AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಪಿಎಫ್​ಒದ ಬಹುನಿರೀಕ್ಷಿತ ಎಟಿಎಂ ಫೀಚರ್: ಜನವರಿಯಿಂದ ಸಿಗುತ್ತಾ ಈ ಸೌಲಭ್ಯ?

EPFO ATM withdrawal facility likely from 2026 January: ಪಿಎಫ್ ಖಾತೆದಾರರು ಎಟಿಎಂನಲ್ಲಿ ತಮ್ಮ ಹಣ ವಿತ್​ಡ್ರಾ ಮಾಡಿಕೊಳ್ಳಬಹುದು ಎಂದು ಹಲವು ದಿನಗಳಿಂದ ಹೇಳಲಾಗುತ್ತಿದೆ. ಈಗ ಬಂದಿರುವ ವರದಿ ಪ್ರಕಾರ 2026ರ ಜನವರಿಯಿಂದಲೇ ಈ ಎಟಿಎಂ ಫೀಚರ್ ಲಭ್ಯವಾಗಬಹುದು. ಪಿಎಫ್ ಹಣವನ್ನು ಉದ್ಯೋಗಿಗಳು ಎಟಿಎಂನಲ್ಲಿ ಪಡೆಯಲು ಸಾಧ್ಯವಾಗಬಹುದು.

ಇಪಿಎಫ್​ಒದ ಬಹುನಿರೀಕ್ಷಿತ ಎಟಿಎಂ ಫೀಚರ್: ಜನವರಿಯಿಂದ ಸಿಗುತ್ತಾ ಈ ಸೌಲಭ್ಯ?
ಎಟಿಎಂ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 24, 2025 | 7:08 PM

Share

ನವದೆಹಲಿ, ಸೆಪ್ಟೆಂಬರ್ 24: ಇಪಿಎಫ್​ಒ (EPFO) ಸದಸ್ಯರು ತಮ್ಮ ಹಣವನ್ನು ಹಿಂಪಡೆಯುವ ಕಾರ್ಯ ಮುಂದಿನ ದಿನಗಳಲ್ಲಿ ಬಹಳ ಸುಲಭವಾಗಲಿದೆ. ಬಹಳ ದಿನಗಳಿಂದ ನಿರೀಕ್ಷಿಸಲಾಗಿದ್ದ ಎಟಿಎಂ ವಿತ್​ಡ್ರಾಯಲ್ ಸೌಲಭ್ಯ 2026ರ ಜನವರಿಯಲ್ಲಿ ಲಭ್ಯ ಇರಲಿದೆ. ಉದ್ಯೋಗಿಗಳು ತಮ್ಮ ಪಿಎಫ್ ಹಣವನ್ನು ಎಟಿಎಂನಿಂದ ನೇರವಾಗಿ ವಿತ್​ಡ್ರಾ ಮಾಡಲು ಸಾಧ್ಯವಾಗಲಿದೆ. ಮನಿ ಕಂಟ್ರೋಲ್ ವರದಿ ಪ್ರಕಾರ ಇಪಿಎಫ್​ಒನ ಕೇಂದ್ರೀಯ ಟ್ರಸ್ಟೀಗ ಮಂಡಳಿಯ ಮುಂದಿನ ಸಭೆಯಲ್ಲಿ ಎಟಿಎಂ ವಿತ್​ಡ್ರಾಯಲ್ ಸೌಲಭ್ಯಕ್ಕೆ ಅನುಮೋದನೆ ಕೊಡುವ ನಿರೀಕ್ಷೆ ಇದೆ.

ಎಟಿಎಂ ಮೂಲಕ ಪಿಎಫ್ ಹಣ ವಿತ್​ಡ್ರಾ ಮಾಡಲು ಅನುವಾಗುವಂತೆ ಇಪಿಎಫ್​ಒನ ಐಟಿ ಇನ್​ಫ್ರಾಸ್ಟ್ರಕ್ಚರ್ ಸಿದ್ಧವಾಗಿದೆ. ಅದಕ್ಕೆ ಅನುಮೋದನೆ ಸಿಗಬಹುದು. 2026ರ ಜನವರಿಯಿಂದ ಈ ಸೌಲಭ್ಯ ಸಿಗಬಹುದು ಎಂದು ವರದಿಯಲ್ಲಿ ಹೇಳಲಾಗಿದೆ.

ಇದನ್ನೂ ಓದಿ: ಪೋಸ್ಟ್ ಆಫೀಸ್​ನ ಈ ಸ್ಕೀಮ್​ನಿಂದ ತಿಂಗಳಿಗೆ 9,250 ರೂವರೆಗೂ ನಿಯಮಿತ ಆದಾಯ ಸೃಷ್ಟಿಸಿ

ಆದರೆ, ಎಟಿಎಂಗಳಲ್ಲಿ ಪಿಎಫ್ ಹಣ ಹೇಗೆ ವಿತ್​​ಡ್ರಾ ಮಾಡಬಹುದು, ಎಷ್ಟು ವಿತ್​ಡ್ರಾಯಲ್ ಮಿತಿ ಇರುತ್ತದೆ ಎಂಬಿತ್ಯಾದಿ ವಿವರ ಸದ್ಯಕ್ಕೆ ಲಭ್ಯವಾಗಿಲ್ಲ.

