ಟೀಮ್ ಇಂಡಿಯಾದ ಮೂವರ ಟೆಸ್ಟ್ ಕೆರಿಯರ್ ಮುಗಿಸಿದ ಆಸ್ಟ್ರೇಲಿಯನ್ನರು
Team India: ಒಂದು ಪ್ರತಿಷ್ಠಿತ ಸರಣಿ ಸೋಲು ಇದೀಗ ಟೀಮ್ ಇಂಡಿಯಾದ ಮೂವರು ದಿಗ್ಗಜ ಕ್ರಿಕೆಟ್ ಕೆರಿಯರ್ ಅಂತ್ಯಗೊಳ್ಳಲು ಕಾರಣವಾಗಿದೆ. ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ವಿಫಲರಾದ ವಿರಾಟ್ ಕೊಹ್ಲಿ (Virat Kohli), ರೋಹಿತ್ ಶರ್ಮಾ (Rohit Sharma) ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ.
2024 ಆರಂಭದಲ್ಲೇ, ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಬಗ್ಗೆ ಚರ್ಚೆಗಳು ಶುರುವಾಗಿತ್ತು. ಈ ಚರ್ಚೆಗೆ ಮುನ್ನುಡಿ ಬರೆದಿದ್ದು ಆಸೀಸ್ ಸ್ಪಿನ್ನರ್ ನಾಥನ್ ಲಿಯಾನ್. ಈ ಬಾರಿ ನಾವು ಭಾರತ ತಂಡವನ್ನು ಬಗ್ಗು ಬಡಿದೇ ಬಡಿಯುತ್ತೇವೆ ಎಂಬ ಹೇಳಿಕೆಯೊಂದು ಲಿಯಾನ್ ವಾಗ್ಯುದ್ಧವನ್ನು ಆರಂಭಿಸಿದ್ದರು.
1 / 7
ಇತ್ತ ನಾಥನ್ ಲಿಯಾನ್ ಹೇಳಿಕೆಗೆ ಬ್ಯಾಟ್-ಬಾಲ್ ಮೂಲಕವೇ ಉತ್ತರ ನೀಡಲು ಟೀಮ್ ಇಂಡಿಯಾದ ಸ್ಟಾರ್ ಆಟಗಾರರು ಸಜ್ಜಾಗಿ ನಿಂತಿದ್ದರು. ಅದರಂತೆ ಡಿಸೆಂಬರ್ ತಿಂಗಳಲ್ಲಿ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಶುರುವಾಯಿತು. ಮೊದಲ ಪಂದ್ಯದಲ್ಲೇ ಆಸೀಸ್ ಪಡೆಯನ್ನು ಟೀಮ್ ಇಂಡಿಯಾ ಹೀನಾಯವಾಗಿ ಸೋಲಿಸಿತು. ಈ ಗೆಲುವಿನೊಂದಿಗೆ ಭಾರತೀಯ ಆಟಗಾರು ಲಿಯಾನ್ ಹೇಳಿಕೆಗೆ ಪ್ರತ್ಯುತ್ತರ ನೀಡಿದರು.
2 / 7
ಆದರೆ ಇದಾದ ಬಳಿಕ ಟೀಮ್ ಇಂಡಿಯಾ ಒಂದೇ ಒಂದು ಪಂದ್ಯವನ್ನು ಗೆದ್ದಿರಲಿಲ್ಲ. ಪಂದ್ಯ ಗೆಲ್ಲಲು ಆಸ್ಟ್ರೇಲಿಯನ್ನರು ಒಂದೇ ಒಂದು ಅವಕಾಶವನ್ನು ಸಹ ನೀಡಿರಲಿಲ್ಲ. ಇದರ ನಡುವೆ ಬೌಲರ್ಗಳು ಮೊಣಚಿನ ದಾಳಿ ಮರೆತರು. ಬ್ಯಾಟರ್ಗಳು ರನ್ಗಳಿಸಲು ಪರದಾಡಿದರು. ಪರಿಣಾಮ ಈ 5 ಪಂದ್ಯಗಳಿಂದಲೇ ಟೀಮ್ ಇಂಡಿಯಾದ ಮೂವರು ಸ್ಟಾರ್ ಆಟಗಾರರ ಕೆರಿಯರ್ ಕೊನೆಗೊಂಡಿತು.
