ಪೇಮೆಂಟ್​ನಲ್ಲಿ ಯುಪಿಐನೇ ಕಿಂಗ್; ನವೆಂಬರ್​ನಲ್ಲಿ 1,548 ಕೋಟಿ ಮುಟ್ಟಿದ ಯುಪಿಐ ವಹಿವಾಟು

|

Updated on: Dec 03, 2024 | 3:04 PM

UPI transactions on November 2024: ಭಾರತದಲ್ಲಿ ಹಣ ಪಾವತಿ ಕಾರ್ಯವನ್ನು ಸುಲಭ ಹಾಗೂ ಪರಿಣಾಮಕಾರಿ ಮಾಡಿಸಿದ ಯುನಿಫೈಡ್ ಪೇಮೆಂಟ್ ಇಂಟರ್ಫೇಸ್ ದಿನೇದಿನೇ ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತಿದೆ. ಎನ್​ಪಿಸಿಐ ದತ್ತಾಂಶದ ಪ್ರಕಾರ ನವೆಂಬರ್ ತಿಂಗಳೊಂದರಲ್ಲಿ 1,548 ಕೋಟಿ ಟ್ರಾನ್ಸಾಕ್ಷನ್​ಗಳು ಯುಪಿಐನಿಂದ ಆಗಿವೆ. ಅಕ್ಟೋಬರ್ 31ರಂದು 64.4 ಕೋಟಿ ಸಂಖ್ಯೆಯಲ್ಲಿ ಟ್ರಾನ್ಸಾಕ್ಷನ್​ಗಳಾಗಿವೆ. ಇದು ಸಾರ್ವಕಾಲಿಕ ದಾಖಲೆಯಾಗಿದೆ.

ಪೇಮೆಂಟ್​ನಲ್ಲಿ ಯುಪಿಐನೇ ಕಿಂಗ್; ನವೆಂಬರ್​ನಲ್ಲಿ 1,548 ಕೋಟಿ ಮುಟ್ಟಿದ ಯುಪಿಐ ವಹಿವಾಟು
ಯುಪಿಐ
Follow us on

ನವದೆಹಲಿ, ಡಿಸೆಂಬರ್ 3: ಯುಪಿಐ ಮೂಲಕ ನಡೆಯುತ್ತಿರುವ ವಹಿವಾಟು ಸಾರ್ವಕಾಲಿಕ ಗರಿಷ್ಠ ಮಟ್ಟ ಮುಟ್ಟಿದೆ. ಎನ್​ಪಿಸಿಐ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ನವೆಂಬರ್ ತಿಂಗಳಲ್ಲಿ ಯುಪಿಐ ಆಧಾರಿತವಾಗಿ ಆಗಿರುವ ಒಟ್ಟು ವಹಿವಾಟುಗಳ ಸಂಖ್ಯೆ 15.48 ಬಿಲಿಯನ್ ಎನ್ನಲಾಗಿದೆ. ಅಂದರೆ, ಒಂದೇ ತಿಂಗಳಲ್ಲಿ ಯುಪಿಐ ಮೂಲಕ 1,548 ಕೋಟಿ ಟ್ರಾನ್ಸಾಕ್ಷನ್​ಗಳು ನವೆಂಬರ್​ನಲ್ಲಿ ನಡೆದಿವೆ. ಕಳೆದ ವರ್ಷದ ನವೆಂಬರ್​ಗೆ ಹೋಲಿಸಿದರೆ ಈ ಬಾರಿ ವಹಿವಾಟು ಸಂಖ್ಯೆಯಲ್ಲಿ ಶೇ 38ರಷ್ಟು ಏರಿಕೆ ಆಗಿದೆ. 1,548 ಕೋಟಿ ಯುಪಿಐ ವಹಿವಾಟಿನ ಒಟ್ಟು ಮೌಲ್ಯ 21.55 ಲಕ್ಷ ಕೋಟಿ ರೂ.

ನವೆಂಬರ್ ತಿಂಗಳಲ್ಲಿ ನಿತ್ಯವೂ ಸರಾಸರಿಯಾಗಿ 51.6 ಕೋಟಿ ಯುಪಿಐ ವಹಿವಾಟುಗಳು ಆಗುತ್ತಿವೆ. ಈ ವಹಿವಾಟು ಮೌಲ್ಯ ನಿತ್ಯ 71,840 ಕೋಟಿ ರೂ ಆಗಿದೆ.

ಎನ್​ಪಿಸಿಐ ದತ್ತಾಂಶದ ಪ್ರಕಾರ ಐಎಂಪಿಎಸ್ ಟ್ರಾನ್ಸಾಕ್ಷನ್ ಸಂಖ್ಯೆ ನವೆಂಬರ್​ನಲ್ಲಿ 40.8 ಕೋಟಿ ಇದೆ. ಇವುಗಳ ಒಟ್ಟು ಮೌಲ್ಯ 5.58 ಲಕ್ಷ ಕೋಟಿ ರೂ ಇದೆ.

