ಆಗಸ್ಟ್ 1, 2021ರಿಂದ ಅನ್ವಯ ಆಗುವಂತೆ ಬ್ಯಾಂಕಿಂಗ್ ನಿಯಮಾವಳಿಗಳಲ್ಲಿ ಹಲವಾರು ಬದಲಾವಣೆಗಳು ಆಗಲಿವೆ. ಇದರಿಂದಾಗಿ ಖಾತೆದಾರರ ದೈನಂದಿನ ಕಾರ್ಯ ನಿರ್ವಹಣೆಯಲ್ಲಿ ಬದಲಾವಣೆಗಳಾಗಲಿವೆ. ಇಎಐ ಪಾವತಿ ಮಾಡುತ್ತಿದ್ದಲ್ಲಿ ಮತ್ತು ವೇತನ ಪಡೆಯುತ್ತಿದ್ದಲ್ಲಿ ಇದರಿಂದ ಅನುಕೂಲ ಪಡೆಯಲಿದ್ದಾರೆ. ಖಾತೆದಾರರು ಪದೇಪದೇ ಎಟಿಎಂ ಕಾರ್ಡ್ಗಳನ್ನು ಬಳಸುತ್ತಿದ್ದಲ್ಲಿ ಅಂಥವರಿಗೆ ಈ ಬದಲಾವಣೆಗಳಿಂದಾಗಿ ಹೆಚ್ಚು ಭಾರವಾಗುತ್ತದೆ. ಭಾನುವಾರದಿಂದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಹೊಸ ನಿಯಮಾವಳಿಗಳನ್ನು ಪರಿಚಯಿಸಲಾಗುತ್ತಿದೆ. ಇದರ ಜತೆಗೆ ಬ್ಯಾಂಕ್ಗಳು ಸಾಮಾನ್ಯವಾಗಿ ಪರಿಚಯಿಸಿದ ಅಪ್ಡೇಟ್ಗಳು ಸಹ ಆಗಲಿವೆ. ಆಗಸ್ಟ್ 1ರಿಂದ ಅನ್ವಯ ಆಗುವ ಬದಲಾವಣೆಗಳ ವಿವರ ಇಲ್ಲಿದೆ:
NACH ಎಲ್ಲ ದಿನಗಳಲ್ಲೂ ಲಭ್ಯ ಇರುತ್ತದೆ
ನ್ಯಾಷನಲ್ ಆಟೋಮೆಟೆಡ್ ಕ್ಲಿಯರಿಂಗ್ ಹೌಸ್ (NACH) ಎಂಬುದು ಒಟ್ಟು ಪಾವತಿ ವ್ಯವಸ್ಥೆ. ವೇತನ, ಪೆನ್ಷನ್, ಡಿವಿಡೆಂಡ್, ಬಡ್ಡಿ ಮುಂತಾದವನ್ನು ವರ್ಗಾವಣೆ ಮಾಡಲು ಬಳಸಲಾಗುತ್ತದೆ. ವಿದ್ಯುತ್, ಗ್ಯಾಸ್, ಟೆಲಿಫೋನ್, ನೀರು, ಸಾಲದ ಕಂತುಗಳು, ಇನ್ಷೂರೆನ್ಸ್ ಪ್ರೀಮಿಯಂ ಮತ್ತು ಮ್ಯೂಚುವಲ್ ಫಂಡ್ಗಳಲ್ಲಿನ ಹೂಡಿಕೆಗೆ ಅನುಕೂಲ ಮಾಡಿಕೊಡುತ್ತದೆ. NACH ಅನ್ನು ಅಭಿವೃದ್ಧಿ ಪಡಿಸಿರುವುದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್ಪಿಸಿಐ). ಅದು ಬ್ಯಾಂಕ್ಗಳು ಕಾರ್ಯ ನಿರ್ವಹಿಸುವ ದಿನಗಳಲ್ಲಿ ಮಾತ್ರ ಲಭ್ಯ ಇತ್ತು. ಜೂನ್ ತಿಂಗಳಲ್ಲಿ ಆರ್ಬಿಐ ಘೋಷಣೆ ಮಾಡಿದಂತೆ, ಈ ಒಟ್ಟು ಪಾವತಿ ವ್ಯವಸ್ಥೆಯು ಆಗಸ್ಟ್ 1ರಿಂದ ಅನ್ವಯ ಆಗುವಂತೆ ಎಲ್ಲ ದಿನಗಳಲ್ಲೂ ಲಭ್ಯ ಇದೆ. 24X7 ಆರ್ಟಿಜಿಎಸ್ ಅನುಕೂಲ ಎಲ್ಲರಿಗೂ ಸಿಗಬೇಕು ಎಂದು ಶಕ್ತಿಕಾಂತ್ ದಾಸ್ ಕೈಗೊಂಡ ನಿರ್ಣಯ ಇದು. NACH ಸಹ ಡಿಬಿಟಿ (ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ಫರ್) ರೀತಿಯಲ್ಲಿ ದೊಡ್ಡ ಸಂಖ್ಯೆಯ ಫಲಾನುಭವಿಗಳಿಗೆ ಬಳಕೆ ಆಗುತ್ತದೆ.
