ಎಂಟು ಸಿಬ್ಬಂದಿ ಇರುವ ಕಂಪನಿ ಐಪಿಒನಲ್ಲಿ ಕೇಳಿದ್ದು 12 ಕೋಟಿ ರೂ, ಜನರು ಕೊಡಲು ಮುಂದಾಗಿದ್ದು 4,800 ಕೋಟಿ ರೂ; ಇದೇನು ಕಥೆ..!

Resourceful Automobile IPO gets tremendous response: ಬೈಕ್ ಶೋರೂಮ್ ಡೀಲರ್​ಶಿಪ್ ಇರುವ ಒಂದು ಸಣ್ಣ ಕಂಪನಿಯ ಐಪಿಒಗೆ ಜನರು ಮುಗಿಬಿದ್ದು ಅರ್ಜಿ ಸಲ್ಲಿಸಿದ್ದಾರೆ. ದೆಹಲಿಯ ರಿಸೋರ್ಸ್​ಫುಲ್ ಆಟೊಮೊಬೈಲ್ಸ್ ಕಂಪನಿಯ 12 ಕೋಟಿ ರೂ ಮೊತ್ತದ ಐಪಿಒಗೆ 418 ಪಟ್ಟು ಹೆಚ್ಚು ಸಬ್​ಸ್ಕ್ರಿಪ್ಷನ್ ಆಗಿದೆ. ಇವುಗಳ ಒಟ್ಟಾರೆ ಮೌಲ್ಯ 4,800 ಕೋಟಿ ರೂ. ಕೇವಲ ಎಂಟು ಮಂದಿ ಸಿಬ್ಬಂದಿ ಇರುವ ಈ ಕಂಪನಿಯ ಐಪಿಒಗೆ ಈ ಪರಿ ಸ್ಪಂದನೆ ಸಿಕ್ಕಿದ್ದು ಸೋಜಿಗವೇ ಸರಿ.

ಎಂಟು ಸಿಬ್ಬಂದಿ ಇರುವ ಕಂಪನಿ ಐಪಿಒನಲ್ಲಿ ಕೇಳಿದ್ದು 12 ಕೋಟಿ ರೂ, ಜನರು ಕೊಡಲು ಮುಂದಾಗಿದ್ದು 4,800 ಕೋಟಿ ರೂ; ಇದೇನು ಕಥೆ..!
ರಿಸೋರ್ಸ್​ಫುಲ್ ಆಟೊಮೊಬೈಲ್ಸ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 28, 2024 | 10:50 AM

ಮುಂಬೈ, ಆಗಸ್ಟ್ 28: ಭಾರತದಲ್ಲಿ ಷೇರು ಮಾರುಕಟ್ಟೆ ಬಹಳ ಜನರನ್ನು ಸೆಳೆಯುತ್ತಿದೆ. ಮಾರುಕಟ್ಟೆ ಇತ್ತೀಚೆಗೆ ಕುಸಿತ ಕಂಡರೂ ಐಪಿಒಗಳು ಸೂಪರ್ ಹಿಟ್ ಆಗುವುದು ಮುಂದುವರಿದಿದೆ. ಹೊಸ ಹೊಸ ಐಪಿಒಗಳು ನಿರೀಕ್ಷೆಮೀರಿ ಗಳಿಕೆ ಮಾಡುತ್ತಿವೆ. ಪ್ರಾಥಮಿಕ ಮಾರುಕಟ್ಟೆ ಮೂಲಕ ಹೊಸ ಹೊಸ ಕಂಪನಿಗಳು ಮನಬಂದಂತೆ ಬಂಡವಾಳ ಸಂಗ್ರಹಿಸುತ್ತಿರುವಂತೆ ಭಾಸವಾಗುತ್ತಿದೆ. ಈ ಮಧ್ಯೆ ಕೇವಲ ಎರಡು ಬೈಕ್ ಶೋರೂಮ್​ಗಳಿರುವ ಮತ್ತು ಕೇವಲ ಎಂಟು ಸಿಬ್ಬಂದಿ ಮಾತ್ರವೇ ಕೆಲಸ ಮಾಡುವ ಒಂದು ಎಸ್​ಎಂಇ ಕಂಪನಿ ಐಪಿಒದಲ್ಲಿ ಗಲ್ಲಾಪೆಟ್ಟಿಗೆ ಅಲ್ಲಾಡಿಸುತ್ತಿದೆ. ಇದು ನವದೆಹಲಿ ಮೂಲದ ರಿಸೋರ್ಸ್​ಫುಲ್ ಆಟೊಬೈಲ್ಸ್​ನ ಐಪಿಒ ಕಥೆ.

ಸಾವನೀ ಆಟೊಮೊಬೈಲ್ಸ್ ಬ್ರ್ಯಾಂಡ್​ನಲ್ಲಿ ಆಟೊಮೊಬೈಲ್ ಶೂರೂಮುಗಳನ್ನು ನಡೆಸುವ ರಿಸೋರ್ಸ್​ಫುಲ್ ಆಟೊಮೊಬೈಲ್ ಸಂಸ್ಥೆ ಕಳೆದ ವಾರ ಐಪಿಒ ಆಫರ್ ಮಾಡಿತ್ತು. ಆಗಸ್ಟ್ 22ರಿಂದ 26ರವರೆಗೂ ಷೇರುಗಳನ್ನು ಬಿಕರಿ ಮಾಡಲಾಗಿತ್ತು. ಗಮನಿಸಬೇಕಾದ ಸಂಗತಿ ಎಂದರೆ ಈ ಕಂಪನಿಯದ್ದು 11.99 ಕೋಟಿ ರೂ ಮೊತ್ತದ ಐಪಿಒ. ಅಂದರೆ ಈ ಕಂಪನಿ 12 ಕೋಟಿ ರೂ ಬಂಡವಾಳ ಪಡೆಯುವ ಉದ್ದೇಶದಿಂದ ಪ್ರಾಥಮಿಕ ಮಾರುಕಟ್ಟೆಗೆ ಬಂದಿತ್ತು.

