India-Pakistan War Updates: ಭಾರತ ಮತ್ತು ಪಾಕಿಸ್ತಾನ ಡಿಜಿಎಂಒಗಳ ಸಭೆ ಮುಂದೂಡಿಕೆ, ಪಾಕಿಸ್ತಾನದಿಂದ ವಿಳಂಬ ನೀತಿ!
ಡಿಜಿಎಂಓಗಳ ಸಭೆಯಲ್ಲಿ ಭಾರತ ಪಾಕಿಸ್ತಾನದ ಮುಂದೆ ಕೆಲ ಷರತ್ತುಗಳನ್ನಿಡಲಿದೆ. ಭಾರತಕ್ಕೆ ಪದೇಪದೆ ಉಪಟಳ ನೀಡುತ್ತಿರುವ ಜೈಶ್-ಎ- ಮೊಹಮ್ಮದ್ ಮತ್ತು ಲಷ್ಕರ್-ಎ-ತೊಯ್ಬಾ ಸಂಘಟನೆಗಳ ಉಗ್ರರನ್ನು ಹಸ್ತಾಂತರಿಸಬೇಕು, ಪಾಕಿಸ್ತಾನದಲ್ಲಿರುವ ಉಗ್ರರ ನೆಲೆಗಳನ್ನು ಧ್ವಂಸ ಮಾಡಬೇಕು, ಉಗ್ರರಿಗೆ ಆಶ್ರಯ ನೀಡಬಾರದು ಮತ್ತು ಭಯೋತ್ಪಾದಕರು ಭಾರತದೊಳಗೆ ನುಸುಳಲೇಬಾರದು ಮೊದಲಾದ ಷರತ್ತುಗಳನ್ನು ಭಾರತ ಪಾಕ್ ಮುಂದೆ ಇಡಲಿದೆ.
ಬೆಂಗಳೂರು, ಮೇ 12: ಪಾಕಿಸ್ತಾನ ತನ್ನ ಮೊಂಡಾಟಗಳನ್ನು ನಿಲ್ಲಿಸುತ್ತಿಲ್ಲ. ಮೊನ್ನೆ ಎರಡು ರಾಷ್ಟ್ರಗಳ ನಡುವೆ ಕದನ ವಿರಾಮ ಘೋಷಣೆಯಾದಾಗ, ಇವತ್ತು ಮಧ್ಯಾಹ್ನ 12 ಗಂಟೆಗೆ ಭಾರತ ಮತ್ತು ಪಾಕಿಸ್ತಾನದ ಡಿಜಿಎಂಒ ಸಭೆ ನಡೆಯುವುದು ನಿಗದಿಯಾಗಿತ್ತು. ಆದರೆ, ಈ ಸಭೆಯನ್ನು ಸಾಯಂಕಾಲ 5 ಗಂಟೆಗೆ ಮೂಂದೂಡಲಾಗಿದೆ. ಸಭೆ ಯಾವಾಗ ಆರಂಭವಾದರೂ ಭಾರತವು ಪಾಕಿಸ್ತಾನಕ್ಕೆ ಕೇಳಲಿರುವ ಮೊದಲ ಪ್ರಶ್ನೆಯೆಂದರೆ, ಕದನ ವಿರಾಮ ಘೋಷಣೆಯಾದ ನಂತರವೂ ಪಾಕಿಸ್ತಾನ ಯಾಕೆ ಒಪ್ಪಂದದ ಉಲ್ಲಂಘನೆ ಮಾಡಿ ಗಡಿ ನಿಯಂತ್ರಣ ರೇಖೆಯ ಬಳಿ ಯಾಕೆ ದಾಳಿ ನಡೆಸಿದ್ದು ಅನ್ನೋದು. ಭಾರತದ ಪ್ರಶ್ನೆಗಳಿಂದ ಪಾಕಿಸ್ತಾನ ತಪ್ಪಿಸಿಕೊಳ್ಳುವುದು ಸಾಧ್ಯವಿಲ್ಲ. ಏತನ್ಮಧ್ಯೆ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ರಾಷ್ಟ್ರೀಯ ಸುರಕ್ಷತಾ ಸಲಹೆಗಾರ ಅಜಿತ್ ದೋವಲ್ ಮತ್ತು ವಾಯುಸೇನೆಯ ಮುಖ್ಯಸ್ಥರೊಂದಿಗೆ ಸಣೆ ನಡೆಸಿದರು.
ಇದನ್ನು ಓದಿ: ಪಾಕ್ ಕದನ ವಿರಾಮ ಉಲ್ಲಂಘನೆ ಬೆನ್ನಲ್ಲೇ ಮೋದಿಗೆ ರಾಹುಲ್ ಗಾಂಧಿ ಮಹತ್ವದ ಪತ್ರ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