AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಬ್ಬದ ಸೀಸನ್ ಮುಗಿದರೂ ಕಾರುಗಳಿಗೆ ನಿಲ್ಲದ ಬೇಡಿಕೆ; ನವೆಂಬರ್​ನಲ್ಲಿ 3,50,000 ಕಾರುಗಳ ಮಾರಾಟ

Indian wholesale car market: 2024ರ ನವೆಂಬರ್ ತಿಂಗಳಲ್ಲಿ ಭಾರತದಲ್ಲಿ ಹೋಲ್​ಸೇಲ್ ಮಾರುಕಟ್ಟೆಯಲ್ಲಿ 3,50,000 ಕಾರುಗಳು ಮಾರಾಟವಾಗಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 4ರಷ್ಟು ಹೆಚ್ಚಳವಾಗಿದೆ. ಮಾರುತಿ ಸುಜುಕಿ ಅತಿಹೆಚ್ಚು ಕಾರುಗಳನ್ನು ಮಾರಿದೆ. ಹ್ಯುಂಡೈ ಮತ್ತು ಟಾಟಾ ಮೋಟಾರ್ಸ್ ಕಂಪನಿಗಳು 40,000ಕ್ಕೂ ಅಧಿಕ ಕಾರುಗಳನ್ನು ಮಾರಿವೆ. ಟೊಯೋಟಾ ಕಿರ್ಲೋಸ್ಕರ್ ಶೇ. 40ಕ್ಕಿಂತಲೂ ಹೆಚ್ಚು ಕಾರುಗಳನ್ನು ಈ ತಿಂಗಳು ಮಾರಿದೆ.

ಹಬ್ಬದ ಸೀಸನ್ ಮುಗಿದರೂ ಕಾರುಗಳಿಗೆ ನಿಲ್ಲದ ಬೇಡಿಕೆ; ನವೆಂಬರ್​ನಲ್ಲಿ 3,50,000 ಕಾರುಗಳ ಮಾರಾಟ
ಕಾರು
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 03, 2024 | 2:20 PM

Share

ನವದೆಹಲಿ, ಡಿಸೆಂಬರ್ 3: ನವೆಂಬರ್ ತಿಂಗಳಲ್ಲಿ ಭಾರತದಲ್ಲಿ 3,50,000 ಕಾರುಗಳು ಮಾರಾಟವಾಗಿವೆ. ಕಳೆದ ವರ್ಷದ ಇದೇ ತಿಂಗಳಲ್ಲಿ 3.36 ಲಕ್ಷ ಕಾರುಗಳು ವಿಲೇವಾರಿಯಾಗಿದ್ದವು. ಅದಕ್ಕೆ ಹೋಲಿಸಿದರೆ ಕಾರು ಮಾರಾಟದಲ್ಲಿ ಶೇ. 4ರಷ್ಟು ಹೆಚ್ಚಳವಾಗಿದೆ. ಇಲ್ಲಿ ಕಾರು ಮಾರಾಟ ಎಂದರೆ ಶೋರೂಮ್​ನಿಂದ ಗ್ರಾಹಕರಿಗೆ ಆದ ಮಾರಾಟದ ಮಾಹಿತಿ ಅಲ್ಲ. ತಯಾರಕರಿಂದ ಕಾರುಗಳು ಡೀಲರ್​ಗಳಿಗೆ ತಲುಪಿರುವ ಸಂಖ್ಯೆ ಇದು. ಅಂದರೆ, ಹೋಲ್​ಸೇಲ್ ಮಾರಾಟದ ಸಂಖ್ಯೆ ಇದು.

ಹಬ್ಬದ ಸೀಸನ್ ಮುಗಿದರೂ ಕಾರುಗಳಿಗೆ ಬೇಡಿಕೆ ಮುಂದುವರಿದಿರುವುದು ಗಮನಾರ್ಹ. ಭಾರತದ ನಂಬರ್ ಒನ್ ಕಾರ್ ಕಂಪನಿಯಾದ ಮಾರುತಿ ಸುಜುಕಿಯ 1,41,312 ಕಾರುಗಳು ನವೆಂಬರ್​ನಲ್ಲಿ ಮಾರಾಟವಾಗಿವೆ. ಕಾರುಗಳಲ್ಲಿ ಎಸ್​ಯುವಿಗಳು ಹೆಚ್ಚು ಬೇಡಿಕೆ ಪಡೆಯುತ್ತಿವೆ. ಮಾರುತಿ ಸುಜುಕಿಯ ಒಟ್ಟಾರೆ ಕಾರು ಮಾರಾಟದಲ್ಲಿ ಎಸ್​ಯುವಿಗಳ ಪಾಲು ಶೇ. 29ರಷ್ಟಿದೆ.

