ನವದೆಹಲಿ, ಆಗಸ್ಟ್ 28: ದೇಶಾದ್ಯಂತ ಹೆಚ್ಚೆಚ್ಚು ಕಡೆ ಉದ್ಯಮ ವಲಯ ವ್ಯಾಪಿಸುವ ಗುರಿಯೊಂದಿಗೆ ಕೇಂದ್ರ ಸರ್ಕಾರದ ಪ್ರಯತ್ನಗಳು ಮುಂದುವರಿದಿವೆ. ಈ ನಿಟ್ಟಿನಲ್ಲಿ 10 ರಾಜ್ಯಗಳಲ್ಲಿ 12 ಹೊಸ ಕೈಗಾರಿಕಾ ನಗರಗಳನ್ನು ಸ್ಥಾಪಿಸುವ ಯೋಜನೆಗೆ ಕೇಂದ್ರ ಸಂಪುಟ ಇಂದು (ಬುಧವಾರ) ಅನುಮೋದನೆ ನೀಡಿದೆ. ಈ ಯೋಜನೆಯಲ್ಲಿ ಒಟ್ಟು 28,602 ಕೋಟಿ ರೂ ಹೂಡಿಕೆ ಆಗುವ ನಿರೀಕ್ಷೆ ಇದೆ.
ಸಂಪುಟ ಸಭೆಯ ಬಳಿಕ ಕೇಂದ್ರ ಸಚಿವ ಡಾ. ಎ ವೈಷ್ಣವ್ ಈ ವಿಚಾರ ತಿಳಿಸಿದರು. 28,602 ಕೋಟಿ ರೂ ಅಂದಾಜು ವೆಚ್ಚದಲ್ಲಿ ನ್ಯಾಷನಲ್ ಇಂಡಸ್ಟ್ರಿಯಲ್ ಕಾರಿಡಾರ್ ಡೆವಲಪ್ಮೆಂಟ್ ಪ್ರೋಗ್ರಾಮ್ ಅಡಿಯಲ್ಲಿ 12 ಹೊಸ ಯೋಜನಾ ಪ್ರಸ್ತಾವಗಳಿಗೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ ಎಂದು ಅವರು ಹೇಳಿದರು.
ಆರು ಪ್ರಮುಖ ಕೈಗಾರಿಕಾ ಕಾರಿಡಾರ್ಗಳಲ್ಲಿ ಈ ಹೊಸ ಇಂಡಸ್ಟ್ರಿಯಲ್ ಸಿಟಿಗಳನ್ನು ನಿರ್ಮಿಸುವ ಪ್ಲಾನ್ ಮಾಡಲಾಗಿದೆ. ಈ 12 ಕೈಗಾರಿಕಾ ನಗರಗಳು ಜಾಗತಿಕ ಗುಣಮಟ್ಟ ಮಾನದಂಡಗಳೊಂದಿಗೆ ಗ್ರೀನ್ಫೀಲ್ಡ್ ಸ್ಮಾರ್ಟ್ಸಿಟಿಗಳಾಗಿ ಅಭಿವೃದ್ಧಿಯಾಗಲಿವೆ. ಭಾರತದ ಉತ್ಪಾದನಾ ಶಕ್ತಿ ಇದರಿಂದ ಹೆಚ್ಚಾಗಲಿದೆ. ತತ್ಪರಿಣಾಮವಾಗಿ ಆರ್ಥಿಕ ಬೆಳವಣಿಗೆಯ ವೇಗಕ್ಕೆ ಇನ್ನಷ್ಟು ಪುಷ್ಟಿ ಸಿಗಲಿದೆ.
ಇದನ್ನೂ ಓದಿ: ಎಂಟು ಸಿಬ್ಬಂದಿ ಇರುವ ಕಂಪನಿ ಐಪಿಒನಲ್ಲಿ ಕೇಳಿದ್ದು 12 ಕೋಟಿ ರೂ, ಜನರು ಕೊಡಲು ಮುಂದಾಗಿದ್ದು 4,800 ಕೋಟಿ ರೂ; ಇದೇನು ಕಥೆ..!
ಮೇಲಿನ ಪಟ್ಟಿಯಲ್ಲಿ 11 ಕೈಗಾರಿಕಾ ನಗರಗಳಿವೆ. 12ನೇ ನಗರದ ಹೆಸರನ್ನು ಬಹಿರಂಗಪಡಿಸಲಾಗಿಲ್ಲ. ಚುನಾವಣಾ ನೀತಿ ಸಂಹಿತೆ ಕಾರಣಕ್ಕೆ ಆ ರಾಜ್ಯದ ಯೋಜನೆಯನ್ನು ಪ್ರಕಟಿಸಿಲ್ಲದಿರುವುದು ತಿಳಿದುಬಂದಿದೆ. ವರದಿ ಪ್ರಕಾರ ಜಮ್ಮು ಕಾಶ್ಮೀರ ಅಥವಾ ಹರ್ಯಾಣ ರಾಜ್ಯದಲ್ಲಿ ಮತ್ತೊಂದು ಇಂಡಸ್ಟ್ರಿಯಲ್ ಸಿಟಿ ನಿರ್ಮಾಣವಾಗಬಹುದು.
ಇದನ್ನೂ ಓದಿ: ಹಣವನ್ನು ಹೀಗೆ ಖರ್ಚು ಮಾಡುತ್ತಿದ್ದರೆ ಆದಾಯ ತೆರಿಗೆ ಇಲಾಖೆ ನೋಟಿಸ್ ನಿಮ್ಮನ್ನು ಹಿಂಬಾಲಿಸುತ್ತದೆ! ಏನದರ ಲೆಕ್ಕಾಚಾರ?
ಈ 12 ಸ್ಮಾರ್ಟ್ ಇಂಡ್ಟ್ರಿಯಲ್ ಸಿಟಿಗಳಲ್ಲಿ ಸ್ಥಾಪನೆಯಾಗುವ ಉದ್ದಿಮೆಗಳಿಂದ 10 ಲಕ್ಷ ನೇರ ಉದ್ಯೋಗ ಮತ್ತು 30 ಲಕ್ಷ ಪರೋಕ್ಷ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ. ಜಾಗತಿಕ ಮ್ಯಾನುಫ್ಯಾಕ್ಚರಿಂಗ್ ವಲಯದ ಬಹಳಷ್ಟು ಕಂಪನಿಗಳು ಭಾರತದತ್ತ ಆಗಮಿಸುತ್ತಿವೆ. ಇವುಗಳಿಗೆ ಸೂಕ್ತವಾದ ಮೂಲಸೌಕರ್ಯ ಮತ್ತು ಸ್ಥಳಾವಕಾಶ ನಿರ್ಮಿಸುವ ಗುರುತರ ಜವಾಬ್ದಾರಿ ಕೇಂದ್ರ ಸರ್ಕಾರದ ಮೇಲಿದೆ. ಈ ನಿಟ್ಟಿನಲ್ಲಿ 12 ಹೊಸ ಕೈಗಾರಿಕಾ ಸ್ಮಾರ್ಟ್ ಸಿಟಿಗಳ ನಿರ್ಮಾಣ ಪ್ರಮುಖ ಹೆಜ್ಜೆಯಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