾಸ: ವೈಶಾಖ, ಪಕ್ಷ: ಕೃಷ್ಣ, ವಾರ: ಶನಿವಾರ, ತಿಥಿ: ದ್ವಾದಶೀ, ನಿತ್ಯನಕ್ಷತ್ರ: ಅಶ್ವಿನೀ, ಯೋಗ : ಆಯುಷ್ಮಾನ್, ಕರಣ: ಕೌಲವ, ಸೂರ್ಯೋದಯ – 06 : 04 am, ಸೂರ್ಯಾಸ್ತ – 06 : 54 pm, ಇಂದಿನ ಶುಭಾಶುಭಕಾಲ: ರಾಹು ಕಾಲ 09:17 – 10:53, ಯಮಘಂಡ ಕಾಲ 14:06 – 15:42, ಗುಳಿಕ ಕಾಲ 06:04 – 07:41

ಮೇಷ ರಾಶಿ: ನಿಮ್ಮೊಳಗೇ ಸಾತ್ತ್ವಿಕ‌ಪ ಪ್ರೇರಣೆಯಾಗುವ ಸಾಧ್ಯತೆ ಇದೆ. ಇಂದು ನೀವು ಪ್ರತಿಕೂಲಸ್ಥಿತಿಯನ್ನು ಎದುರಿಸಲು ಮಾನಸಿಕವಾಗಿ ಸಿದ್ಧರಿರಬೇಕಾಗುವುದು. ಹಿತಶತ್ರಗಳು ಸೋಲನ್ನು ಒಪ್ಪಿದರೂ ಇನ್ನೊಂದು ರೀತಿಯಲ್ಲಿ ಗೆಲ್ಲುವ ಯೋಜನೆ ಮಾಡುವರು. ಗಳಿಸಿಕೊಂಡ‌ ಭಾವಕ್ಕಿಂತ ಉಳಿಸಿಕೊಂಡ ಭಾವವೇ ಮೇಲು. ನಿಮ್ಮ ಸಂಕೀರ್ಣವಾದ ಕಾರ್ಯವು ಮುಕ್ತಾಗೊಳ್ಳುವುದು. ದಿನದ ಆರಂಭದಲ್ಲಿ ಉತ್ಸಾಹದಿಂದ ಮಾಡುವ ಪ್ರಯತ್ನಗಳು ಫಲವನ್ನು ಕೊಡುವುವು. ಆಯ್ಕೆಗಳು ಇಂದು ತಪ್ಪಾಗುವುದು. ಸರಿಯಾದುದನ್ನು ಬೇರೆಯವರಿಂದ ಕೇಳಿ ಪಡೆಯಿರಿ. ನಿಮಲ್ಲಿ ಅಲ್ಪವಾದರೂ ಉಪಕಾರ ಮನೋಭಾವ ಜಾಗರೂಕವಾಗಲಿದೆ. ಕಛೇರಿಯ ಕಾರ್ಯವು ಇಂದು ಅಧಿಕವಾಗಿ ಇರಲಿದೆ. ಸ್ಥಿರವಾದ ಬುದ್ಧಿಯನ್ನು ಬೆಳೆಸಿಕೊಳ್ಳುವ ಅನಿವಾರ್ಯತೆ ಬರಬಹುದು. ಉಪಾಯದಿಂದ ನಿಮ್ಮ ಸ್ಥಾನವನ್ನು ಸ್ಥಿರವಾಗಿಸಿಕೊಳ್ಳಿ. ನಿಮ್ಮ ಮನಸ್ಸಿಗೆ ಬಾರದೇ ಯಾವುದನ್ನೂ ಒಪ್ಪಿಕೊಳ್ಳಲಾರಿರಿ. ಸಂತೋಷದ ದಿನಗಳ ನಿರೀಕ್ಷೆಯು ಹೆಚ್ಚಾಗುವುದು.

