ಫಿಕ್ಸೆಡ್ ಡೆಪಾಸಿಟ್; ವಯಸ್ಸಿಗೆ ಅನುಗುಣವಾಗಿ ಠೇವಣಿ ಹೂಡಿಕೆ ನಿಯಮಗಳು; ಅವಿವಾಹಿತರು, ವಿವಾಹಿತರು, ನಿವೃತ್ತರು ಏನು ಮಾಡಬೇಕು?
How to invest in Fixed Deposits according to the Age: ಮ್ಯೂಚುವಲ್ ಫಂಡ್ನಂತಹ ಸುಲಭ ಹೂಡಿಕೆ ಸಾಧನಗಳ ಮಧ್ಯೆ ಸಾಂಪ್ರದಾಯಿಕ ಫಿಕ್ಸೆಡ್ ಡೆಪಾಸಿಟ್ ಪ್ಲಾನ್ಗಳು ಈಗಲೂ ತಮ್ಮ ರೆಲಿವೆನ್ಸ್ ಕಳೆದುಕೊಂಡಿಲ್ಲ. ನಿಶ್ಚಿತ ಠೇವಣಿಗಳು ಯಾವುದೇ ವ್ಯಕ್ತಿಯ ಒಂದು ಹೂಡಿಕೆಯ ಭಾಗವಾಗಿ ಇರಬಲ್ಲುವು. ಆದರೆ, ವಯಸ್ಸಿಗೆ ಅನುಗುಣವಾಗಿ ಡೆಪಾಸಿಟ್ ಕ್ರಮದಲ್ಲಿ ಬದಲಾವಣೆ ಮಾಡಿಕೊಳ್ಳುವುದು ಸಮಂಜಸ. ಈ ಬಗ್ಗೆ ಮಾಹಿತಿ ಇಲ್ಲಿದೆ.

ಮುಖ್ಯಾಂಶಗಳು
- ಸಾಂಪ್ರದಾಯಿಕ ಫಿಕ್ಸೆಡ್ ಡೆಪಾಸಿಟ್ ಪ್ಲಾನ್ಗಳು ಈಗಲೂ ತಮ್ಮ ರೆಲಿವೆನ್ಸ್ ಕಳೆದುಕೊಂಡಿಲ್ಲ.
- ನಿಶ್ಚಿತ ಠೇವಣಿಗಳು ಯಾವುದೇ ವ್ಯಕ್ತಿಯ ಒಂದು ಹೂಡಿಕೆಯ ಭಾಗವಾಗಿ ಇರಬಲ್ಲುವು.
- ಆದರೆ, ವಯಸ್ಸಿಗೆ ಅನುಗುಣವಾಗಿ ಡೆಪಾಸಿಟ್ ಕ್ರಮದಲ್ಲಿ ಬದಲಾವಣೆ ಮಾಡಿಕೊಳ್ಳುವುದು ಸಮಂಜಸ.
ಫಿಕ್ಸೆಡ್ ಡೆಪಾಸಿಟ್ (FD – Fixed Deposit) ಎಂದರೆ ಹಣ ಹಾಕುವುದು, ಬಡ್ಡಿ ಗಳಿಸುವುದು ಮತ್ತು ಮೆಚ್ಯೂರಿಟಿ ಅವಧಿಯವರೆಗೆ ಕಾಯುವುದು ಎಂದು ಎಲ್ಲರೂ ಸಾಮಾನ್ಯವಾಗಿ ಭಾವಿಸುತ್ತಾರೆ. ಆದರೆ, ಜೀವನದ ಪ್ರತಿಯೊಂದು ಹಂತದಲ್ಲೂ FD ಉದ್ದೇಶ ಬದಲಾಗುತ್ತದೆ. ಈಕ್ವಿಟಿ ಹೂಡಿಕೆ ಟ್ರೆಂಡ್ಗೆ ಬಂದ ಬಳಿಕ ಎಫ್‌ಡಿ ತನ್ನ ಪ್ರಸ್ತುತತೆಯನ್ನು ಕಳೆದುಕೊಳ್ಳುತ್ತದೆ ಎಂದೇ ಹಲವರು ಭಾವಿಸಿದ್ದರು. ಅದು ಸುಳ್ಳೆಂದು ಸಾಬೀತಾಗಿದೆ. ಈಗಲೂ ಕೂಡ ಜನರು ಠೇವಣಿಗಳಿಂದ ವಿಮುಖರಾಗಿಲ್ಲ. ಹಣಕಾಸು ಪರಿಣಿತರೂ ಕೂಡ ಹೂಡಿಕೆಯಲ್ಲಿ ಎಫ್ಡಿಯೂ ಒಂದು ಭಾಗವಾಗಿರಲಿ ಎಂದೇ ಸಲಹೆ ನೀಡುವುದುಂಟು.
