AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2025: ಮೇ 17 ರಿಂದ ಐಪಿಎಲ್ ದ್ವಿತೀಯಾರ್ಧ, ಜೂನ್ 3 ರಂದು ಫೈನಲ್; ಬಿಸಿಸಿಐ ಅಧಿಕೃತ ಹೇಳಿಕೆ

BCCI Announces IPL 2025 Restart Date: ಭಾರತ ಮತ್ತು ಪಾಕಿಸ್ತಾನದ ನಡುವಿನ ಸೇನಾ ಕಾರ್ಯಾಚರಣೆಯಿಂದಾಗಿ ಅರ್ಧಕ್ಕೆ ನಿಂತಿದ್ದ 2025ರ ಐಪಿಎಲ್ ಟೂರ್ನಮೆಂಟ್ ಅನ್ನು ಮರು ಆರಂಭಿಸುವುದಾಗಿ ಬಿಸಿಸಿಐ ಘೋಷಿಸಿದೆ. ಮೇ 17ರಿಂದ ಉಳಿದ 17 ಪಂದ್ಯಗಳು ಆರಂಭವಾಗಲಿದ್ದು, 6 ನಗರಗಳಲ್ಲಿ ಪಂದ್ಯಗಳು ನಡೆಯಲಿವೆ. ಜೂನ್ 3ರಂದು ಫೈನಲ್ ಪಂದ್ಯ ನಡೆಯಲಿದೆ ಎಂದು ಬಿಸಿಸಿಐ ತಿಳಿಸಿದೆ. ಇಂಡಿಯನ್ ಪ್ರೀಮಿಯರ್ ಲೀಗ್‌ನ ಅಧಿಕೃತ ಎಕ್ಸ್ ಖಾತೆಯಲ್ಲಿ ಈ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.

IPL 2025: ಮೇ 17 ರಿಂದ ಐಪಿಎಲ್ ದ್ವಿತೀಯಾರ್ಧ, ಜೂನ್ 3 ರಂದು ಫೈನಲ್; ಬಿಸಿಸಿಐ ಅಧಿಕೃತ ಹೇಳಿಕೆ
Ipl 2025
Follow us
ಪೃಥ್ವಿಶಂಕರ
|

Updated on:May 12, 2025 | 11:10 PM

ಭಾರತ ಹಾಗೂ ಪಾಕಿಸ್ತಾನ ನಡುವಿನ ಸೇನಾ ಕಾರ್ಯಾಚರಣೆಯಿಂದಾಗಿ 2025 ರ ಐಪಿಎಲ್ (IPL 2025) ಅರ್ಧಕ್ಕೆ ನಿಂತಿತ್ತು. ಉಭಯ ದೇಶಗಳ ನಡುವೆ ಯುದ್ಧದ ಭೀತಿ ಎದುರಾಗಿದ್ದರಿಂದ ಮೇ 8 ರಂದು ನಡೆಯುತ್ತಿದ್ದ ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯವನ್ನು ಅರ್ಧಕ್ಕೆ ನಿಲ್ಲಿಸಿದ್ದ ಬಿಸಿಸಿಐ (BCCI), 2025 ರ ಐಪಿಎಲ್ ಅನ್ನು ಒಂದು ವಾರ ಮುಂದೂಡಿರುವುದಾಗಿ ಮೇ 9 ರಂದು ಘೋಷಿಸಿತ್ತು. ಆದರೀಗ ಎರಡೂ ದೇಶಗಳು ಕದನ ವಿರಾಮ ಘೋಷಿಸಿರುವ ಕಾರಣ ಬಿಸಿಸಿಐ ಉಳಿದ ಪಂದ್ಯಗಳಿಗೆ ಹೊಸ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಹೊಸ ವೇಳಾಪಟ್ಟಿಯ ಪ್ರಕಾರ, ಮೇ 17 ರಿಂದ ಲೀಗ್ ಮತ್ತೆ ಪ್ರಾರಂಭವಾಗಲಿದ್ದು, ಒಟ್ಟು 17 ಪಂದ್ಯಗಳು 6 ಸ್ಥಳಗಳಲ್ಲಿ ನಡೆಯಲಿವೆ. ಹಾಗೆಯೇ ಫೈನಲ್ ಪಂದ್ಯವು ಜೂನ್ 3 ರಂದು ನಡೆಯಲಿದೆ. ಈ ಬಗ್ಗೆ ಇಂಡಿಯನ್ ಪ್ರೀಮಿಯರ್ ಲೀಗ್ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.

