- Kannada News Photo gallery Cricket photos Virat Kohli's Test Cricket Controversies: From On-Field Spats to Heated Exchanges
Virat Kohli: ಟೆಸ್ಟ್ ವೃತ್ತಿಜೀವನದಲ್ಲಿ ಕಿಂಗ್ ಕೊಹ್ಲಿ ಮಾಡಿಕೊಂಡ ವಿವಾದಗಳು ಒಂದೆರಡಲ್ಲ; ನೀವೇ ನೋಡಿ
Virat Kohli's Test Cricket Controversies: ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ಟೆಸ್ಟ್ ಕ್ರಿಕೆಟ್ ವೃತ್ತಿಜೀವನದಲ್ಲಿ ಅನೇಕ ವಿವಾದಗಳು ಮತ್ತು ಘರ್ಷಣೆಗಳು ನಡೆದಿವೆ. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಆಟಗಾರರೊಂದಿಗೆ ಅವರ ವಾಗ್ವಾದಗಳು, ಪ್ರೇಕ್ಷಕರೊಂದಿಗಿನ ಘಟನೆಗಳು ಮತ್ತು ಡಿಆರ್‌ಎಸ್ ನಿರ್ಧಾರಗಳ ಬಗ್ಗೆ ಅವರ ಪ್ರತಿಕ್ರಿಯೆಗಳು ಈ ಲೇಖನದಲ್ಲಿ ವಿವರಿಸಲಾಗಿದೆ.
Updated on: May 12, 2025 | 8:29 PM

ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ ಅನೇಕ ದಾಖಲೆಗಳನ್ನು ಮಾಡಿರುವ ಕೊಹ್ಲಿ ಮೈದಾನದಲ್ಲಿ ತಮ್ಮ ಆಕ್ರಮಣಕಾರಿ ವರ್ತನೆಯಿಂದ ವಿವಾದಗಳನ್ನು ತಮ್ಮ ಮೈಮೇಲೆ ಎಳೆದುಕೊಂಡಿದ್ದರು. ಅಂತಹ ಕೆಲವು ವಿವಾದಗಳ ವಿವರ ಇಲ್ಲಿದೆ.

2014 ರಲ್ಲಿ ವಿರಾಟ್ ಕೊಹ್ಲಿಗೆ ಮೊದಲ ಬಾರಿಗೆ ಅಡಿಲೇಡ್ ಟೆಸ್ಟ್‌ನಲ್ಲಿ ನಾಯಕತ್ವ ವಹಿಸುವ ಅವಕಾಶ ಸಿಕ್ಕಿತ್ತು. ಇದೇ ಟೆಸ್ಟ್‌ನಲ್ಲಿ ಕೊಹ್ಲಿ ಮತ್ತು ಮಿಚೆಲ್ ಜಾನ್ಸನ್ ನಡುವೆ ತೀವ್ರ ವಾಗ್ವಾದ ನಡೆಯಿತು. ಏನಾಯಿತು ಎಂದರೆ ವಿರಾಟ್ ಕೊಹ್ಲಿ ಬ್ಯಾಟಿಂಗ್ಗೆ ಬಂದಾಗ ಜಾನ್ಸನ್ ಮೊದಲ ಎಸೆತದಲ್ಲೇ ಅವರಿಗೆ ಬೌನ್ಸರ್ ಎಸೆದರು. ಚೆಂಡು ವಿರಾಟ್ ಕೊಹ್ಲಿ ತಲೆಗೆ ಬಡಿಯಿತು. ಇದಾದ ನಂತರ ವಿರಾಟ್ ಮತ್ತು ಜಾನ್ಸನ್ ನಡುವೆ ವಿವಾದ ಆರಂಭವಾಯಿತು. ವಿವಾದದ ಹೊರತಾಗಿಯೂ, ಕೊಹ್ಲಿ ಈ ಸರಣಿಯಲ್ಲಿ ಎರಡು ಶತಕಗಳನ್ನು ಬಾರಿಸಿದರು. ಪಂದ್ಯದ ನಂತರ ಕೊಹ್ಲಿ, "ನನ್ನನ್ನು ಗೌರವಿಸದ ವ್ಯಕ್ತಿಯನ್ನು ನಾನು ಗೌರವಿಸುವುದಿಲ್ಲ" ಎಂದು ಹೇಳಿದ್ದರು. ಈ ಸರಣಿಯಲ್ಲಿ ಕೊಹ್ಲಿ ಬರೋಬ್ಬರಿ 692 ರನ್ ಬಾರಿಸಿದ್ದರು.