ಸದ್ಯ ಇರುವ ವ್ಯವಸ್ಥೆಯಲ್ಲಿ ಇಪಿಎಫ್ ಸದಸ್ಯರು ತಮ್ಮ ಅಕೌಂಟ್​ನಲ್ಲಿರುವ ಹಣವನ್ನು ಹಿಂಪಡಯಬೇಕೆಂದರೆ ಒಂದಷ್ಟು ಪ್ರಕ್ರಿಯೆಗಳಿವೆ. ಮೊದಲಿಗೆ ಹಣಕ್ಕೆ ಕ್ಲೇಮ್ ಸಲ್ಲಿಸಬೇಕು. ಅದಕ್ಕೆ ಅನುಮೋದನೆ ಸಿಕ್ಕರೆ ಆ ಹಣವು ಬ್ಯಾಂಕ್ ಅಕೌಂಟ್​ಗೆ ಜಮೆ ಆಗುತ್ತದೆ. ಅದನ್ನು ಉದ್ಯೋಗಿಗಗಳು ವಿತ್​ಡ್ರಾ ಮಾಡಿಕೊಳ್ಳಬಹುದು.

ಆದರೆ, ಎಟಿಎಂ ಫೀಚರ್​ನಲ್ಲಿ ಸದಸ್ಯರು ನೇರವಾಗಿ ಹಣ ವಿತ್​ಡ್ರಾ ಮಾಡಲು ಸಾಧ್ಯವಾಗಬಹುದು. ಬ್ಯಾಂಕ್ ಅಕೌಂಟ್​ನಲ್ಲಿರುವ ಹಣವನ್ನು ಎಟಿಎಂ ಕಾರ್ಡ್ ಮೂಲಕ ಹಿಂಪಡೆಯಲಾಗುವಂತೆ ಈ ವ್ಯವಸ್ಥೆ ಇರಬಹುದು. ಹಿಂದೆ ಬಂದ ವರದಿಯೊಂದರ ಪ್ರಕಾರ, ಇಪಿಎಫ್​ಒದಿಂದ ಎಲ್ಲಾ ಸದಸ್ಯರಿಗೂ ಎಟಿಎಂ ಕಾರ್ಡ್ ರೀತಿ ಇಪಿಎಫ್ ಕಾರ್ಡ್ ನೀಡಲಾಗಬಹುದು. ಅದನ್ನು ಬಳಸಿ ಎಟಿಎಂಗಳಲ್ಲಿ ಹಣ ವಿತ್​ಡ್ರಾ ಮಾಡಲು ಸಾಧ್ಯ ಎನ್ನಲಾಗಿದೆ.

ಇದನ್ನೂ ಓದಿ: ಇಪಿಎಫ್​ಒನಲ್ಲಿ ಹೊಸ ಫೀಚರ್ಸ್; ಪಾಸ್​ಬುಕ್ ಲೈಟ್, ಟ್ರಾನ್ಸ್ಫರ್ ಸರ್ಟಿಫಿಕೇಟ್, ತ್ವರಿತ ಅನುಮೋದನೆ

