Personel Finance: ಹಣವನ್ನು ಹೀಗೆ ಖರ್ಚು ಮಾಡುತ್ತಿದ್ದರೆ ಆದಾಯ ತೆರಿಗೆ ಇಲಾಖೆ ನೋಟಿಸ್ ನಿಮ್ಮನ್ನು​ ಹಿಂಬಾಲಿಸುತ್ತದೆ! ಏನದರ ಲೆಕ್ಕಾಚಾರ?

ನಿಮ್ಮ ಖರ್ಚು ಬಾಬತ್ತು ಒಂದು ಮಿತಿ ಮೀರುತ್ತಿದೆ ಎಂದರೆ ಆದಾಯ ತೆರಿಗೆ ಪಾವತಿಸುವುದು ಕಡ್ಡಾಯವಾಗುತ್ತದೆ. ಯಾವುದೇ ಸಬೂಬು ಹೇಳಿದರೂ ಸುಂಕದವನ ಮುಂದೆ ಸುಖ ದುಃಖ ಹೇಳಿಕೊಂಡಂತಾಗುತ್ತದೆ ಅಷ್ಟೆ. ಹಾಗಾಗಿ ನಿಮ್ಮ ಖರ್ಚು ವೆಚ್ಚಗಳ ಮೇಲೆ ನೀವೂ ನಿಗಾ ಇಡುವುದು ನಿಮ್ಮ ಆರ್ಥಿಕ ಆರೋಗ್ಯಕ್ಕೆ ಒಳ್ಳೆಯದು. ಹಾಗಾದರೆ ಬನ್ನೀ ಯಾವುವು ಆ ಖರ್ಚು ಬಾಬತ್ತುಗಳು? ಏನಿದರ ಲೆಕ್ಕಾಚಾರ? ಇಲ್ಲಿ ವಿವರವಾಗಿ ಅರ್ಥೈಸಿಕೊಳ್ಳೋಣ.

Personel Finance: ಹಣವನ್ನು ಹೀಗೆ ಖರ್ಚು ಮಾಡುತ್ತಿದ್ದರೆ ಆದಾಯ ತೆರಿಗೆ ಇಲಾಖೆ ನೋಟಿಸ್ ನಿಮ್ಮನ್ನು​ ಹಿಂಬಾಲಿಸುತ್ತದೆ! ಏನದರ ಲೆಕ್ಕಾಚಾರ?
ಈ 5 ಜಾಗದಲ್ಲಿ ಹಣ ಖರ್ಚು ಮಾಡಿದರೆ ಆದಾಯ ತೆರಿಗೆ ನೋಟಿಸ್​ ಹಿಂಬಾಲಿಸುತ್ತದೆ
Follow us
|

Updated on:Aug 28, 2024 | 9:27 AM

Income tax ಅಂದರೆ ಆದಾಯ ತೆರಿಗೆ ಆಂದರೆ ಸಾಮಾನ್ಯ ಜನತೆಯನ್ನು ಹೆಚ್ಚು ಬಾಧಿಸದು. ಆದರೆ ಅವರಿರುತ್ತಾರಲ್ಲಾ ಧನಿಕರು… ಅವರಿಗೆ ನಿದ್ದೆಯಲ್ಲೂ ಆದಾಯ ತೆರಿಗೆಯ ಭೀತಿ ಕಾಡುತ್ತಿರುತ್ತದೆ. ಇನ್ನೂ ಕಾಲಕ್ಕೆ ತಕ್ಕಂತೆ ಇತ್ತೀಚೆಗೆ ಬಡತನ ಕಡಿಮೆಯಾಗಿ ಸಿರಿತನ ಹೆಚ್ಚಾಗುತ್ತಿರುವ ಈ ಕಾಲದಲ್ಲಿ ಕೊಳ್ಳುಬಾಕ ಸಂಸ್ಕೃತಿ ವಿಪರೀತವೆನಿಸುವಷ್ಟು ಹೆಚ್ಚಾಗಿದೆ. ಜೊತೆಗೆ ಹೂಡಿಕೆಗಳಲ್ಲು ಜನ ನಾಮುಂದು ತಾ ಮುಂದು ಎಂದು ಹಣ ಹೂಡುತ್ತಿದ್ದಾರೆ. ಸರಿಯಾಗಿ ಇದೇ ಸಮಯದಲ್ಲಿ ಆದಾಯ ತೆರಿಗೆ ಇಲಾಖೆ ಟೊಂಕಕಟ್ಟಿ ನಿಂತಿದೆ. ಮಿತಿ ಮೀರಿದ ಆದಾಯದ ಹಣ ಖರ್ಚಾಗುತ್ತಿದೆ ಎಂಬ ಸುಳಿವು ಸಿಕ್ಕರೆ ಮುಲಾಜಿಲ್ಲದೆ ತಕ್ಷಣ ಇಂತಹವರ ಮೇಲೆ ಮುಗಿಬೀಳುತ್ತಿದೆ. ಈ ಹಿಂದೆಯಾಗಿದ್ದರೆ ಆದಾಯ ತೆರಿಕೆ ಇಲಾಖೆಗೆ ತನ್ನದೇ ಮೂಲಗಳು ಕೆಲಸ ಮಾಡುತ್ತಿದ್ದವು. ಮಾಹಿತಿದಾರರೂ ನಿಗಾ ವಹಿಸುತ್ತಿದ್ದರು.