2012 ರಲ್ಲಿ ನಡೆದಿದ್ದ ಸಿಡ್ನಿ ಟೆಸ್ಟ್ ಪಂದ್ಯದ ಎರಡನೇ ದಿನದಂದು, ವಿರಾಟ್ ಕೊಹ್ಲಿ ಪ್ರೇಕ್ಷಕರ ಕಡೆಗೆ ಮಧ್ಯದ ಬೆರಳನ್ನು ತೋರಿಸುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಇದಾದ ನಂತರ ಕೊಹ್ಲಿಗೆ ದಂಡ ವಿಧಿಸಲಾಯಿತು. ವಾಸ್ತವವಾಗಿ, ಆಸ್ಟ್ರೇಲಿಯಾದ ನಾಯಕ ಮೈಕೆಲ್ ಕ್ಲಾರ್ಕ್ ಮತ್ತು ರಿಕಿ ಪಾಂಟಿಂಗ್ ನಡುವೆ 288 ರನ್‌ಗಳ ಪಾಲುದಾರಿಕೆ ಇತ್ತು. ಈ ಮಧ್ಯೆ, ಫೀಲ್ಡಿಂಗ್ ಮಾಡುತ್ತಿದ್ದ ವಿರಾಟ್, ಪ್ರೇಕ್ಷಕರ ಕಡೆಗೆ ಮಧ್ಯದ ಬೆರಳನ್ನು ತೋರಿಸಿದ್ದರು. ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ್ದ ವಿರಾಟ್, ‘ಒಬ್ಬ ಕ್ರಿಕೆಟಿಗನಾಗಿ ನಾನು ಹೀಗೆ ಮಾಡಬಾರದಿತ್ತು. ಆದರೆ ಕೆಲವೊಮ್ಮೆ ಮೈದಾನದಲ್ಲಿನ ಪರಿಸ್ಥಿತಿ ಹೇಗಿರುತ್ತದೆಯೆಂದರೆ, ನೀವು ಎಷ್ಟೇ ತಾಳ್ಮೆಯಿಂದರಲೂ ಪ್ರಯತ್ನಿಸಿದರು ಅದು ಸಾಧ್ಯವಾಗುವುದಿಲ್ಲ ಎಂದಿದ್ದರು.

2017 ರಲ್ಲಿ ನಡೆದಿದ್ದ ಬೆಂಗಳೂರು ಟೆಸ್ಟ್ ಪಂದ್ಯದಲ್ಲಿ ವೇಗಿ ಉಮೇಶ್ ಯಾದವ್ ಬೌಲಿಂಗ್ನಲ್ಲಿ ಸ್ಟೀವ್ ಸ್ಮಿತ್ ಎಲ್ಬಿಡಬ್ಲ್ಯೂ ಆದರು. ಅಂಪೈರ್ ಕೂಡ ಸ್ಮಿತ್ ಔಟ್ ಎಂದು ಘೋಷಿಸಿದರು. ಆದರೆ ಸ್ಮಿತ್ ಡಿಆರ್‌ಎಸ್ ತೆಗೆದುಕೊಳ್ಳಲು ಡಗೌಟ್ನ ಸಹಾಯ ಪಡೆದಿದ್ದರು. ಇದನ್ನು ಗಮನಿಸಿದ ಅಂಪೈರ್ ಅದಕ್ಕೆ ಅವಕಾಶ ಕೊಡದೆ ಅವರನ್ನು ಪೆವಿಲಿಯನ್ಗೆ ಕಳುಹಿಸಿದರು. ಈ ವೇಳೆ ಕೊಹ್ಲಿ, ಸ್ಮಿತ್ ಬಳಿ ಮಾತಿನ ಚಕಮಕಿ ನಡೆಸಿ ಚರ್ಚೆಯ ವಿಷಯವಾಗಿದ್ದರು.

