ಫೆಬ್ರುವರಿ 1ರ ಬಜೆಟ್: ರಫ್ತು ಸುಂಕ, ರೈಲ್ವೆ, ಕೃಷಿ ವಿಚಾರದಲ್ಲಿ ಸಂಭವನೀಯ ಘೋಷಣೆಗಳೇನು? ಇಲ್ಲಿದೆ ಡೀಟೇಲ್ಸ್

Interim Budget 2024: ಫೆಬ್ರುವರಿ 1ರಂದು ಮಧ್ಯಂತರ ಬಜೆಟ್ ಮಂಡನೆ ಆಗಲಿದೆ. ಪ್ರಮುಖ ಘೋಷಣೆ ಸಾಧ್ಯತೆ ಇಲ್ಲವಾದರೂ ಕೆಲವಿಷ್ಟು ಮಹತ್ವದ ಸಂಗತಿಗಳನ್ನು ನಿರೀಕ್ಷಿಸಬಹುದು. ರೈಲ್ವೆ ಮತ್ತು ಕೃಷಿ ವಲಯಕ್ಕೆ ಬಜೆಟ್​ನಲ್ಲಿ ಹೆಚ್ಚಿನ ಹಣ ನಿಯೋಜನೆ ಆಗಬಹುದು.

ಫೆಬ್ರುವರಿ 1ರ ಬಜೆಟ್: ರಫ್ತು ಸುಂಕ, ರೈಲ್ವೆ, ಕೃಷಿ ವಿಚಾರದಲ್ಲಿ ಸಂಭವನೀಯ ಘೋಷಣೆಗಳೇನು? ಇಲ್ಲಿದೆ ಡೀಟೇಲ್ಸ್
ಬಜೆಟ್​
Follow us
|

Updated on:Jan 11, 2024 | 1:00 PM

ನವದೆಹಲಿ, ಜನವರಿ 11: ಮುಂದಿನ ತಿಂಗಳ ಆರಂಭದಲ್ಲಿ (ಫೆ. 1) ಬಜೆಟ್ ಮಂಡನೆಯಾಗಲಿದೆ. ಚುನಾವಣೆಗೆ ಮುಂಚಿನ ಬಜೆಟ್ ಆಗಿರುವ ಇದು ಮಧ್ಯಂತರ ಬಜೆಟ್ (Interim Budget 2024) ಮಾತ್ರವೇ ಆಗಿರುತ್ತದೆ. ನಿಯಮದ ಪ್ರಕಾರ ಮತದಾರರನ್ನು ಸೆಳೆಯುವಂತಹ ಯಾವ ಸ್ಕೀಮ್ ಅನ್ನೂ ಬಜೆಟ್​ನಲ್ಲಿ ಪ್ರಕಟಿಸುವಂತಿಲ್ಲ. ಆರ್ಥಿಕ ಸಮೀಕ್ಷೆಯ (economic survey) ವರದಿಯನ್ನೂ ಬಿಡುಗಡೆ ಮಾಡುವಂತಿಲ್ಲ. ಚುನಾವಣೆ ಮುಗಿದು ಹೊಸ ಬಜೆಟ್ ಮಂಡನೆ ಆಗುವವರೆಗೂ ವೆಚ್ಚಕ್ಕೆಂದು ವೋಟ್ ಆನ್ ಅಕೌಂಟ್ ಮಾತ್ರವೇ ಮಧ್ಯಂತರ ಬಜೆಟ್​ನ ಗುರಿಯಾಗಿರುತ್ತದೆ.

ಆದಾಗ್ಯೂ ಮಧ್ಯಂತರ ಬಜೆಟ್​ನಲ್ಲೂ ಒಂದಷ್ಟು ಮಹತ್ವದ ನಿರ್ಧಾರಗಳಿಗೆ ಅವಕಾಶ ಇರುತ್ತದೆ. ತಜ್ಞರು ಕೆಲ ಪ್ರಮುಖ ಘೋಷಣೆಗಳ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ರೀತಿಯ ಸಂಭವನೀಯ ಘೋಷಣೆಗಳ ವಿವರ ಇಲ್ಲಿದೆ:

ರಫ್ತು ಮತ್ತು ಆಮದು ನಿಯಮ

ಆಹಾರ ಬೆಲೆಗಳ ಹಣದುಬ್ಬರ ಬಹಳ ಹೆಚ್ಚಿನ ಮಟ್ಟದಲ್ಲಿ ಇದೆ. ಇದನ್ನು ತಗ್ಗಿಸಲು ಸರ್ಕಾರ ಅಗತ್ಯ ಆಹಾರ ವಸ್ತುಗಳಿಗೆ ರಫ್ತು ಸುಂಕ ವಿಧಿಸುತ್ತದೆ. ಅಂತೆಯೇ, ಕೆಲ ಆಹಾರವಸ್ತುಗಳಿಗೆ ಈ ಸುಂಕದಲ್ಲಿ ವಿನಾಯಿತಿ ನೀಡುತ್ತಿದೆ. ಈ ಸಂಬಂಧ ಬಜೆಟ್​ನಲ್ಲಿ ಮಹತ್ವದ ನಿರ್ಧಾರ ಬರುವ ಸಾಧ್ಯತೆ ಇಲ್ಲದಿಲ್ಲ.

