Tech Tips: ವಾಟ್ಸ್​ಆ್ಯಪ್​ನಲ್ಲಿ ಒಂದೇ ಬಾರಿಗೆ 100 ಫೋಟೋ ಅಥವಾ ವಿಡಿಯೋ ಕಳುಹಿಸುವ ಟ್ರಿಕ್ ನಿಮಗೆ ಗೊತ್ತೇ?

ಈ ಹಿಂದೆ ವಾಟ್ಸ್​ಆ್ಯಪ್​ನಲ್ಲಿ ಒಂದೇ ಬಾರಿಗೆ ಕೇವಲ 30 ಫೋಟೋಗಳನ್ನು ಮಾತ್ರ ಕಳುಹಿಸಬಹುದಾಗುತ್ತು, ಆದರೆ ಈ ಹೊಸ ಫೀಚರ್​ನ ಪ್ರಕಾರ ಇದರ ಮಿತಿಯನ್ನು ಹೆಚ್ಚಿಸಲಾಗಿದೆ. ಆಂಡ್ರಾಯ್ಡ್ ಆವೃತ್ತಿ 2.22.24.73 ಕ್ಕೆ ವಾಟ್ಸ್​ಆ್ಯಪ್ ಅನ್ನು ಅಪ್ಡೇಟ್ ಮಾಡಿದರೆ ಒಂದೇ ಬಾರಿಗೆ 100 ಫೋಟೋಗಳನ್ನು ಅಥವಾ ವಿಡಿಯೋಗಳನ್ನು ಕಳುಹಿಸಬಹುದು. ಹಾಗಾದರೆ ವಾಟ್ಸ್​ಆ್ಯಪ್​ನಲ್ಲಿ ಒಂದೇ ಬಾರಿಗೆ 100 ಫೋಟೋ ಅಥವಾ ವಿಡಿಯೋ ಕಳುಹಿಸುವುದು ಹೇಗೆ ಎಂಬುದನ್ನು ನೋಡೋಣ.

Tech Tips: ವಾಟ್ಸ್​ಆ್ಯಪ್​ನಲ್ಲಿ ಒಂದೇ ಬಾರಿಗೆ 100 ಫೋಟೋ ಅಥವಾ ವಿಡಿಯೋ ಕಳುಹಿಸುವ ಟ್ರಿಕ್ ನಿಮಗೆ ಗೊತ್ತೇ?
WhatsApp Tricks
Edited By:

Updated on: Oct 08, 2026 | 3:24 PM

ಕಳೆದ ವರ್ಷ ಸಾಕಷ್ಟು ಅಭಿವೃದ್ದಿ ಕಂಡ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್​ಆ್ಯಪ್ ಇದೀಗ ಬಳಕೆದಾರರ ನೆಚ್ಚಿನ ಅಪ್ಲಿಕೇಷನ್ ಆಗಿಬಿಟ್ಟಿದೆ. ಮೆಟಾ ಒಡೆತನದ ಈ ಆ್ಯಪ್ ಇಂದು ಎಷ್ಟು ಜನಪ್ರಿಯತೆ ಪಡೆದುಕೊಂಡಿದೆ ಎಂದರೆ ಇದನ್ನು ಬಳಸದವರೇ ಇಲ್ಲ ಎಂಬಂತಾಗಿದೆ. ಕಳೆದ ವರ್ಷದಂತೆ ಈ ವರ್ಷ ಅನೇಕ ಹೊಸ ಹೊಸ ಫೀಚರ್​ಗಳ ಮೇಲೆ ಕಣ್ಣಿಟ್ಟಿರುವ ವಾಟ್ಸ್​ಆ್ಯಪ್ (WhatsApp) ಒಂದೊಂದು ಅಪ್ಡೇಟ್ ಪರಿಯಿಸುತ್ತಿದೆ. ಇದರ ನಡುವೆ ಅನೇಕ ಆಯ್ಕೆಗಳು ಬೇಟಾ ವರ್ಷನ್​ನಲ್ಲಿ ಟೆಸ್ಟಿಂಗ್ ನಡೆಯುತ್ತಿದೆ. ಮೊನ್ನೆಯಷ್ಟೆ ವಾಟ್ಸ್​ಆ್ಯಪ್ ತನ್ನ ಆಂಡ್ರಾಯ್ಡ್ (Android) ಬಳಕೆದಾರರಿಗೆ ವಿಶೇಷ ಫೀಚರ್​ವೊಂದನ್ನು (Feature) ಬಿಡುಗಡೆ ಮಾಡಿತ್ತು. ಅದುವೇ ಒಂದೇ ಬಾರಿಗೆ 100 ಫೋಟೋ ಅಥವಾ ವಿಡಿಯೋವನ್ನು ಕಳುಹಿಸುವ ಆಯ್ಕೆ.