ಇಂಟರ್ಚೇಂಜ್ ಶುಲ್ಕ ಏರಿಕೆ
ಇದು ಕೂಡ ಜೂನ್ನಲ್ಲಿ ಆರ್ಬಿಐ ಮಾಡಿದ ಘೋಷಣೆಯೇ. ಎಟಿಎಂನಲ್ಲಿ ನಡೆಸುವ ಹಣಕಾಸು ಹಾಗೂ ಹಣಕಾಸೇತರ ವಹಿವಾಟುಗಳು ದುಬಾರಿ ಆಗಲಿವೆ. ಇಂಟರ್ಚೇಂಜ್ ಶುಲ್ಕವನ್ನು 15ರಿಂದ 17 ರೂಪಾಯಿಗೆ ಏರಿಕೆ ಮಾಡುವುದಕ್ಕೆ ಬ್ಯಾಂಕ್ಗಳಿಗೆ ಆರ್ಬಿಐ ಅನುಮತಿ ನೀಡಿದೆ. ಹಣಕಾಸೇತರ ಶುಲ್ಕಗಳನ್ನು 5ರಿಂದ 6 ರೂಪಾಯಿಗೆ ಹೆಚ್ಚಿಸಲು ಅನುಮತಿಸಿದೆ. ಈ ಶುಲ್ಕವನ್ನು ಒಂಬತ್ತು ವರ್ಷಗಳ ನಂತರ ಏರಿಸಲಾಗುತ್ತಿದೆ. ಎಟಿಎಂ ನಿಯೋಜನೆ, ವೆಚ್ಚ ಹಾಗೂ ನಿರ್ವಹಣೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ ಎಂದು ಆರ್ಬಿಐ ತಿಳಿಸಿದೆ. ಕೊನೆಯದಾಗಿ ಎಟಿಎಂ ಇಂಟರ್ಚೇಂಜ್ ಶುಲ್ಕ ರಚನೆ ಬದಲಾವಣೆ ಮಾಡಿದ್ದು 2012ರಲ್ಲಿ. ಗ್ರಾಹಕರು ಪಾವತಿ ಮಾಡುವುದನ್ನು ಪರಿಷ್ಕೃತಗೊಳಿಸಿದ್ದು 2014ರ ಆಗಸ್ಟ್ನಲ್ಲಿ.
ಇಂಡಿಯಾ ಪೋಸ್ಟ್ ಪರಿಷ್ಕೃತ ಶುಲ್ಕಗಳು
ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಖಾತೆ ಇರುವವರು ಮನೆ ಬಾಗಿಲಿಗೆ ಸೇವೆ ಪಡೆಯುವುದಕ್ಕೆ ಹೆಚ್ಚು ಶುಲ್ಕ ತೆರಬೇಕಾಗುತ್ತದೆ. ಸದ್ಯಕ್ಕೆ ಇದಕ್ಕೆ ಯಾವುದೇ ಶುಲ್ಕ ಇಲ್ಲ. ಆದರೆ ಆಗಸ್ಟ್ 1ನೇ ತಾರೀಕಿನಿಂದ 20 ರೂಪಾಯಿ (ಜತೆಗೆ ಜಿಎಸ್ಟಿ) ವಿಧಿಸಲಾಗುತ್ತದೆ. ಆದರೂ ಐಪಿಪಿಬಿ ಸಿಬ್ಬಂದಿಯು ಗ್ರಾಹಕರ ಮನೆ ಬಾಗಿಲಿಗೆ ಬಂದು ಸೇವೆ ನೀಡುವುದಕ್ಕೆ ಯಾವುದೇ ಮಿತಿಯನ್ನು ವಿಧಿಸಿಲ್ಲ. ನೋ ಚಾರ್ಜ್ ಕ್ಲಾಸ್ ಎಂಬುದು ಅನ್ವಯ ಆಗುವುದು ಒಬ್ಬರೇ ಗ್ರಾಹಕರ ಹಲವು ಮನವಿಗಳಿಗೆ ಎನ್ನಲಾಗಿದೆ. ಒಂದು ವೇಳೆ ಹೆಚ್ಚು ಜನರು ಐಪಿಪಿಬಿ ಮನೆ ಬಾಗಿಲಿನ ಸೇವೆಯನ್ನು ಬಳಸಿಕೊಳ್ಳಲು ಬಯಸಿದರೆ ಆಗ ಪ್ರತ್ಯೇಕ ಡಿಎಸ್ಬಿ ಡೆಲಿವರಿ ಎಂದು ಪರಿಗಣಿಸಿ, ಶುಲ್ಕ ವಿಧಿಸಲಾಗುತ್ತದೆ.