ಆದರೆ ಈಗ ಆ ಕೆಲಸವನ್ನು ಮಾಹಿತಿ ತಂತ್ರಜ್ಞಾನ ಸಾಥ್ ನೀಡುತ್ತಿದೆ. ಅಂದರೆ ಎಲ್ಲ ವ್ಯವಹಾರಗಳು ವೆಬ್​ ಪೋರ್ಟಲ್​​ಗಳ ಮನಿ ಗೇಟ್ ವೇ ಮೂಲಕ ಎಲ್ಲವೂ ದಾಖಲಾಗುತ್ತಿದೆ. ಹಾಗಾಗಿ ನಿಮ್ಮ ಖರ್ಚು ಬಾಬತ್ತು ಒಂದು ಮಿತಿ ಮೀರುತ್ತಿದೆ ಎಂದರೆ ಆದಾಯ ತೆರಿಗೆ ಪಾವತಿಸುವುದು ಕಡ್ಡಾಯವಾಗಿದೆ. ಯಾವುದೇ ಸಬೂಬು ಹೇಳಿದರೂ ಸುಂಕದವನ ಮುಂದೆ ಸುಖ ದುಃಖ ಹೆಳಿಕೊಂಡಂತಾಗುತ್ತದೆ ಅಷ್ಟೆ. ಹಾಗಾಗಿ ನಿಮ್ಮ ಖರ್ಚು ವೆಚ್ಚಗಳ ಮೇಲೆ ನೀವೂ ನಿಗಾ ಇಡುವುದು ನಿಮ್ಮ ಆರ್ಥಿಕ ಆರೋಗ್ಯಕ್ಕೆ ಒಳ್ಳೆಯದು. ಹಾಗಾದರೆ ಬನ್ನೀ ಯಾವುವು ಆ ಖರ್ಚು ಬಾಬತ್ತುಗಳು? ಏನಿದರ ಲೆಕ್ಕಾಚಾರ? ಇಲ್ಲಿ ವಿವರವಾಗಿ ಅರ್ಥೈಸಿಕೊಳ್ಳೋಣ.

ಅಂತರ್ಜಾಲ ಆಧಾರಿತ ಮನಿ ಗೇಟ್ ವೇ ಮೂಲಕ ನಡೆಸುವ ವಹಿವಾಟುಗಳನ್ನು ಆದಾಯ ತೆರಿಗೆ ಇಲಾಖೆ ಪತ್ತೆಹಚ್ಚುವುದು ಕಡಿಮೆ ಎಂಬ ತಪ್ಪು ಕಲ್ಪನೆ ಮನೆ ಮಾಡಿದೆ. ಹಾಗಾಗಿ ಇಂತಹ ನಗದು ರಹಿತ ವಹಿವಾಟುಗಳು ಅರ್ಥ ವ್ಯವಸ್ಥೆಯ ತಳಮಟ್ಟದಲ್ಲಿಯೂ ವ್ಯಾಪಕವಾಗಿ ನಡೆಯುತ್ತಿವೆ. ಆದಾರೆ ಅಂತರ್ಜಾಲದಲ್ಲಿ ವಿಹರಿಸುತ್ತಾ ಇಂತಹ ವಹಿವಾಟುಗಳ ಮೇಲೆ ನಿಗಾ ವಹಿಸುವುದು ಇಲಾಖೆಗೆ ಸುಲಭವಾಗುತ್ತಿದೆ. ಏಕೆಂದರೆ ಬ್ಯಾಂಕ್‌ಗಳು ಮತ್ತು ಇತರ ಹಣಕಾಸು ಸಂಸ್ಥೆಗಳು ನಿಗದಿತ ಮಿತಿ ಮೀರಿದ ವಹಿವಾಟುಗಳ ಕುರಿತು ಆದಾಯ ತೆರಿಗೆ ಇಲಾಖೆಗೆ ಸೂಚಿಸಬೇಕು. ಇದು ಕಾರ್ಡ್ ಪಾವತಿಗಳು, UPI ವಹಿವಾಟುಗಳು, ಹಾಗೆಯೇ ನಗದು ಠೇವಣಿಗಳು ಮತ್ತು ಗೊತ್ತುಪಡಿಸಿದ ಮಿತಿಯನ್ನು ಮೀರಿ ಹಿಂಪಡೆಯುವಿಕೆಗಳನ್ನು ಒಳಗೊಳ್ಳುತ್ತದೆ.

ಇದನ್ನೂ ಓದಿ: Ganesh Chaturthi 2024 – ಗಣೇಶ ಚತುರ್ಥಿ ಈ ಬಾರಿ ಯಾವಾಗ ಆಚರಿಸಲಾಗುತ್ತದೆ? ಮೂರ್ತಿ ಪ್ರತಿಷ್ಠಾಪನೆ-ವಿಸರ್ಜನೆಯ ಸಮಯ, ನಿಯಮ ತಿಳಿಯಿರಿ

