ಕಣ್ಣೀರಿಡುತ್ತ ಹಣೆಗೆ ಮುತ್ತಿಟ್ಟು ಕಣ್ಣೀರಿಂದಲೇ ಅಣ್ಣನ ಪಾದ ತೊಳೆದ ರಾಕೇಶ್ ಪೂಜಾರಿ ಸಹೋದರಿ
ರಾಕೇಶ್ ಪೂಜಾರಿಯವರ ಅಂತಿಮ ದರ್ಶನಕ್ಕೆ ಸ್ನೇಹಿತರು, ಅಭಿಮಾನಿಗಳು ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಕಾಮಿಡಿ ಕಿಲಾಡಿಗಳು ಅವರಿಗೆ ಜನಪ್ರಿಯತೆ ನೀಡಿದ್ದು ನಿಜವಾದರೂ ತಮ್ಮ ವಿಭಿನ್ನ ಪ್ರತಿಭೆ ಮೂಲಕ ರಾಕೇಶ್ ಕನ್ನಡ ಮತ್ತು ತುಳು ಚಿತ್ರರಂಗದಲ್ಲಿ ಛಾಪು ಮೂಡಿಸಿದ್ದರು. ಅಗಲಿದ ನಟನ ಅಂತ್ಯಕ್ರಿಯೆ ಇಂದು ಮಧ್ಯಾಹ್ನ ಸ್ವಗ್ರಾಮ ನಿಟ್ಟೆಯಲ್ಲಿ ನಡೆಯಲಿದೆ.
ಉಡುಪಿ, ಮೇ 12: ರಿಯಾಲಿಟಿ ಶೋ ವಿನ್ನರ್, ಸಿನಿಮಾ ಮತ್ತು ಕಿರುತೆರೆಯ ನಟನೂ (Sandalwood and TV actor) ಆಗಿದ್ದ ರಾಕೇಶ್ ಪೂಜಾರಿಯವರ ಅಕಾಲಿಕ ಸಾವು ಕನ್ನಡಿಗರನ್ನು ಶಾಕ್ಗೀಡು ಮಾಡಿದ್ದು ಒಂದೆಡೆಯಾದರೆ, ಇದ್ದೊಬ್ಬ ಮಗನನ್ನು ಕಳೆದುಕೊಂಡ ತಾಯಿ ಮತ್ತು ಏಕೈಕ ಸಹೋದರನನ್ನು ಕಳೆದುಕೊಂಡು ರೋದಿಸುತ್ತಿರುವ ತಂಗಿಯ ದುಃಖಕ್ಕೆ ಎಣೆಯಿಲ್ಲ. ರಾಕೇಶ್ ಪೂಜಾರಿಯ ದೇಹವನ್ನು ಮನೆಯ ಬಳಿ ತಂದಾಗ ಸಹೋದರಿಯು ಅಗಲಿದ ಅಣ್ಣನ ಹಣೆಗೆ ಮುತ್ತಿಟ್ಟು ಅವರ ಪಾದಗಳನ್ನು ಅಕ್ಷರಶಃ ಕಣ್ಣೀರಿಂದ ತೊಳೆದರು. ಅಣ್ಣನ ಅಗಲಿಕೆ ಅವರನ್ನು ದಿಕ್ಕು ತೋಚದಂತೆ ಮಾಡಿದೆ. ಚಿತ್ರರಂಗದ ಅನೇಕ ಗಣ್ಯರು ರಾಕೇಶ್ ಸಾವಿಗೆ ಕಂಬನಿ ಮಿಡಿಯುತ್ತಾ ಆಘಾತ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ: ರಾಕೇಶ್ ಪೂಜಾರಿಗೆ ‘ಕಾಂತಾರ: ಚಾಪ್ಟರ್ 1’ ಚಿತ್ರದಲ್ಲಿ ಸಿಕ್ಕಿತ್ತು ಒಳ್ಳೆಯ ಪಾತ್ರ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

ಜನ ನನಗೆ ಬಟ್ಟೆ ಕೊಡುತ್ತಾರೆ, ಪಾಪದ ಹಣದ ಬಟ್ಟೆ ಯಾರಿಗೆ ಬೇಕು? ಕುಮಾರಸ್ವಾಮಿ

ಬ್ಯಾಚುಲರ್ಸ್ ವೇದಿಕೆ ಮೇಲೆ ಡ್ಯಾನ್ಸ್; ಎಲ್ಲರನ್ನೂ ಮೀರಿಸಿದ ರವಿಚಂದ್ರನ್

ಪೊಲೀಸ್ ವಾಹನದ ಬಾನೆಟ್ ಮೇಲೆ ಕೇಕ್ ಕತ್ತರಿಸಿದ ಪೊಲೀಸ್ ಅಧಿಕಾರಿ ಪತ್ನಿ

ಬೆಂಗಳೂರಿಗೆ ಬಂದ ಅಮಿತ್ ಶಾಗೆ ಬಿವೈವಿ, ಯಡಿಯೂರಪ್ಪ ಸ್ವಾಗತ