ಇದನ್ನೂ ಓದಿ: Inflation: ಡಿಸೆಂಬರ್​ನಲ್ಲಿ ಹಣದುಬ್ಬರ ಶೇ. 5.9ಕ್ಕೆ ಏರಿಕೆಯಾಗಿರುವ ಸಾಧ್ಯತೆ: 18 ಆರ್ಥಿಕ ತಜ್ಞರ ಸರಾಸರಿ ಅಂದಾಜು

ಇಂಧನ ಬೆಲೆ ಹೆಚ್ಚಳ

ಜಾಗತಿಕ ತೈಲಬೆಲೆಯಲ್ಲಿ ಏರಿಳಿತಗಳಾಗುತ್ತಿದ್ದರೂ ಭಾರತದಲ್ಲಿ ಕಳೆದ ಒಂದು ವರ್ಷದಿಂದ ಇಂಧನ ಬೆಲೆ ಸ್ಥಿರವಾಗಿದೆ. ಹೆಚ್ಚಿನ ಮಟ್ಟದಲ್ಲಿರುವ ಇಂಧನ ಬೆಲೆಯನ್ನು ಇಳಿಸುವ ಸಾಧ್ಯತೆ ಇದೆ. ಬಜೆಟ್​ನಲ್ಲಿ ಸೆಸ್ ದರ ಕಡಿಮೆ ಮಾಡುವ ಘೋಷಣೆ ಆಗಬಹುದು.

ರೈಲ್ವೆಗೆ ಹೆಚ್ಚು ಹಣ ವಿನಿಯೋಗ

ಈ ಬಾರಿಯ ಬಜೆಟ್​ನಲ್ಲಿ ರೈಲ್ವೆ ವಲಯಕ್ಕೆ ಹೆಚ್ಚಿನ ಹಣ ನಿಯೋಜನೆ ಮಾಡಬಹುದು. ದೇಶಾದ್ಯಂತ ಇನ್​ಫ್ರಾಸ್ಟ್ರಕ್ಚರ್ ಅಭಿವೃದ್ಧಿಗೆ ಒತ್ತು ಕೊಡಲಾಗುತ್ತಿದೆ. ಬಹಳ ಹೆಚ್ಚಿನ ಜನರನ್ನು ಮತ್ತು ಸರಕುಗಳನ್ನು ಸಾಗಿಸುವ ರೈಲುಗಳನ್ನು ಅಭಿವೃದ್ಧಿಪಡಿಸುವ ಅವಶ್ಯಕತೆ ಇದೆ.

ಇದನ್ನೂ ಓದಿ: Powerful Passports: ವಿಶ್ವದ ಅತ್ಯಂತ ಪ್ರಬಲ ಪಾಸ್​ಪೋರ್ಟ್​ಗಳ ದೇಶಗಳ್ಯಾವುವು? ಭಾರತದ ಪಾಸ್​ಪೋರ್ಟ್ ಪ್ರಭಾವ ಎಷ್ಟು?

ಕೃಷಿಗೆ ಹೆಚ್ಚು ಹಣ

ಕಳೆದ 10 ವರ್ಷಗಳಿಂದ ಕೇಂದ್ರ ಬಜೆಟ್​ನಲ್ಲಿ ಕೃಷಿ ವಲಯಕ್ಕೆ ನೀಡುತ್ತಿರುವ ಹಣ ಹಲವು ಪಟ್ಟು ಹೆಚ್ಚಾಗಿದೆ. 2014-15ರಲ್ಲಿ ಕೃಷಿ ವಲಯಕ್ಕೆ 22,652 ಕೋಟಿ ರೂ ನೀಡಲಾಗಿತ್ತು. 2023-24ರಲ್ಲಿ ಇದು 1.15 ಲಕ್ಷ ಕೋಟಿ ರೂ ಆಗಿದೆ. ಈ ಏರಿಕೆಯ ಟ್ರೆಂಡ್ ಈ ವರ್ಷವೂ ಮುಂದುವರಿಯುವ ನಿರೀಕ್ಷೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:22 pm, Thu, 11 January 24

