TCS: ಭವಿಷ್ಯದ ಅವಕಾಶಗಳಿಗೆ ಟಾಟಾ ತಯಾರಿ; ಟಿಸಿಎಸ್​ನಲ್ಲಿ ಪ್ರತಿಯೊಬ್ಬ ಉದ್ಯೋಗಿಗೂ ಎಐ ಟ್ರೈನಿಂಗ್

|

Updated on: Jan 16, 2024 | 6:39 PM

Generative AI: ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಸಂಸ್ಥೆಯ ಎಲ್ಲಾ ಸಾಫ್ಟ್​ವೇರ್ ಎಂಜಿನಿಯರುಗಳಿಗೂ ಜನರೇಟಿವ್ ಎಐ ಟೆಕ್ನಾಲಜಿಯ ತರಬೇತಿ ನೀಡಲಾಗುತ್ತಿದೆ. ಭವಿಷ್ಯದಲ್ಲಿ ಜನರೇಟಿವ್ ಎಐ ಬಳಕೆ ಹೆಚ್ಚಲಿದ್ದು, ಅದಕ್ಕಾಗಿ ಟಿಸಿಎಸ್ ಉದ್ಯೋಗಿಗಳನ್ನು ಅಣಿಗೊಳಿಸಲಾಗುತ್ತಿದೆ. ಈಗ ಇರುವ ಸರ್ವಿಸ್ ಪ್ರಾಜೆಕ್ಟ್​ಗಳನ್ನು ಬೇಗ ಮುಗಿಸಲು ಮತ್ತು ಕ್ಷಮತೆ ಸಾಧಿಸಲೂ ಈ ಟೆಕ್ನಾಲಜಿ ಸಹಾಯಕವಾಗಬಹುದು.

TCS: ಭವಿಷ್ಯದ ಅವಕಾಶಗಳಿಗೆ ಟಾಟಾ ತಯಾರಿ; ಟಿಸಿಎಸ್​ನಲ್ಲಿ ಪ್ರತಿಯೊಬ್ಬ ಉದ್ಯೋಗಿಗೂ ಎಐ ಟ್ರೈನಿಂಗ್
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್
Follow us on

ನವದೆಹಲಿ, ಜನವರಿ 16: ಭಾರತದ ಅತಿದೊಡ್ಡ ಐಟಿ ಸರ್ವಿಸ್ ಸಂಸ್ಥೆ ಎನಿಸಿದ ಟಿಸಿಎಸ್ ತನ್ನ ಎಲ್ಲಾ ಸಾಫ್ಟ್​ವೇರ್ ಎಂಜಿನಿಯರುಗಳಿಗೂ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನದ (generative AI) ತರಬೇತಿ ನೀಡುತ್ತಿದೆ. ಈಗಾಗಲೇ ಕೆಲವಾರು ತಿಂಗಳಿಂದ ಜನರೇಟಿವ್ ಎಐ ತರಬೇತಿ ನಡೆಯುತ್ತಿರುವುದು ಗಮನಾರ್ಹ. ಮುಂಬರುವ ದಿನಗಳಲ್ಲಿ ಅಥವಾ ವರ್ಷಗಳಲ್ಲಿ ಎಐ ಸರ್ವಿಸ್​ಗಳಿಗೆ ಬೇಡಿಕೆ ಹೆಚ್ಚಿರುವುದರಿಂದ ಟಿಸಿಎಸ್​ನ ಉದ್ಯೋಗಿಗಳನ್ನು ಈ ಅವಕಾಶಕ್ಕೆ ಸಜ್ಜುಗೊಳಿಸಲಾಗುತ್ತಿದೆ.

