Bengaluru: ಕ್ಷುಲ್ಲಕ ಕಾರಣಕ್ಕೆ ನಡು ರಸ್ತೆಯಲ್ಲೇ ಮಾರಾಮಾರಿ; ಬೈಕ್ ಸವಾರಿಗೆ ಬಿತ್ತು ಗೂಸಾ
ಬೈಕ್ ಸವಾರರು ಡೆಲಿವರಿ ಬಾಯ್ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ. ಜ.4ರ ರಾತ್ರಿ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಡೆಲಿವರಿ ಬಾಯ್ ಅಡ್ಡಬಂದ ಕಾರಣ ನಿಯಂತ್ರಣತಪ್ಪಿ ಬೈಕ್ ಸವಾರರು ಕೆಳಗೆ ಬಿದ್ದಿದ್ದಾರೆ. ಇದೇ ಕಾರಣಕ್ಕೆ ಹಲ್ಲೆ ನಡೆಸಿದ್ದಾರೆ. ಸಮಾಧಾನ ಪಡಿಸಿದರೂ ಸುಮ್ಮನಾಗದ ಹಿನ್ನೆಲೆ ಸ್ಥಳೀಯರು ಬೈಕ್ ಸವಾರರಿಗೆ ಧರ್ಮದೇಟು ನೀಡಿದ್ದು, ಅವರು ಸ್ಥಳದಿಂದ ಎಸ್ಕೇಪ್ ಅಗಿದ್ದಾರೆ.
ಬೆಂಗಳೂರು, ಜನವರಿ 09: ಕ್ಷುಲ್ಲಕ ಡೆಲಿವರಿ ಬಾಯ್ಗೆ ಬೈಕ್ ಸವಾರರು ಥಳಿಸಿರುವ ಘಟನೆ ಬೆಂಗಳೂರಿನ ಮಹದೇವಪುರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಡೆಲಿವರಿ ಬಾಯ್ ಅಡ್ಡಬಂದ ಕಾರಣ ನಿಯಂತ್ರಣತಪ್ಪಿ ಬೈಕ್ ಸವಾರರು ಕೆಳಗೆ ಬಿದ್ದಿದ್ದಾರೆ. ಇದೇ ಕಾರಣಕ್ಕೆ ಕೋಪಗೊಂಡು ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಡೆಲಿವರಿ ಬಾಯ್ ಸಹಾಯಕ್ಕೆ ಸ್ಥಳೀಯರು ಬಂದಿದ್ದು, ಸಮಾಧಾನಪಡಿಸಿದ್ರೂ ಸುಮ್ಮನಾಗದ ಹಿನ್ನೆಲೆ ಬೈಕ್ ಸವಾರರಿಗೆ ಧರ್ಮದೇಟು ನೀಡಿದ್ದಾರೆ. ಸ್ಥಳೀಯರ ಗೂಸಾ ಕೊಡ್ತಿದ್ದಂತೆ ಸವಾರರು ಎಸ್ಕೇಪ್ ಆಗಿದ್ದು, ಜ.4ರ ರಾತ್ರಿ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Jan 09, 2026 12:27 PM