ಕೆಟ್ಟ ಕಮೆಂಟ್ ಮಾಡ್ತೀರಾ? ರಕ್ಷಕ್ ಬುಲೆಟ್​ ಏನ್ ಹೇಳ್ತಾರೆ ಸ್ವಲ್ಪ ಕೇಳಿ..
ಕೆಟ್ಟ ಕಮೆಂಟ್ ಮಾಡ್ತೀರಾ? ರಕ್ಷಕ್ ಬುಲೆಟ್​ ಏನ್ ಹೇಳ್ತಾರೆ ಸ್ವಲ್ಪ ಕೇಳಿ..
ಬಂದ್​​ ಗತಿ ಕಾಣಿಸುತ್ತೇವೆ: ಗೃಹ ಸಚಿವ ಜಿ ಪರಮೇಶ್ವರ್​ ಹೀಗೆ ಹೇಳಿದ್ದೇಕೆ?
ಬಂದ್​​ ಗತಿ ಕಾಣಿಸುತ್ತೇವೆ: ಗೃಹ ಸಚಿವ ಜಿ ಪರಮೇಶ್ವರ್​ ಹೀಗೆ ಹೇಳಿದ್ದೇಕೆ?
ಜೈಲಿಂದ ಹೊರಬಂದ ಅರವಿಂದ್ ಕೇಜ್ರಿವಾಲ್​ಗೆ ಹೂಮಳೆ ಸುರಿಸಿ ಅದ್ದೂರಿ ಸ್ವಾಗತ
ಜೈಲಿಂದ ಹೊರಬಂದ ಅರವಿಂದ್ ಕೇಜ್ರಿವಾಲ್​ಗೆ ಹೂಮಳೆ ಸುರಿಸಿ ಅದ್ದೂರಿ ಸ್ವಾಗತ
ಮಹಿಳಾ ಅಧಿಕಾರಿಯ ಕೂದಲು ಹಿಡಿದು ಎಳೆದಾಡಿದ ಹೆಂಗಸು; ವಿಡಿಯೋ ವೈರಲ್
ಮಹಿಳಾ ಅಧಿಕಾರಿಯ ಕೂದಲು ಹಿಡಿದು ಎಳೆದಾಡಿದ ಹೆಂಗಸು; ವಿಡಿಯೋ ವೈರಲ್
ದರ್ಶನ್​ಗೆ ಕೆಟ್ಟ ಸಮಯ ನಡೆಯುತ್ತಿದೆ, ಫೆಬ್ರವರಿಗೆ ಸರಿಹೋಗುತ್ತೆ: ಕೆ ಮಂಜು
ದರ್ಶನ್​ಗೆ ಕೆಟ್ಟ ಸಮಯ ನಡೆಯುತ್ತಿದೆ, ಫೆಬ್ರವರಿಗೆ ಸರಿಹೋಗುತ್ತೆ: ಕೆ ಮಂಜು
ನಂದಿನಿ ಹಾಲಿನ ದರ ಹೆಚ್ಚಳ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು:ವಿಡಿಯೋ ನೋಡಿ
ನಂದಿನಿ ಹಾಲಿನ ದರ ಹೆಚ್ಚಳ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು:ವಿಡಿಯೋ ನೋಡಿ
ಸಚಿವ ಸೋಮಣ್ಣನವರಿಗೆ ಹಾಕಿದ್ದ ಸೇಬು ಹಾರಕ್ಕಾಗಿ ಮುಗಿಬಿದ್ದ ಜನ!
ಸಚಿವ ಸೋಮಣ್ಣನವರಿಗೆ ಹಾಕಿದ್ದ ಸೇಬು ಹಾರಕ್ಕಾಗಿ ಮುಗಿಬಿದ್ದ ಜನ!
ಫ್ಲಿಪ್​ಕಾರ್ಟ್ ಬಿಗ್ ಬಿಲಿಯನ್ ಡೇ ಆಫರ್ ಸೇಲ್ ದಿನಾಂಕ ಯಾವುದು ಗೊತ್ತಾ?
ಫ್ಲಿಪ್​ಕಾರ್ಟ್ ಬಿಗ್ ಬಿಲಿಯನ್ ಡೇ ಆಫರ್ ಸೇಲ್ ದಿನಾಂಕ ಯಾವುದು ಗೊತ್ತಾ?
ಮಸೀದಿ ಮುಂದೆ ಪಟಾಕಿ ಸಿಡಿಸಿದ್ದಕ್ಕೆ ಹಿಂದೂ ಕಾರ್ಯಕರ್ತರ ವಿರುದ್ಧ ಎಫ್​ಐಆರ್
ಮಸೀದಿ ಮುಂದೆ ಪಟಾಕಿ ಸಿಡಿಸಿದ್ದಕ್ಕೆ ಹಿಂದೂ ಕಾರ್ಯಕರ್ತರ ವಿರುದ್ಧ ಎಫ್​ಐಆರ್
ಆರ್​ಎಸ್ಎಸ್, ಬಿಜೆಪಿ ವಿರುದ್ಧ ಎಂ ಲಕ್ಷ್ಮಣ್ ಗಂಭೀರ ಆರೋಪ
ಆರ್​ಎಸ್ಎಸ್, ಬಿಜೆಪಿ ವಿರುದ್ಧ ಎಂ ಲಕ್ಷ್ಮಣ್ ಗಂಭೀರ ಆರೋಪ