ಟಿಸಿಎಸ್ ಸಂಸ್ಥೆ ಇತ್ತೀಚೆಗಷ್ಟೇ ಎಐ ಡಾಟ್ ಕ್ಲೌಡ್ ಎಂಬ ಘಟಕ ಆರಂಭಿಸಿದೆ. ಸುಮಾರು 250 ಜನರೇಟಿವ್ ಎಐ ಪವರ್ಡ್ ಪ್ರಾಜೆಕ್ಟ್​​ಗಳಲ್ಲಿ ಕಂಪನಿ ನಿರತವಾಗಿದೆ. ಹಾಗೆಯೇ, ಗ್ರಾಹಕರಿಗೆ ನೀಡಲಾಗುತ್ತಿರುವ ಐಟಿ ಸರ್ವಿಸ್​ನ ಕೆಲಸದಲ್ಲಿ ಇನ್ನಷ್ಟು ಕ್ಷಮತೆ ಸಾಧಿಸಲು ಮತ್ತು ಸಮಯ ಉಳಿಸಲು ಜನರೇಟಿವ್ ಎಐ ಟೆಕ್ನಾಲಜಿಯನ್ನು ಟಿಸಿಎಸ್ ಎಂಜಿನಿಯರುಗಳು ಸಮರ್ಪಕವಾಗಿ ಬಳಕೆ ಮಾಡಲು ಯತ್ನಿಸುತ್ತಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Costly Loan: ರಿಸ್ಕ್ ವೇಟ್ ರೂಲ್; ದುಬಾರಿಯಾಗಲಿದೆ ಪರ್ಸನಲ್ ಲೋನ್; ಏನು ಹೇಳುತ್ತದೆ ಆರ್​ಬಿಐನ ಹೊಸ ನಿಯಮ?

‘ಈಗ ಜನರೇಟಿವ್ ಎಐ ಅನ್ವಯ ಆಗುವ ಪ್ರಕರಣಗಳು ಕಡಿಮೆ ಇರಬಹುದು. ಈ ಟೆಕ್ನಾಲಜಿಯಲ್ಲಿ ಭಾರೀ ದೊಡ್ಡ ಪರಿವರ್ತನೆ ಯಾವಾಗ ಬೇಕಾದರೂ ಆಗಬಹುದು’ ಎಂದು ಎಐ ಡಾಟ್ ಕ್ಲೌಡ್ ಯೂನಿಟ್​ನ ಮುಖ್ಯಸ್ಥ ಶಿವ ಗಣೇಸನ್ ಹೇಳಿದರೆಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಭಾರತದ ಅತಿ ದೊಡ್ಡ ಐಟಿ ಸರ್ವಿಸ್ ಸಂಸ್ಥೆಯಾದ ಟಾಟಾ ಕನ್ಸಲ್ಟೆನ್ಸಿ ಸರ್ವಿಸ್​ನಲ್ಲಿ 5 ಲಕ್ಷಕ್ಕೂ ಹೆಚ್ಚು ಮಂದಿ ಉದ್ಯೋಗಿಗಳಿದ್ದಾರೆ. ಹೆಚ್ಚಿನವರು ಸಾಫ್ಟ್​ವೇರ್ ಎಂಜಿನಿಯರುಗಳಾಗಿದ್ದಾರೆ. ಇವರ ಪೈಕಿ ಕಳೆದ 9 ತಿಂಗಳಲ್ಲಿ ಸುಮಾರು ಒಂದೂವರೆ ಲಕ್ಷ ಉದ್ಯೋಗಿಗಳಿಗೆ ಜನರೇಟಿವ್ ಎಐ ಟೆಕ್ನಾಲಜಿಯ ತರಬೇತಿ ನೀಡಲಾಗಿದೆಯಂತೆ. ಮುಂಬರುವ ಒಂದೆರಡು ವರ್ಷದೊಳಗೆ ತರಬೇತಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ಇದನ್ನೂ ಓದಿ: Interim Budget: ಈ ಬಾರಿಯ ಬಜೆಟ್​ನ ರೂವಾರಿಗಳ ಪೈಕಿ ಇದ್ದಾರೆ ಕರ್ನಾಟಕದ ಒಬ್ಬ ವ್ಯಕ್ತಿ; ಇವರೇ ನೋಡಿ ಈ ನಿರ್ಮಲಾ ಸೀತಾರಾಮನ್ ಬಜೆಟ್ ಟೀಮ್

‘ಉದ್ಯೋಗಿಗಳು ತಯಾರಾಗುತ್ತಿದ್ದಾರೆ. ಇಡೀ ಸಂಸ್ಥೆಯೇ ಎಐಗೆ ಸಜ್ಜಾಗಲು ಹೆಚ್ಚೇನೂ ಸಮಯ ಬೇಕಾಗುವುದಿಲ್ಲ. ಎಐ ಸಿದ್ಧ ಇರುವ ಅತಿದೊಡ್ಡ ವರ್ಕ್​ಫೋರ್ಸ್ ಅನ್ನು ನಿರ್ಮಿಸುವ ವಿಶ್ವಾಸ ನಮಗಿದೆ’ ಎಂದು ಟಿಸಿಎಸ್​ನ ಸಿಟಿಒ ಹ್ಯಾರಿಕ್ ವಿನ್ ತಿಳಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