ವ್ಯಕ್ತಿ ಅಥವಾ ಸಂಸ್ಥೆಯ ಘೋಷಿತ ಆದಾಯ ಮತ್ತು ಖರ್ಚು ವೆಚ್ಚಗಳ ನಡುವಿನ ಅಸಮಾನತೆಗಳನ್ನು ಪತ್ತೆಹಚ್ಚಲು ಇಲಾಖೆಯು ಸುಧಾರಿತ ಡೇಟಾ ವಿಶ್ಲೇಷಣಾ ಸಾಧನಗಳನ್ನು ( advanced data analytics tools) ಬಳಸಿಕೊಳ್ಳುತ್ತದೆ. ಇದು ವ್ಯಕ್ತಿಗಳ ಸಮಗ್ರ ಆರ್ಥಿಕ ಪ್ರೊಫೈಲ್ ಅನ್ನು ನಿರ್ಮಿಸಲು ಬ್ಯಾಂಕ್ ಸ್ಟೇಟ್‌ಮೆಂಟ್‌ಗಳು, ಆಸ್ತಿ ದಾಖಲೆಗಳು, ಹೂಡಿಕೆ ವಿವರಗಳು ಮತ್ತು ಪ್ರಯಾಣದ ದಾಖಲೆಗಳಂತಹ ವೈವಿಧ್ಯಮಯ ಮೂಲಗಳಿಂದ ಮಾಹಿತಿಯನ್ನು ಕ್ರಾಸ್-ಚೆಕ್ ಮಾಡಬಹುದು. ಇದಲ್ಲದೆ, ಆದಾಯದ ಮೂಲಗಳನ್ನು ಮೌಲ್ಯೀಕರಿಸಲು ಮತ್ತು ಸಂಭವನೀಯ ವ್ಯತ್ಯಾಸಗಳನ್ನು ಗುರುತಿಸಲು ಉದ್ಯೋಗದಾತರು, ಪ್ರಯಾಣ ಏಜೆನ್ಸಿಗಳು ಮತ್ತು ಸ್ಟಾಕ್ ಎಕ್ಸ್​​​ಚೇಂಜ್​​ ಅಂತಹ ಬಾಹ್ಯ ಮೂಲಗಳಿಂದ ಇಲಾಖೆಯು ಮಾಹಿತಿಯನ್ನು ಸಂಗ್ರಹಿಸಬಹುದಾಗಿದೆ.

ಈ ಮಟ್ಟದ ಪರಿಶೀಲನೆಯು ಶಂಕಿತ ತೆರಿಗೆ ವಂಚನೆಯ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಇಲಾಖೆಗೆ ಊರುಗೋಲಾಗಿದೆ. ‘ಮಿತಿಮೀರಿದ’ ವಹಿವಾಟು ಸಾಬೀತುಪಡುತ್ತಿದ್ದಂತೆ ಇಲಾಖೆಯು ಪರಿಶೀಲನೆ/ ಮೌಲ್ಯಮಾಪನಗಳನ್ನು ಪ್ರಾರಂಭಿಸುತ್ತದೆ. ಮುಂದೆ ಸಬಂಧಪಟ್ಟ ವ್ಯಕ್ತಿಗೆ/ ಸಂಸ್ಥೆಗೆ ನೋಟಿಸ್​​​​ ನೀಡಲು ಮತ್ತು ಸಾಕ್ಷ್ಯವನ್ನು ಸಂಗ್ರಹಿಸಲು ಮತ್ತು ತೆರಿಗೆಗಳನ್ನು ಮರುಪಡೆಯಲು ನೇರವಾಗಿ ವಿಚಾರಣೆಗಳನ್ನು ನಡೆಸಲು ಅನುವು ಮಾಡಿಕೊಡುತ್ತದೆ.

ಉಳಿತಾಯ ಖಾತೆಗಳಲ್ಲಿ ದೊಡ್ಡ ಮೊತ್ತವನ್ನು ನಗದು ರೂಪದಲ್ಲಿ ಠೇವಣಿ ಮಾಡುವುದು-Depositing large amounts in cash in savings accounts:

ಒಂದು ವರ್ಷ ಅಥವಾ ಕೆಲವಾರು ಹಣಕಾಸು ವರ್ಷದಲ್ಲಿ ₹ 10 ಲಕ್ಷಕ್ಕಿಂತ ಹೆಚ್ಚಿನ ಮೊತ್ತವನ್ನು ಠೇವಣಿ ಮಾಡುವುದರಿಂದ ಆದಾಯ ತೆರಿಗೆ ಇಲಾಖೆಯ (ITD) ಗಮನ ಸೆಳೆಯುತ್ತದೆ. ನಿಮ್ಮ ಎಲ್ಲಾ ಉಳಿತಾಯ ಖಾತೆಗಳಾದ್ಯಂತ ಒಂದು ಹಣಕಾಸು ವರ್ಷದಲ್ಲಿ (ಏಪ್ರಿಲ್ 01 ರಿಂದ ಮಾರ್ಚ್ 31 ರವರೆಗೆ) ₹10 ಲಕ್ಷವನ್ನು ಮೀರಿದ ಯಾವುದೇ ನಗದು ಠೇವಣಿಯನ್ನು ITD ಗೆ ಆದ್ಯ ಕರ್ತವ್ಯವಾಗಿ ವರದಿ ಮಾಡಬೇಕಾಗುತ್ತದೆ. ಬ್ಯಾಂಕ್‌ಗಳು ಅಂತಹ ವಹಿವಾಟುಗಳನ್ನು ವರದಿ ಮಾಡಬೇಕು ಎಂದು ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ (CBDT) ನಿಯಮಗಳು ತಿಳಿಸುತ್ತದೆ. ಠೇವಣಿಯನ್ನು ನಾನಾ ಖಾತೆಗಳ ನಡುವೆ ವಿಂಗಡಿಸಿದ್ದರೂ ಸಹ, ₹10 ಲಕ್ಷಕ್ಕಿಂತ ಹೆಚ್ಚಿನ ಯಾವುದೇ ಒಟ್ಟು ಸಂಚಿತ ಮೊತ್ತವನ್ನು ಬ್ಯಾಂಕ್​​ಗಳು ಫ್ಲ್ಯಾಗ್ ಮಾಡಿ, CBDT ಸಂಸ್ಥೆಗೆ ಮಾಹಿತಿ ನೀಡುತ್ತದೆ.

