AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೀಮ್ ಇಂಡಿಯಾದ ಮೂವರ ಟೆಸ್ಟ್​ ಕೆರಿಯರ್ ಮುಗಿಸಿದ ಆಸ್ಟ್ರೇಲಿಯನ್ನರು

Team India: ಒಂದು ಪ್ರತಿಷ್ಠಿತ ಸರಣಿ ಸೋಲು ಇದೀಗ ಟೀಮ್ ಇಂಡಿಯಾದ ಮೂವರು ದಿಗ್ಗಜ ಕ್ರಿಕೆಟ್​ ಕೆರಿಯರ್ ಅಂತ್ಯಗೊಳ್ಳಲು ಕಾರಣವಾಗಿದೆ. ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ವಿಫಲರಾದ ವಿರಾಟ್ ಕೊಹ್ಲಿ (Virat Kohli), ರೋಹಿತ್ ಶರ್ಮಾ (Rohit Sharma) ಟೆಸ್ಟ್ ಕ್ರಿಕೆಟ್​ಗೆ ವಿದಾಯ ಹೇಳಿದ್ದಾರೆ.

ಝಾಹಿರ್ ಯೂಸುಫ್
|

Updated on:May 13, 2025 | 6:44 AM

Share
2024 ಆರಂಭದಲ್ಲೇ, ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಬಗ್ಗೆ ಚರ್ಚೆಗಳು ಶುರುವಾಗಿತ್ತು. ಈ ಚರ್ಚೆಗೆ ಮುನ್ನುಡಿ ಬರೆದಿದ್ದು ಆಸೀಸ್ ಸ್ಪಿನ್ನರ್ ನಾಥನ್ ಲಿಯಾನ್. ಈ ಬಾರಿ ನಾವು ಭಾರತ ತಂಡವನ್ನು ಬಗ್ಗು ಬಡಿದೇ ಬಡಿಯುತ್ತೇವೆ ಎಂಬ ಹೇಳಿಕೆಯೊಂದು ಲಿಯಾನ್ ವಾಗ್ಯುದ್ಧವನ್ನು ಆರಂಭಿಸಿದ್ದರು.

1 / 7
ಇತ್ತ ನಾಥನ್ ಲಿಯಾನ್ ಹೇಳಿಕೆಗೆ ಬ್ಯಾಟ್-ಬಾಲ್ ಮೂಲಕವೇ ಉತ್ತರ ನೀಡಲು ಟೀಮ್ ಇಂಡಿಯಾದ ಸ್ಟಾರ್ ಆಟಗಾರರು ಸಜ್ಜಾಗಿ ನಿಂತಿದ್ದರು. ಅದರಂತೆ ಡಿಸೆಂಬರ್ ತಿಂಗಳಲ್ಲಿ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಶುರುವಾಯಿತು. ಮೊದಲ ಪಂದ್ಯದಲ್ಲೇ ಆಸೀಸ್ ಪಡೆಯನ್ನು ಟೀಮ್ ಇಂಡಿಯಾ ಹೀನಾಯವಾಗಿ ಸೋಲಿಸಿತು. ಈ ಗೆಲುವಿನೊಂದಿಗೆ ಭಾರತೀಯ ಆಟಗಾರು ಲಿಯಾನ್ ಹೇಳಿಕೆಗೆ ಪ್ರತ್ಯುತ್ತರ ನೀಡಿದರು.

2 / 7
ಆದರೆ ಇದಾದ ಬಳಿಕ ಟೀಮ್ ಇಂಡಿಯಾ ಒಂದೇ ಒಂದು ಪಂದ್ಯವನ್ನು ಗೆದ್ದಿರಲಿಲ್ಲ. ಪಂದ್ಯ ಗೆಲ್ಲಲು ಆಸ್ಟ್ರೇಲಿಯನ್ನರು ಒಂದೇ ಒಂದು ಅವಕಾಶವನ್ನು ಸಹ ನೀಡಿರಲಿಲ್ಲ. ಇದರ ನಡುವೆ ಬೌಲರ್​ಗಳು ಮೊಣಚಿನ ದಾಳಿ ಮರೆತರು. ಬ್ಯಾಟರ್​ಗಳು ರನ್​ಗಳಿಸಲು ಪರದಾಡಿದರು. ಪರಿಣಾಮ ಈ 5 ಪಂದ್ಯಗಳಿಂದಲೇ ಟೀಮ್ ಇಂಡಿಯಾದ ಮೂವರು ಸ್ಟಾರ್ ಆಟಗಾರರ ಕೆರಿಯರ್​ ಕೊನೆಗೊಂಡಿತು. 