ಹೊಸ ವೇಳಾಪಟ್ಟಿ ಪ್ರಕಟ

ಉಳಿದ ಪಂದ್ಯಗಳನ್ನು ಬೆಂಗಳೂರು, ದೆಹಲಿ, ಲಕ್ನೋ, ಮುಂಬೈ, ಅಹಮದಾಬಾದ್ ಮತ್ತು ಜೈಪುರ ಸೇರಿದಂತೆ 6 ಸ್ಥಳಗಳಲ್ಲಿ ನಡೆಸಲು ಬಿಸಿಸಿಐ ನಿರ್ಧರಿಸಿದೆ. ಈ ಅವಧಿಯಲ್ಲಿ, ಉಳಿದ ಲೀಗ್ ಪಂದ್ಯಗಳನ್ನು ಮೇ 17 ರಿಂದ ಮೇ 25 ರವರೆಗೆ ಆಡಲಾಗುವುದು, ಇದರಲ್ಲಿ 2 ಡಬಲ್ ಹೆಡರ್‌ ಪಂದ್ಯಗಳು ಸೇರಿವೆ. ಅಂದರೆ ಒಂದೇ ದಿನ 2 ಪಂದ್ಯಗಳು ನಡೆಯಲಿದ್ದು, ಈ  ಡಬಲ್ ಹೆಡರ್ ಪಂದ್ಯಗಳನ್ನು ಎರಡು ಭಾನುವಾರಗಳಂದು ನಡೆಸಲು ತೀರ್ಮಾನಿಸಲಾಗಿದೆ.  ಇದಲ್ಲದೆ, ಪ್ಲೇಆಫ್ ಪಂದ್ಯಗಳು ಮೇ 29 ರಿಂದ ಪ್ರಾರಂಭವಾಗಲಿದ್ದು, ಫೈನಲ್ ಪಂದ್ಯ ಜೂನ್ 3 ರಂದು ನಡೆಯಲಿದೆ. ಆದರೆ ಲೀಗ್ ಪಂದ್ಯಗಳಿಗೆ ಸ್ಥಳಗಳನ್ನು ಪ್ರಕಟಿಸಿರುವ ಬಿಸಿಸಿಐ ಪ್ಲೇಆಫ್ ಪಂದ್ಯಗಳ ಸ್ಥಳಗಳನ್ನು ಇನ್ನೂ ನಿರ್ಧರಿಸಿಲ್ಲ.

ಐಪಿಎಲ್ ಪತ್ರಿಕಾ ಪ್ರಕಟಣೆ

ಈ ಬಗ್ಗೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಐಪಿಎಲ್, ‘ಟಾಟಾ ಐಪಿಎಲ್ 2025 ಪುನರಾರಂಭವನ್ನು ಘೋಷಿಸಲು ಬಿಸಿಸಿಐ ಸಂತೋಷಪಡುತ್ತಿದೆ. ಐಪಿಎಲ್ ದ್ವಿತೀಯಾರ್ಧ ಮೇ 17 ರಿಂದ ಪ್ರಾರಂಭವಾಗಿ ಜೂನ್ 3 ರಂದು ನಡೆಯುವ ಫೈನಲ್‌ ಪಂದ್ಯದೊಂದಿಗೆ ಅಂತ್ಯವಾಗಲಿದೆ. ಈ ಅವಧಿಯಲ್ಲಿ ಒಟ್ಟು 17 ಪಂದ್ಯಗಳು 6 ಸ್ಥಳಗಳಲ್ಲಿ ನಡೆಯಲಿವೆ. ಹೊಸ ವೇಳಾಪಟ್ಟಿಯಲ್ಲಿ ಎರಡು ಡಬಲ್-ಹೆಡರ್‌ಗಳು ಸೇರಿವೆ. ಪ್ಲೇಆಫ್ ಪಂದ್ಯಗಳನ್ನು ಈ ಕೆಳಗಿನಂತೆ ನಿಗದಿಪಡಿಸಲಾಗಿದ್ದು, ಕ್ವಾಲಿಫೈಯರ್ 1 – ಮೇ 29 ರಂದು, ಎಲಿಮಿನೇಟರ್ – ಮೇ 30 ರಮದು, ಕ್ವಾಲಿಫೈಯರ್ 2 – ಜೂನ್ 1 ರಂದು ಮತ್ತು ಫೈನಲ್ ಪಂದ್ಯ ಜೂನ್ 3 ರಂದು ನಡೆಯಲಿದೆ. ಪ್ಲೇಆಫ್ ಪಂದ್ಯಗಳ ಸ್ಥಳಗಳನ್ನು ನಂತರ ಘೋಷಿಸಲಾಗುವುದು. ಕ್ರಿಕೆಟ್ ಸುರಕ್ಷಿತವಾಗಿ ಮರಳಲು ಕಾರಣರಾದ ಭಾರತೀಯ ಸಶಸ್ತ್ರ ಪಡೆಗಳ ಶೌರ್ಯ ಮತ್ತು ಸ್ಥಿತಿಸ್ಥಾಪಕತ್ವಕ್ಕೆ ಮತ್ತೊಮ್ಮೆ ನಮನ ಸಲ್ಲಿಸಲು ಬಿಸಿಸಿಐ ಈ ಅವಕಾಶವನ್ನು ಬಳಸಿಕೊಳ್ಳುತ್ತದೆ ಎಂದು ತಿಳಿಸಿದೆ.

