ತೆರಿಗೆ ಉಳಿತಾಯ ಮಾಡುವುದು ಬಹಳ ಬುದ್ಧಿವಂತಿಕೆಯ ಹಾಗೂ ಸವಾಲಿನ ಜವಾಬ್ದಾರಿ. ತೆರಿಗೆ ಉಳಿಸಲು ಮಾಡುವ ಉಳಿತಾಯವನ್ನು ಎಲ್ಲಿ ಹಾಕಿದಲ್ಲಿ ಉತ್ತಮ ರಿಟರ್ನ್ಸ್ ಬರುತ್ತದೆ ಹಾಗೂ ರಿಸ್ಕ್ ಕಡಿಮೆ ಇರುತ್ತದೆ ಎಂದು ಹುಡುಕುತ್ತಾರೆ. ಇಎಲ್ಎಸ್ಎಸ್ ಮ್ಯೂಚುವಲ್ ಫಂಡ್ಗಳು ಈಗಾಗಲೇ ಉತ್ತಮ ರಿಟರ್ನ್ಸ್ ನೀಡಿಯಾಗಿದೆ. ಇನ್ನು ಈಗ ನಿಫ್ಟಿ ಇರುವ ಹಂತದಲ್ಲಿ ಭವಿಷ್ಯದ ಬಗ್ಗೆ ಹೆಚ್ಚು ಆಸೆ ಇಟ್ಟುಕೊಳ್ಳುವುದಕ್ಕಾಗಲ್ಲ. ಎನ್ಪಿಎಸ್ಗೆ ಎಕ್ಸ್ಕ್ಲೂಸಿವ್ ಆದ ತೆರಿಗೆ ಅನುಕೂಲಗಳಿವೆ. ಆದರೆ ಅದರ ಲಾಕ್- ಇನ್ ಅವಧಿ ನಿವೃತ್ತಿ ತನಕ ವಿಸ್ತರಿಸುತ್ತದೆ. ಪಿಪಿಎಫ್ ಸುರಕ್ಷಿತ ಹೂಡಿಕೆ ಅನ್ನೋದರಲ್ಲಿ ಅನುಮಾನವಿಲ್ಲ. ಆದರೆ ಅದರ ಲಾಕ್ ಇನ್ ಅವಧಿ ಕೂಡ ಜಾಸ್ತಿಯೇ. ತೆರಿಗೆ ಉಳಿತಾಯ ಫಿಕ್ಸೆಡ್ ಡೆಪಾಸಿಟ್ಗಳು ಮತ್ತು ಎನ್ಎಸ್ಸಿಗಳಿಗೆ ಕಡಿಮೆ ಲಾಕ್ ಇನ್ ಅವಧಿ ಇದ್ದರೂ ಬಡ್ಡಿಯ ಮೇಲೆ ತೆರಿಗೆ ಅಂದರೆ, ತೆರಿಗೆ ನಂತರದ ರಿಟರ್ನ್ಸ್ ಬಹಳ ಕಡಿಮೆ. ULIPನಿಂದ ಶುಲ್ಕ ಕಡಿಮೆ ಮಾಡಿದ್ದು, ತೆರಿಗೆರಹಿತ ಆದಾಯ ಒದಗಿಸುತ್ತದೆ. ಆದರೆ ನೀವು ಒಂದೇ ಇನ್ಷೂರೆನ್ಸ್ ಕಂಪೆನಿ ಜತೆಗೆ ಸಂಪೂರ್ಣ ಅವಧಿಗೆ ಇರಬೇಕಾಗುತ್ತದೆ.