ಈ ಹಿಂದೆ ವಾಟ್ಸ್​ಆ್ಯಪ್​ನಲ್ಲಿ ಒಂದೇ ಬಾರಿಗೆ ಕೇವಲ 30 ಫೋಟೋಗಳನ್ನು ಮಾತ್ರ ಕಳುಹಿಸಬಹುದಾಗುತ್ತು, ಆದರೆ ಈ ಹೊಸ ಫೀಚರ್​ನ ಪ್ರಕಾರ ಇದರ ಮಿತಿಯನ್ನು ಹೆಚ್ಚಿಸಲಾಗಿದೆ. ಆಂಡ್ರಾಯ್ಡ್ ಆವೃತ್ತಿ 2.22.24.73 ಕ್ಕೆ ವಾಟ್ಸ್​ಆ್ಯಪ್ ಅನ್ನು ಅಪ್ಡೇಟ್ ಮಾಡಿದರೆ ಒಂದೇ ಬಾರಿಗೆ 100 ಫೋಟೋಗಳನ್ನು ಅಥವಾ ವಿಡಿಯೋಗಳನ್ನು ಕಳುಹಿಸಬಹುದು. ಹಾಗಾದರೆ ವಾಟ್ಸ್​ಆ್ಯಪ್​ನಲ್ಲಿ ಒಂದೇ ಬಾರಿಗೆ 100 ಫೋಟೋ ಅಥವಾ ವಿಡಿಯೋ ಕಳುಹಿಸುವುದು ಹೇಗೆ ಎಂಬುದನ್ನು ನೋಡೋಣ.

  • ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್​ಫೋನ್​ನಲ್ಲಿ ವಾಟ್ಸ್​ಆ್ಯಪ್ ತೆರೆಯಿರಿ
  • ಈಗ ನೀವು ಯಾರಿಗೆ ಫೋಟೋ ಅಥವಾ ವಿಡಿಯೋಗಳನ್ನು ಸೆಂಡ್‌ ಮಾಡಲು ಬಯಸುತ್ತೀರೊ ಅವರ ಚಾಟ್‌ ಓಪನ್ ಮಾಡಿ
  • ಸ್ಕ್ರೀನ್‌ ಕೇಳಭಾಗದಲ್ಲಿ ಕಾಣುವ ಲಗತ್ತು ಐಕಾನ್ (ಪೇಪರ್ ಕ್ಲಿಪ್) ಮೇಲೆ ಟ್ಯಾಪ್ ಮಾಡಿ
  • ನಂತರ ಫೋಟೋ ಅಥವಾ ವಿಡಿಯೋಗಳನ್ನು ಆಯ್ಕೆ ಮಾಡಲು ಪಟ್ಟಿಯಿಂದ “ಗ್ಯಾಲರಿ” ಸೆಲೆಕ್ಟ್ ಮಾಡಿ
  • ಇದೀಗ ನೀವು ನಿಮ್ಮ ಫೋಟೋ ಅಥವಾ ವಿಡಿಯೋಗಳನ್ನು ಸ್ಟೋರೇಜ್‌ ಮಾಡಿರುವ ಫೋಲ್ಡರ್ ತೆರೆಯಿರಿ
  • ನಂತರ ನೀವು ಶೇರ್‌ ಮಾಡಲು ಬಯಸುವ ವಿಡಿಯೋ, ಫೋಟೋವನ್ನು ಟ್ಯಾಪ್ ಮಾಡುವ ಮೂಲಕ ಆಯ್ಕೆ ಮಾಡಿ
  • ಮೊದಲ ಫೋಟೋ ಅಥವಾ ವಿಡಿಯೋ ಹೈಲೈಟ್ ಆಗುವವರೆಗೆ ಅದನ್ನು ಪ್ರೆಸ್‌ ಮಾಡಿ ಹಿಡಿದುಕೊಳ್ಳಬೇಕು
  • ನಂತರ ನೀವು ಶೇರ್‌ ಮಾಡಲು ಬಯಸುವ ಇತರ ಫೋಟೋ-ವಿಡಿಯೋಗಳ ಮೇಲೆ ಟ್ಯಾಪ್‌ ಮಾಡಬೇಕು
  • ಹೀಗೆ ನೀವು ಒಂದು ಭಾರಿಗೆ 100 ಫೋಟೋಗಳು ಅಥವಾ ವಿಡಿಯೋಗಳನ್ನು ಸೆಲೆಕ್ಟ್ ಮಾಡಿ ಸೆಂಡ್ ಮಾಡಬಹುದು