ಇದನ್ನೂ ಓದಿ: ಹಬ್ಬದ ಸೀಸನ್ ಮುಗಿದರೂ ಕಾರುಗಳಿಗೆ ನಿಲ್ಲದ ಬೇಡಿಕೆ; ನವೆಂಬರ್​ನಲ್ಲಿ 3,50,000 ಕಾರುಗಳ ಮಾರಾಟ

ಫಾಸ್​ಟ್ಯಾಗ್ ಟ್ರಾನ್ಸಾಕ್ಷನ್​ಗಳ ಸಂಖ್ಯೆ 34.5 ಕೋಟಿಯಿಂದ 35.9 ಕೋಟಿಗೆ ಏರಿದೆ. ಆಧಾರ್ ಚಾಲಿತ ಪೇಮೆಂಟ್ ಸಿಸ್ಟಂನಿಂದ ಆದ ಟ್ರಾನ್ಸಾಕ್ಷನ್​ಗಳ ಸಂಖ್ಯೆ 9.2 ಕೋಟಿ ಆಗಿದೆ.

ಅಕ್ಟೋಬರ್ ತಿಂಗಳಲ್ಲಿ ಯುಪಿಐ ಸಾರ್ವಕಾಲಿಕ ದಾಖಲೆಗಳನ್ನು ಬರೆದಿತ್ತು. ಆ ತಿಂಗಳು ನಡೆದ ಒಟ್ಟು ವಹಿವಾಟು ಸಂಖ್ಯೆ 1,658 ಕೋಟಿ. ಒಟ್ಟು ವಹಿವಾಟು ಮೌಲ್ಯ 23.5 ಲಕ್ಷ ಕೋಟಿ ರೂ. 2016ರಲ್ಲಿ ಯುಪಿಐ ಆರಂಭವಾದಾಗಿನಿಂದ ಒಂದು ತಿಂಗಳಲ್ಲಿ ದಾಖಲಾದ ಅತಿಹೆಚ್ಚು ವಹಿವಾಟಾಗಿದೆ.

ಮರ್ಚಂಟ್ ಟ್ರಾನ್ಸಾಕ್ಷನ್​ನಲ್ಲೂ ಯುಪಿಐ ಹೊಸ ದಾಖಲೆ

ಯುಪಿಐ ಅಥವಾ ಯೂನಿಫೈಡ್ ಪೇಮೆಂಟ್ಸ್ ಇಂಟರ್​ಫೇಸ್​ನಿಂದ ಅಕ್ಟೋಬರ್ ತಿಂಗಳಲ್ಲಿ 10 ಬಿಲಿಯನ್ ಅಥವಾ 1,000 ಕೋಟಿ ಸಂಖ್ಯೆಯ ಮರ್ಚಂಟ್ ಟ್ರಾನ್ಸಾಕ್ಷನ್​ಗಳಾಗಿವೆ. ಅಂದರೆ ಅಷ್ಟು ಪ್ರಮಾಣದಲ್ಲಿ ಗ್ರಾಹಕರಿಂದ ವರ್ತಕರಿಗೆ ಹಣದ ಪಾವತಿ ಆಗಿದೆ. ಹಬ್ಬದ ಸೀಸನ್​ನಿಂದ ಇಷ್ಟು ದೊಡ್ಡ ಪ್ರಮಾಣದಲ್ಲಿ ವಾಣಿಜ್ಯಾತ್ಮಕ ವಹಿವಾಟುಗಳು ನಡೆದಿದೆ.

ಇದನ್ನೂ ಓದಿ: ನವೆಂಬರ್​ನಲ್ಲಿ ಭಾರತದಲ್ಲಿ ಕಲ್ಲಿದ್ದಲು ಉತ್ಪಾದನೆ 90.62 ಮಿಲಿಯನ್ ಟನ್; ಶೇ. 7.2ರಷ್ಟು ಉತ್ಪಾದನೆ ಹೆಚ್ಚಳ

ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಮೊಬೈಲ್ ವ್ಯಾಲಟ್ ಇತ್ಯಾದಿ ಪರ್ಯಾಯ ಪೇಮೆಂಟ್ ಸಿಸ್ಟಂಗಳಿಗಿಂತ ಯುಪಿಐನಲ್ಲೇ ಅತಿಹೆಚ್ಚು ವಹಿವಾಟುಗಳು ಆಗಿವೆ.

ಅಕ್ಟೋಬರ್ 31, ದೀಪಾವಳಿ ದಿನದಂದು 644 ಮಿಲಿಯನ್ ಸಂಖ್ಯೆಯಷ್ಟು ಯುಪಿಐ ಟ್ರಾನ್ಸಾಕ್ಷನ್ ಆಗಿದೆ. ಅಂದರೆ ಆ ಒಂದೇ ದಿನದಲ್ಲಿ 64 ಕೋಟಿಗೂ ಅಧಿಕ ಸಂಖ್ಯೆಯ ಯುಪಿಐ ವಹಿವಾಟು ಆಗಿದೆ. ಅದು ಯಾವುದೇ ದಿನದಲ್ಲಿ ಕಂಡ ಅತಿಹೆಚ್ಚು ಸಂಖ್ಯೆಯ ವಹಿವಾಟು ಎನಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