ಇದನ್ನೂ ಓದಿ: ಹಣವನ್ನು ಹೀಗೆ ಖರ್ಚು ಮಾಡುತ್ತಿದ್ದರೆ ಆದಾಯ ತೆರಿಗೆ ಇಲಾಖೆ ನೋಟಿಸ್ ನಿಮ್ಮನ್ನು​ ಹಿಂಬಾಲಿಸುತ್ತದೆ! ಏನದರ ಲೆಕ್ಕಾಚಾರ?

ಸುಮಾರು 10.24 ಲಕ್ಷ ಷೇರುಗಳನ್ನು ಖರೀದಿಸಲು ಹೂಡಿಕೆದಾರರು ಮುಗಿಬಿದ್ದಿದ್ದಾರೆ. ಕನಿಷ್ಠ ಹೂಡಿಕೆ ಮೊತ್ತ 1,40,400 ರೂ ಆದರೂ ಹೂಡಿಕೆದಾರರು ಹಿಂದೇಟು ಹಾಕಿಲ್ಲ. ಎರಡೂವರೆ ಲಕ್ಷ ಜನರು ಅಲಾಟ್ಮೆಂಟ್​ಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. 418 ಪಟ್ಟು ಹೆಚ್ಚು ಸಬ್​​ಸ್ಕ್ರಿಪ್ಷನ್ ಆಗಿದೆ. ಅದರಲ್ಲೂ ರೀಟೇಲ್ ಕೆಟಗರಿಯಲ್ಲಿ ಹೆಚ್ಚೂಕಡಿಮೆ 500 ಪಟ್ಟು ಹೆಚ್ಚು ಸಬ್​ಸ್ಕ್ರಿಪ್ಷನ್ ಆಗಿದೆ. ನಾಳೆ ಗುರುವಾರ (ಆ. 29) ಷೇರು ಮಾರುಕಟ್ಟೆಯಲ್ಲಿ ಇದರ ಲಿಸ್ಟಿಂಗ್ ಆಗಲಿದೆ. ಪ್ರತೀ ಷೇರಿಗೆ 117 ರೂ ಬೆಲೆ ಇರುವ ಇದು ಲಿಸ್ಟಿಂಗ್​ನಲ್ಲಿ ಎಷ್ಟು ಬೆಲೆ ಪಡೆದುಕೊಳ್ಳುತ್ತದೆ ಎಂಬುದು ಈಗಲೇ ಕುತೂಹಲ ಮೂಡಿಸಿದೆ.

ವಿಚಿತ್ರ ಎಂದರೆ, ಕೆಲ ರೇಟಿಂಗ್ ಸಂಸ್ಥೆಗಳು ರಿಸೋರ್ಸ್​ಫುಲ್ ಆಟೊಮೊಬೈಲ್ ಸಂಸ್ಥೆಯ ಬಗ್ಗೆ ನೆಗಟಿವ್ ರಿವ್ಯೂ ಕೊಟ್ಟಿವೆ. ಆದರೂ ಕೂಡ ಜನರು ಈ ಎಸ್​ಐಎಂ ಕಂಪನಿಯ ಐಪಿಒದಲ್ಲಿ ಷೇರುಗಳನ್ನು ಬಾಚಿಕೊಳ್ಳಲು ಮುಂದಾಗಿದ್ದಾರೆ.

ಇದನ್ನೂ ಓದಿ: ಒನ್ ಪಾಯಿಂಟ್ ಒನ್ ಸಲ್ಯೂಶನ್ಸ್ ಷೇರು, 4 ವರ್ಷದಲ್ಲಿ 44 ಪಟ್ಟು ಲಾಭ; ಪಕ್ಕಾ ಮಲ್ಟಿಬ್ಯಾಗರ್ ಸ್ಟಾಕು

ದೆಹಲಿಯಲ್ಲಿ ಯಮಾಹ ಬೈಕ್​ಗಳಿಗೆ ಎರಡು ಶೋರೂಮುಗಳನ್ನು ಹೊಂದಿರುವ ಈ ಸಂಸ್ಥೆ ಮುಂದಿನ ದಿನಗಳಲ್ಲಿ ಇನ್ನಷ್ಟು ಶೋರೂಮ್​ಗಳನ್ನು ಸ್ಥಾಪಿಸಲು ಹೊರಟಿದೆ. ಹಾಗೆಯೇ, ತನಗಿರುವ ಕೆಲ ಸಾಲವನ್ನು ತೀರಿಸುವ ಉದ್ದೇಶ ಹೊಂದಿದೆ. ಈ ಕಾರ್ಯಕ್ಕಾಗಿ ತಾನು ಐಪಿಒ ಮೂಲಕ ಬಂಡವಾಳ ಪಡೆಯುತ್ತಿರುವುದಾಗಿ ಹೇಳಿಕೊಂಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