ತನ್ನ ವಾಹನಗಳಲ್ಲಿ ನಾವೀನ್ಯತೆ, ಹೊಸ ತಂತ್ರಜ್ಞಾನ, ಕ್ಷಮತೆ, ಸುಲಭ ಬಳಕೆಗೆ ಆದ್ಯತೆ ನೀಡುವ ಟಾಟಾ ಮೋಟಾರ್ಸ್ ಸಂಸ್ಥೆ ಈ ನಿರೀಕ್ಷೆಗೆ ತಕ್ಕಂತೆ ಟಾಟಾ ಏಸ್ ಪ್ರೋ (Tata Ace Pro) ಹೊರತಂದಿದೆ. ಈ ಬಗ್ಗೆ ಮಾತನಾಡಿದ ಟಾಟಾ ಮೋಟಾರ್ಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ಗಿರೀಶ್ ವಾಘ್ ಮೂಲ ಏಸ್ ವಾಹನದ ಪರಂಪರೆಯನ್ನು ಮತ್ತಷ್ಟು ಮುಂದಕ್ಕೆ ಕೊಂಡೊಯ್ಯುವ ನೂನತನ ಟಾಟಾ ಏಸ್ ಪ್ರೋ ವಾಹನವನ್ನು ಪರಿಚಯಿಸಲು ನನಗೆ ಹೆಮ್ಮೆಯೆನಿಸುತ್ತಿದೆ. ಹೊಸ ಪೀಳಿಗೆಯ ಆಕಾಕ್ಷೆಯನ್ನು ಅಳವಡಿಸಿಕೊಳ್ಳುತ್ತಾ ಏಸ್ ಪ್ರೋ ವಾಹನವನ್ನು ಸ್ಥಿರತೆ, ಸುರಕ್ಷತೆ ಮತ್ತು ಮುಖ್ಯವಾಗಿ ಗ್ರಾಹಕರ ಹೆಚ್ಚಿನ ಲಾಭಕ್ಕಾಗಿ ನಿರ್ಮಿಸಲಾಗಿದೆ ಎಂದು ಹೇಳಿದ್ದಾರೆ.
ಏಸ್ ಪ್ರೋ ಜೈವಿಕ ಇಂಧನ ಬಳಕೆಯ ಪರಿಸರ ಸ್ನೇಹಿ ವಾಹನವಾಗಿದ್ದು, ಇದು ಇಂದಿನ ಉದ್ಯಮಿಗಳಿಗೆ ಹೇಳಿ ಮಾಡಿಸಿದ ಆಯ್ಕೆಯಾಗಿದೆ. ಇದರಲ್ಲಿ ಡ್ಯುಯಲ್ ಇಂಧನ ವ್ಯವಸ್ಥೆಯಿದ್ದು, ಇದು ಪೆಟ್ರೋಲನ್ನು ಆಟೋಮೆಟಿಕ್ ಆಗಿ ಬಳಸಿಕೊಂಡು ಯಾವುದೇ ಅಡೆತಡೆಯಿಲ್ಲದ ವಾಹನ ಸಾಗುವಂತೆ ಮಾಡುತ್ತದೆ. ನವೀನ ಮತ್ತು ಬಹು ಇಂಧನ ಬಳಕೆಯ ಸಾಮರ್ಥ್ಯದ ಎಂಜಿನ್‌ನಿಂದಾಗಿ ಈ ಏಸ್ ಪ್ರೋ ನಿಮಗೆ ವ್ಯವಹಾರದಲ್ಲಿ ಹೆಚ್ಚು ಲಾಭದಾಯಕವಾಗಲಿದೆ. ಆಧುನಿಕ ಜಗತ್ತಿನ ಬೇಡಿಕೆಗೆ ತಕ್ಕಂತೆ ಇದನ್ನು ರೂಪಿಸಲಾಗಿದ್ದು, ಇದು ಸ್ಮಾರ್ಟ್ ವ್ಯಾಪಾರಕ್ಕೆ ಹೆಚ್ಚು ಲಾಭದಾಯಕವಾಗಿದೆ. ಸುರಕ್ಷಿತ ಸಾರಿಗೆಯ ಪ್ರತೀಕವೇ ಈ ಏಸ್ ಪ್ರೋ ಎಂದು ಗಿರೀಶ್ ವಾಘ್ ವಿವರಿಸಿದ್ದಾರೆ.
ಅಬ್ ಮೇರಿ ಬಾರಿ ಅಭಿಯಾನದ ಮತ್ತಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