3 / 7
ಹೌದು, ಬಾರ್ಡರ್-ಗವಾಸ್ಕರ್ ಟೆಸ್ಟ್​ ಸರಣಿ ಬಳಿಕ ಟೀಮ್ ಇಂಡಿಯಾದ ಮೂವರು ಆಟಗಾರರು ನಿವೃತ್ತಿ ಘೋಷಿಸಿದ್ದಾರೆ. ಈ ಮೂವರು ದಿಢೀರ್ ನಿವೃತ್ತಿ ಘೋಷಿಸದ್ದಾರೆ ಎಂಬುದು ಇಲ್ಲಿ ಉಲ್ಲೇಖಾರ್ಹ. ಅಂದರೆ ಭಾರತದ ಪರ ವರ್ಷಗಳ ಕಾಲ ಆಡಿದರೂ ಈ ಮೂವರು ದಿಗ್ಗಜರು ವಿದಾಯ ಪಂದ್ಯವಿಲ್ಲದೇ ಟೆಸ್ಟ್ ಕೆರಿಯರ್​ಗೆ ವಿದಾಯ ಹೇಳಿದ್ದಾರೆ.

4 / 7
ರವಿಚಂದ್ರನ್ ಅಶ್ವಿನ್: 2024-25ರ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೂರನೇ ಪಂದ್ಯದ ಬಳಿಕ ಟೀಮ್ ಇಂಡಿಯಾದ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ನಿವೃತ್ತಿ ಘೋಷಿಸಿದ್ದರು. ಈ ಸರಣಿಯ 2ನೇ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಅಶ್ವಿನ್ 18 ಓವರ್​ಗಳಲ್ಲಿ ಪಡೆದದ್ದು ಕೇವಲ 1 ವಿಕೆಟ್ ಮಾತ್ರ. ಇದುವೇ ಅವರ ಕೊನೆಯ ಟೆಸ್ಟ್ ಪಂದ್ಯವಾಗಿಬಿಟ್ಟಿತು.

5 / 7
ರೋಹಿತ್ ಶರ್ಮಾ: 2024-25ರ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ರೋಹಿತ್ ಶರ್ಮಾ 3 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರು. ಈ ವೇಳೆ 5 ಇನಿಂಗ್ಸ್ ಆಡಿದ ಹಿಟ್​ಮ್ಯಾನ್ ಕಲೆಹಾಕಿದ್ದು ಕೇವಲ 31 ರನ್​ಗಳು ಮಾತ್ರ. ಅಂದರೆ ಕೇವಲ 6.20 ಸರಾಸರಿಯಲ್ಲಿ ರನ್​ಗಳಿಸಿದ್ದರು. ಈ ಕಳಪೆ ಪ್ರದರ್ಶನ ರೋಹಿತ್ ಶರ್ಮಾ ಅವರ ಟೆಸ್ಟ್ ಕೆರಿಯರ್ ಅಂತ್ಯವಾಗಲು ಮುಖ್ಯ ಕಾರಣವಾಯಿತು.

6 / 7
ವಿರಾಟ್ ಕೊಹ್ಲಿ: 2024-25ರ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ 105 ರನ್ ಬಾರಿಸಿದ್ದ ವಿರಾಟ್ ಕೊಹ್ಲಿ ಆ ಬಳಿಕ 4 ಮ್ಯಾಚ್​ಗಳಿಂದ ಕಲೆಹಾಕಿದ್ದು ಕೇವಲ 85 ರನ್​ಗಳು ಮಾತ್ರ. ಅದರಲ್ಲೂ ಆಫ್​ ಸ್ಟಂಪ್​ನಲ್ಲಿ ವಿಕೆಟ್ ಕೈಚೆಲ್ಲುವ ಮೂಲಕ ಕೊಹ್ಲಿ ಬ್ಯಾಟಿಂಗ್ ಮರೆತಂತೆ ಭಾಸವಾಗಿದ್ದರು. ಇದೀಗ ಇಂಗ್ಲೆಂಡ್ ವಿರುದ್ಧದ ಸರಣಿಗೂ ಮುನ್ನ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್​ಗೆ ವಿದಾಯ ಹೇಳಿದ್ದಾರೆ. ಅಂದರೆ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ವಿಫಲರಾಗಿದ್ದ ಮೂವರು ದಿಗ್ಗಜ ಕ್ರಿಕೆಟಿಗರು ಬ್ಯಾಕ್ ಟು ಬ್ಯಾಕ್ ನಿವೃತ್ತಿ ಘೋಷಿಸಿ ಕ್ರಿಕೆಟ್ ಪ್ರೇಮಿಗಳಿಗೆ ನಿರಾಸೆ ಮೂಡಿಸಿದ್ದಾರೆ.

7 / 7

Published On - 1:34 pm, Mon, 12 May 25

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!

ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?

ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?

ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು

‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ

ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ

ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ

ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