ಇದನ್ನೂ ಓದಿ: ನವೆಂಬರ್​ನಲ್ಲಿ ಭಾರತದಲ್ಲಿ ಕಲ್ಲಿದ್ದಲು ಉತ್ಪಾದನೆ 90.62 ಮಿಲಿಯನ್ ಟನ್; ಶೇ. 7.2ರಷ್ಟು ಉತ್ಪಾದನೆ ಹೆಚ್ಚಳ

ಭಾರತದ ಕಾರು ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ನಂಬರ್ ಒನ್ ಸ್ಥಾನದಲ್ಲಿ ಅಬಾಧಿತವಾಗಿ ಮುಂದುವರಿದಿದೆ. ಅದರ ಸ್ವಿಫ್ಟ್ ಡಿಜೈರ್ ಕಾರು ಅತಿಹೆಚ್ಚು ಮಾರಾಟ ಗಳಿಸಿದೆ. ಮಾರುತಿ ಸುಜುಕಿ ಬಿಟ್ಟರೆ ಹ್ಯುಂಡೈ, ಟಾಟಾ ಮೋಟಾರ್ಸ್, ಟೊಯೋಟಾ ಕಿರ್ಲೋಸ್ಕರ್, ನವೆಂಬರ್​ನಲ್ಲಿ ಅತಿಹೆಚ್ಚು ಕಾರು ಮಾರಿರುವ ಸಂಸ್ಥೆಗಳಾಗಿವೆ. ಟೊಯೊಟಾ ಕಿರ್ಲೋಸ್ಕರ್ ಕಾರುಗಳ ಮಾರಾಟದಲ್ಲಿ ಬರೋಬ್ಬರಿ ಶೇ. 44ರಷ್ಟು ಹೆಚ್ಚಳವಾಗಿದೆ.

ನವೆಂಬರ್​ನಲ್ಲಿ ಅತಿಹೆಚ್ಚು ಕಾರುಗಳ ಮಾರಾಟ ಮಾಡಿದ ಸಂಸ್ಥೆಗಳು

  1. ಮಾರುತಿ ಸುಜುಕಿ: 1,41,312 ಕಾರುಗಳು
  2. ಹ್ಯುಂಡೈ: 48,246 ಕಾರುಗಳು
  3. ಟಾಟಾ ಮೋಟಾರ್ಸ್: 47,063 ಕಾರುಗಳು
  4. ಟೊಯೋಟಾ ಕಿರ್ಲೋಸ್ಕರ್: 24,446 ಕಾರುಗಳು
  5. ಜೆಎಸ್​ಡಬ್ಲ್ಯು ಎಂಜಿ ಮೋಟಾರ್: 6,019 ಕಾರುಗಳು

ಈ ಮೇಲಿನ ಟಾಪ್-5 ಕಂಪನಿಗಳ ಪೈಕಿ ಹ್ಯುಂಡೈ ಮಾತ್ರವೇ ನವೆಂಬರ್​ನಲ್ಲಿ ಮಾರಾಟದಲ್ಲಿ ಹಿನ್ನಡೆ ಕಂಡಿರುವುದು.

ಇದನ್ನೂ ಓದಿ: ಪಂಚಾಯತಿ ಸ್ತರದಲ್ಲಿ ಪರಿವರ್ತನೆ ತರುತ್ತಿರುವ ಕೃತಕ ಬುದ್ಧಿಮತ್ತೆಯ ಭಾಷಿಣಿ ಆ್ಯಪ್

ಸುಜುಕಿ ಬೈಕ್ ಮತ್ತು ಸ್ಕೂಟರ್ಸ್…

ಸುಜುಕಿ ಮೋಟಾರ್​ಸೈಕಲ್ ಸಂಸ್ಥೆ ನವೆಂಬರ್​ನಲ್ಲಿ 94,370 ದ್ವಿಚಕ್ರ ವಾಹನಗಳನ್ನು ಮಾರಿದೆ. ಇದರಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಮಾರಾಟವಾಗಿರುವುದು 78,333 ವಾಹನಗಳಾಗಿವೆ. 16 ಸಾವಿರಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಸುಜುಕಿ ರಫ್ತು ಮಾಡಿದೆ. ಕಳೆದ ವರ್ಷದ ನವೆಂಬರ್​ಗೆ ಹೋಲಿಸಿದರೆ ಈ ಬಾರಿ ಶೇ. 15ರಷ್ಟು ಹೆಚ್ಚು ರಫ್ತಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