ಪಾಕ್ ಕದನ ವಿರಾಮ ಉಲ್ಲಂಘನೆ ಬೆನ್ನಲ್ಲೇ ಮೋದಿಗೆ ರಾಹುಲ್ ಗಾಂಧಿ ಮಹತ್ವದ ಪತ್ರ
ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾಕ ದಾಳಿಗೆ ಭಾರತ ಆಪರೇಷನ್ ಸಿಂದೂರದ ಮೂಲಕ ತಕ್ಕ ಪ್ರತ್ಯುತ್ತರವನ್ನು ನೀಡಿದೆ. ಪಾಕಿಸ್ತಾನ ಹಾಗೂ ಭಾರತದ ನಡುವೆ ನಾಲ್ಕು ದಿನ ಸತತವಾಗಿ ಸಂಘರ್ಷ ನಡೆಯಿತು. ಇದೀಗ ಅಮೆರಿಕ ಮಧ್ಯಸ್ಥಿಕೆ ವಹಿಸಿ ಕದನ ವಿರಾಮವನ್ನು ಘೋಷಿಸುವಂತೆ ಒತ್ತಾಯಿಸಿದ್ದು, ಶನಿವಾರ ಉಭಯ ದೇಶಗಳು ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿದೆ. ಆದ್ರೆ, ಇದಾದ ಕೆಲವು ಗಂಟೆಗಳಲ್ಲೇ ಪಾಕಿ ತನ್ನ ನರಿ ಬುದ್ಧಿ ತೋರಿಸಿದ್ದು, ಕದನ ವಿರಾಮ ಘೋಷಿಸಿದ ಬಳಿಕವೂ ಭಾರತದ ಮೇಲೆ ಡ್ರೋನ್ ದಾಳಿ ನಡೆಸಿದೆ. ಇದರ ಮಧ್ಯ ಇತ್ತ ವಿಪಕ್ಷ ನಾಯಕ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿಗೆ ಅವರಿಗೆ ಪತ್ರವೊಂದನ್ನು ಬರೆದಿದ್ದಾರೆ.

ನವದೆಹಲಿ, (ಮೇ 11): ಪಹಲ್ಗಾಮ್ ದಾಳಿ (pahalgam terror attack), ಆಪರೇಷನ್ ಸಿಂಧೂರ್ (Operation Sindoor) ಹಾಗೂ ಭಾರತ (India)ಮತ್ತು ಪಾಕಿಸ್ತಾನ (Pakistan) ನಡುವಿನ ಕದನ ವಿರಾಮ ಒಪ್ಪಂದ (Ceasefire) ಉಲ್ಲಂಘನೆ ಸಂಬಂಧ ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ಸರ್ವಪಕ್ಷ ಸಭೆ ಹಾಗೂ ವಿಶೇಷ ಸಂಸತ್ ಅಧಿವೇಶನ (special session) ಕರೆಯಬೇಕೆಂದು ಕಾಂಗ್ರೆಸ್ ಆಗ್ರಹಿಸಿದೆ. ಈ ಸಂಬಂಧ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ಅಲ್ಲದೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೊದಲು ಕದನ ವಿರಾಮವನ್ನು ಘೋಷಿಸಿದ್ದಕ್ಕಾಗಿ ಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಯಾವ ಪರಿಸ್ಥಿತಿಯಲ್ಲಿ ಕದನ ವಿರಾಮ ಜಾರಿಗೆ ಬಂದಿದೆ ಎಂದು ಹೇಳಬೇಕು? ನಿನ್ನೆ ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆ ಏಕೆ ಆಯಿತು? ಮತ್ತೆ ಪಾಕಿಸ್ತಾನ ಹೀಗೆ ಮಾಡುವುದಿಲ್ಲ ಎಂಬುದಕ್ಕೆ ಏನು ಗ್ಯಾರಂಟಿ? ಹೀಗಾಗಿ ವಿಶೇಷ ಅಧಿವೇಶನ ಕರೆದು ಈ ಸಂಬಂಧ ಚರ್ಚಿಸಬೇಕೆಂದು ಒತ್ತಾಯಿಸಿದ್ದಾರೆ.
