ಬೆಂಗಳೂರು, ಸೆಪ್ಟೆಂಬರ್ 5: ಹಬ್ಬದ ಸೀಸನ್ ಬಂದಿದ್ದು, ಮಾರುಕಟ್ಟೆಗಳು ಗಿಜಿಗಿಜಿಗುಡುತ್ತವೆ. ಇದರಲ್ಲಿ ಇಮಾರುಕಟ್ಟೆಯೂ (e-Commerce) ಹೊರತಲ್ಲ. ಹಬ್ಬದ ಸಂದರ್ಭದಲ್ಲಿ ಇ-ಕಾಮರ್ಸ್ ಮಾರುಕಟ್ಟೆಯಲ್ಲಿ ಹೆಚ್ಚು ವಹಿವಾಟು ನಡೆಯುತ್ತವೆ. ಭಾರತದಲ್ಲಿ ದೇಶೀಯವಾಗಿ ಬೆಳೆದ ಇಕಾಮರ್ಸ್ ಪ್ಲಾಟ್ಫಾರ್ಮ್ ಫ್ಲಿಪ್ಕಾರ್ಟ್ ಈ ಬಾರಿಯ ಹಬ್ಬದ ಸೀಸನ್ಗೆ (Festival season) ಭರ್ಜರಿ ಸಿದ್ಧತೆ ನಡೆಸಿದೆ. ತನ್ನ ಫುಲ್ಫಿಲ್ಮೆಂಟ್ ಸೆಂಟರ್, ಸಾರ್ಟೇಶನ್ ಸೆಂಟರ್ ಮತ್ತು ಡೆಲಿವರಿ ಹಬ್ ಸೇರಿದಂತೆ ತನ್ನ ಸಪ್ಲೈ ಚೈನ್ ವ್ಯವಸ್ಥೆಯಲ್ಲಿ 1 ಲಕ್ಷ ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವ ಗುರಿ ಇಟ್ಟುಕೊಂಡಿದೆ. ಈ ಉದ್ಯೋಗಗಳು ಖಾಯಂ ಆಗಿ ಇರುವುದಿಲ್ಲ. ಹಬ್ಬದ ಸೀಸನ್ನ ಅವಶ್ಯಕತೆಗಳನ್ನು ಪೂರೈಸಲು ಈ ಉದ್ಯೋಗಾವಕಾಶ ಕೊಡುತ್ತಿದೆ ಫ್ಲಿಪ್ಕಾರ್ಟ್.
ಈ ತಾತ್ಕಾಲಿಕ ಸರಬರಾಜು ಸರಪಳಿ ವ್ಯವಸ್ಥೆಯಲ್ಲಿ ಸ್ಥಳೀಯ ದಿನಸಿ ಅಂಗಡಿಗಳ ಡೆಲಿವರಿ ಪಾರ್ಟ್ನರ್ಗಳು, ಮಹಿಳೆಯರು ಮತ್ತು ವಿಶೇಷ ಚೇತನ ವ್ಯಕ್ತಿಗಳು (PWD- Persons With Disablity) ಮೊದಲಾದವರಿಗೆ ಫ್ಲಿಪ್ಕಾರ್ಟ್ ಉದ್ಯೋಗಾವಕಾಶ ಕೊಡಲು ಮುಂದಾಗಿದೆ.
ಇದನ್ನೂ ಓದಿ: ನಜಾರ ಟೆಕ್ನಾಲಜೀಸ್ ಮೇಲೆ ನಿಖಿಲ್ ಕಾಮತ್ 100 ಕೋಟಿ ರೂ ಹೂಡಿಕೆ; ಗೇಮಿಂಗ್ ಕಂಪನಿ ಬಗ್ಗೆ ಕಾಮತ್ಗೆ ಯಾಕೆ ಒಲವು?