₹ 10 ಲಕ್ಷ ಮಿತಿಯನ್ನು ಮೀರುವುದು ತೆರಿಗೆ ವಂಚನೆಯನ್ನು ಅಂತರ್ಗತವಾಗಿ ಸೂಚಿಸುವುದಿಲ್ಲ. ಆದರೆ ಇಲಾಖೆ ಆ ವಹಿವಾಟಿನ ಬಗ್ಗೆ ತ್ವರಿತ ಪರಿಶೀಲನೆಗೆ ಇಳಿಯುತ್ತದೆ. ಠೇವಣಿ ಮಾಡಿರುವ ಹಣದ ಮೂಲವನ್ನು ಇಲಾಖೆಗೆ ವಿವರಿಸುವುದು ಅಗತ್ಯವಾಗುತ್ತದೆ. ಒಂದು ವೇಳೆ ವಿಶೇಷವಾಗಿ ಅದು ನಿಮ್ಮ ಘೋಷಿತ ಆದಾಯದೊಂದಿಗೆ ಹೊಂದಿಕೆಯಾಗದಿದ್ದರೆ, ನೀವು ನೀಡುವ ವಿವರಣೆ ಅತೃಪ್ತಿಕರವೆಂದು ಇಲಾಖೆ ಪರಿಗಣಿಸಿದರೆ ಅಥವಾ ನಿಮ್ಮ ತೆರಿಗೆ ರಿಟರ್ನ್ಸ್‌ನಲ್ಲಿ ವ್ಯತ್ಯಾಸಗಳು ಕಂಡುಬಂದರೆ, ನೀವು ಹೆಚ್ಚುವರಿ ವಿಚಾರಣೆಗಳು ಅಥವಾ ಪೆನಾಲ್ಟಿಗಳನ್ನು ಎದುರಿಸಬೇಕಾಗುತ್ತದೆ.

ITD ಯ ಮೌಲ್ಯಮಾಪನವು ಠೇವಣಿ ಮಾಡಿದ ನಿಧಿಯ ಉದ್ದೇಶಿತ ಬಳಕೆಯಿಂದ ಪ್ರಭಾವಿತವಾಗಿರುತ್ತದೆ. ಉದಾಹರಣೆಗೆ, ವ್ಯವಹಾರದ ಆದಾಯವನ್ನು ವೈಯಕ್ತಿಕ ಖಾತೆಗೆ ಇರಿಸುವುದು ಇಲಾಖೆಯ ಕಾಳಜಿಗೆ ಕಾರಣವಾಗಬಹುದು. ಆದಾಯ ಮೂಲಗಳು, ವೆಚ್ಚಗಳು, ಹೂಡಿಕೆಗಳು ಮತ್ತು ಇತರ ಮಹತ್ವದ ವಹಿವಾಟುಗಳನ್ನು ಒಳಗೊಂಡಿರುವ ನಿಮ್ಮ ಸಮಗ್ರ ಹಣಕಾಸು ಪ್ರೊಫೈಲ್ ಅನ್ನು ITD ಗಣನೆಗೆ ತೆಗೆದುಕೊಳ್ಳುತ್ತದೆ. ಮುಂದೆ ಇಲಾಖೆಯ ಅನುಸರಣೆಯನ್ನು ಪಾಲಿಸುವುದು ಅತ್ಯಗತ್ಯ, ಜಾರಿಕೊಳ್ಳುವಂತಿಲ್ಲ, ಇಲಾಖೆಯನ್ನು ವಂಚಿಸುವಂತಿಲ್ಲ; ನಿಖರವಾದ ದಾಖಲೆಗಳನ್ನು ಸಲ್ಲಿಸುವುದು ಮತ್ತು ನಿಮ್ಮ ಆದಾಯ ಮತ್ತು ವೆಚ್ಚಗಳೊಂದಿಗೆ ನಿಮ್ಮ ತೆರಿಗೆ ರಿಟರ್ನ್ಸ್ ಅನ್ನು ಸರಿ ಜೋಡಿಸುವ ಮೂಲಕ ಇಲಾಖೆಯ ಅನಗತ್ಯ ಪರಿಶೀಲನೆಯನ್ನು ತಡೆಯಲು ನಿರ್ಣಾಯಕವಾಗುತ್ತದೆ.