ಈ ಲೇಖನದಲ್ಲಿ ಹತ್ತು ತೆರಿಗೆ ಉಳಿತಾಯ ಯೋಜನೆಗಳ ಬಗ್ಗೆ ಮೌಲ್ಯಮಾಪನ ಮಾಡಿ, ವಿವರಣೆ ನೀಡಲಾಗಿದೆ. ರಿಟರ್ನ್ಸ್, ಸುರಕ್ಷತೆ, ಹೊಂದಾಣಿಕೆ, ನಗದೀಕರಣ, ವೆಚ್ಚ, ಪಾರದರ್ಶಕತೆ, ಹೂಡಿಕೆಗೆ ಸುಲಭ ಮತ್ತು ಆದಾಯದ ಮೇಲೆ ತೆರಿಗೆ ಇಂಥವೆಲ್ಲ ಗಮನಿಸಿ, ಆ ನಂತರ ಮಾಹಿತಿ ನೀಡಲಾಗಿದೆ. ನೀವೂ ಹೂಡಿಕೆಗೆ ಮುನ್ನ ಇದು ನಿಮಗೆ ಸೂಕ್ತವೇ ಹಾಗೂ ಅಗತ್ಯಕ್ಕೆ ತಕ್ಕಂತೆ ಇದೆಯೇ ಎಂಬುದನ್ನು ಪರಾಂಬರಿಸಿದ ನಂತರವೇ ನಿರ್ಧಾರ ಕೈಗೊಳ್ಳಿ. ಇನ್ನೇಕೆ ತಡ, ಆಯ್ಕೆಗಳ ಕಡೆಗೆ ಒಮ್ಮೆ ನೋಡೋಣ.
1. ಇಎಲ್ಎಸ್ಎಸ್ (ELSS): ಇದು ಈಕ್ವಿಟಿ ಲಿಂಕ್ಡ್ ಸೇವಿಂಗ್ಸ್ ಸ್ಕೀಮ್. ಹೆಚ್ಚಿನ ರಿಟರ್ನ್ಸ್ ನೀಡುವ ಸಾಮರ್ಥ್ಯ ಇದಕ್ಕಿದೆ. ಹೂಡಿಕೆ ಕೂಡ ಆರಾಮವಾಗಿ ಮಾಡಬಹುದು. ಆದರೆ ಈಗಾಗಲೇ ಷೇರು ಮಾರುಕಟ್ಟೆ ಎತ್ತರದಲ್ಲಿ ಇರುವುದರಿಂದ ಚಿಂತೆಗೆ ಕಾರಣವಾಗಿದೆ.
2. ನ್ಯಾಷನಲ್ ಪೆನ್ಷನ್ ಸ್ಕೀಮ್ (ಎನ್ಪಿಎಸ್): ಇದು ಪಿಂಚಣಿ ಯೋಜನೆ. ಹೆಚ್ಚುವರಿಯಾದ ತೆರಿಗೆ ಅನುಕೂಲವನ್ನು ಒದಗಿಸುತ್ತದೆ. ಬೇರೆಯದಕ್ಕೆ ಬದಲಿಸಿಕೊಳ್ಳುವುದು ಕೂಡ ಸಲೀಸಲು. ಆದರೆ ಕೆಲವು ಹೂಡಿಕೆದಾರರಿಗೆ ನಗದೀಕರಣದ ಸಮಸ್ಯೆ.
3. ಯೂನಿಟ್ ಲಿಂಕ್ಡ್ ಇನ್ವೆಸ್ಟ್ಮೆಂಟ್ ಪ್ಲಾನ್ ಸ್ಕೀಮ್ (ULIPS): ಇದರಲ್ಲಿ ಬಹಳ ಸುಧಾರಣೆ ಆಗಿದೆ. ಕಡಿಮೆ ವೆಚ್ಚದಲ್ಲಿ ದೊರೆಯುತ್ತದೆ. ತೆರಿಗೆ ಮುಕ್ತ ರಿಟರ್ನ್ಸ್ ಮತ್ತು ಬದಲಿಸಿಕೊಳ್ಳುವುದು ಸಹ ಸಲೀಸಾಗಿದೆ.
4. ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್): ಇದರ ರಿಟರ್ನ್ಸ್ ತೆರಿಗೆಮುಕ್ತ ಆಗಿದೆ. ಆದರೆ ನಿಧಾನವಾಗಿ ಬಡ್ಡಿ ದರ ಕಡಿಮೆ ಆಗುತ್ತಿದೆ. ಬದಲಾಗುವ ಬಡ್ಡಿ ದರ ಇನ್ನಷ್ಟು ಕಡಿಮೆ ಆಗಬಹುದು.
5. ಹಿರಿಯ ನಾಗರಿಕರ ಉಳಿತಾಯ ಯೋಜನೆ: ಇದು ನಿವೃತ್ತರಿಗೆ ಅತ್ಯುತ್ತಮವಾದ ಆಯ್ಕೆ. ಗೌರವಯುತವಾದ ಮತ್ತು ನಿಯಮಿತವಾದ ಆದಾಯ ನೀಡುತ್ತದೆ. ಆದರೆ ಇದರ ವ್ಯಾಪ್ತಿ ಸೀಮಿತ.
