Lateral Entry Circus: ಏನಿದು ಲ್ಯಾಟರಲ್ ಎಂಟ್ರಿ? ನೆಹರೂವಿನಿಂದ ಹಿಡಿದು ಕಾಂಗ್ರೆಸ್ ಮಾಡಿಕೊಂಡು ಬಂದಿದ್ದೇನು? ವೀರಪ್ಪ ಮೊಯ್ಲಿ ತಂದ ಸುಧಾರಣೆಯೇ ಬೇಡವಾಯಿತೇ?
ಭಾರತದ ಆಡಳಿತಶಾಹಿಗೆ ಅನಾದಿಕಾಲದಿಂದಲೂ ಕೌಟಿಲ್ಯನ ಅರ್ಥಶಾಸ್ತ್ರ ಭದ್ರಬುನಾದಿ ಆಗಿದೆ. ಕಾಯಕವೇ ಕೈಲಾಸ ಎಂದ ಜಗಜ್ಯೋತಿ ಬಸವಣ್ಣನವರೂ ಸಹ ಕಾರ್ಯಂಗಕ್ಕೆ ಸ್ಪಷ್ಟ ದಿಕ್ಕುದೆಸೆ ಕಲ್ಪಿಸಿದವರು. ಅದರ ಮುಂದುವರಿದ ಭಾಗವಾಗಿ ಈಗಿನ ಚಾಣಕ್ಯರು ಬ್ರಿಟಿಷರ ಕಾಲದ ಕಾರ್ಯಾಂಗಕ್ಕೆ ತುಸು ಮಾರ್ಪಾಡು ತಂದು ಕಾಲಕ್ಕೆ ತಕ್ಕಂತೆ ಅದಕ್ಕೆ ನೀರೆರೆಯುವ ಕೆಲಸವನ್ನು ಮಾಡಿದರು. ಆದರೆ ಬ್ರಿಟಿಷ್ ಅಧಿಪತ್ಯದ ನಂತರದ ಅಧಿಕಾರಶಾಹಿಯನ್ನು ಗುತ್ತಿಗೆ ತೆಗೆದುಕೊಂಡಿದ್ದ ಕಾಂಗ್ರೆಸ್ ಪಕ್ಷ ಕಾರ್ಯಾಂಗವನ್ನು ಹೇಗೆ 'ಪೋಷಿಸಿಕೊಂಡು' ಬಂದಿತ್ತು, ಮತ್ತು ಈಗ ಅದಕ್ಕೆ ಯಾಕೆ ವಿರೋಧ ವ್ಯಕ್ತಪಡಿಸುತ್ತಿದೆ ಎಂಬುದನ್ನು ಇಲ್ಲಿ ವಿಶಾಲವಾಗಿ ಚಿತ್ರಿಸಲಾಗಿದೆ.

ಭಾರತದ ಆಡಳಿತಶಾಹಿಗೆ ಅನಾದಿಕಾಲದಿಂದಲೂ ಕೌಟಿಲ್ಯನ ಅರ್ಥಶಾಸ್ತ್ರ ಭದ್ರಬುನಾದಿ ಆಗಿದೆ. ಕಾಯಕವೇ ಕೈಲಾಸ ಎಂದ ಜಗಜ್ಯೋತಿ ಬಸವಣ್ಣನವರೂ ಸಹ ಕಾರ್ಯಂಗಕ್ಕೆ ಸ್ಪಷ್ಟ ದಿಕ್ಕುದೆಸೆ ಕಲ್ಪಿಸಿದವರು. ಅದರ ಮುಂದುವರಿದ ಭಾಗವಾಗಿ ಈಗಿನ ಚಾಣಕ್ಯರು ಬ್ರಿಟಿಷರ ಕಾಲದ ಕಾರ್ಯಾಂಗಕ್ಕೆ ತುಸು ಮಾರ್ಪಾಡು ತಂದು ಕಾಲಕ್ಕೆ ತಕ್ಕಂತೆ ಅದಕ್ಕೆ ನೀರೆರೆಯುವ ಕೆಲಸವನ್ನು ಮಾಡಿದರು. ಆದರೆ ಬ್ರಿಟಿಷ್ ಅಧಿಪತ್ಯದ ನಂತರದ ಅಧಿಕಾರಶಾಹಿಯನ್ನು ಗುತ್ತಿಗೆ ತೆಗೆದುಕೊಂಡಿದ್ದ ಕಾಂಗ್ರೆಸ್ ಪಕ್ಷ ಕಾರ್ಯಾಂಗವನ್ನು