Viral Video: ರೈಲಿನ ಸಿಂಕ್ನಲ್ಲಿ ಸಿಲುಕಿದ್ದ ಕಸವನ್ನು ಕೈಯಿಂದ ತೆಗೆದ ಪ್ರಯಾಣಿಕನಿಗೆ ಭಾರಿ ಮೆಚ್ಚುಗೆ
ಯುವಕನೊಬ್ಬ ರೈಲಿನ ವಾಶ್ ಬೇಸಿನ್ನಲ್ಲಿ ಸಿಲುಕಿಕೊಂಡಿದ್ದ ಕಸವನ್ನು ಕೈನಲ್ಲಿ ತೆಗೆದಿರುವ ವಿಡಿಯೋ ವೈರಲ್ ಆಗಿದೆ. ಹಲವು ಬಾರಿ ರೈಲಿನ ವಾಶ್ರೂಂನಲ್ಲಿ ನಲ್ಲಿ ಸರಿ ಇರುವುದಿಲ್ಲ, ಕೆಲವೊಮ್ಮೆ ನೀರೇ ಬರುವುದಿಲ್ಲ, ಕೆಲವೊಮ್ಮೆ ಸಿಂಕ್ನಲ್ಲಿ ನೀರು ತುಂಬಿ ಹೋಗಿರುತ್ತದೆ. ಆದರೆ ಪ್ರಯಾಣಿಕರು ಅದರ ಬಗ್ಗೆ ಎಷ್ಟಾಗಿ ತಲೆ ಕೆಡಿಸಿಕೊಳ್ಳುವುದಿಲ್ಲ, ರೈಲ್ವೆಗೆ ದೂರು ಕೊಡುವುದೂ ಇಲ್ಲ, ಆಗ ವ್ಯವಸ್ಥೆ ಸರಿಯಾಗುವುದಾದರೂ ಹೇಗೆ?. ರೈಲಿನ ಸಿಂಕ್ನಲ್ಲಿ ಪ್ಲಾಸ್ಟಿಕ್ ಸಿಲುಕಿ ಅದರಲ್ಲಿ ನೀರು ನಿಂತುಕೊಂಡಿತ್ತು, ಆಗ ಈ ಯುವಕ ನೀರಿನಲ್ಲಿರುವ ಪ್ಲಾಸ್ಟಿಕ್ ಅನ್ನು ಕೈಯಲ್ಲೇ ತೆಗೆದು, ನೀರು ಸರಾಗವಾಗಿ ಕೆಳಗೆ ಇಳಿಯಲು ಅವಕಾಶ ಮಾಡಿಕೊಟ್ಟಿದ್ದಾನೆ.

ನವದೆಹಲಿ, ಜನವರಿ 09: ಭಾರತೀಯ ರೈಲ್ವೆ(Indian Railways) ನಿಮ್ಮ ಆಸ್ತಿ, ಅದನ್ನು ಹಾನಿ ಮಾಡಬೇಡಿ, ಸ್ವಚ್ಛವಾಗಿಡಲು ಸಹಾಯ ಮಾಡಿ ಎನ್ನುವ ಸಾಲುಗಳನ್ನು ನೀವು ರೈಲಿನಲ್ಲಿ ಪ್ರಯಾಣಿಸಿದ್ದರೆ ನೋಡಿಯೇ ಇರುತ್ತೀರಿ. ಆದರೆ ಹೆಚ್ಚಿನ ಮಂದಿ ರೈಲಿನ ಸ್ವಚ್ಛತೆ ಬಗ್ಗೆ ಗಮನಕೊಡುವುದಿಲ್ಲ. ಇವತ್ತು ಹತ್ತಿ ನಾಳೆ ಬೆಳಗ್ಗೆ ಇಳಿದು ಹೋಗ್ತೀವಿ ನಾವ್ಯಾಕೆ ರೈಲನ್ನು ಸ್ವಚ್ಛವಾಗಿಡಬೇಕು ಎನ್ನುವ ಮನಸ್ಥಿತಿ ಹಲವು ಮಂದಿಗಿರುತ್ತದೆ. ಆದರೆ ಈ ಯುವಕನ ಕೆಲಸಕ್ಕೆ ಮೆಚ್ಚುಗೆಯ ಸುರಿಮಳೆ ಸಿಕ್ಕಿದೆ.
