Interim Budget: ಈ ಬಾರಿಯ ಬಜೆಟ್​ನ ರೂವಾರಿಗಳ ಪೈಕಿ ಇದ್ದಾರೆ ಕರ್ನಾಟಕದ ಒಬ್ಬ ವ್ಯಕ್ತಿ; ಇವರೇ ನೋಡಿ ಈ ನಿರ್ಮಲಾ ಸೀತಾರಾಮನ್ ಬಜೆಟ್ ಟೀಮ್

Team Behind Union Budget 2024: ಫೆಬ್ರುವರಿ 1ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಧ್ಯಂತರ ಬಜೆಟ್ ಮಂಡನೆ ಮಾಡಲಿದ್ದಾರೆ. ಬಜೆಟ್ ಮಂಡನೆಗೆ ಆರು ತಿಂಗಳ ಮುಂಚೆಯೇ ಸಿದ್ಧತೆ ಆರಂಭವಾಗುತ್ತದೆ. ಬಜೆಟ್ ರೂಪಿಸಿದ ತಂಡದಲ್ಲಿ ಹಲವರಿದ್ದಾರೆ. ಅವರ ಪೈಕಿ ಕರ್ನಾಟಕ ಕೇಡರ್​ನ ಐಎಎಸ್ ಅಧಿಕಾರಿ ಅರವಿಂದ್ ಶ್ರೀವಾಸ್ತವ ಇದ್ದಾರೆ.

Interim Budget: ಈ ಬಾರಿಯ ಬಜೆಟ್​ನ ರೂವಾರಿಗಳ ಪೈಕಿ ಇದ್ದಾರೆ ಕರ್ನಾಟಕದ ಒಬ್ಬ ವ್ಯಕ್ತಿ; ಇವರೇ ನೋಡಿ ಈ ನಿರ್ಮಲಾ ಸೀತಾರಾಮನ್ ಬಜೆಟ್ ಟೀಮ್
ನಿರ್ಮಲಾ ಸೀತಾರಾಮನ್
Follow us
|

Updated on: Jan 16, 2024 | 4:28 PM

ಮುಂದಿನ ತಿಂಗಳ ಮೊದಲ ತಾರೀಖಿನಂದು (ಫೆ. 1) ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಬಜೆಟ್ ಮಂಡಿಸಲಿದ್ದಾರೆ. ಲೋಕಸಭೆ ಚುನಾವಣೆಗೆ ಮುನ್ನ ಮಂಡನೆಯಾಗುತ್ತಿರುವುದರಿಂದ ಇದು ಮಧ್ಯಂತರ ಬಜೆಟ್ (Interim Budget) ಮಾತ್ರವೇ ಆಗಿರುತ್ತದೆ. ಆದರೂ ಕೂಡ ಪೂರ್ಣಪ್ರಮಾಣದ ಬಜೆಟ್ ಮಂಡನೆಗೆ ಬೇಕಾದ ಕೆಲಸಗಳು ಮಧ್ಯಂತರ ಬಜೆಟ್​ಗೂ ಬೇಕಾಗುತ್ತವೆ.

ಒಂದು ಬಜೆಟ್ ಅನ್ನು ತಯಾರಿಸುವ ಪ್ರಕ್ರಿಯೆ ಆರು ತಿಂಗಳ ಹಿಂದೆಯೇ ಆರಂಭವಾಗುತ್ತದೆ. ವಿವಿಧ ಸರ್ಕಾರಿ ಇಲಾಖೆಗಳೊಂದಿಗೆ ಸಮಾಲೋಚನೆ ನಡೆಸುವುದು ಮಾತ್ರವಲ್ಲದೇ ವಿವಿಧ ಉದ್ಯಮ ಪ್ರತಿನಿಧಿಗಳೊಂದಿಗೆ ಚರ್ಚಿಸಿ ಬಳಿಕ ಬಜೆಟ್ ಅನ್ನು ಅಂತಿಮಗೊಳಿಸಲಾಗುತ್ತದೆ.

ಬಜೆಟ್ ತಯಾರಿಸಲು ಒಬ್ಬಿಬ್ಬರ ಶ್ರಮ ಮಾತ್ರವೇ ಅಲ್ಲ, ವಿವಿಧ ಇಲಾಖೆಗಳ ಸಂಯೋಜಿತ ಕ್ರಿಯೆಯಾಗಿರುತ್ತದೆ. ಈ ಬಾರಿಯ ಮಧ್ಯಂತರ ಬಜೆಟ್​ನ ರೂವಾರಿಗಳಲ್ಲಿ ಹಲವರಿದ್ದಾರೆ. ಕರ್ನಾಟಕ ಕೇಡರ್​ನ ಐಎಎಸ್ ಅಧಿಕಾರಿ ಅರವಿಂದ್ ಶ್ರೀವಾಸ್ತವ ಕೂಡ ಅವರಲ್ಲಿ ಒಬ್ಬರು.

ಇದನ್ನೂ ಓದಿ: Facts: ಬಜೆಟ್ ಮಂಡನೆ ಫೆಬ್ರುವರಿ ಕೊನೆಯ ದಿನದ ಬದಲು 1ರಂದು ಯಾಕೆ? ಸಂಜೆ 5ರ ಬದಲು ಬೆಳಗ್ಗೆ 11ಗಂಟೆಗೆ ಬದಲಾಗಿದ್ದು ಯಾಕೆ?

