ಸುಜಾತಾ ಹಂಡಿ ಕ್ರೂರತೆಯ ಮತ್ತಷ್ಟು ವಿಡಿಯೋ ವೈರಲ್: ದೃಶ್ಯ ನೋಡಿದ್ರೆ ಬೆಚ್ಚಿ ಬೀಳ್ತೀರ
ತನ್ನನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿರುವ ಹಾಲಿ ಬಿಜೆಪಿ ಕಾರ್ಯಕರ್ತೆ ಸುಜಾತಾ ಹಂಡಿಯೇ ವ್ಯಕ್ತಿಯೋರ್ವನನ್ನು ಬಟ್ಟೆ ಬಿಚ್ಚಿಸಿ ಥಳಿಸಿರುವ ವಿಡಿಯೋ ವೈರಲ್ ಆಗಿದೆ. ಈ ಬಗ್ಗೆ ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಪ್ರತಿಕ್ರಿಯೆ ನೀಡಿದ್ದು ಕಾಂಗ್ರೆಸ್ ಸಹಯೋಗದಲ್ಲಿದ್ದಾಗಲೇ ಇದು ನಡೆದಿದೆ. ಮೊನ್ನೆ ನಡೆದ ಘಟನೆ ಖಂಡಿಸಿ ಮಾತ್ರ ನಾವು ಹೋರಾಟ ಮಾಡ್ತಿದ್ದೇವೆ ಎಂದಿದ್ದಾರೆ.
ಹುಬ್ಬಳ್ಳಿ, ಜನವರಿ 09: ಬಿಜೆಪಿ ಕಾರ್ಯಕರ್ತೆ ಸುಜಾತಾ ಹಂಡಿ ವಿವಿಸ್ತ್ರಗೊಳಿಸಿ ಹಲ್ಲೆ ನಡೆಸಿರುವ ಆರೋಪ ರಾಜ್ಯಾದ್ಯಂತ ಚರ್ಚೆ ಆಗುತ್ತಿರುವ ನಡುವೆ ಆಕೆಯೇ ವ್ಯಕ್ತಿಯೋರ್ವನನ್ನು ಬಟ್ಟೆ ಬಿಚ್ಚಿಸಿ ಥಳಿಸಿರುವ ವಿಡಿಯೋ ವೈರಲ್ ಆಗಿದೆ. ಧಾರವಾಡ ಮೂಲದ ತುಕಾರಾಂ ಎಂಬವರನ್ನು ವಿವಸ್ತ್ರಗೊಳಿಸಿ ಸುಜಾತಾ ಮತ್ತು ಆಕೆ ಸಹಚರರು ಥಳಿಸಿದ್ದರು. ಹನಿಟ್ರ್ಯಾಪ್ ಮಾಡಿ ತುಕಾರಾಂನನ್ನು ಅಪಹರಿಸಿ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದ್ದು, ಎರಡೂವರೆ ವರ್ಷದ ಹಿಂದೆ ನಡೆದಿದ್ದ ಘಟನೆ ವಿಡಿಯೋ ಈಗ ವೈರಲ್ ಆಗಿದೆ.
ಇನ್ನು BJP ಕಾರ್ಯಕರ್ತೆ ಸುಜಾತಾ ಹಳೆಯ ವಿಡಿಯೋ ರಿಲೀಸ್ ವಿಚಾರ ಸಂಬಂಧ ಹುಬ್ಬಳ್ಳಿಯಲ್ಲಿ ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಪ್ರತಿಕ್ರಿಯೆ ನೀಡಿದ್ದಾರೆ. ಯಾವ ಸಂದರ್ಭದಲ್ಲಿ ವಿಡಿಯೋ ಆಗಿತ್ತೆಂದು ಸ್ಪಷ್ಟೀಕರಣ ನೀಡಲಿ. ಕಾಂಗ್ರೆಸ್ ಸಹಯೋಗದಲ್ಲಿದ್ದಾಗಲೇ ಇದು ನಡೆದಿದೆ. ಮೊನ್ನೆ ನಡೆದ ಘಟನೆ ಖಂಡಿಸಿ ಮಾತ್ರ ನಾವು ಹೋರಾಟ ಮಾಡ್ತಿದ್ದೇವೆ. ಸುಜಾತಾ ಹಂಡಿ ತಪ್ಪು ಮಾಡಿದ್ರೆ ಕಾನೂನಿನಡಿ ಶಿಕ್ಷೆಯಾಗಲಿ. ಪಾಲಿಕೆ ಸದಸ್ಯೆ ಸುವರ್ಣ ಪ್ರಕರಣಯೊಂದರಲ್ಲಿ ದೋಷಿ ಆಗಿದ್ದು, ಅವರ ಬಗ್ಗೆ ಯಾಕೆ ಕಾಂಗ್ರೆಸ್ನವರು ಮಾತನಾಡುತ್ತಿಲ್ಲ ಎಂದು ಶಾಸಕರು ಪ್ರಶ್ನಿಸಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