3 / 7
ಹೌದು, ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಬಳಿಕ ಟೀಮ್ ಇಂಡಿಯಾದ ಮೂವರು ಆಟಗಾರರು ನಿವೃತ್ತಿ ಘೋಷಿಸಿದ್ದಾರೆ. ಈ ಮೂವರು ದಿಢೀರ್ ನಿವೃತ್ತಿ ಘೋಷಿಸದ್ದಾರೆ ಎಂಬುದು ಇಲ್ಲಿ ಉಲ್ಲೇಖಾರ್ಹ. ಅಂದರೆ ಭಾರತದ ಪರ ವರ್ಷಗಳ ಕಾಲ ಆಡಿದರೂ ಈ ಮೂವರು ದಿಗ್ಗಜರು ವಿದಾಯ ಪಂದ್ಯವಿಲ್ಲದೇ ಟೆಸ್ಟ್ ಕೆರಿಯರ್ಗೆ ವಿದಾಯ ಹೇಳಿದ್ದಾರೆ.
4 / 7
ರವಿಚಂದ್ರನ್ ಅಶ್ವಿನ್: 2024-25ರ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೂರನೇ ಪಂದ್ಯದ ಬಳಿಕ ಟೀಮ್ ಇಂಡಿಯಾದ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ನಿವೃತ್ತಿ ಘೋಷಿಸಿದ್ದರು. ಈ ಸರಣಿಯ 2ನೇ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಅಶ್ವಿನ್ 18 ಓವರ್ಗಳಲ್ಲಿ ಪಡೆದದ್ದು ಕೇವಲ 1 ವಿಕೆಟ್ ಮಾತ್ರ. ಇದುವೇ ಅವರ ಕೊನೆಯ ಟೆಸ್ಟ್ ಪಂದ್ಯವಾಗಿಬಿಟ್ಟಿತು.
5 / 7
ರೋಹಿತ್ ಶರ್ಮಾ: 2024-25ರ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ರೋಹಿತ್ ಶರ್ಮಾ 3 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರು. ಈ ವೇಳೆ 5 ಇನಿಂಗ್ಸ್ ಆಡಿದ ಹಿಟ್ಮ್ಯಾನ್ ಕಲೆಹಾಕಿದ್ದು ಕೇವಲ 31 ರನ್ಗಳು ಮಾತ್ರ. ಅಂದರೆ ಕೇವಲ 6.20 ಸರಾಸರಿಯಲ್ಲಿ ರನ್ಗಳಿಸಿದ್ದರು. ಈ ಕಳಪೆ ಪ್ರದರ್ಶನ ರೋಹಿತ್ ಶರ್ಮಾ ಅವರ ಟೆಸ್ಟ್ ಕೆರಿಯರ್ ಅಂತ್ಯವಾಗಲು ಮುಖ್ಯ ಕಾರಣವಾಯಿತು.
6 / 7
ವಿರಾಟ್ ಕೊಹ್ಲಿ: 2024-25ರ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ 105 ರನ್ ಬಾರಿಸಿದ್ದ ವಿರಾಟ್ ಕೊಹ್ಲಿ ಆ ಬಳಿಕ 4 ಮ್ಯಾಚ್ಗಳಿಂದ ಕಲೆಹಾಕಿದ್ದು ಕೇವಲ 85 ರನ್ಗಳು ಮಾತ್ರ. ಅದರಲ್ಲೂ ಆಫ್ ಸ್ಟಂಪ್ನಲ್ಲಿ ವಿಕೆಟ್ ಕೈಚೆಲ್ಲುವ ಮೂಲಕ ಕೊಹ್ಲಿ ಬ್ಯಾಟಿಂಗ್ ಮರೆತಂತೆ ಭಾಸವಾಗಿದ್ದರು. ಇದೀಗ ಇಂಗ್ಲೆಂಡ್ ವಿರುದ್ಧದ ಸರಣಿಗೂ ಮುನ್ನ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಅಂದರೆ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ವಿಫಲರಾಗಿದ್ದ ಮೂವರು ದಿಗ್ಗಜ ಕ್ರಿಕೆಟಿಗರು ಬ್ಯಾಕ್ ಟು ಬ್ಯಾಕ್ ನಿವೃತ್ತಿ ಘೋಷಿಸಿ ಕ್ರಿಕೆಟ್ ಪ್ರೇಮಿಗಳಿಗೆ ನಿರಾಸೆ ಮೂಡಿಸಿದ್ದಾರೆ.