AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉದ್ಯೋಗಸೃಷ್ಟಿಯಲ್ಲಿ ಹಿನ್ನಡೆ ಇಲ್ಲ; ಜುಲೈನಲ್ಲಿ 21 ಲಕ್ಷ ಹೊಸ ಇಪಿಎಫ್ ಸದಸ್ಯರ ಸೇರ್ಪಡೆ

2025 July Payroll data: 2025ರ ಜುಲೈ ತಿಂಗಳಲ್ಲಿ 21 ಲಕ್ಷ ಹೊಸ ಇಪಿಎಫ್ ಸದಸ್ಯರ ಸೇರ್ಪಡೆಯಾಗಿದೆ. ಏಪ್ರಿಲ್​ನಿಂದ ಆರಂಭವಾಗಿ ಜಲೈವರೆಗೂ ಇಪಿಎಫ್ ಹೊಸ ಸದಸ್ಯರ ಸೇರ್ಪಡೆ ಸಂಖ್ಯೆ ನಿರಂತರವಾಗಿ ಏರುತ್ತಿದೆ. ಕರ್ನಾಟಕ ಹಾಗೂ ದಕ್ಷಿಣದ ಇತರ ರಾಜ್ಯಗಳಲ್ಲಿ ಅತಿಹೆಚ್ಚು ಇಪಿಎಫ್ ಸದಸ್ಯರಿದ್ದಾರೆ. ಇಲ್ಲಿಯೇ ಅತಿಹೆಚ್ಚು ಉದ್ಯೋಗಗಳಿರುವುದು ಸ್ಪಷ್ಟವಾಗಿದೆ.

ಉದ್ಯೋಗಸೃಷ್ಟಿಯಲ್ಲಿ ಹಿನ್ನಡೆ ಇಲ್ಲ; ಜುಲೈನಲ್ಲಿ 21 ಲಕ್ಷ ಹೊಸ ಇಪಿಎಫ್ ಸದಸ್ಯರ ಸೇರ್ಪಡೆ
ಉದ್ಯೋಗ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 25, 2025 | 12:09 PM

Share

ನವದೆಹಲಿ, ಸೆಪ್ಟೆಂಬರ್ 25: ಭಾರತದ ಉದ್ಯೋಗಸೃಷ್ಟಿ ಪ್ರಕ್ರಿಯೆ ಉತ್ತಮವಾಗಿ ಸಾಗುತ್ತಿದೆ. ಇಪಿಎಫ್ ಸದಸ್ಯರ ಸಂಖ್ಯೆ ಸ್ಥಿರವಾಗಿ ಏರುತ್ತಿರುವುದು ಇದಕ್ಕೆ ಸಾಕ್ಷಿಯಾಗಿದೆ. ಇಪಿಎಫ್​ಒ (EPFO) ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ, ಜುಲೈ ತಿಂಗಳಲ್ಲಿ ಸೇರ್ಪಡೆಯಾದ ಸದಸ್ಯರ ಸಂಖ್ಯೆ ನಿವ್ವಳ 21.04 ಲಕ್ಷದಷ್ಟು ಇದೆ. ಹಿಂದಿನ ವರ್ಷದ ಇದೇ ತಿಂಗಳಿಗೆ ಹೋಲಿಸಿದರೆ ಈ ಬಾರಿ ನಿವ್ವಳ ಇಪಿಎಫ್ ಸದಸ್ಯರ ಸೇರ್ಪಡೆ ಶೇ. 5.6ರಷ್ಟು ಹೆಚ್ಚಾಗಿದೆ.

ಈ ವರ್ಷ (2025-26) ಇಪಿಎಫ್ ಸದಸ್ಯರ ಸೇರ್ಪಡೆ ಪ್ರಮಾಣ ತಿಂಗಳಿಂದ ತಿಂಗಳಿಗೆ ಏರುತ್ತಲೇ ಇರುವುದು ಗಮನಾರ್ಹ ಸಂಗತಿ. ಏಪ್ರಿಲ್​ನಲ್ಲಿ 14.3 ಲಕ್ಷ, ಮೇ ತಿಂಗಳಲ್ಲಿ 14.6 ಲಕ್ಷ, ಜೂನ್ ತಿಂಗಳಲ್ಲಿ 19 ಲಕ್ಷ ಹಾಗೂ ಜುಲೈನಲ್ಲಿ 21 ಲಕ್ಷ ಸಂಖ್ಯೆಯಲ್ಲಿ ಇಪಿಎಫ್ ಸದಸ್ಯರ ಸೇರ್ಪಡೆಯಾಗಿದೆ. ಹೊಸ ಉದ್ಯೋಗಗಳ ಸೃಷ್ಟಿ ನಿರಂತರವಾಗಿ ಹೆಚ್ಚುತ್ತಿದೆ.

