Viral: ಗೆಳೆಯನನ್ನು ಭೇಟಿಯಾಗಲು ಬೆಂಗಳೂರಿಗೆ ಬಂದ ವಿದೇಶಿ ಮಹಿಳೆ ಹೀಗೆಂದಿದ್ದೇಕೆ?
ವಿದೇಶಿಗರು ಭಾರತಕ್ಕೆ ಭೇಟಿ ನೀಡಿ ಪ್ರವಾಸದ ಸುಂದರ ಅನುಭವ ಹಂಚಿಕೊಳ್ಳುವುದಿದೆ. ಆದರೆ ಇದೀಗ ಇಟಲಿಯನ್ ಮಹಿಳೆಯೊಬ್ಬರು ಬೆಂಗಳೂರಿಗೆ ನೀಡಿದ್ದು ಈ ನಗರದಲ್ಲಿ ತನಗೆ ಇಷ್ಟವಾದದ್ದು ಏನೆಂದು ಹಂಚಿಕೊಂಡಿದ್ದಾರೆ. ವಿದೇಶಿ ಮಹಿಳೆಯ ಪ್ರಾಮಾಣಿಕ ಅಭಿಪ್ರಾಯದ ಪೋಸ್ಟ್ ಸದ್ಯ ವೈರಲ್ ಆಗಿದೆ. ಈ ಕುರಿತಾದ ಪೋಸ್ಟ್ ಇಲ್ಲಿದೆ.

ಭಾರತಕ್ಕೆ ಬರುವ ವಿದೇಶಿಗರು ಬೆಂಗಳೂರಿಗೂ (Bengaluru) ಭೇಟಿ ನೀಡಿ ಇಲ್ಲಿನ ತಿಂಡಿ ತಿನಿಸುಗಳನ್ನು ಸವಿಯುವುದಿದೆ. ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಇಲ್ಲಿನ ಸೌಂದರ್ಯಕ್ಕೆ ಮನಸೋಲುತ್ತಾರೆ. ಇದೀಗ ಇಟಾಲಿಯನ್ ಮಹಿಳೆಯೊಬ್ಬರು (Italian woman) ಬೆಂಗಳೂರಿಗೆ ಮೊದಲ ಬಾರಿಗೆ ಏಕಾಂಗಿಯಾಗಿ ಪ್ರಯಾಣ ಬೆಳೆಸಿದ್ದಾರೆ. ತನ್ನ ಗೆಳೆಯನನ್ನು ಭೇಟಿ ಮಾಡಲು ವಿದೇಶದಿಂದ ಇಲ್ಲಿಗೆ ಬಂದಿದ್ದು ತಮಗೆ ಏನು ಅನಿಸಿತು ಎಂಬ ಬಗ್ಗೆ ಪೋಸ್ಟ್‌ನಲ್ಲಿ ಹೇಳಿದ್ದಾರೆ. ಸಲಹೆ ಹಾಗೂ ಮಾರ್ಗದರ್ಶನ ನೀಡಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ. ರೆಡ್ಡಿಟ್ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಇವರ ಪ್ರಾಮಾಣಿಕ ಅಭಿಪ್ರಾಯಕ್ಕೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗಿವೆ.
ರೆಡ್ಡಿಟ್ ಖಾತೆಯಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ ತಿಂಗಳ ಹಿಂದೆ ನಾನು ನನ್ನ ಗೆಳೆಯನನ್ನು ಭೇಟಿ ಮಾಡಲು ಬೆಂಗಳೂರಿಗೆ ವಿಮಾನದಲ್ಲಿ ಹೋಗಲು ಯೋಜಿಸುತ್ತಿದ್ದರಿಂದ ಕೆಲವು ಸಲಹೆಗಳು ಮತ್ತು ಭೇಟಿ ನೀಡಲು ಸ್ಥಳಗಳನ್ನು ಕೇಳುವ ಪೋಸ್ಟ್ ಅನ್ನು ಮಾಡಿದ್ದೆ. ನಾನು ನನ್ನ ಅನುಭವವನ್ನು ಹಂಚಿಕೊಳ್ಳಲು ಬಯಸಿದ್ದೆ, ಆದರೆ ಎಲ್ಲಕ್ಕಿಂತ ಹೆಚ್ಚಾಗಿ ತಮ್ಮ ಆಲೋಚನೆಗಳನ್ನು ಹಂಚಿಕೊಂಡು ನನಗೆ ಸಲಹೆ ನೀಡಿದ ಎಲ್ಲರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಬರೆದಿದ್ದಾರೆ.
ವೈರಲ್ ಪೋಸ್ಟ್ ಇಲ್ಲಿದೆ
ಇಲ್ಲಿನ ರುಚಿಕರವಾದ ಆಹಾರ ಇಷ್ಟ ಪಟ್ಟು ಸವಿದೆ. ಭೇಟಿ ನೀಡಿದ ಎಲ್ಲಾ ಸ್ಥಳಗಳು ಇಷ್ಟ ಆಯ್ತು. ಆದರೆ ನಾನು ತನ್ನ ವಸತಿ ಸೌಕರ್ಯದ ವಿಷಯದಲ್ಲಿ ಸ್ವಲ್ಪ ಮೋಸ ಹೋದೆ. ಆದರೆ ಇದು ನಿಜವಾಗಿಯೂ ಅನ್ವೇಷಿಸಲು ಆಸಕ್ತಿದಾಯಕ ನಗರವಾಗಿತ್ತು. ನಾನು ಮತ್ತೆ ಭೇಟಿ ನೀಡುವ ಬಗ್ಗೆ ಯೋಚಿಸುತ್ತಿದ್ದೇನೆ ಅದು ಶೀಘ್ರದಲ್ಲೇ ಆಗುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಬೆಂಗಳೂರು ಜೀವನ ದುಬಾರಿಯಲ್ಲ; ತಿಂಗಳ ಖರ್ಚು ವೆಚ್ಚ ಹಂಚಿಕೊಂಡ ಯುವಕ
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಮತ್ತೆ ಬನ್ನಿ ಎಂದಿದ್ದಾರೆ. ಇನ್ನೊಬ್ಬರು, ನೀವು ನಿಮ್ಮ ಗೆಳೆಯನನ್ನು ಹೇಗೆ ಭೇಟಿಯಾದಿರಿ ಎಂದು ಕೇಳಿದ್ದಾರೆ. ಮತ್ತೊಬ್ಬರು, ಬೆಂಗಳೂರು ಎಲ್ಲರಿಗೂ ಇಷ್ಟವಾಗುತ್ತೆ, ನಿಮ್ಮ ಅಭಿಪ್ರಾಯ ಕೇಳಿ ಖುಷಿಯಾಯ್ತು ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