ನಿಶ್ಚಿತ ಠೇವಣಿಯ ನಿಯಮಗಳನ್ನು ಮತ್ತು ಬಳಕೆಯ ಕ್ರಮವನ್ನು ವಯಸ್ಸಿಗೆ ಮತ್ತು ಅವಶ್ಯಕತೆಗೆ ಅನುಗುಣವಾಗಿ ಬದಲಾಯಿಸಿಕೊಂಡರೆ, ಅದರ ಉಪಯೋಗ ಹೆಚ್ಚು ಸಮರ್ಪಕವಾಗಿರುತ್ತದೆ. ಅವಿವಾಹಿತರು, ವಿವಾಹಿತರು ಹಾಗೂ ನಿವೃತ್ತರು ಈ ಎಫ್ಡಿಯನ್ನು ಹೇಗೆ ಬಳಸಿಕೊಂಡರೆ ಉತ್ತಮ ಎನ್ನುವ ಒಂದು ಸಲಹೆ ಈ ಕೆಳಕಂಡಂತಿದೆ:
ಇದನ್ನೂ ಓದಿ: ಚೆಕ್‌ನ ಹಿಂಭಾಗದಲ್ಲಿ ಯಾಕೆ ಸಹಿ ಮಾಡ್ತಾರೆ? ಇದೇ ನೋಡಿ ಕಾರಣ
ಹಿರಿಯ ನಾಗರಿಕರಿಗೆ: ಸುರಕ್ಷತೆ ಮತ್ತು ನಗದೀಕರಣ ಮೊದಲ ಆದ್ಯತೆ
ಹಿರಿಯ ನಾಗರಿಕರಿಗೆ (Senior Citizens) ಹೆಚ್ಚಿನ ಲಾಭ ಗಳಿಸುವುದಕ್ಕಿಂತ ಬಂಡವಾಳದ ಸುರಕ್ಷತೆ ಮತ್ತು ನಿಯಮಿತ ಆದಾಯ ಮುಖ್ಯ.
- ಹೆಚ್ಚಿನ ಬಡ್ಡಿ ದರ: ಬ್ಯಾಂಕುಗಳು ಹಿರಿಯ ನಾಗರಿಕರಿಗೆ ಸಾಮಾನ್ಯ ಗ್ರಾಹಕರಿಗಿಂತ ಹೆಚ್ಚಿನ ಬಡ್ಡಿ ದರವನ್ನು ನೀಡುತ್ತವೆ. ಉದಾಹರಣೆಗೆ, ಎಸ್‌ಬಿಐ ಸಾಮಾನ್ಯ ಗ್ರಾಹಕರಿಗೆ ಶೇ. 6.40 ಬಡ್ಡಿ ನೀಡಿದರೆ, ಹಿರಿಯ ನಾಗರಿಕರಿಗೆ ಶೇ. 6.90 ನೀಡುತ್ತದೆ.
- ಎಫ್‌ಡಿ ಲ್ಯಾಡರಿಂಗ್: ಇಡೀ ಹಣವನ್ನು ಒಂದೇ FD ಯಲ್ಲಿ ಹಾಕುವ ಬದಲು, ಬೇರೆ ಬೇರೆ ಸಮಯದಲ್ಲಿ ಮೆಚ್ಯೂರ್ ಆಗುವಂತೆ ಹಲವು FD ಗಳಲ್ಲಿ ಹೂಡಿಕೆ ಮಾಡುವುದು ಸೂಕ್ತ. ಈ ಕ್ರಮಕ್ಕೆ ಎಫ್‌ಡಿ ಲ್ಯಾಡರಿಂಗ್ (FD Laddering) ಎನ್ನುತ್ತಾರೆ. ಲ್ಯಾಡರಿಂಗ್ ಎಂದರೆ ಏಣಿಯಂತೆ ಹಂತ ಹಂತವಾಗಿ ಹೋಗುವುದು. ಇದರಿಂದ ಯಾವುದೇ ತುರ್ತು ಸಂದರ್ಭದಲ್ಲಿ ಸಂಪೂರ್ಣ ಡೆಪಾಸಿಟ್ ಮುರಿಯುವ ಅಗತ್ಯವಿರುವುದಿಲ್ಲ.
- ನಿಯಮಿತ ಆದಾಯ: ಮಾಸಿಕ ಬಡ್ಡಿ ಪಾವತಿ ಆಯ್ಕೆಯು (Monthly Interest Payout) ಮನೆ ಖರ್ಚುಗಳನ್ನು ಸಾಗಿಸಲು ನೆರವಾಗುತ್ತದೆ.
- ತೆರಿಗೆ ವಿನಾಯಿತಿ: ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80TTB ಅಡಿಯಲ್ಲಿ ಹಿರಿಯ ನಾಗರಿಕರು ₹50,000 ವರೆಗಿನ ಬಡ್ಡಿ ಆದಾಯದ ಮೇಲೆ ತೆರಿಗೆ ವಿನಾಯಿತಿ ಪಡೆಯಬಹುದು.