ನಗದು ಮೂಲಕ ಮಾಡಿದ ಸ್ಥಿರ ಠೇವಣಿ – Fixed deposits made with cash:

ಇತ್ತೀಚಿನ ದಿನಗಳಲ್ಲಿ ಜನ ಸ್ಥಿರ ಠೇವಣಿಗಳತ್ತ (ಎಫ್‌ಡಿ) ಹೆಚ್ಚು ಒಲವು ತೋರುತ್ತಿದ್ದಾರೆ. ಎಫ್‌ಡಿ ಭದ್ತೆ ಮತ್ತು ಉತ್ತಮ ಬಡ್ಡಿ ದರಗಳಿಂದಾಗಿ ಹೂಡಿಕೆದಾರರು, ವಿಶೇಷವಾಗಿ ಸ್ಥಿರ ಮತ್ತು ಆದಾಯದ ಹುಡುಕಾಟದಲ್ಲಿರುವವರಿಗೆ ಇವುಗಳು ಹೆಚ್ಚು ಆಕರ್ಷಕವಾದ ಆಯ್ಕೆಗಳಾಗಿವೆ. ITD ಗೆ ನಗದು ಠೇವಣಿಗಳನ್ನು ವರದಿ ಮಾಡಲು ಅಸ್ತಿತ್ವದಲ್ಲಿರುವ ಮಿತಿಯು ಒಂದು ಹಣಕಾಸು ವರ್ಷದಲ್ಲಿ (ಏಪ್ರಿಲ್ 01 ರಿಂದ ಮಾರ್ಚ್ 31 ರವರೆಗೆ) ₹ 10 ಲಕ್ಷವಾಗಿದೆ. ನೀವು ವಿವಿಧ ಖಾತೆಗಳಲ್ಲಿ ನಗದು ಠೇವಣಿಯನ್ನು ಸಣ್ಣ ಮೊತ್ತಗಳಾಗಿ ವಿಂಗಡಿಸಿದರೂ ಸಹ, ₹10 ಲಕ್ಷಗಳನ್ನು ಮೀರಿದ ಯಾವುದೇ ಸಂಯೋಜಿತ ಮೊತ್ತವನ್ನು ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರಲಾಗುತ್ತದೆ.

ಹಣ ಹೂಡಿಕೆಯು ಮಿತಿಯನ್ನು ಮೀರುವುದು ಅಂತರ್ಗತವಾಗಿ ತೆರಿಗೆ ವಂಚನೆಯನ್ನು ಸೂಚಿಸುವುದಿಲ್ಲ. ಆದರೆ ಇದು ITD ಯ ಗಮನವನ್ನು ಸೆಳೆಯುತ್ತದೆ! ಹಣದ ಮೂಲಕ್ಕೆ ವಿವರಣೆಯ ಅಗತ್ಯವಿರುತ್ತದೆ. ಈ ಪರಿಶೀಲನೆಯು ₹10 ಲಕ್ಷಕ್ಕಿಂತ ಹೆಚ್ಚಿನ ಯಾವುದೇ ಸ್ಥಿರ ಠೇವಣಿಗಳಿಗೆ ಅನ್ವಯಿಸುತ್ತದೆ.

₹10 ಲಕ್ಷ ಮಿತಿಯು ಎಲ್ಲಾ ಖಾತೆಗಳು ಮತ್ತು ಹಣಕಾಸು ಸಂಸ್ಥೆಗಳಾದ್ಯಂತ ನಿಮ್ಮ ಎಫ್‌ಡಿ ಹೋಲ್ಡಿಂಗ್‌ಗಳ ಸಂಚಿತ ಮೌಲ್ಯಕ್ಕೆ ಅನ್ವಯಿಸುತ್ತದೆ. ಕೇವಲ ವೈಯಕ್ತಿಕ ಠೇವಣಿ ಮೊತ್ತಕ್ಕೆ ಮಾತ್ರ ಅನ್ವಯಿಸುವುದಿಲ್ಲ. ನಗದು ಠೇವಣಿಗಳಂತೆಯೇ, ಈ ಮಿತಿಯನ್ನು ಮೀರುವುದು ನಿಧಿಯ ಮೂಲದ ಬಗ್ಗೆ ವಿವರವಾದ ವಿಚಾರಣೆ ನಡೆಸುವುದಕ್ಕೆ ಪ್ರಚೋದಿಸಬಹುದು, ವಿಶೇಷವಾಗಿ ಅದು ನಿಮ್ಮ ಘೋಷಿತ ಆದಾಯದೊಂದಿಗೆ ಹೊಂದಾಣಿಕೆಯಾಗದಿದ್ದರೆ…

ಷೇರುಗಳು, ಮ್ಯೂಚುವಲ್ ಫಂಡ್‌ಗಳು ಮತ್ತು ನಗದು ರೂಪದಲ್ಲಿ ಮಾಡಿದ ಬಾಂಡ್‌ಗಳ ಖರೀದಿಗಳು – Purchases of shares, mutual funds, and bonds made in cash:

ನಗದು ವಹಿವಾಟುಗಳೊಂದಿಗೆ ಬಾಂಡ್‌ಗಳು, ಷೇರುಗಳು, ಮ್ಯೂಚುವಲ್ ಫಂಡ್‌ಗಳು ಮತ್ತು ಡಿಬೆಂಚರ್‌ಗಳಲ್ಲಿ ಹೂಡಿಕೆ ಮಾಡುವುದರಿಂದ ಹೂಡಿಕೆಯು ₹10 ಲಕ್ಷದ ಮಿತಿಯನ್ನು ಮೀರಿದರೆ ಆದಾಯ ತೆರಿಗೆ ನೋಟಿಸ್​​ಗೆ ಕಾರಣವಾಗಬಹುದು. ಮತ್ತೊಂದೆಡೆ, ಡಿಜಿಟಲ್ ವಹಿವಾಟುಗಳು ಹೂಡಿಕೆದಾರರು ಮತ್ತು ITD ಎರಡಕ್ಕೂ ಆನ್‌ಲೈನ್ ಟ್ರಯಲ್ ಗೆ ಅವಕಾಶ ಕಲ್ಪಿಸಿಬಿಡುತ್ತದೆ.