ಹಲವು ಬಾರಿ ರೈಲಿನ ವಾಶ್ರೂಂನಲ್ಲಿ ನಲ್ಲಿ ಸರಿ ಇರುವುದಿಲ್ಲ, ಕೆಲವೊಮ್ಮೆ ನೀರೇ ಬರುವುದಿಲ್ಲ, ಕೆಲವೊಮ್ಮೆ ಸಿಂಕ್ನಲ್ಲಿ ನೀರು ತುಂಬಿ ಹೋಗಿರುತ್ತದೆ. ಆದರೆ ಪ್ರಯಾಣಿಕರು ಅದರ ಬಗ್ಗೆ ಎಷ್ಟಾಗಿ ತಲೆ ಕೆಡಿಸಿಕೊಳ್ಳುವುದಿಲ್ಲ, ರೈಲ್ವೆಗೆ ದೂರು ಕೊಡುವುದೂ ಇಲ್ಲ, ಆಗ ವ್ಯವಸ್ಥೆ ಸರಿಯಾಗುವುದಾದರೂ ಹೇಗೆ?. ರೈಲಿನ ಸಿಂಕ್ನಲ್ಲಿ ಪ್ಲಾಸ್ಟಿಕ್ ಸಿಲುಕಿ ಅದರಲ್ಲಿ ನೀರು ನಿಂತುಕೊಂಡಿತ್ತು, ಆಗ ಈ ಯುವಕ ನೀರಿನಲ್ಲಿರುವ ಪ್ಲಾಸ್ಟಿಕ್ ಅನ್ನು ಕೈಯಲ್ಲೇ ತೆಗೆದು, ನೀರು ಸರಾಗವಾಗಿ ಕೆಳಗೆ ಇಳಿಯಲು ಅವಕಾಶ ಮಾಡಿಕೊಟ್ಟಿದ್ದಾನೆ.
ಮತ್ತಷ್ಟು ಓದಿ: ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ; ವಿಡಿಯೋ ವೈರಲ್
ಈ ಕೆಲಸ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಸುಂದರವಾದ ವೀಡಿಯೊವನ್ನು @MDAltamashraza ಎಂಬ ಐಡಿಯಿಂದ ಹಂಚಿಕೊಳ್ಳಲಾಗಿದೆ. 33 ಸೆಕೆಂಡುಗಳ ಈ ವೀಡಿಯೊವನ್ನು ಈಗಾಗಲೇ ಸಾವಿರಾರು ಬಾರಿ ವೀಕ್ಷಿಸಲಾಗಿದ್ದು, ನೂರಾರು ಜನರು ಇದನ್ನು ಇಷ್ಟಪಟ್ಟಿದ್ದಾರೆ ಮತ್ತು ವಿವಿಧ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.
ವಿಡಿಯೋ
ऐसे लोग कहा से आते है ?? ट्रेन हमारी यात्रा का हिस्सा है, कचरा फेंकने की जगह नहीं। क्या इस तहर भारत स्वच्छ होगा ??
सलाम है भाई को pic.twitter.com/kVKENr5sje
— Altamash Raza التمش رضا (@MDAltamashraza) January 7, 2026
ಭಾರತೀಯರೇ ಭಾರತವನ್ನು ಕೊಳಕು ಮಾಡುತ್ತಾರೆ ಮತ್ತು ನಂತರ ಸರ್ಕಾರಿ ವ್ಯವಸ್ಥೆ ಕೆಟ್ಟದಾಗಿದೆ ಎಂದು ದೂರುತ್ತಾರೆ ಎಂದು ನೆಟ್ಟಿಗರೊಬ್ಬರು ಬರೆದಿದ್ದಾರೆ. ನಾವು ಜವಾಬ್ದಾರಿಯನ್ನು ತೆಗೆದುಕೊಳ್ಳದ ಹೊರತು ಸ್ವಚ್ಛತೆ ಆಗುವುದಿಲ್ಲ ಎಂದು ಮತ್ತೊಬ್ಬರು ಬರೆದಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
