
ನಿಯಮಿತ ಹೂಡಿಕೆಗೆ ಇರುವ ಆಯ್ಕೆಗಳಲ್ಲಿ ಪ್ರಮುಖವಾದುದು ಮ್ಯೂಚುವಲ್ ಫಂಡ್ ಎಸ್‌ಐಪಿ (SIP – Systematic Investment Plan). ಬಹಳ ಸುಲಭ ಪ್ರಕ್ರಿಯೆ ಹಾಗೂ ಉತ್ತಮ ರಿಟರ್ನ್ಸ್ ಅವಕಾಶ, ಇವು ಎಸ್ಐಪಿಯತ್ತ ಹೂಡಿಕೆದಾರರು ಆಕರ್ಷಿತರಾಗಲು ದೊಡ್ಡ ಕಾರಣ. ಹಾಗೆಯೇ, ಎಸ್‌ಐಪಿ ಮೂಲಕ ಹೂಡಿಕೆ ಮಾಡುವಾಗ, ಕಾಲಾನಂತರದಲ್ಲಿ ನಿಮ್ಮ ಹೂಡಿಕೆಯನ್ನು ಹೆಚ್ಚು ಲಾಭದಾಯಕವಾಗಿಸಲು ಮತ್ತು ವೇಗವಾಗಿ ಸಂಪತ್ತನ್ನು ಬೆಳೆಸಿಕೊಳ್ಳಲು ಕೆಲವು ಪ್ರಮುಖ ಸಲಹೆಗಳು ಇಲ್ಲಿವೆ:
ಪ್ರತಿ ವರ್ಷ ನಿಮ್ಮ ಆದಾಯ ಅಥವಾ ಸಂಬಳ ಹೆಚ್ಚಾದಂತೆ, ನಿಮ್ಮ ಎಸ್‌ಐಪಿ ಮೊತ್ತವನ್ನು ನಿರ್ದಿಷ್ಟ ಶೇಕಡಾವಾರು (ಉದಾಹರಣೆಗೆ ಪ್ರತಿ ವರ್ಷ ಶೇ. 10 ಅಥವಾ ಶೇ. 15 ರಷ್ಟು) ಹೆಚ್ಚಿಸಿ. ಇದು ಸ್ಟೆಪ್ ಅಪ್ ಎಸ್‌ಐಪಿ ಅಥವಾ ಟಾಪ್ ಅಪ್ ಎಸ್‌ಐಪಿ (Step-Up / Top-up SIP) ಎನ್ನುತ್ತಾರೆ. ಇದು ಸಣ್ಣ ಮೊತ್ತದೊಂದಿಗೆ ಪ್ರಾರಂಭಿಸಿ ದೊಡ್ಡ ಮೊತ್ತದ ನಿಧಿಯನ್ನು (Corpus) ನಿರ್ಮಿಸಲು ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ.
ಇದನ್ನೂ ಓದಿ: ಈ ಟ್ರಿಕ್ಸ್ ನಿಮ್ಮ ಖರ್ಚನ್ನು ಕಡಿಮೆ ಮಾಡಿ ಉಳಿತಾಯ ಹೆಚ್ಚಿಸುತ್ತದೆ
ಮಾರುಕಟ್ಟೆಯಲ್ಲಿ ಏರಿಳಿತಗಳು ಬಂದರೂ ನಿಮ್ಮ ಎಸ್‌ಐಪಿಯನ್ನು ಮಧ್ಯದಲ್ಲಿ ನಿಲ್ಲಿಸಬೇಡಿ. ಚಕ್ರಬಡ್ಡಿಯ ನಿಜವಾದ ಲಾಭವು (Power of Compounding) ದೀರ್ಘಕಾಲ ಹೂಡಿಕೆಯನ್ನು ಮುಂದುವರಿಸಿದಾಗ ಮಾತ್ರ ಸಿಗುತ್ತದೆ.
ನಿಮ್ಮ ಹಣಕಾಸಿನ ಗುರಿಗಳು ಮತ್ತು ರಿಸ್ಕ್ ತೆಗೆದುಕೊಳ್ಳುವ ಸಾಮರ್ಥ್ಯಕ್ಕೆ (Risk Appetite) ತಕ್ಕಂತೆ ವಿಸ್ತೃತವಾದ ಅಥವಾ ಫ್ಲೆಕ್ಸಿ ಕ್ಯಾಪ್ ಫಂಡ್‌ಗಳಂತಹ ಗುಣಮಟ್ಟದ ಮ್ಯೂಚುವಲ್ ಫಂಡ್‌ಗಳನ್ನು ಆಯ್ಕೆ ಮಾಡಿ. ನಿಮ್ಮ ಫಂಡ್ಗಳಲ್ಲಿ ಇಂಡೆಕ್ಸ್ ಫಂಡ್, ಫ್ಲೆಕ್ಸಿಕ್ಯಾಪ್ ಫಂಡ್ ಇರುವುದು ಮುಖ್ಯ. ಹಾಗೆಯೇ, ಫಂಡ್ ಆಯ್ಕೆ ಮಾಡುವಾಗ ಅದು ಕನಿಷ್ಠ ಹಿಂದಿನ ಐದು ವರ್ಷದಲ್ಲಿ ಎಷ್ಟು ರಿಟರ್ನ್ಸ್ ಕೊಟ್ಟಿದೆ ಎಂಬುದನ್ನು ಗಮನಿಸುವುದು ಮುಖ್ಯ.
ಇದನ್ನೂ ಓದಿ: ಚೀನಾದ ಡೀಪ್ಸೀಕ್ ಎಐ ಮಾಡಲ್ ಬಳಸಿ ಸೈಬರ್ ದಾಳಿಗಳನ್ನು ನಡೆಸುತ್ತಿರುವ ಹ್ಯಾಕರ್ಗಳು: ಆತಂಕ ಮೂಡಿಸಿದ ವರದಿಗಳು
ಮಾರುಕಟ್ಟೆ ಕುಸಿದಾಗ ಎಸ್‌ಐಪಿ ಹೂಡಿಕೆಯನ್ನು ನಿಲ್ಲಿಸಬಾರದು. ಮಾರುಕಟ್ಟೆ ಇಳಿಕೆಯಾದಾಗ ಕಡಿಮೆ ದರದಲ್ಲಿ ಹೆಚ್ಚು ಯೂನಿಟ್‌ಗಳು (Units) ದೊರೆಯುತ್ತವೆ (Rupee Cost Averaging). ಇದು ದೀರ್ಘಾವಧಿಯಲ್ಲಿ ಸರಾಸರಿ ಹೂಡಿಕೆ ವೆಚ್ಚವನ್ನು ಕಡಿಮೆ ಮಾಡುತ್ತದೆ.
ಪ್ರತಿ ವರ್ಷಕ್ಕೊಮ್ಮೆ ನಿಮ್ಮ ಹೂಡಿಕೆಗಳ ಕಾರ್ಯಕ್ಷಮತೆಯನ್ನು (Performance) ಪರಿಶೀಲಿಸಿ. ಆದರೆ ಅಲ್ಪಾವಧಿಯ ಮಾರುಕಟ್ಟೆ ಬದಲಾವಣೆಗಳಿಗೆ ಹೆಂಚು ಹಾಕಿ ಫಂಡ್‌ಗಳನ್ನು ಪದೇ ಪದೇ ಬದಲಾಯಿಸುವುದು ಸೂಕ್ತವಲ್ಲ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