ವೃಷಭ ರಾಶಿ: ತಂತ್ರಜ್ಞಾನದ ಜೊತೆ ಹೊಂದಾಣಿಕೆ ಸಾಧ್ಯವಾಗದು. ಅಪರಿಚಿತ ಕೆಲಸಗಳಿಂದ‌ ಬೇಸರ. ಇಂದು ನೀವು ಸಂಸಾರದ ಸುಖವನ್ನು ಆನಂದಿಸುವಿರಿ. ನಿಮ್ಮ ಜ್ಞಾನವನ್ನು ಪ್ರದರ್ಶಿಸುವ ಅವಕಾಶ ಸಿಗಬಹುದು. ಹೆಚ್ಚಿನ ಶ್ರದ್ಧೆ ಮತ್ತು ತಿಳುವಳಿಕೆಯಿಂದ ನೀವು ಪ್ರಯೋಜನ ಪಡೆಯುತ್ತೀರಿ. ಇಂದು ನಿಮ್ಮ ಆರೋಗ್ಯದಲ್ಲಿ ವ್ಯತ್ಯಾಸವಾಗುವ ಸಾಧ್ಯತೆ ಇದೆ. ಸ್ನೇಹವನ್ನು ಉಳಿಸಿಕೊಳ್ಳಲಾಗದು. ಕಲಿಕೆಯ ವಿಚಾರದಲ್ಲಿ ನೀವು ಎಂದಿಗಿಂತ ಹೆಚ್ಚು ಪ್ರಯತ್ನಶೀಲರು. ವಿವೇಚನೆ ಹೆಚ್ಚಲಿದೆ. ಯಾರೊಬ್ಬರ ಸಲಹೆ ಫಲ ನೀಡಲಿದೆ. ಕಾಲುಗಳು ಮತ್ತು ಸ್ನಾಯುಗಳಲ್ಲಿ ನೋವು ಇರುತ್ತದೆ. ಅವಶ್ಯಕ ಇರುವಷ್ಟೇ ಮಾತನಾಡಿ. ನಿಮ್ಮ ಜವಾಬ್ದಾರಿಗಳನ್ನು ನೀವು ಕಳೆದುಕೊಂಡು ನಿಶ್ಚಿಂತೆಯಿಂದ ಇರುವಿರಿ. ಭವಿಷ್ಯವು ಅನಿಶ್ಚಿತ ಎನಿಸಬಹುದು. ನಿಮ್ಮದೇ ವಸ್ತುವನ್ನು ಗುರುತಿಸಲಾರದಷ್ಟು ಮರೆವು ನಿಮ್ಮದಾಗಿದೆ. ಪ್ರವಾಸವನ್ನು ಹೆಚ್ಚು ಮಾಡುವ ವಿಚಾರದಲ್ಲಿ ಆಸಕ್ತಿಯು ಇರುವುದು. ಯಾರ ಜೊತೆಯೂ ಕೆಟ್ಟವರಾಗಲು ಇಷ್ಟವಾಗದು.