ಇದನ್ನೂ ಓದಿ: ಇಪಿಎಫ್​ಒದ ಬಹುನಿರೀಕ್ಷಿತ ಎಟಿಎಂ ಫೀಚರ್: ಜನವರಿಯಿಂದ ಸಿಗುತ್ತಾ ಈ ಸೌಲಭ್ಯ?

ಜೂನ್ ಮತ್ತು ಜುಲೈ ತಿಂಗಳಲ್ಲಿ ಹೊಸ ಉದ್ಯೋಗ ಸೃಷ್ಟಿ ಹೆಚ್ಚಲು ಬೇರೆಯೇ ಕಾರಣವಿರಬಹುದು. ಏಪ್ರಿಲ್, ಮೇ ತಿಂಗಳಲ್ಲಿ ಶೈಕ್ಷಣಿಕ ವರ್ಷ ಮುಗಿಯುತ್ತದೆ. ಪದವೀಧರರಾಗಿ ಹೊರಬರುವ ವಿದ್ಯಾರ್ಥಿಗಳು ಕೆಲಸಕ್ಕೆ ಸೇರಿಕೊಳ್ಳುವ ಸಂದರ್ಭ. ಹೀಗಾಗಿ, ಜೂನ್ ಮತ್ತು ಜುಲೈ ತಿಂಗಳಲ್ಲಿ ಹೆಚ್ಚಿನ ನೇಮಕಾತಿ ಆಗುವುದು ಸಹಜ.

ಹೊಸ ಇಪಿಎಫ್ ಸದಸ್ಯರಲ್ಲಿ 18-25 ವರ್ಷ ವಯೋಮಾನದವರೇ ಹೆಚ್ಚಿದ್ದಾರೆ. ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಗುಜರಾತ್, ಹರ್ಯಾಣ ಮತ್ತು ದೆಹಲಿ ರಾಜ್ಯಗಳಿಂದ ಹೆಚ್ಚು ಹೊಸ ಇಪಿಎಫ್ ಸದಸ್ಯರ ಸೇರ್ಪಡೆಯಾಗಿದೆ. ಅದರಲ್ಲೂ ದಕ್ಷಿಣ ರಾಜ್ಯಗಳು ಹೊಸ ಉದ್ಯೋಗಸೃಷ್ಟಿಯ ಕೇಂದ್ರ ಬಿಂದುಗಳೆನಿಸಿವೆ ಎಂದು ದತ್ತಾಂಶದಿಂದ ತಿಳಿದುಬರುತ್ತದೆ.

ಇದನ್ನೂ ಓದಿ: ಇಪಿಎಫ್​ಒನಲ್ಲಿ ಹೊಸ ಫೀಚರ್ಸ್; ಪಾಸ್​ಬುಕ್ ಲೈಟ್, ಟ್ರಾನ್ಸ್ಫರ್ ಸರ್ಟಿಫಿಕೇಟ್, ತ್ವರಿತ ಅನುಮೋದನೆ

ಐಟಿ, ಬಿಪಿ ಇತ್ಯಾದಿ ಸರ್ವಿಸಸ್ ಕ್ಷೇತ್ರ, ಎಂಜಿನಿಯರಿಂಗ್, ಕಟ್ಟಡ ನಿರ್ಮಾಣ, ಟ್ರೇಡಿಂಗ್ ಸೆಕ್ಟರ್​ಗಳಲ್ಲಿ ಹೆಚ್ಚು ಹೊಸ ಇಪಿಎಫ್ ಅಕೌಂಟ್​ಗಳು ಸೃಷ್ಟಿಯಾಗಿವೆ. ಟೆಕ್ಸ್​ಟೈಲ್, ಗಾರ್ಮೆಂಟ್ಸ್, ಸ್ವಚ್ಛತೆ ಸರ್ವಿಸ್​ನ ಕ್ಷೇತ್ರದಲ್ಲಿ ಅತಿಹೆಚ್ಚು ಉದ್ಯೋಗಗಳಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