ಹೇಗೆ ‘ಪೋಷಿಸಿಕೊಂಡು’ ಬಂದಿತ್ತು, ಮತ್ತು ಈಗ ಅದಕ್ಕೆ ಯಾಕೆ ವಿರೋಧ ವ್ಯಕ್ತಪಡಿಸುತ್ತಿದೆ ಎಂಬುದನ್ನು ಇಲ್ಲಿ ವಿಶಾಲವಾಗಿ ಚಿತ್ರಿಸಲಾಗಿದೆ. ಭಾರತದ ಆಡಳಿತರಂಗಕ್ಕೆ ಕಾಲಕ್ಕೆ ತಕ್ಕಂತೆ ಕಾರ್ಪೊರೇಟ್ ಕಲ್ಚರ್ ತರಲು, ವೃತ್ತಿಪರತೆ ತುಂಬಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಈ ಹಿಂದೆ ಪಣತೊಟ್ಟಿತು. ಆ ಪಯತ್ನದ ಮುಂದುವರಿದ ಭಾಗವಾಗಿ ಇತ್ತೀಚೆಗೆ ಕೇಂದ್ರ ಸರ್ಕಾರದಲ್ಲಿ ಕೆಲವು ಉನ್ನತಮಟ್ಟದ, ಆಯಕಟ್ಟಿನ ಸ್ಥಾನಗಳನ್ನು ತುಂಬಲು ಸರ್ಕಾರಿ ವ್ಯವಸ್ಥೆಯಿಂದ ಹೊರಬಂದು ವೃತ್ತಿ ಪರಿಣತರನ್ನು ನೇಮಕ ಮಾಡಿಕೊಳ್ಳಲು ಪ್ರಧಾನಿ ಮೋದಿ ಸರ್ಕಾರ ಕೇಂದ್ರ ಲೋಕಸೇವಾ ಆಯೋಗದ (UPSC) ಮೂಲಕ ಜಾಹೀರಾತು ಹೊರಡಿಸಿತು. ತನ್ಮೂಲಕ ಅಧಿಕಾರಶಾಹಿಯಲ್ಲಿ ಲ್ಯಾಟರಲ್ ಎಂಟ್ರಿಗೆ ಅಧಿಕೃತ ಮುದ್ರೆಯೊತ್ತಿತು. ಯುಪಿಎಸ್‌ಸಿ ಸಂಸ್ಥೆಯು ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳಲ್ಲಿ ಜಂಟಿ ಕಾರ್ಯದರ್ಶಿ ಮತ್ತು ನಿರ್ದೇಶಕರ ಮಟ್ಟದ 45 ಹುದ್ದೆಗಳನ್ನು ಲ್ಯಾಟರಲ್ ಆಯ್ಕೆ ಮೂಲಕ ಭರ್ತಿ ಮಾಡಿಕೊಳ್ಳುವುದಾಗಿ ಘೋಷಿಸಿತು. ಪ್ರಧಾನಿ ನರೇಂದ್ರ ಮೋದಿ ನೃತೃತ್ವದ ಎನ್‌ಡಿಎ ಸರ್ಕಾರವು ತನ್ನ ಹಿಂದಿನ ಆಡಳಿತಾವಾಧಿಯಲ್ಲಿ (2014 ಮತ್ತು 2019) ಲ್ಯಾಟರಲ್ ಎಂಟ್ರಿ ಮೂಲಕ ಇಲ್ಲಿಯವರೆಗೆ ಡೊಮೇನ್ ಪರಿಣತಿಯನ್ನು ಹೊಂದಿರುವ 60 ಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳುವಲ್ಲಿ...
Published On - 2:36 pm, Thu, 22 August 24