ಮಿಥುನ ರಾಶಿ: ಪರರಿಗೆ ಘಾಸಿ ಮಾಡಿ ನೀವು ಹಾಯಾಗಿರಲಾಗದು. ಇಂದು ಮಹತ್ತ್ವ ಕಾಮಗಾರಿಗಳು ನಿಮ್ಮ ಪಾಲಿಗೆ ಸಿಗಲಿದೆ. ಆರ್ಥಿಕವಾಗಿ ಅನೇಕ ಲಾಭಗಳು ಆಗಲಿವೆ. ಜನರೊಂದಿಗೆ ವ್ಯವಹರಿಸುವಾಗ ಜಾಗರೂಕರಾಗಿರಿ. ಹಿರಿಯರೊಂದಿಗೆ ಆತ್ಮೀಯತೆ ಬೆಳೆಯಲಿದೆ. ಕುಟುಂಬದ ಸೆಳೆತದಿಂದ ವಿದ್ಯಾಭ್ಯಾಸ ಹಾಳಾಗುವುದು. ವ್ಯಾಪಾರವನ್ನು ಬೆಳಗಿಸಲು ಅನೇಕ ಅವಕಾಶಗಳಿವೆ. ಆದರೆ ನಿಮ್ಮ ನಿರ್ಲಕ್ಷ್ಯವು ಕೆಲಸವನ್ನು ಹಾಳು ಮಾಡಬಹುದು. ಸತ್ಯವನ್ನು ಮಾತನಾಡುವುದು ಬಹಳಷ್ಟು ಮಾಡುತ್ತದೆ. ಮನಸ್ಸಿನ ಚಂಚಲತೆಯನ್ನು ನಿಯಂತ್ರಿಸುವುದು ಅವಶ್ಯಕ. ಧಾರ್ಮಿಕ ಕಾರ್ಯವನ್ನು ಮಾಡುವ ಮನಸ್ಸಾಗುವುದು. ಗಳಿಸಿದ ಹಣವನ್ನು ಸದ್ವಿನಿಯೋಗಕ್ಕೆ ಕೊಡುವಿರಿ. ಸಮಯಕ್ಕೆ ಸರಿಯಾದ ಸಲಹೆಯನ್ನು ಯಾರಿಂದಲಾದರೂ ಪಡೆಯುವಿರಿ. ಕುಟುಂದ ಜೊತೆ ಸಮಯ ಕಳೆಯುವುದು ಇಂದು ಸಾಧ್ಯವಾಗದು. ಹಳೆಯ ರೋಗಗಳಿಂದ ನೀವು ಮುಕ್ತರಾದಂತೆ ತೋರುವುದು. ನಿಮ್ಮ ಸಿಟ್ಟನ್ನು ಇಂದು ತೋರಿಸುವುದು ಬೇಡ.

ಕರ್ಕಾಟಕ ರಾಶಿ: ದೀರ್ಘಕಾಲದ ಯೋಜನೆಯನ್ನು ಹಾಕಿಕೊಳ್ಳುವುದು ಬೇಡ. ನಿಮ್ಮ ಹಳೆಯ ಸಂಬಂಧಗಳು ಪುನಃ ಹತ್ತಿರವಾಗಲು ಕಾರಣವಿರುವುದು. ನೀವು ತಕ್ಷಣ ಪ್ರತಿಕ್ರಿಯಿಸದಿರುವುದು ಒಳ್ಳೆಯದು.‌ ಅನಗತ್ಯ ಧೈರ್ಯವನ್ನು ತೋರಿಸುವುದನ್ನು ತಪ್ಪಿಸುವುದು ಸೂಕ್ತ. ನಿಮ್ಮ ವಸ್ತುಗಳನ್ನು ಜೋಪಾನ‌‌ ಮಾಡಿಕೊಳ್ಳಬೇಕು. ನೀವು ಈ ಹಿಂದೆ ಮಾಡಿದ ಹೂಡಿಕೆಗಳು ನಿಮಗೆ ಪ್ರಯೋಜನವನ್ನು ನೀಡಲಿದೆ. ಅನುಭವಿ ಜನರನ್ನು ಸಂಪರ್ಕಿಸಲಾಗುವುದು. ಯಾರದೋ ಸಂಬಂಧವನ್ನು ಬೆಳೆಸುವುದು ಬೇಡ. ಅಕ್ರಮ ವಿಚಾರಗಳಿಂದ ನಿಮಗೆ ತೊಂದರೆಯಾಗುವುದು. ಆಸ್ತಿಯ ವಿಚಾರ ಪುನಃ ಬೆಳಕಿಗೆ ಬಂದು ಸಣ್ಣ ಕಲಹದಲ್ಲಿ ಮುಕ್ತಾಯವಾದೀತು. ವಂಚನೆಗೆ ಗೊತ್ತಾಗದಂತೆ ಸಿಕ್ಕಿಕೊಳ್ಳಬೇಕಾದೀತು. ನಿಮ್ಮ ಸ್ಥಾನಕ್ಕೆ ಯೋಗ್ಯವಾದ ಮಾತು ಇರಲಿ.‌ ಮನೋಬಲವನ್ನು ಹೆಚ್ಚಿಸಿಕೊಳ್ಳಬೇಕಾಗವುದು. ಯಾರ ಸಲಹೆ ಪಡೆಯದೇ ಮನಸ್ಸಿಗೆ ಬಂದಂತೆ ವ್ಯವಹರಿಸುವುದನ್ನು ಬಿಡಿ. ಸಂಗಾತಿಯ ಆರೋಗ್ಯವು ಹದ ತಪ್ಪುವುದು. ಬಹಳ ದಿನಗಳ ಅನಂತರ ತಪ್ಪಿನ ಅರಿವಾಗಬಹುದು.