ಅಮೇಜಾನ್ಗೆ ನೇರ ಪ್ರತಿಸ್ಪರ್ಧಿಯಾದ ಫ್ಲಿಪ್ಕಾರ್ಟ್ ಈ ಬಾರಿಯ ಹಬ್ಬದ ಸೀಸನ್ಗೆ ಭರ್ಜರಿ ಪ್ಲಾನ್ ಮಾಡಿದೆ. ಟಿಬಿಬಿಡಿ (The Big Billion Days) ಯೋಜನೆ ಹಾಕಿರುವ ಫ್ಲಿಪ್ಕಾರ್ಟ್, ತನ್ನ ಪ್ಲಾಟ್ಫಾರ್ಮ್ನಲ್ಲಿ ದೊಡ್ಡ ಬ್ರ್ಯಾಂಡ್ ಉತ್ಪನ್ನಗಳ ಮೇಲೆ ರಿಯಾಯಿತಿಗಳನ್ನು ಒದಗಿಸಲಿದೆ. ಸ್ಥಳೀಯ ದಿನಸಿ ಅಂಗಡಿಗಳ ಮೂಲಕವೇ ಶೇ. 40ರಷ್ಟು ಉತ್ಪನ್ನಗಳನ್ನು ಗ್ರಾಹಕರಿಗೆ ಸರಬರಾಜು ಮಾಡುವ ಮಹತ್ವಾಕಾಂಕ್ಷಿ ಯೋಜನೆಯನ್ನು ಫ್ಲಿಪ್ ಕಾರ್ಟ್ ಹಮ್ಮಿಕೊಂಡಿದೆ.
‘ಟಿಬಿಬಿಡಿಯ ಅಗತ್ಯತೆಗಳನ್ನು ಪೂರೈಸಬೇಕಾದರೆ ನಮ್ಮ ಸಾಮರ್ಥ್ಯ, ಸಂಗ್ರಹ, ಪ್ಯಾಕೇಜಿಂಗ್, ಮಾನವ ಸಂಪನ್ಮೂಲ, ತರಬೇತಿ, ಡೆಲಿವರಿ, ಇಡೀ ಸಪ್ಲೈ ಚೈನ್ ಇತ್ಯಾದಿ ಎಲ್ಲವನ್ನೂ ದೊಡ್ಡಮಟ್ಟದಲ್ಲಿ ಹೆಚ್ಚಿಸಬೇಕಾಗುತ್ತದೆ’ ಎಂದು ಫ್ಲಿಪ್ಕಾರ್ಟ್ ಗ್ರೂಪ್ನ ಹಿರಿಯ ಉಪಾಧ್ಯಕ್ಷ ಹೇಮಂತ್ ಬದ್ರಿ ಹೇಳುತ್ತಾರೆ.
ಆದರೆ, ಮಹಿಳೆಯರು, ವಿಶೇಷ ಚೇತನರನ್ನು ಈ ಸರಬರಾಜು ವ್ಯವಸ್ಥೆಯಲ್ಲಿ ಹೇಗೆ ಬಳಸಿಕೊಳ್ಳಕೊಳ್ಳಲಾಗುತ್ತದೆ ಎಂಬುದು ಗೊತ್ತಾಗಿಲ್ಲ.
ಇದನ್ನೂ ಓದಿ: ಸಾಲಕ್ಕೆ ಬದಲಾಗಿ ಷೇರುಗಳನ್ನು ಕೊಟ್ಟು ಸ್ಪೈಸ್ಜೆಟ್; ವಿಮಾನ ಗುತ್ತಿಗೆ ನೀಡಿದವರಿಗೆ ಸಿಕ್ಕಲಿದೆ 4.8 ಕೋಟಿ ಷೇರು
ಬೆಂಗಳೂರಿನಲ್ಲಿ ಮುಖ್ಯ ಕಚೇರಿ ಹೊಂದಿರುವ ಫ್ಲಿಪ್ಕಾರ್ಟ್ ಈ ವರ್ಷ ಉತ್ತರಪ್ರದೇಶ, ಗುಜರಾತ್, ಬಿಹಾರ, ಪಂಜಾಬ್, ರಾಜಸ್ಥಾನ, ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳಲ್ಲಿ 19 ಲಕ್ಷ ಚದರ ಅಡಿ ಜಾಗವನ್ನು ಪಡೆದು ಕಾರ್ಯಾಚರಿಸುತ್ತಿದೆ.
ಬೆಂಗಳೂರಿನಲ್ಲಿ ದೇಶೀಯ ಸ್ಟಾರ್ಟಪ್ ಆಗಿ ರೂಪುಗೊಂಡ ಫ್ಲಿಪ್ಕಾರ್ಟ್ ಇದೀಗ ಅಮೆರಿಕದ ರೀಟೇಲ್ ದಿಗ್ಗಜ ವಾಲ್ಮಾರ್ಟ್ನ ಮಾಲಕತ್ವದಲ್ಲಿದೆ. ಫೋನ್ಪೆ ಕೂಡ ಫ್ಲಿಪ್ಕಾರ್ಟ್ನ ಅಂಗಸಂಸ್ಥೆಯಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