ಗೋಲ್ಡ್ ರಿಸರ್ವ್ಸ್ ಅಥವಾ ಚಿನ್ನದ ನಿಧಿ (gold reserves) ಒಂದು ದೇಶದ ಆರ್ಥಿಕ ಸ್ಥಿರತೆಗೆ (economic stability) ಬಹಳ ಮುಖ್ಯವಾದ ಸಂಪತ್ತಾಗಿದೆ. 19ನೇ ಶತಮಾನದಲ್ಲಿ ಮತ್ತು 20ನೇ ಶತಮಾನದ ಆರಂಭದಲ್ಲಿ ಬಹುತೇಕ ಎಲ್ಲಾ ದೇಶಗಳ ಕರೆನ್ಸಿಗಳ ಮೌಲ್ಯವು ಚಿನ್ನದ ಮೇಲೆ ತಳುಕು ಹಾಕಿಕೊಂಡಿತ್ತು. ಎಪತ್ತರ ದಶಕದಲ್ಲಿ ಚಿನ್ನ ಮತ್ತು ಕರೆನ್ಸಿ ನಡುವಿನ ಬಂಧವನ್ನು ಅಧಿಕೃತವಾಗಿ ತೆಗೆದುಹಾಕಲಾಗಿತ್ತು. ಆದರೂ ಕೂಡ ಎಲ್ಲಾ ದೇಶಗಳು ಚಿನ್ನದ ನಿಧಿ ಶೇಖರಿಸುವ ರೂಢಿಯನ್ನು ಮುಂದುವರಿಸಿವೆ.
ಭಾರತದಲ್ಲಿ ಆರ್ಬಿಐ ಇರುವಂತೆ ಬೇರೆ ಬೇರೆ ದೇಶಗಳಲ್ಲಿ ಸೆಂಟ್ರಲ್ ಬ್ಯಾಂಕುಗಳು ಇರುತ್ತವೆ. ಅವು ಗೋಲ್ಡ್ ರಿಸರ್ವ್ಸ್ ಸಂಗ್ರಹಿಸುತ್ತವೆ. ಆರ್ಥಿಕ ಅನಿಶ್ಚಿತ ಸಂದರ್ಭದಲ್ಲಿ ಈ ಚಿನ್ನದ ಸಂಪತ್ತು ಸಹಾಯಕ್ಕೆ ಬರುತ್ತದೆ. ಒಂದು ದೇಶದ ಸಾಲ ತೀರಿಸುವಿಕೆಯ ಶಕ್ತಿಯನ್ನು ಅಂದಾಜಿಸಲು ಇರುವ ಮಾಪಕಗಳಲ್ಲಿ ಗೋಲ್ಡ್ ರಿಸರ್ವ್ಸ್ ಒಂದು. ಉದಾಹರಣೆಗೆ, ಒಬ್ಬ ವ್ಯಕ್ತಿಯ ಬಳಿ ಚಿನ್ನ ಇದ್ದರೆ ಅದನ್ನು ಅಡಮಾನವಾಗಿ ಇಟ್ಟುಕೊಂಡು ಬ್ಯಾಂಕುಗಳು ಸುಲಭವಾಗಿ ಸಾಲ ನೀಡುತ್ತವೆ. ಅದು ಬಹಳ ಸುರಕ್ಷಿತ ಲೋನ್ ಎಂದು ಪರಿಗಣಿಸಲಾಗುತ್ತದೆ. ಒಂದು ದೇಶದ ಚಿನ್ನದ ಸಂಪತ್ತು (ಆರ್ಬಿಐನ ಗೋಲ್ಡ್ ರಿಸರ್ವ್) ಕೂಡ ಆ ದೇಶದ ಕ್ರೆಡಿಟ್ ಶಕ್ತಿಯನ್ನು ಸೂಚಿಸುತ್ತದೆ.
ಇದನ್ನೂ ಓದಿ: ಅಲರ್ಟ್..! ಇಪಿಎಫ್ಗೆ ಜನ್ಮ ದಿನಾಂಕ ದಾಖಲೆಯಾಗಿ ಆಧಾರ್ ಕಾರ್ಡ್ ಸ್ವೀಕಾರಾರ್ಹ ಅಲ್ಲ; ಯಾವ ದಾಖಲೆಗಳು ಬೇಕು?
ಫೋರ್ಬ್ಸ್ ಪ್ರಕಾರ ಅಮೆರಿಕ ಅತಿ ಹೆಚ್ಚು ಗೋಲ್ಡ್ ರಿಸರ್ವ್ಸ್ ಹೊಂದಿದೆ. ಚಿನ್ನಕ್ಕೆ ಅತಿಯಾಗಿ ಬೇಡಿಕೆ ಇರುವ ಚೀನಾ ಮತ್ತು ಭಾರತ ಗೋಲ್ಡ್ ರಿಸರ್ವ್ಸ್ ಸಂಪತ್ತಿನಲ್ಲಿ ಕ್ರಮವಾಗಿ 6 ಮತ್ತು 9ನೇ ಸ್ಥಾನ ಹೊಂದಿವೆ. ಅತಿಹೆಚ್ಚಿ ಚಿನ್ನ ಸಂಪತ್ತು ಹೊಂದಿರುವ ಜಗತ್ತಿನ 10 ದೇಶಗಳ ಪಟ್ಟಿ ಇಂತಿದೆ:
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