ನಿರ್ದಿಷ್ಟ ಮೊತ್ತದ ಹೂಡಿಕೆ ಮಿತಿಯನ್ನು ಮೀರುವುದು ITD ಯಿಂದ ಪರಿಶೀಲನೆಗೆ ಪ್ರೇರೇಪಿಸಬಹುದು, ಆದರೆ ಇದು ಸ್ವಯಂಚಾಲಿತವಾಗಿ/ ಸ್ವಯಂಪ್ರೇರಿತವಾಗಿ ಇಲಾಖೆ ನೋಟಿಸ್​​ ನೀಡಿದೆ ಎಂದೋ ಅಥವಾ ಹೂಡಿಕೆದಾರ ಯಾವುದೇ ತಪ್ಪನ್ನು ಮಾಡಿದ್ದಾರೆ ಎಂದು ಸೂಚಿಸುವುದಿಲ್ಲ. ಬದಲಿಗೆ, ನಿರ್ದಿಷ್ಟ ಮಿತಿಗಳ ಮೂಲಕ ಹೂಡಿಕೆಯನ್ನು ನಿರುತ್ಸಾಹಗೊಳಿಸುವುದಕ್ಕಿಂತ ಹೆಚ್ಚಾಗಿ, ಘೋಷಿತ ಆದಾಯ ಮತ್ತು ವೆಚ್ಚಗಳ ನಡುವಿನ ಅಸಂಗ ವ್ಯತ್ಯಾಸವನ್ನು ಗುರುತಿಸುವಲ್ಲಿ ITD ಒತ್ತು ನೀಡುತ್ತದೆ ಎಂಬುದು ಸ್ವಾಗತಾರ್ಹ ಸಂಗತಿಯಾಗಿದೆ.

ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ನಗದು ರೂಪದಲ್ಲಿ ಮರುಪಾವತಿ ಮಾಡುವುದು-Repaying credit card bill in cash:

ನೀವು ತೆಗೆದುಕೊಂಡಿರುವ ಕ್ರೆಡಿಟ್ ಕಾರ್ಡ್ ಸಾಲ ಮರುಪಾವತಿಸುವುದಕ್ಕೆ ಇಲಾಖೆಯು ಸ್ವಯಂಚಾಲಿತ ಪರಿಶೀಲನೆಯನ್ನು ಕಡ್ಡಾಯಗೊಳಿಸಿಲ್ಲ. ಆದಾಗ್ಯೂ, ₹1 ಲಕ್ಷಕ್ಕಿಂತ ಹೆಚ್ಚಿನ ಮಾಸಿಕ ಕ್ರೆಡಿಟ್ ಕಾರ್ಡ್ ಬಿಲ್‌ಗೆ ನೀವು ನಗದು ಪಾವತಿ ಮಾಡಿದರೆ, ಇಲಾಖೆಯು ಸ್ವಯಂಚಾಲಿತವಾಗಿ ಹಣದ ಮೂಲದ ಬಗ್ಗೆ ಮಾಹಿತಿಯನ್ನು ಪಡೆಯುತ್ತದೆ.

ಇದನ್ನೂ ಓದಿ: Krishna janmashtami-Saligrama Pooja -ಜನ್ಮಾಷ್ಟಮಿ ದಿನ ಸಾಲಿಗ್ರಾಮ ಪೂಜೆ ಮಾಡುವುದರಿಂದ ಆಗುವ ಲಾಭಗಳೇನು, ಪೂಜೆಯ ವಿಧಾನ ಹೇಗೆ?

ಯಾವುದೇ ಹೆಚ್ಚಿನ-ಮೌಲ್ಯದ ವಹಿವಾಟು ನಡೆದಾಗ ಅಂತಹ ನಗದು ಪಾವತಿಗಳು ನಿಗದಿತ ಮಿತಿಯನ್ನು ಮೀರಿದ್ದರೆ ITD ಇಲಾಖೆಯು ಸಾಮಾನ್ಯ ಪರಿಶೀಲನೆಯನ್ನು ಪ್ರಾರಂಭಿಸಬಹುದು. ನಿಮ್ಮ ಘೋಷಿತ ಆದಾಯ ಮತ್ತು ವೆಚ್ಚಗಳ ನಡುವಿನ ಸಂಭವನೀಯ ಅಸಮಾನತೆಗಳನ್ನು ಬಹಿರಂಗಪಡಿಸಲು ಈ ವ್ಯವಸ್ಥೆ/ ಪರೀಕ್ಷೆಯನ್ನು ವಿನ್ಯಾಸಗೊಳಿಸಲಾಗಿದೆ. ಹಾಗಾಗಿ ಯಾವುದೇ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಗಳ ಮೇಲೆ ನಿರ್ದಿಷ್ಟವಾಗಿ ಗಮನಹರಿಸಿಲ್ಲ ಎಂಬುದನ್ನು ಮನಗಾಣಬೇಕು.