- ಬ್ಯಾಂಕ್ ಸುರಕ್ಷತೆ: ಒಂದೇ ಬ್ಯಾಂಕಿನಲ್ಲಿ ₹5 ಲಕ್ಷಕ್ಕಿಂತ ಹೆಚ್ಚು ಡೆಪಾಸಿಟ್ ಇಡಬೇಡಿ. DICGC ನಿಯಮದಡಿ ₹5 ಲಕ್ಷದವರೆಗೆ ಮಾತ್ರ ವಿಮೆ ಇರುತ್ತದೆ.
ಯುವ ಹೂಡಿಕೆದಾರರಿಗೆ: ತುರ್ತು ನಿಧಿ ಮತ್ತು ಮನಸ್ಸಿನ ಶಾಂತಿ
20 ರ ಹರೆಯದಲ್ಲಿರುವ ಯುವಕರಿಗೆ (Young Investors) ದೀರ್ಘಾವಧಿಯ ಸಂಪತ್ತು ಸೃಷ್ಟಿಸಲು FD ಯೊಂದೇ ಸೂಕ್ತ ಮಾರ್ಗವಲ್ಲದಿರಬಹುದು. ಆದರೆ ಇದು ತುರ್ತು ನಿಧಿಯಾಗಿ (Emergency Fund) ಕೆಲಸ ಮಾಡುತ್ತದೆ.
- ತುರ್ತು ನಿಧಿ: ಕನಿಷ್ಠ 6 ತಿಂಗಳ ಖರ್ಚಿಗೆ ಬೇಕಾಗುವಷ್ಟು ಹಣವನ್ನು FD ರೂಪದಲ್ಲಿ ಸುರಕ್ಷಿತವಾಗಿಡಬೇಕು.
- ಮಾರುಕಟ್ಟೆಯ ಕುಸಿತದಿಂದ ರಕ್ಷಣೆ: ಶೇರು ಮಾರುಕಟ್ಟೆಗಳು ಕುಸಿದಾಗ, ಭೀತಿಯಿಂದ ಶೇರುಗಳನ್ನು ಮಾರಾಟ ಮಾಡುವುದನ್ನು ತಡೆಯಲು, ಅಥವಾ ತುರ್ತು ಸಂದರ್ಭದಲ್ಲಿ ಈಕ್ವಿಟಿಯಿಂದ ಹೂಡಿಕೆ ಹಿಂಪಡೆಯುವುದನ್ನು ತಡೆಯಲು ಈ ಎಫ್‌ಡಿ ನಿಧಿ ಸಹಾಯ ಮಾಡುತ್ತದೆ.
ಇದನ್ನೂ ಓದಿ: ಹಬ್ಬದ ಸೀಸನ್ನಲ್ಲಿ ಸಕ್ಕರೆ ದುಬಾರಿ; ಒಂದೇ ತಿಂಗಳಲ್ಲಿ ಭರ್ಜರಿ ಏರಿಕೆ ಕಂಡ ಬೆಲೆ; ಏನು ಕಾರಣ?
ಕುಟುಂಬಗಳಿಗೆ: ಹಣಕಾಸಿನ ಗುರಿಗಳಿಗೆ ಅನುಗುಣವಾಗಿ FD
ಕುಟುಂಬಗಳು (Families) ತಮ್ಮ ಹಣವನ್ನು ಒಂದೇ FD ಯಲ್ಲಿ ಇಡುವ ಬದಲು, ನಿರ್ದಿಷ್ಟ ಗುರಿಗಳಿಗೆ (Financial Goals) ವಿಂಗಡಿಸಿ ಹೂಡಿಕೆ ಮಾಡಬೇಕು.
- ಸಮಯಕ್ಕೆ ಸರಿಯಾಗಿ ಮೆಚ್ಯೂರಿಟಿ: ಏಪ್ರಿಲ್‌ನಲ್ಲಿ ಕಟ್ಟಬೇಕಾದ ಶಾಲಾ ಶುಲ್ಕ, ಜುಲೈನಲ್ಲಿ ಕಟ್ಟಬೇಕಾದ ಇನ್ಶೂರೆನ್ಸ್ ಪ್ರೀಮಿಯಂ, ಅಥವಾ 3 ವರ್ಷಗಳ ನಂತರದ ಮನೆ ಮುಂಗಡ ಹಣ — ಪ್ರತಿಯೊಂದಕ್ಕೂ ಬೇರೆ ಬೇರೆ ಅವಧಿಯ FD ಮಾಡಿಕೊಳ್ಳಬೇಕು.
- ಯೋಜಿತ ನಿರ್ಧಾರ: “ಬಡ್ಡಿ ದರ ಎಷ್ಟಿದೆ ಎಂಬುದು ಕೊನೆಯ ಆದ್ಯತೆಯಾಗಬೇಕು, ಹಣಕಾಸಿನ ಉದ್ದೇಶವೇ (Purpose) ಮೊದಲ ಆದ್ಯತೆಯಾಗಬೇಕು” ಎಂದು ಹಣಕಾಸು ತಜ್ಞರು ಸಲಹೆ ನೀಡುತ್ತಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 10:45 am, Mon, 24 August 26