ಉಳಿದ ಪಂದ್ಯಗಳ ವೇಳಾಪಟ್ಟಿ

ದಿನಾಂಕ ಮುಖಾಮುಖಿ ಸಮಯ ಸ್ಥಳ
17-05-2025 ಆರ್​ಸಿಬಿ vs ಕೆಕೆಆರ್ ಸಂಜೆ 7:30 ಬೆಂಗಳೂರು
18-05-2025 ರಾಜಸ್ಥಾನ vs ಪಂಜಾಬ್ ಮಧ್ಯಾಹ್ನ 3:30 ಜೈಪುರ
18-05-2025 ಡೆಲ್ಲಿ vs ಗುಜರಾತ್ ಸಂಜೆ 7:30 ದೆಹಲಿ
19-05-2025 ಲಕ್ನೋ vs ಹೈದರಾಬಾದ್ ಸಂಜೆ 7:30 ಲಕ್ನೋ
20-05-2025 ಸಿಎಸ್​ಕೆ vs ರಾಜಸ್ಥಾನ್ ಸಂಜೆ 7:30 ದೆಹಲಿ
21-05-2025 ಮುಂಬೈ vs ಡೆಲ್ಲಿ ಸಂಜೆ 7:30 ಮುಂಬೈ
22-05-2025 ಗುಜರಾತ್ vs ಲಕ್ನೋ ಸಂಜೆ 7:30 ಅಹಮದಾಬಾದ್
23-05-2025 ಆರ್​ಸಿಬಿ vs ಹೈದರಾಬಾದ್ ಸಂಜೆ 7:30 ಬೆಂಗಳೂರು
24-05-2025 ಪಂಜಾಬ್ vs ಡೆಲ್ಲಿ ಸಂಜೆ 7:30 ಜೈಪುರ
25-05-2025 ಗುಜರಾತ್ vs ಸಿಎಸ್​ಕೆ ಮಧ್ಯಾಹ್ನ 3:30 ಅಹಮದಾಬಾದ್
25-05-2025 ಹೈದರಾಬಾದ್ vs ಕೋಲ್ಕತ್ತಾ ಸಂಜೆ 7:30 ದೆಹಲಿ
26-05-2025 ಪಂಜಾಬ್ vs ಮುಂಬೈ ಸಂಜೆ 7:30 ಜೈಪುರ
27-05-2025 ಲಕ್ನೋ vs ಆರ್​ಸಿಬಿ ಸಂಜೆ 7:30 ಲಕ್ನೋ
29-05-2025 ಕ್ವಾಲಿಫೈಯರ್ 1 ಸಂಜೆ 7:30 ಸ್ಥಳ ನಿಗದಿ ಪಡಿಸಿಲ್ಲ
30-05-2025 ಎಲಿಮಿನೇಟರ್ ಸಂಜೆ 7:30 ಸ್ಥಳ ನಿಗದಿ ಪಡಿಸಿಲ್ಲ
01-06-2025 ಕ್ವಾಲಿಫೈಯರ್ 2 ಸಂಜೆ 7:30 ಸ್ಥಳ ನಿಗದಿ ಪಡಿಸಿಲ್ಲ
03-06-2025 ಫೈನಲ್ ಪಂದ್ಯ ಸಂಜೆ 7:30 ಸ್ಥಳ ನಿಗದಿ ಪಡಿಸಿಲ್ಲ

Published On - 10:40 pm, Mon, 12 May 25