ಆಸ್ತಿಗಳಿಗೆ ಸಂಬಂಧಿಸಿದ ನಗದು ಪಾವತಿಗಳು -Cash payments related to properties:

ಭಾರತದಲ್ಲಿ, ₹30 ಲಕ್ಷಕ್ಕಿಂತ ಹೆಚ್ಚು ಮೌಲ್ಯದ ಆಸ್ತಿಯನ್ನು ಗಳಿಸುವಾಗ, ಖರೀದಿಗಾಗಿ ಬಳಸಲಾದ ನಿಧಿಯ ಮೂಲವನ್ನು ಖರೀದಿದಾರರು ಬಹಿರಂಗಪಡಿಸುವುದು ITD ನಿಯಮದ ಪ್ರಕಾರ ಕಡ್ಡಾಯವಾಗಿದೆ. ತೆರಿಗೆ ವಂಚನೆಯನ್ನು ತಡೆಗಟ್ಟಲು ಮತ್ತು ಅಕ್ರಮ ಹಣ ವರ್ಗಾವಣೆ ಚಟುವಟಿಕೆಗಳನ್ನು ತಡೆಯಲು ಈ ಕ್ರಮವನ್ನು ಜಾರಿಗೊಳಿಸಲಾಗಿದೆ.

ಆಸ್ತಿ ಖರೀದಿಗಾಗಿ ತೊಡಗಿಸುವ ಹಣದ ಮೂಲವನ್ನು ಕಡ್ಡಾಯವಾಗಿ ಘೋಷಿಸಬೆಕು. ಇದಕ್ಕೆ ಅಸ್ತಿತ್ವದಲ್ಲಿರುವ ITD ಮಿತಿಯು ನಗರ ಪ್ರದೇಶಗಳಲ್ಲಿ ಆಸ್ತಿ ಸ್ವಾಧೀನಕ್ಕೆ ₹ 50 ಲಕ್ಷಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ₹ 20 ಲಕ್ಷಗಳು. ಇದರ ಹೊರತಾಗಿ ಕೆಲವು ರಾಜ್ಯಗಳು ಹೆಚ್ಚು ಕಟ್ಟುನಿಟ್ಟಾದ ಮಿತಿಗಳನ್ನು ಜಾರಿಗೊಳಿಸಬಹುದು. ಆದ್ದರಿಂದ ನಿಮ್ಮ ಪ್ರದೇಶದಲ್ಲಿ ಅನ್ವಯವಾಗುವ ನಿರ್ದಿಷ್ಟ ನಿಯಮಾವಳಿಗಳನ್ನು ಪರಿಶೀಲಿಸುವುದು ಉತ್ತಮ.

ಆಸ್ತಿ ನೋಂದಣಿ ದಾಖಲೆಗಳಲ್ಲಿ ಸೇರ್ಪಡೆ ಮಾಡುವ ಮೂಲಕ ಅಥವಾ ITD ಇಲಾಖೆಗೆ ಫಾರ್ಮ್ 26QB ಸಲ್ಲಿಸುವ ಮೂಲಕ ಹಣದ ಮೂಲವನ್ನು ಘೋಷಿಸಲು ನಿಮಗೆ ಆಯ್ಕೆ ನೀಡಲಾಗಿದೆ. ಆಸ್ತಿ ಖರೀದಿ ಮೌಲ್ಯವು ಮಿತಿಗಿಂತ ಕೆಳಗಿದ್ದರೂ ಸಹ, ನಿಮ್ಮ ಆದಾಯ ಅಥವಾ ಇತರ ವಹಿವಾಟುಗಳಲ್ಲಿ ವ್ಯತ್ಯಾಸಗಳ ಅನುಮಾನಗಳಿದ್ದಲ್ಲಿ ನಿಧಿಯ ಮೂಲವನ್ನು ಕೋರುವ ಅಧಿಕಾರವನ್ನು ಇಲಾಖೆಯು ಹೊಂದಿದೆ ಎಂಬುದನ್ನು ಮುಖ್ಯವಾಗಿ ಗಮನಿಸಿ. ಒಂದು ವೇಳೆ ನಿಧಿಯ ಮೂಲವನ್ನು ಘೋಷಿಸಲು ನೀವು ನಿರ್ಲಕ್ಷಿಸಿದ್ದೇ ಆದಲ್ಲಿ ಪೆನಾಲ್ಟಿಗಳು, ತೆರಿಗೆ ಮೌಲ್ಯಮಾಪನಗಳು ಮತ್ತು ಸಂಭಾವ್ಯ ತನಿಖೆಗಳಿಗೆ ದಾರಿ ಮಾಡಿಕೊಟ್ಟಂತಾಗುತ್ತದೆ.

ಇದನ್ನೂ ಓದಿ: Lateral Entry Circus – ಏನಿದು ಲ್ಯಾಟರಲ್ ಎಂಟ್ರಿ? ನೆಹರೂವಿನಿಂದ ಹಿಡಿದು ಕಾಂಗ್ರೆಸ್ ಮಾಡಿಕೊಂಡು ಬಂದಿದ್ದೇನು? ವೀರಪ್ಪ ಮೊಯ್ಲಿ ತಂದ ಸುಧಾರಣೆಯೇ ಬೇಡವಾಯಿತೇ?

