ಫೋನ್ ಖರೀದಿಸುವ ಮುನ್ನ ಒಮ್ಮೆ ಯೋಚಿಸಿ; ಶೀಘ್ರದಲ್ಲೇ ಬರಲಿವೆ ಈ 4 ಹೊಸ ಸ್ಮಾರ್ಟ್‌ಫೋನ್‌ಗಳು
Upcoming Smartphones 2026: ಹೊಸ ಸ್ಮಾರ್ಟ್‌ಫೋನ್ ಖರೀದಿಸಲು ಕಾಯುತ್ತಿದ್ದೀರಾ? 2026ರ ಕೊನೆಯ ತಿಂಗಳುಗಳಲ್ಲಿ ಐಫೋನ್ ಡ್ಯುವೋ, ಮೊಟೊರೊಲಾ ಸಿಗ್ನೇಚರ್ 27, ಒನ್‌ಪ್ಲಸ್ 16 ಮತ್ತು ಒಪ್ಪೊ ಫೈಂಡ್ ಎಕ್ಸ್10 ಸರಣಿಯಂತಹ ಹೊಸ ಫೋನ್‌ಗಳು ಮಾರುಕಟ್ಟೆಗೆ ಬರಲಿವೆ. ಫೋಲ್ಡೆಬಲ್ ಡಿಸ್‌ಪ್ಲೇ, 200MP ಕ್ಯಾಮೆರಾ, ಹೊಸ ಪ್ರೊಸೆಸರ್ ಮತ್ತು ದೊಡ್ಡ ಬ್ಯಾಟರಿಯಂತಹ ವೈಶಿಷ್ಟ್ಯಗಳು ಗಮನ ಸೆಳೆಯಲಿವೆ.

ಮುಖ್ಯಾಂಶಗಳು
- ಹೊಸ ಫೋನ್ ಖರೀದಿಸುವ ಮುನ್ನ ಈ 4 ಫೋನ್‌ಗಳ ಮೇಲೆ ಕಣ್ಣಿಡಿ!
- ಫೋಲ್ಡೆಬಲ್ ಐಫೋನ್‌ನಿಂದ 200MP ಕ್ಯಾಮೆರಾ ಫೋನ್‌ವರೆಗೆ
- ಶೀಘ್ರದಲ್ಲೇ ಬರಲಿವೆ 4 ಹೊಸ ಮೊಬೈಲ್‌ಗಳು
ಹೊಸ ಸ್ಮಾರ್ಟ್‌ಫೋನ್ (Smartphone) ಖರೀದಿಸುವ ಯೋಜನೆಯಲ್ಲಿದ್ದೀರಾ? ಹಾಗಿದ್ದರೆ ಈಗಲೇ ಫೋನ್ ಖರೀದಿಸುವ ಬದಲು ಇನ್ನೂ ಕೆಲವು ದಿನ ಕಾಯುವುದು ಸೂಕ್ತ. 2026ರ ಕೊನೆಯ ತಿಂಗಳುಗಳಲ್ಲಿ ಹಲವು ಹೊಸ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಬರಲಿವೆ. ಫೋಲ್ಡೆಬಲ್ ಐಫೋನ್‌ನಿಂದ ಹಿಡಿದು ಅತ್ಯಾಧುನಿಕ ಪ್ರೊಸೆಸರ್ ಹೊಂದಿರುವ ಫ್ಲ್ಯಾಗ್‌ಶಿಪ್ ಫೋನ್‌ಗಳವರೆಗೆ ಹಲವು ಮಾದರಿಗಳು ಗ್ರಾಹಕರ ಗಮನ ಸೆಳೆಯಲಿವೆ. ಇವುಗಳಲ್ಲಿ ಕೆಲವು ಫೋನ್‌ಗಳ ಬಿಡುಗಡೆ ದಿನಾಂಕ ಪ್ರಕಟವಾಗಿದ್ದರೆ, ಇನ್ನೂ ಕೆಲವು ಮಾದರಿಗಳ ನಿಖರ ದಿನಾಂಕ ಬಹಿರಂಗವಾಗಿಲ್ಲ.
ಆ್ಯಪಲ್ ಐಫೋನ್ ಡ್ಯುವೋ
ಆ್ಯಪಲ್‌ನ ಮೊದಲ ಫೋಲ್ಡೆಬಲ್ ಐಫೋನ್ ಡ್ಯುವೋ ಅಕ್ಟೋಬರ್ 23ರಂದು ಬಿಡುಗಡೆಯಾಗಲಿದೆ ಎಂದು ವರದಿ ತಿಳಿಸಿದೆ. ಇದರ ಮುಂಗಡ ಬುಕ್ಕಿಂಗ್ ಅಕ್ಟೋಬರ್ 16ರಿಂದ ಆರಂಭವಾಗಲಿದೆ. ಫೋನ್ ಮುಚ್ಚಿದಾಗ 5.4 ಇಂಚಿನ ಹೊರಭಾಗದ ಡಿಸ್‌ಪ್ಲೇ ಇದ್ದು, ತೆರೆದಾಗ 7.6 ಇಂಚಿನ ದೊಡ್ಡ ಪರದೆಯಾಗಿ ಬದಲಾಗುತ್ತದೆ. ಕಾರ್ಯಕ್ಷಮತೆಗಾಗಿ ಎ20 ಪ್ರೊ ಚಿಪ್ ನೀಡಲಾಗಿದ್ದು, ಹಿಂಭಾಗದಲ್ಲಿ 48 ಮೆಗಾಪಿಕ್ಸೆಲ್‌ನ ಎರಡು ಕ್ಯಾಮೆರಾಗಳ ವ್ಯವಸ್ಥೆ ಇರಲಿದೆ. ಫೋನ್‌ನಲ್ಲಿ ಎರಡು ಬ್ಯಾಟರಿಗಳನ್ನು ನೀಡಲಾಗಿದೆ ಎಂದು ವರದಿ ತಿಳಿಸಿದೆ.