ಕೇಂದ್ರ ಬಜೆಟ್​ನ ರೂವಾರಿಗಳು

  1. ನಿರ್ಮಲಾ ಸೀತಾರಾಮನ್, ಹಣಕಾಸು ಸಚಿವೆ
  2. ಸಂಜಯ್ ಮಲ್ಹೋತ್ರಾ, ರೆವೆನ್ಯೂ ಸೆಕ್ರೆಟರಿ
  3. ಅಜಯ್ ಸೇಠ್, ಆರ್ಥಿಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ
  4. ತುಹಿನ್ ಕಾಂತ ಪಾಂಡೆ, ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ ಇಲಾಖೆಯ ಕಾರ್ಯದರ್ಶಿ
  5. ವಿವೇಕ್ ಜೋಷಿ, ಹಣಕಾಸು ಸೇವೆಗಳ ಇಲಾಖೆಯ ಕಾರ್ಯದರ್ಶಿ
  6. ಟಿ.ವಿ. ಸೋಮನಾಥನ್, ಹಣಕಾಸು ಇಲಾಖೆಯ ಕಾರ್ಯದರ್ಶಿ
  7. ವಿ ಅನಂತ ನಾಗೇಸ್ವರನ್, ಮುಖ್ಯ ಆರ್ಥಿಕ ಸಲಹೆಗಾರ
  8. ಪಿ ಕೆ ಮಿಶ್ರಾ, ಪ್ರಧಾನಿಗಳ ಪ್ರಧಾನ ಕಾರ್ಯದರ್ಶಿ
  9. ಅರವಿಂದ್ ಶ್ರೀವಾಸ್ತವ, ಪಿಎಂಒ ಹೆಚ್ಚುವರಿ ಕಾರ್ಯದರ್ಶಿ
  10. ಪುಣ್ಯ ಸಲೀಲ ಶ್ರೀವಾಸ್ತವ, ಪಿಎಂಒ ಹೆಚ್ಚುವರಿ ಕಾರ್ಯದರ್ಶಿ
  11. ಹರಿ ರಂಜನ್ ರಾವ್, ಪಿಎಂಒ ಹೆಚ್ಚುವರಿ ಕಾರ್ಯದರ್ಶಿ
  12. ಆತಿಶ್ ಚಂದ್ರ, ಪಿಎಂಒ ಹೆಚ್ಚುವರಿ ಕಾರ್ಯದರ್ಶಿ

ಈ ಪಟ್ಟಿಯಲ್ಲಿರುವ ಕೊನೆಯ ಐವರು ವ್ಯಕ್ತಿಗಳು ಪ್ರಧಾನಿ ಕಾರ್ಯಾಲಯ ಅಥವಾ ಪಿಎಂಒದಲ್ಲಿರುವ ಪ್ರಮುಖ ವ್ಯಕ್ತಿಗಳಾಗಿದ್ದಾರೆ.

ಅರವಿಂದ್ ಶ್ರೀವಾಸ್ತವ ಅವರು ಕರ್ನಾಟಕ ಕೇಡರ್​ನ 1994ರ ಬ್ಯಾಚ್​ನ ಐಎಎಸ್ ಅಧಿಕಾರಿ. ಹಣಕಾಸು ಸಚಿವಾಲಯದಲ್ಲಿ ಜಂಟಿ ಕಾರ್ಯದರ್ಶಿ ಆಗಿದ್ದ ಇವರನ್ನು ಪಿಎಂಒದಲ್ಲಿ ಹಣಕಾಸು ಮತ್ತು ಆರ್ಥಿಕ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ.

ಇದನ್ನೂ ಓದಿ: ಫೆಬ್ರುವರಿ 1ರ ಬಜೆಟ್: ರಫ್ತು ಸುಂಕ, ರೈಲ್ವೆ, ಕೃಷಿ ವಿಚಾರದಲ್ಲಿ ಸಂಭವನೀಯ ಘೋಷಣೆಗಳೇನು? ಇಲ್ಲಿದೆ ಡೀಟೇಲ್ಸ್

ಪ್ರಧಾನಿಗಳಿಗೆ ಕಣ್ಣು ಕಿವಿಗಳಾಗಿರುವ ಪಿ ಕೆ ಮಿಶ್ರಾ

ಈ ಮೇಲಿನ ಟೀಮ್​ನಲ್ಲಿ ಗಮನ ಸೆಳೆಯುವ ವ್ಯಕ್ತಿ ಪಿ ಕೆ ಮಿಶ್ರಾ. ಸರ್ಕಾರದ ಎಲ್ಲಾ ಪ್ರಮುಖ ನೀತಿಗಳ ಮೇಲೆ ಇವರ ನಿಗಾ ಇರುತ್ತದೆ. ಈ ಐಎಎಸ್ ಅಧಿಕಾರಿಗೆ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ನೀಡಲಾಗಿದೆ. ವಿವಿಧ ಸಚಿವಾಲಯಗಳ ಬಗ್ಗೆ ಹಾಗೂ ಅವುಗಳಿಂದ ಪಡೆದ ಮಾಹಿತಿಯನ್ನು ಇವರು ಪ್ರಧಾನಿಗಳಿಗೆ ಒದಗಿಸುತ್ತಿರುತ್ತಾರೆ. ಒಂದು ರೀತಿಯಲ್ಲಿ ಪ್ರಧಾನಿಗಳಿಗೆ ಆಡಳಿತದ ಕಣ್ಣು ಮತ್ತು ಕಿವಿಯಾಗಿ ಪಿಕೆ ಮಿಶ್ರಾ ಅವರಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