2021 ರ ಲಾರ್ಡ್ಸ್ ಟೆಸ್ಟ್ ಪಂದ್ಯದ ಸಮಯದಲ್ಲಿ ಕೊಹ್ಲಿ ಅವರ ನಾಯಕತ್ವದ ಸಾಮರ್ಥ್ಯವು ಇಡೀ ಜಗತ್ತಿಗೆ ಪ್ರದರ್ಶನವಾಗಿತ್ತು. ಈ ಟೆಸ್ಟ್ ಪಂದ್ಯದಲ್ಲಿ ಜೇಮ್ಸ್ ಆಂಡರ್ಸನ್ ಬ್ಯಾಟಿಂಗ್ ವೇಳೆ ಜಸ್ಪ್ರೀತ್ ಬುಮ್ರಾ ಓವರ್ನಲ್ಲಿ 10 ಬಾಲ್ ಬೌಲ್ ಮಾಡಿದ್ದರು. ಇದರಲ್ಲಿ 4 ನೋ ಬಾಲ್ಗಳು ಸೇರಿದ್ದವು. ಇದು ಮಾತ್ರವಲ್ಲದೆ ಈ ಪಂದ್ಯದಲ್ಲಿ ಕೊಹ್ಲಿ, ಜೋಸ್ ಬಟ್ಲರ್ ಮತ್ತು ಆಲಿ ರಾಬಿನ್ಸನ್ ಜೊತೆ ವಿವಾದ ಮಾಡಿಕೊಂಡಿದ್ದರು.

ವಿರಾಟ್ ಕೊಹ್ಲಿ ಇಂಗ್ಲೆಂಡ್‌ನ ಮಾಜಿ ವೇಗಿ ಜೇಮ್ಸ್ ಆಂಡರ್ಸನ್ ಜೊತೆ ಸಾಕಷ್ಟು ಬಾರಿ ಮಾತಿನ ಚಕಮಕಿ ನಡೆದಿದೆ. 2014 ರ ಟೆಸ್ಟ್ ಸರಣಿಯಲ್ಲಿ, ವಿರಾಟ್ ಕೊಹ್ಲಿ ಆಂಡರ್ಸನ್ ಬೌಲಿಂಗ್ನಲ್ಲಿ ರನ್ ಕಲೆಹಾಕುವುದಕ್ಕೆ ಪರದಾಡಿದ್ದರು. ಆದರೆ 2018 ರಲ್ಲಿ ಆಂಡರ್ಸನ್ ಬೆವರಿಳಿಸಿದ್ದ ಕೊಹ್ಲಿ ಸರಣಿಯಲ್ಲಿ 593 ರನ್ ಕಲೆಹಾಕಿದ್ದರು. ಈ ಸಮಯದಲ್ಲಿ, ಜೇಮ್ಸ್ ಆಂಡರ್ಸನ್ ಮತ್ತು ವಿರಾಟ್ ನಡುವೆ ಅನೇಕ ಬಾರಿ ಮಾತಿನ ಚಕಮಕಿ ನಡೆದಿತ್ತು.

2022 ರ ಕೇಪ್ ಟೌನ್ ಟೆಸ್ಟ್ ಪಂದ್ಯದಲ್ಲಿ, ಡಿಆರ್ಎಸ್ ನಿರ್ಧಾರದಿಂದ ಅಸಮಾಧಾನಗೊಂಡಿದ್ದ ವಿರಾಟ್ ಕೊಹ್ಲಿ, ಸ್ಟಂಪ್ ಮೈಕ್‌ನತ್ತ ಹೋಗಿ, ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದಲ್ಲದೆ, 2018 ರ ಎಡ್ಜ್‌ಬಾಸ್ಟನ್ ಟೆಸ್ಟ್‌ನಲ್ಲಿ, ಕೊಹ್ಲಿ ಜೋ ರೂಟ್ ಅವರನ್ನು ರನ್ ಔಟ್ ಮಾಡಿದ ನಂತರ ಸಂಭ್ರಮದ ನಿಮಿತ್ತ ಮೈಕ್ ಅನ್ನು ಡ್ರಾಪ್ ಮಾಡುವ ರೀತಿಯಲ್ಲಿ ಅವರನ್ನು ಕಿಚಾಯಿಸಿದ್ದರು.

2024 ರಲ್ಲಿ, ಆಸ್ಟ್ರೇಲಿಯಾದ ಎಂಸಿಜಿಯಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್ ಸಮಯದಲ್ಲಿ, ವಿರಾಟ್ ಮತ್ತು ಅದೇ ಟೆಸ್ಟ್‌ನಲ್ಲಿ ಪಾದಾರ್ಪಣೆ ಮಾಡಿದ್ದ ಸ್ಯಾಮ್ ಕಾನ್ಸ್ಟಸ್ ನಡುವೆ ವಿವಾದ ಉಂಟಾಯಿತು. ವಿರಾಟ್ ಮತ್ತು ಕಾನ್ಸ್ಟಸ್ ಪರಸ್ಪರ ಭುಜಕ್ಕೆ ಭುಜ ತಾಗಿಸಿ ವಿವಾದ ಮಾಡಿಕೊಂಡಿದ್ದರು.