ಈ ಬಗ್ಗೆ ಇಪಿಎಫ್​ಒದಿದ ಯಾವ ಅಧಿಕೃತ ಮಾಹಿತಿ ಬಂದಿಲ್ಲ. ಆದರೆ, ಎಟಿಎಂ ವಿತ್​ಡ್ರಾಯಲ್ ಸೌಲಭ್ಯ ಬರಲಿರುವ ವಿಚಾರ ಮಾತ್ರ ಅಧಿಕೃತವಿದೆ. ಹಣವನ್ನು ಹೇಗೆ ವಿತ್​ಡ್ರಾ ಮಾಡುವುದು, ಎಷ್ಟು ಹಣ ವಿತ್​ಡ್ರಾ ಮಾಡುವುದು ಇತ್ಯಾದಿ ವಿವರಗಳು ಮುಂದಿನ ದಿನಗಳಲ್ಲಿ ಗೊತ್ತಾಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸೀನಿಯರ್​​ನನ್ನೇ ಕೊಂದ ಜೂನಿಯರ್: SSLC ವಿದ್ಯಾರ್ಥಿ ಹತ್ಯೆಗೆ ಕಾರಣವೇನು?
ಸೀನಿಯರ್​​ನನ್ನೇ ಕೊಂದ ಜೂನಿಯರ್: SSLC ವಿದ್ಯಾರ್ಥಿ ಹತ್ಯೆಗೆ ಕಾರಣವೇನು?
ನನಗೂ ಮುಖ್ಯಮಂತ್ರಿಯಾಗಬೇಕು ಎಂಬ ಆಸೆ ಇದೆ
ನನಗೂ ಮುಖ್ಯಮಂತ್ರಿಯಾಗಬೇಕು ಎಂಬ ಆಸೆ ಇದೆ
ಅಪಘಾತವಾಗುವುದ ತಡೆದು ಒಂದು ಕುಟುಂಬವನ್ನು ರಕ್ಷಿಸಿದ ಯುವತಿ
ಅಪಘಾತವಾಗುವುದ ತಡೆದು ಒಂದು ಕುಟುಂಬವನ್ನು ರಕ್ಷಿಸಿದ ಯುವತಿ
ಕಾರುಣ್ಯ ಮುಖ ನೋಡಿ ಸಾಲ ಕೊಡಿ ಎಂದಿದ್ದರು, ಈಗ ಧಮ್ಕಿ ಹಾಕ್ತಾರೆ: ಪ್ರಜ್ವಲ್
ಕಾರುಣ್ಯ ಮುಖ ನೋಡಿ ಸಾಲ ಕೊಡಿ ಎಂದಿದ್ದರು, ಈಗ ಧಮ್ಕಿ ಹಾಕ್ತಾರೆ: ಪ್ರಜ್ವಲ್
ನಮ್ಮ ಮೆಟ್ರೋ ಯೆಲ್ಲೋ ಲೈನ್‌ನಲ್ಲಿ 7ನೇ ರೈಲಿನ ಸಂಚಾರ ಶುರು
ನಮ್ಮ ಮೆಟ್ರೋ ಯೆಲ್ಲೋ ಲೈನ್‌ನಲ್ಲಿ 7ನೇ ರೈಲಿನ ಸಂಚಾರ ಶುರು
ಲೈಟ್​ನಲ್ಲಿ ಕಾಣಿಸಿಕೊಂಡ ಹೊಗೆ, ಪತ್ರಿಕಾಗೋಷ್ಠಿ ಮೊಟಕುಗೊಳಿಸಿದ ಮಾಯಾವತಿ
ಲೈಟ್​ನಲ್ಲಿ ಕಾಣಿಸಿಕೊಂಡ ಹೊಗೆ, ಪತ್ರಿಕಾಗೋಷ್ಠಿ ಮೊಟಕುಗೊಳಿಸಿದ ಮಾಯಾವತಿ
ನಗರಸಭೆ ಪೌರಾಯುಕ್ತೆಗೆ ನಿಂದನೆ​​: ರಾಜೀವ್​ ಗೌಡ ಪರ ಮುನಿಯಪ್ಪ ಬ್ಯಾಟಿಂಗ್​​
ನಗರಸಭೆ ಪೌರಾಯುಕ್ತೆಗೆ ನಿಂದನೆ​​: ರಾಜೀವ್​ ಗೌಡ ಪರ ಮುನಿಯಪ್ಪ ಬ್ಯಾಟಿಂಗ್​​
ನಮ್ಮ ಮೆಟ್ರೋದಲ್ಲಿ ಇಂದಿನಿಂದ ಹೊಸ ಬದಲಾವಣೆ: ಇಲ್ಲಿದೆ ಮಾಹಿತಿ
ನಮ್ಮ ಮೆಟ್ರೋದಲ್ಲಿ ಇಂದಿನಿಂದ ಹೊಸ ಬದಲಾವಣೆ: ಇಲ್ಲಿದೆ ಮಾಹಿತಿ
ಅಶ್ಲೀಲವಾಗಿ ನಿಂದಿಸಿದ ಕಾಂಗ್ರೆಸ್ ಮುಖಂಡನ ಬಗ್ಗೆ ಖರ್ಗೆ ಖಡಕ್ ಮಾತು
ಅಶ್ಲೀಲವಾಗಿ ನಿಂದಿಸಿದ ಕಾಂಗ್ರೆಸ್ ಮುಖಂಡನ ಬಗ್ಗೆ ಖರ್ಗೆ ಖಡಕ್ ಮಾತು
ವಿಧಾನಸಭೆ ಚುನಾವಣೆಗೆ ತಾನು ಈ ಕ್ಷೇತ್ರದ ಟಿಕೆಟ್​​ ಆಕಾಂಕ್ಷಿ ಎಂದ ಪ್ರತಾಪ್​
ವಿಧಾನಸಭೆ ಚುನಾವಣೆಗೆ ತಾನು ಈ ಕ್ಷೇತ್ರದ ಟಿಕೆಟ್​​ ಆಕಾಂಕ್ಷಿ ಎಂದ ಪ್ರತಾಪ್​