ಈ ಟ್ರಿಕ್ಸ್ ನಿಮ್ಮ ಖರ್ಚನ್ನು ಕಡಿಮೆ ಮಾಡಿ ಉಳಿತಾಯ ಹೆಚ್ಚಿಸುತ್ತದೆ
ನಿಮ್ಮ ಭವಿಷ್ಯವನ್ನು ಸುರಕ್ಷಿತಗೊಳಿಸಲು ನಿಮ್ಮ ಮಾಸಿಕ ಆದಾಯ ಹಾಗೂ ಖರ್ಚುಗಳನ್ನು ಸರಿಯಾಗಿ ನಿರ್ವಹಿಸುವುದು ಅತ್ಯಗತ್ಯ. ಅತಿಯಾಗಿ ಖರ್ಚು ಮಾಡುತ್ತಿದ್ದರೆ ನಿಮ್ಮ ಖರ್ಚುಗಳನ್ನು ಕಡಿಮೆ ಮಾಡುವುದು ಒಳಿತು. ಹೌದು, ನೀವು ಮಾಡುವ ಸಣ್ಣ ಪುಟ್ಟ ಖರ್ಚುಗಳನ್ನು ಬರೆದಿಡುವುದು, ಅನಾವಶ್ಯಕ ಖರ್ಚನ್ನು ಕಡಿತಗೊಳಿಸುವುದು ಹಾಗೂ ಬಜೆಟ್ ರೂಪಿಸುವುದು. ಇಂತಹ ಕೆಲ ಈ ಸಲಹೆಗಳನ್ನು ಪಾಲಿಸಿದ್ರೆ ಉಳಿತಾಯ ಮಾಡುವುದು ಸುಲಭ.

ಮುಖ್ಯಾಂಶಗಳು
- ಬ್ಯಾಂಕ್ ಬ್ಯಾಲೆನ್ಸ್ ಸಂಪೂರ್ಣವಾಗಿ ಖಾಲಿಯಾಗಿದ್ರೆ ತಲೆ ಕೆಡುವುದು ಸಹಜ
- ಹೀಗಾಗಿ ಖರ್ಚಗಳ ಜತೆಗೆ ಉಳಿತಾಯಕ್ಕೂ ಗಮನ ಕೊಡುವುದು ಮುಖ್ಯ
- ನಿಮ್ಮ ಖರ್ಚು ಕಡಿಮೆ ಮಾಡಿ ಉಳಿತಾಯಕ್ಕೆ ಈ ಟ್ರಿಕ್ಸ್ ಪಾಲಿಸಿ
ತಿಂಗಳ ಕೊನೆಯಲ್ಲಿ ಒಂದೇ ಒಂದು ರೂಪಾಯಿ ಉಳಿಯಲ್ಲ. ಇದು ಎಷ್ಟೋ ಜನರು ಹೇಳೋ ಮಾತು. ತಿಂಗಳ ಕೊನೆಯಲ್ಲಿ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಸಂಪೂರ್ಣವಾಗಿ ಖಾಲಿಯಾಗಿದ್ರೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ. ಆದಾಯದ ಮೂಲವನ್ನು ಹೆಚ್ಚಿಸುವುದು ಮಾತ್ರವಲ್ಲ, ಅನಗತ್ಯ ಖರ್ಚುಗಳಿಗೆ ಲಗಾಮು ಹಾಕಿ, ಉಳಿತಾಯದತ್ತ (savings) ಗಮನ ಕೊಡುವುದು ಬಹಳ ಮುಖ್ಯ. ಹೀಗೆ ಮಾಡಿದ್ರೆ ನಿಮ್ಮ ಕೈಯಲ್ಲಿ ಹಣ ಉಳಿಯುತ್ತದೆ.
ಖರ್ಚು ಕಡಿಮೆ ಮಾಡಿ ಉಳಿತಾಯಕ್ಕೆ ಇಲ್ಲಿದೆ ಟ್ರಿಕ್ಸ್
ಬಜೆಟ್ ರೂಢಿಸಿಕೊಳ್ಳಿ: ಪ್ರತಿ ತಿಂಗಳ ಆದಾಯಕ್ಕೆ ತಕ್ಕಂತೆ ಬಜೆಟ್ ಸಿದ್ಧಪಡಿಸಿಕೊಳ್ಳಿ. ಇದು ನಿಮ್ಮ ಕೈಯಲ್ಲಿರುವ ಹಣವು ಎಲ್ಲಿ ಹೋಯಿತು, ಯಾವುದಕ್ಕೆ ಎಷ್ಟು ಖರ್ಚು ಆಯ್ತು ಎಂದು ತಿಳಿಯಲು ಸಹಾಯ ಮಾಡುತ್ತದೆ. ವಾರ ಅಥವಾ ತಿಂಗಳಲ್ಲಿ ಯಾವುದಕ್ಕೆ ಎಷ್ಟು ಹಣ ವಿನಿಯೋಗಿಸಬೇಕೆಂಬ ಸಂಪೂರ್ಣ ಮಾಹಿತಿ ಸಿಗುತ್ತದೆ.