ಐಸಿಐಸಿಐ ಬ್ಯಾಂಕ್ನಿಂದ ಶುಲ್ಕ ಪರಿಷ್ಕರಣೆ
ಭಾರತದ ಪ್ರಮುಖ ಖಾಸಗಿ ಬ್ಯಾಂಕ್ ಆದ ಐಸಿಐಸಿಐನಿಂದ ಸೇವಾ ಶುಲ್ಕಗಳ ಪರಿಷ್ಕರಣೆ ಮಾಡಲಾಗುತ್ತಿದೆ. ನಗದು ವಹಿವಾಟು, ಎಟಿಎಂ ಇಂಟರ್ಚೇಂಜ್ ಮತ್ತು ಚೆಕ್ ಪುಸ್ತಕಗಳ ಶುಲ್ಕವು ದೇಶೀಯ ಉಳಿತಾಯ ಖಾತೆದಾರರಿಗೆ ಪರಿಷ್ಕರಣೆ ಆಗಲಿದೆ. ಈ ಪರಿಷ್ಕರಣೆಯು ಎಲ್ಲ ನಗದಯ ಠೇವಣೆ ಹಾಗೂ ವಿಥ್ಡ್ರಾಗೆ ಅನ್ವಯ ಆಗುತ್ತದೆ. ಸಾಮಾನ್ಯ ಉಳಿತಾಯ ಖಾತೆ ಇರುವ ಗ್ರಾಹಕರು ನಾಲ್ಕು ಉಚಿತ ವಹಿವಾಟು ಮಾಡಬಹುದು. ಆ ಉಚಿತ ಮಿತಿಯ ನಂತರ ಪ್ರತಿ ವಹಿವಾಟಿಗೆ 150 ರೂಪಾಯಿ ಆಗುತ್ತದೆ.
ಎಲ್ಪಿಜಿ ಸಿಲಿಂಡರ್ ದರ
ಪ್ರತಿ ತಿಂಗಳ 1ನೇ ತಾರೀಕು ಎಲ್ಪಿಜಿ ಅಡುಗೆ ಅನಿಲ ಸಿಲಿಂಡರ್ಗಳ ಬೆಲೆ ಪರಿಷ್ಕರಣೆ ಬಗ್ಗೆ ತೀರ್ಮಾನ ಆಗುತ್ತದೆ. ಆಗಸ್ಟ್ 1ನೇ ತಾರೀಕು ಸಹ ಈ ಸಾಧ್ಯತೆ ಇದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಎಷ್ಟಿದೆ ಎಂಬುದರ ಆಧಾರದಲ್ಲಿ ಇದು ನಿರ್ಧಾರ ಆಗುತ್ತದೆ.
ಇದನ್ನೂ ಓದಿ: RBI Rules: ಆಗಸ್ಟ್ 1ರಿಂದ ಭಾನುವಾರ, ಬ್ಯಾಂಕ್ ರಜಾ ದಿನಗಳಲ್ಲೂ ಖಾತೆಗೆ ಜಮೆ ಆಗುತ್ತದೆ ವೇತನ, ಪೆನ್ಷನ್
(These 5 Financial Changes Can Expect From August 1st 2021 Including LPG Price Banking Rules)