ಹೆಚ್ಚಿನ ಮೌಲ್ಯದ ನಗದು ವಹಿವಾಟುಗಳಿಗೆ ಸಂಬಂಧಿಸಿದ ITD ನೋಟಿಸ್​ ಅನ್ನು ಇತ್ಯರ್ಥ ಪಡಿಸಿಕೊಳ್ಳಲು, ಹಣದ ಮೂಲದ ಬಗ್ಗೆ ನಿಮ್ಮ ಸಮರ್ಥನೆಯನ್ನು ದೃಢೀಕರಿಸುವ ಸಾಕಷ್ಟು ದಾಖಲೆಗಳನ್ನು ಹೊಂದಿರುವುದು ಅತ್ಯಗತ್ಯ. ಈ ದಸ್ತಾವೇಜನ್ನು ಬ್ಯಾಂಕ್ ಸ್ಟೇಟ್‌ಮೆಂಟ್‌ಗಳು, ಹೂಡಿಕೆ ದಾಖಲೆಗಳು ಅಥವಾ ಪಿತ್ರಾರ್ಜಿತ ದಾಖಲೆಗಳನ್ನು ಒಳಗೊಂಡಿರಬಹುದು.

ನಿಧಿಯ ಮೂಲದ ಘೋಷಣೆಗೆ ಸಂಬಂಧಿಸಿದಂತೆ ನೀವು ಅನಿಶ್ಚಿತ ಸ್ಥಿತಿಯಲ್ಲಿದ್ದರೆ ಅಥವಾ ಆತಂಕ ಹೊಂದಿದ್ದರೆ, ವೈಯಕ್ತಿಕ ಮಾರ್ಗದರ್ಶನಕ್ಕಾಗಿ ಅರ್ಹ ತೆರಿಗೆ ಸಲಹೆಗಾರರಿಂದ ಸಲಹೆ ಪಡೆಯುವುದು ಸೂಕ್ತವಾಗಿದೆ. ಪಾರದರ್ಶಕತೆಯನ್ನು ಎತ್ತಿಹಿಡಿಯುವುದು ಮತ್ತು ತೆರಿಗೆ ನಿಯಮಗಳಿಗೆ ಬದ್ಧವಾಗಿರುವುದು ವಿವೇಕಯುತ ಹಣಕಾಸು ನಿರ್ವಹಣೆಗೆ ಮತ್ತು ಸಂಭಾವ್ಯ ಕಾನೂನು ತೊಡಕುಗಳನ್ನು ತಗ್ಗಿಸಲು ಅತ್ಯಗತ್ಯ.

ಮತ್ತಷ್ಟು ಪ್ರೀಮಿಯಂ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:18 am, Wed, 28 August 24

ತಿರುಮಲ ದೇವಾಲಯದಲ್ಲಿನ ವಿಮಾನ ವೆಂಕಟೇಶ್ವರನ ಮಹತ್ವ ತಿಳಿಯಿರಿ
ತಿರುಮಲ ದೇವಾಲಯದಲ್ಲಿನ ವಿಮಾನ ವೆಂಕಟೇಶ್ವರನ ಮಹತ್ವ ತಿಳಿಯಿರಿ
ಈ ರಾಶಿಯವರು ಆಸ್ತಿಯ ವಿಚಾರವಾಗಿ ಕಾನೂನು ಹೋರಾಟ ಮಾಡಲಿದ್ದೀರಿ
ಈ ರಾಶಿಯವರು ಆಸ್ತಿಯ ವಿಚಾರವಾಗಿ ಕಾನೂನು ಹೋರಾಟ ಮಾಡಲಿದ್ದೀರಿ
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
‘ನನಗೂ ಕೆಟ್ಟ ಅನುಭವ ಆಗಿದೆ’; ನೀತು ಶೆಟ್ಟಿ ನೇರ ಮಾತು
‘ನನಗೂ ಕೆಟ್ಟ ಅನುಭವ ಆಗಿದೆ’; ನೀತು ಶೆಟ್ಟಿ ನೇರ ಮಾತು
ಚಿತ್ರದುರ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ
ಚಿತ್ರದುರ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ
4,4,4,4,4... ಒಂದೇ ಓವರ್​ನಲ್ಲಿ 5 ಬೌಂಡರಿ ಬಾರಿಸಿದ ಬಾಬರ್ ಆಝಂ
4,4,4,4,4... ಒಂದೇ ಓವರ್​ನಲ್ಲಿ 5 ಬೌಂಡರಿ ಬಾರಿಸಿದ ಬಾಬರ್ ಆಝಂ
ನಾಗಮಂಗಲ ಗಲಭೆ: ಬಿಜೆಪಿ ನಾಯಕ ಅಶ್ವತ್ಥನಾರಾಯಣ ಹೇಳಿದ್ದೇನು ನೋಡಿ
ನಾಗಮಂಗಲ ಗಲಭೆ: ಬಿಜೆಪಿ ನಾಯಕ ಅಶ್ವತ್ಥನಾರಾಯಣ ಹೇಳಿದ್ದೇನು ನೋಡಿ