LoP Lok Sabha and LoP Rajya Sabha have just written to the PM requesting for a special session of Parliament to be convened immediately. Here are the letters pic.twitter.com/exL6H5aAQy
— Jairam Ramesh (@Jairam_Ramesh) May 11, 2025
ಆತ್ಮೀಯ ಪ್ರಧಾನ ಮಂತ್ರಿಯವರೇ, ತಕ್ಷಣವೇ ಸಂಸತ್ ವಿಶೇಷ ಅಧಿವೇಶನವನ್ನು ಕರೆಯಬೇಕೆಂಬ ವಿರೋಧ ಪಕ್ಷದ ಸರ್ವಾನುಮತದ ವಿನಂತಿಯನ್ನು ನಾನು ಪುನರುಚ್ಚರಿಸುತ್ತೇನೆ. ಪಹಲ್ಗಾಮ್ ಭಯೋತ್ಪಾದಕ ದಾಳಿ. ಆಪರೇಷನ್ ಸಿಂಧೂರ್ ಮತ್ತು ಕದನ ವಿರಾಮವನ್ನು ಅಮೆರಿಕ ಅಧ್ಯಕ್ಷ ಟ್ರಂಪ್ ಮೊದಲು ಘೋಷಿಸಿದ್ದಾರೆ. ಹೀಗಾಗಿ ಇದು ಮುಂಬರುವ ಸವಾಲುಗಳನ್ನು ಎದುರಿಸಲು ನಮ್ಮ ಸಾಮೂಹಿಕ ಸಂಕಲ್ಪವನ್ನು ಪ್ರದರ್ಶಿಸಲು ಒಂದು ಅವಕಾಶವಾಗಿದೆ. ನೀವು ಈ ಮನವಿಯನ್ನು ಗಂಭೀರವಾಗಿ ಮತ್ತು ತ್ವರಿತವಾಗಿ ಪರಿಗಣಿಸುತ್ತೀರಿ ಎಂದು ನಾನು ಭಾವಿಸಿದ್ದೇನೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: Operation Sindoor: ಪಿಕ್ಚರ್ ಅಭಿ ಬಾಕಿ ಹೈ.. ಆಪರೇಷನ್ ಸಿಂಧೂರ್ ಮುಂದುವರೆದಿದೆ ಎಂದ ಐಎಎಫ್
ಸರ್ಕಾರಕ್ಕೆ ಜೈರಾಮ್ ರಮೇಶ್ ಪ್ರಶ್ನೆಗಳ ಸುರಿಮಳೆ
ಭಾರತ ಮತ್ತು ಪಾಕಿಸ್ತಾನದ ನಡುವಿನ ಕದನ ವಿರಾಮಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯಸಭಾ ಸದಸ್ಯ ಜೈರಾಮ್ ರಮೇಶ್ ಹಲವು ಪ್ರಶ್ನೆಗಳನ್ನ ಹಾಕಿದ್ದಾರೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮ ಒಪ್ಪಂದದ ಬಗ್ಗೆ ಚರ್ಚಿಸಲು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ತಟಸ್ಥ ವೇದಿಕೆಗಾಗಿ ಕರೆ ನೀಡಿರುವುದು ಹಲವು ಅನುಮಾನಗಳನ್ನ ಹುಟ್ಟು ಹಾಕಿದೆ. ಹಾಗಾದರೆ, ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷವನ್ನು ಬಗೆಹರಿಸಲು ಮೂರನೆಯ ವ್ಯಕ್ತಿಗಳಿಗೆ ಮಧ್ಯಸ್ಥಿಕೆಯ ಬಾಗಿಲು ತೆರೆದಿದೆಯೆ? ಆ ಮೂಲಕ ಶಿಮ್ಲಾ ಒಪ್ಪಂದವನ್ನು ಮುರಿಯಲಾಗಿದೆಯೆ? ಭಾರತ ಮತ್ತು ಪಾಕಿಸ್ತಾನದ ನಡುವೆ ರಾಜತಾಂತ್ರಿಕ ಮಾರ್ಗಗಳನ್ನು ತೆರೆಯಲಾಗಿದೆಯೆ? ಯಾವ ಬದ್ಧತೆಯನ್ನು ಬಯಸಿದ್ದೆವು, ಯಾವುದನ್ನು ಪಡೆಯುತ್ತಿದ್ದೇವೆ ಎಂದು ಸರಣಿ ಪ್ರಶ್ನೆಗಳನ್ನು ಕೇಳಿದ್ದಾರೆ.