ಖರ್ಚುಗಳಿಗೆ ಇರಲಿ ಪ್ರತ್ಯೇಕ ಖಾತೆ: ನಿಮ್ಮ ಸಂಬಳ, ಬಾಡಿಗೆ, ಇಎಂಐ, ಉಳಿತಾಯ ಮತ್ತು ಮನರಂಜನಾ ವೆಚ್ಚಗಳು ಹೀಗೆ ಎಲ್ಲಾ ಹಣವನ್ನು ಒಂದೇ ಖಾತೆಯಲ್ಲಿ ಇಟ್ಟುಕೊಳ್ಳಬೇಡಿ. ಖರ್ಚು ವೆಚ್ಚಗಳಿಗೆಂದೇ ಇಂತಿಷ್ಟು ಹಣವನ್ನು ಎತ್ತಿಡಿ. ಹೀಗೆ ಮಾಡಿದ್ರೆ ಖಾತೆಯಲ್ಲಿ ಇಂತಿಷ್ಟೇ ಹಣ ಇರುತ್ತದೆ.
ಸಂಬಳ ಹೆಚ್ಚಾದರೆ, ಉಳಿತಾಯ ಹೆಚ್ಚಿಸಿ: ಕೆಲವರು ಸಂಬಳ ಹೆಚ್ಚಾದರೂ ಉಳಿತಾಯ ಹೆಚ್ಚಿಸಲ್ಲ. ಆದರೆ ಸಂಬಳದ ಇಂತಿಷ್ಟು ಭಾಗವನ್ನು ಹೂಡಿಕೆ ಮಾಡುವುದು ಉತ್ತಮ. ಇದರಿಂದ ಆದಾಯ ಹೆಚ್ಚಾದ್ದಂತೆಲ್ಲಾ ಖರ್ಚುಗಳು ಹೆಚ್ಚಾಗಲ್ಲ. ಎಸ್ ಐಪಿ ಮತ್ತು ವಿಮಾ ಪ್ರೀಮಿಯಂ, ಹೂಡಿಕೆ ಯೋಜನೆಗಳಿಗೆ ಹಣ ವಿನಿಯೋಗಿಸುವತ್ತ ಗಮನ ಕೊಡಿ.
ಅನಗತ್ಯ ವಸ್ತುಗಳ ಖರೀದಿಗೆ ಇರಲಿ ಲಗಾಮು: ನೀವು ದುಬಾರಿ ಬೆಲೆಯ ವಸ್ತುಗಳನ್ನು ಖರೀದಿಸುತ್ತೀರಿ ಅಂತಾದ್ರೆ ಹತ್ತು ಬಾರಿ ಯೋಚಿಸಿ. ನಿಮಗೆ ಆ ವಸ್ತು ನಿಜವಾಗಿಯೂ ಅಗತ್ಯವಿದೆಯೇ ನೋಡಿ ಖರೀದಿ ಮಾಡಿ. ಈ ಮೂಲಕ ಅನಗತ್ಯ ವಸ್ತುಗಳ ಖರೀದಿಗೆ ಲಗಾಮು ಹಾಕಿ.
ವಾರಕ್ಕೊಮ್ಮೆ ಖರ್ಚುಗಳನ್ನು ಪರಿಶೀಲಿಸಿ: ವಾರದ ಕೊನೆಯಲ್ಲಿ ನಿಮ್ಮ ಖರ್ಚು ವೆಚ್ಚಗಳನ್ನು ಪರಿಶೀಲನೆ ಮಾಡುವುದು ಒಳ್ಳೆಯದು. ಇದು ನಿಮಗೆ ಹಣಕಾಸು ನಿರ್ವಹಣೆಯ ಬಗ್ಗೆ ಐಡಿಯಾ ಸಿಗುತ್ತದೆ. ಇದರಿಂದ ನೀವು ಅನಗತ್ಯ ಖರ್ಚುಗಳನ್ನು ಕಡಿಮೆ ಮಾಡಬಹುದು.
ಇದನ್ನೂ ಓದಿ: ಫಿಕ್ಸೆಡ್ ಡೆಪಾಸಿಟ್; ವಯಸ್ಸಿಗೆ ಅನುಗುಣವಾಗಿ ಠೇವಣಿ ಹೂಡಿಕೆ ನಿಯಮಗಳು; ಅವಿವಾಹಿತರು, ವಿವಾಹಿತರು, ನಿವೃತ್ತರು ಏನು ಮಾಡಬೇಕು?
ತುರ್ತು ನಿಧಿಯಲ್ಲಿ ಸ್ವಲ್ಪ ಹಣವಿರಲಿ: ಕೈಯಲ್ಲಿದ್ದ ಎಲ್ಲ ಹಣವನ್ನು ಉಳಿತಾಯ ಹಾಗೂ ಖರ್ಚು ಮಾಡುವುದು ಸರಿಯಲ್ಲ. ತುರ್ತು ನಿಧಿಗಾಗಿ ಸ್ವಲ್ಪ ಹಣ ಎತ್ತಿಡಿ. ಅನಿರೀಕ್ಷಿತ ವೈದ್ಯಕೀಯ ವೆಚ್ಚಗಳು, ವಾಹನ ದುರಸ್ತಿ ಮತ್ತು ಫೋನ್ ಹಾನಿಯಂತಹ ತುರ್ತು ಪರಿಸ್ಥಿತಿಗಳಿಗಾಗಿ ಹಣವನ್ನು ಇಟ್ಟುಕೊಳ್ಳುವುದು ಉತ್ತಮ. ಇದು ನಿಮ್ಮನ್ನು ತುರ್ತು ಸಂದರ್ಭದಲ್ಲಿ ಪಾರು ಮಾಡುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:47 pm, Tue, 25 August 26