ಸಿಂಹ ರಾಶಿ: ಆದಾಯದ ರಹಸ್ಯವನ್ನು ಯಾರಾದರೂ ಭೇದಿಸಬಹುದು. ನಿಮ್ಮ ಮಾತಿನಿಂದ ಜನರು ಪ್ರಭಾವಿತರಾಗಬಹುದು. ನಿಮಗೆ ಆದಾಯದ ಹೊಸ ಮಾರ್ಗಗಳು ಕಂಡುಬರಬಹುದು. ಈ ಸಮಯದಲ್ಲಿ ದೊಡ್ಡ ಅವಕಾಶದ ಹುಡುಕಾಟವು ಪೂರ್ಣಗೊಳ್ಳುತ್ತದೆ. ಸಂಗಾತಿಯನ್ನು ಅಮೂಲ್ಯ ವಸ್ತುಗಳಿಂದ ಸುಮ್ಮನಾಗಿಸುವಿರಿ. ಆರಂಭದಲ್ಲಿ, ಕೆಲವು ಕೆಲಸಗಳನ್ನು ಯೋಚಿಸದೆ ಮಾಡಲಾಗುತ್ತದೆ ಮತ್ತು ಕೆಲವು ಪ್ರಜ್ಞಾಪೂರ್ವಕವಾಗಿ ಮುಂದುವರಿಯುತ್ತದೆ. ಇದು ಗುರಿಯ ಸಾಧನೆಗೆ ಅಥವಾ ಅನುಭವದ ಅನನ್ಯ ಕೊಡುಗೆಗೆ ಕಾರಣವಾಗುತ್ತದೆ. ಮಕ್ಕಳು ನಿಮ್ಮ ಜೊತೆ ಕಾಲವನ್ನು ಕಳೆಯಬಯಸುವರು. ದುರಭ್ಯಾಸಗಳನ್ನು ಬುದ್ಧಿಪೂರ್ವಕವಾಗಿ ಬಿಡದಲಲೇಬೇಕಾಗುವುದು. ನಿಮ್ಮ ಮಾತು ಸಂಗಾತಿಯನ್ನು ಮೌನಿಯನ್ನಾಗಿ‌ ಮಾಡುವುದು. ನೀವು ಮನೆಯ ಜವಾಬ್ದಾರಿಗಳನ್ನು ವಹಿಸಿಕೊಳ್ಳಬೇಕಾದೀತು. ಅತಿಯಾದ ಮಾತಿನಿಂದ ಇತರರಿಗೆ ಕಷ್ಟವಾದೀತು. ಮನೆಯ ಕಾರ್ಯವು ನಿಮಗೆ ತೃಪ್ತಿ ಕೊಡುವುದು. ಕೃತಜ್ಞತೆಯನ್ನು ಇಟ್ಟುಕೊಳ್ಳುವುದು ಕಷ್ಟವಾದರೂ ಬೇಕು.