ಮೊಟೊರೊಲಾ ಸಿಗ್ನೇಚರ್ 27
ಮೊಟೊರೊಲಾ ಕೂಡ ತನ್ನ ಸಿಗ್ನೇಚರ್ 27 ಸ್ಮಾರ್ಟ್‌ಫೋನ್‌ನ ಮೊದಲ ನೋಟವನ್ನು ಪರಿಚಯಿಸಿದೆ. ಆದರೆ ಇದರ ಬೆಲೆ ಮತ್ತು ನಿಖರ ಬಿಡುಗಡೆ ದಿನಾಂಕವನ್ನು ಕಂಪನಿ ಇನ್ನೂ ಪ್ರಕಟಿಸಿಲ್ಲ. 2026ರ ಅಂತ್ಯದೊಳಗೆ ಜಾಗತಿಕ ಮಾರುಕಟ್ಟೆಗೆ ಫೋನ್ ಬರಲಿದೆ ಎಂದು ಕಂಪನಿ ತಿಳಿಸಿದೆ. ಈ ಫೋನ್‌ನಲ್ಲಿ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಎಕ್ಸ್‌ಟ್ರೀಮ್ ಜೆನ್ 6 ಪ್ರೊಸೆಸರ್ ಇರುವ ನಿರೀಕ್ಷೆಯಿದೆ.
ಒನ್‌ಪ್ಲಸ್ 16
ಒನ್‌ಪ್ಲಸ್ 16ರ ಚೀನಾ ಬಿಡುಗಡೆ ಅಕ್ಟೋಬರ್ 12ರಂದು ನಡೆಯಲಿದೆ ಎಂದು ವರದಿಯಾಗಿದೆ. ಫೋನ್‌ನಲ್ಲಿ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಎಕ್ಸ್‌ಟ್ರೀಮ್ ಜೆನ್ 6 ಚಿಪ್ ಇರುವ ನಿರೀಕ್ಷೆಯಿದೆ. 185Hzವರೆಗೆ ರಿಫ್ರೆಶ್ ದರ ಹೊಂದಿರುವ ಡಿಸ್‌ಪ್ಲೇ ನೀಡಲಾಗುತ್ತದೆ. ಕ್ಯಾಮೆರಾ ವಿಭಾಗದಲ್ಲಿ 200 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 50 ಮೆಗಾಪಿಕ್ಸೆಲ್ ಟೆಲಿಫೋಟೋ ಕ್ಯಾಮೆರಾ ಮತ್ತು 50 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಕ್ಯಾಮೆರಾ ಇರಲಿದೆ.
ಒಪ್ಪೊ ಫೈಂಡ್ ಎಕ್ಸ್10 ಸರಣಿ
ಒಪ್ಪೊ ಫೈಂಡ್ ಎಕ್ಸ್10 ಮತ್ತು ಫೈಂಡ್ ಎಕ್ಸ್10 ಪ್ರೊ ಮ್ಯಾಕ್ಸ್ ಈಗಾಗಲೇ ಚೀನಾದಲ್ಲಿ ಬಿಡುಗಡೆಯಾಗಿವೆ. ಎರಡೂ ಫೋನ್‌ಗಳನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ಪರಿಚಯಿಸುವ ನಿರೀಕ್ಷೆಯಿದ್ದರೂ, ಅದರ ನಿಖರ ದಿನಾಂಕ ಇನ್ನೂ ಪ್ರಕಟವಾಗಿಲ್ಲ. ಫೈಂಡ್ ಎಕ್ಸ್10ನಲ್ಲಿ 6.59 ಇಂಚಿನ ಡಿಸ್‌ಪ್ಲೇ ಇದ್ದರೆ, ಪ್ರೊ ಮ್ಯಾಕ್ಸ್ ಮಾದರಿಯಲ್ಲಿ 6.78 ಇಂಚಿನ ಪರದೆ ಇದೆ. ಎರಡೂ ಫೋನ್‌ಗಳಲ್ಲಿ ಡೈಮೆನ್ಸಿಟಿ 9600 ಪ್ರೊ ಚಿಪ್, 8,000mAh ಸಾಮರ್ಥ್ಯದ ಬ್ಯಾಟರಿ ನೀಡಲಾಗಿದೆ. ಫೈಂಡ್ ಎಕ್ಸ್10ನಲ್ಲಿ ಎರಡು 200 ಮೆಗಾಪಿಕ್ಸೆಲ್ ಕ್ಯಾಮೆರಾಗಳಿದ್ದರೆ, ಪ್ರೊ ಮ್ಯಾಕ್ಸ್‌ನ ಹಿಂಭಾಗದ ಮೂರು ಕ್ಯಾಮೆರಾಗಳೂ 200 ಮೆಗಾಪಿಕ್ಸೆಲ್ ಸಾಮರ್ಥ್ಯ ಹೊಂದಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