ವೆಬ್ ಬಳಕೆದಾರರಿಗೆ ನೂತನ ಫೀಚರ್:

ಹೆಚ್ಚಾಗಿ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಅಪ್ಡೇಟ್​ಗಳನ್ನು ನೀಡುತ್ತಿದ್ದ ಕಂಪನಿ ಈಗ ವೆಬ್ ಬಳಕೆದಾರರಿಗೆ ನೂತನ ಪೀಚರ್​ವೊಂದನ್ನು ನೀಡಲು ಮುಂದಾಗಿದೆ. ವಾಟ್ಸ್​ಆ್ಯಪ್ ವೆಬ್​ನಲ್ಲಿ ಫೋಟೋ ಸೆಂಡ್‌ ಮಾಡುವಾಗ ವಿಶೇಷವಾದ ಆಯ್ಕೆಯೊಂದು ಕಾಣಿಸಲಿದ್ದು, ಇದರ ಮೂಲಕ ಮೂಲ ಗುಣಮಟ್ಟದಲ್ಲೇ ಆ ಫೋಟೋ ಸೆಂಡ್ ಆಗಲಿದೆ. ಈ ಆಯ್ಕೆ ಸದ್ಯದಲ್ಲೇ ವಾಟ್ಸ್​ಆ್ಯಪ್ ತನ್ನ ವೆಬ್​ ಬಳಕೆದಾರರಿಗೆ ನೀಡುತ್ತಿದೆ. ಈ ಮೂಲಕ ಉತ್ತಮ ಕ್ವಾಲಿಟಿ ಇರುವ ಫೋಟೋ ಅಥವಾ ಫೈಲ್‌ಗಳನ್ನು ಅದೇ ಗುಣಮಟ್ಟದಲ್ಲಿ ಸೆಂಡ್‌ ಮಾಡಬಹುದು. ಈಗಾಗಲೇ ಆಂಡ್ರಾಯ್ಡ್‌ ಹಾಗೂ ಐಓಎಸ್‌ ಬಳಕೆದಾರರಿಗೆ ಈ ಆಯ್ಕೆ ನೀಡಲಾಗಿದೆ. ಈ ಫೀಚರ್ ಪ್ರಸ್ತುತ ಅಭಿವೃದ್ಧಿ ಹಂತದಲ್ಲಿದ್ದು ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿದೆ.

Published On - 6:57 pm, Sun, 19 February 23

Vinay Bhat

Tv9 ಕನ್ನಡ ಡಿಜಿಟಲ್‌ನಲ್ಲಿ 2021ರ ಜುಲೈನಿಂದ ಕ್ರೀಡಾ ಹಾಗೂ ತಂತ್ರಜ್ಞಾನ ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಡಿಜಿಟಲ್ ವಿಭಾಗದಲ್ಲಿ 6 ವರ್ಷ ಅನುಭವ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನವ. ಕ್ರೀಡಾ ಸುದ್ದಿ, ಕ್ರೀಡಾ ಲೇಖನ, ಟೆಕ್ನಾಲಜಿ, ಸಿನಿಮಾ ಸುದ್ದಿ ಬರೆಯುವುದು ನನ್ನ ಆಸಕ್ತದಾಯಕ ವಿಷಯಗಳು.

Read More
Loading...
Unable to load recommendations.
Follow Us