ಕನ್ಯಾ ರಾಶಿ: ಹೋಲಿಕೆಯಿಂದ ನಿಮ್ಮ ಮನಸ್ಸಿಗೆ ಘಾಸಿಯಾಹಬಹುದು. ಇಂದು ನಿಮ್ಮ ಆರ್ಥಿಕವಾದ ಏರಿಳಿತಗಳು ಹೆಚ್ಚಿರುವುದು. ಸಮಾಜದಲ್ಲಿ ನಿಮ್ಮ ಗೌರವವು ಹೆಚ್ಚಾಗುತ್ತದೆ. ಸಹೋದ್ಯೋಗಿಗಳಿಂದ ಸಂಪೂರ್ಣ ಬೆಂಬಲ ಸಿಗಲಿದೆ. ದಾನ ಮಾಡುವ ಮನೋಭಾವವು ಹೆಚ್ಚಾಗುತ್ತದೆ. ಅಭ್ಯಾಸವನ್ನು ಸೃಜನಾತ್ಮಕವಾಗಿ ಮಾಡಿಕೊಳ್ಳುವಿರಿ. ನೀವು ಇಂದು ಮಂಗಲಕಾರ್ಯವನ್ನು ಯೋಜಿಸುವಿರಿ. ಕೆಲವು ನಕಾರಾತ್ಮಕ ಸುದ್ದಿಗಳಿಂದಾಗಿ ನಿಮ್ಮ ಮನಸ್ಸು ಚಿಂತಿತವಾಗಬಹುದು. ನೀವು ಸಂತಾನದ ಸಂತೋಷವನ್ನು ಹೊಂದಿರುತ್ತೀರಿ. ಇಂದಿನ ವಹಿವಾಟು ತಕ್ಕಮಟ್ಟಿಗೆ ಇರಲಿದೆ. ಇನ್ನೊಬ್ಬರನ್ನು ಕಂಡು ಕೊರಗುವುದು ಬೇಡ. ನಿಮ್ಮ‌ ತಪ್ಪನ್ನು ಒಪ್ಪಿಕೊಂಡು ಹೊಂದಾಣಿಕೆ ಮಾಡಿಕೊಳ್ಳುವಿರಿ. ವಿದೇಶೀಯ ವಸ್ತುಗಳು ನಿಮಗೆ ಸಿಗಬಹುದು. ನಿಮ್ಮ‌ ಆಲೋಚನೆಗಳನ್ನು ಇನ್ನೊಬ್ಬರ ಮೇಲೆ ಹೇರುವುದು ಬೇಡ. ಚಾಂಚಲ್ಯದ ಕಾರಣ ಉದ್ಯೋಗದಲ್ಲಿಯೂ ಸರಿಯಾದ ಏಕಾಗ್ರತೆಯಿಂದ ಕೆಲಸವನ್ನು ಮಾಡಲಾಗದು. ಸಾಮಾಜಿಕವಾಗಿ ಕಾರ್ಯಗಳಿಗೆ ನಿಮ್ಮ ಹಣವನ್ನೇ ಬಳಸುವಿರಿ.

ಯುವತಿಯೇ ಮೊದಲು ತನಗೆ ಹೊಡೆದಿದ್ದು ಎನ್ನುತ್ತಾನೆ ರ‍್ಯಾಪಿಡೋ ರೈಡರ್
ಯುವತಿಯೇ ಮೊದಲು ತನಗೆ ಹೊಡೆದಿದ್ದು ಎನ್ನುತ್ತಾನೆ ರ‍್ಯಾಪಿಡೋ ರೈಡರ್
ಯುವತಿ ಮೇಲೆ ರ‍್ಯಾಪಿಡೊ ಚಾಲಕ ಹಲ್ಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್‌..!
ಯುವತಿ ಮೇಲೆ ರ‍್ಯಾಪಿಡೊ ಚಾಲಕ ಹಲ್ಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್‌..!
ಇಂದ್ರಯಾಣಿ ಸೇತುವೆ ಶಿಥಿಲವಾಗಿತ್ತು; ಸಿಎಂ ಫಡ್ನವೀಸ್
ಇಂದ್ರಯಾಣಿ ಸೇತುವೆ ಶಿಥಿಲವಾಗಿತ್ತು; ಸಿಎಂ ಫಡ್ನವೀಸ್
ನಮ್ಮ ಸರ್ಕಾರ ಕೇವಲ ಒಂದು ತಿಂಗಳಲ್ಲಿ ಗ್ಯಾರಂಟಿ ಯೋಜನೆ ಜಾರಿಮಾಡಿತು: ಸಚಿವ
ನಮ್ಮ ಸರ್ಕಾರ ಕೇವಲ ಒಂದು ತಿಂಗಳಲ್ಲಿ ಗ್ಯಾರಂಟಿ ಯೋಜನೆ ಜಾರಿಮಾಡಿತು: ಸಚಿವ
ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಮಾಡುತ್ತೇವೆ ಅಂತ ಕೇಂದ್ರ ಹೇಳಿಲ್ಲ: ಸಿಎಂ
ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಮಾಡುತ್ತೇವೆ ಅಂತ ಕೇಂದ್ರ ಹೇಳಿಲ್ಲ: ಸಿಎಂ
ಮಸೀದಿ ನೆಲಸಮ ಮಾಡುವ ವೇಳೆ ಸ್ಫೋಟ, ಮೂವರಿಗೆ ಗಾಯ
ಮಸೀದಿ ನೆಲಸಮ ಮಾಡುವ ವೇಳೆ ಸ್ಫೋಟ, ಮೂವರಿಗೆ ಗಾಯ
ಕುಮಾರಸ್ವಾಮಿಯವರು ಚೆನ್ನಾಗಿರಲಿ, ಆರೋಗ್ಯವಾಗಿರಲಿ: ಶಿವಕುಮಾರ್
ಕುಮಾರಸ್ವಾಮಿಯವರು ಚೆನ್ನಾಗಿರಲಿ, ಆರೋಗ್ಯವಾಗಿರಲಿ: ಶಿವಕುಮಾರ್
6,6,6,6,6:: ಬಿರುಗಾಳಿ ಬ್ಯಾಟಿಂಗ್​ನೊಂದಿಗೆ ಪಂದ್ಯ ಗೆಲ್ಲಿಸಿದ ಬೌಲರ್..!
6,6,6,6,6:: ಬಿರುಗಾಳಿ ಬ್ಯಾಟಿಂಗ್​ನೊಂದಿಗೆ ಪಂದ್ಯ ಗೆಲ್ಲಿಸಿದ ಬೌಲರ್..!
‘ಎಸ್​ಪಿಬಿ ರೀತಿಯೇ ಮತ್ತೋರ್ವ ಗಾಯಕನಿದ್ದಾನೆ ಎಂದರು..’; ಜಗ್ಗೇಶ್
‘ಎಸ್​ಪಿಬಿ ರೀತಿಯೇ ಮತ್ತೋರ್ವ ಗಾಯಕನಿದ್ದಾನೆ ಎಂದರು..’; ಜಗ್ಗೇಶ್
ಅಕ್ರಮ ಕಟ್ಟಡಗಳ ವಿರುದ್ಧ ಬಿಬಿಎಂಪಿ ಸಮರ: ಹಲವೆಡೆ ಕಟ್ಟಡಗಳ ತೆರವು
ಅಕ್ರಮ ಕಟ್ಟಡಗಳ ವಿರುದ್ಧ ಬಿಬಿಎಂಪಿ ಸಮರ: ಹಲವೆಡೆ ಕಟ್ಟಡಗಳ ತೆರವು