6. ಸುಕನ್ಯಾ ಯೋಜನೆ: ಪಿಪಿಎಫ್ಗಿಂತ ಉತ್ತಮ ಬಡ್ಡಿ ದರ ಇದಕ್ಕೆ ದೊರೆಯುತ್ತದೆ. ಅದೇ ರೀತಿಯ ತೆರಿಗೆ ಲೆಕ್ಕಾಚಾರವೂ ಹೌದು. ಆದರೆ ಸೀಮಿತ ವ್ಯಾಪ್ತಿ ಹಾಗೂ ಕೆಲವು ನಿರ್ಬಂಧಗಳಿವೆ.
7. ಪೆನ್ಷನ್ ಪ್ಲಾನ್ಗಳು: ನಿವೃತ್ತಿಗೆ ಉಳಿತಾಯ ಮಾಡುವುದಕ್ಕೆ ಇದು ಉತ್ತಮ ಆಯ್ಕೆ. ಆದರೆ ಈ ಯೋಜನೆಗಳು ವೆಚ್ಚ ಮತ್ತು ತೆರಿಗೆ ಅನುಕೂಲಗಳಲ್ಲಿ ಎನ್ಪಿಎಸ್ಗೆ ಸಮವಲ್ಲ
8. ರಾಷ್ಟ್ರೀಯ ಉಳಿತಾಯ ಪತ್ರ (NSC): ನಿರಂತರವಾಗಿ ಸರ್ಕಾರದ ಬಾಂಡ್ಗಳ ಯೀಲ್ಡ್ನಲ್ಲಿ ಇಳಿಕೆ ಆಗಿದ್ದರಿಂದ ಬಡ್ಡಿ ದರ ಮತ್ತು ಇದಕ್ಕಿರುವ ಆದ್ಯತೆಯಲ್ಲಿ ಕಡಿಮೆ ಆಗಿದೆ. ಆದರೆ ಅತ್ಯಂತ ಸುರಕ್ಷಿತ ಹೂಡಿಕೆ ಆಯ್ಕೆ ಇದು.
9. ತೆರಿಗೆ ಉಳಿತಾಯ ನಿಶ್ಚಿತ ಠೇವಣಿ (ಟ್ಯಾಕ್ಸ್ ಸೇವಿಂಗ್ ಎಫ್.ಡಿ.): ಇದು ಬಹಳ ಕಡಿಮೆ ರಿಟರ್ನ್ಸ್ ನೀಡುತ್ತದೆ. ಆದಾಯಕ್ಕೆ ಪೂರ್ಣವಾಗಿ ತೆರಿಗೆ ಬೀಳುತ್ತದೆ. ನಿಮಗೆ ಸಮಯ ಇಲ್ಲ ಎಂದಾದಲ್ಲಿ ತೆರಿಗೆ ಉಳಿತಾಯಕ್ಕೆ ಅತಿ ಸುಲಭ ಮಾರ್ಗ.
10. ಜೀವ ವಿಮಾ ಪಾಲಿಸಿ: ಜೀವ ವಿಮಾ ಪಾಲಿಸಿಯ ಉದ್ದೇಶ ಸುರಕ್ಷತೆಯೇ ಹೊರತು ತೆರಿಗೆ ಉಳಿತಾಯ ಮಾಡುವುದಲ್ಲ. ತೆರಿಗೆ ಉಳಿತಾಯ ಎಂಬುದು ಹೆಚ್ಚುವರಿ ವೈಶಿಷ್ಟ್ಯವೇ ವಿನಾ ಮುಖ್ಯ ಅನುಕೂಲವಲ್ಲ.
ಇದನ್ನೂ ಓದಿ: SBI Annuity Scheme: ಎಸ್ಬಿಐ ಆನ್ಯುಯುಟಿ ಸ್ಕೀಮ್ ಬಗ್ಗೆ ಕೇಳಿದ್ದೀರಾ?
ಇದನ್ನೂ ಓದಿ: PMJJBY Explainer: ಏನಿದು ಪ್ರಧಾನ್ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನಾ?