ಪಂಚಾಯತಿ ಸ್ತರದಲ್ಲಿ ಪರಿವರ್ತನೆ ತರುತ್ತಿರುವ ಕೃತಕ ಬುದ್ಧಿಮತ್ತೆಯ ಭಾಷಿಣಿ ಆ್ಯಪ್

Bhashini AI: ಕೇಂದ್ರ ಸರ್ಕಾರ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಆಡಳಿತ ನಿರ್ವಹಣೆಗೆ ಸಮರ್ಪಕವಾಗಿ ಬಳಸಿಕೊಳ್ಳುತ್ತಿದೆ. ಸರ್ಕಾರವೇ ರೂಪಿಸಿರುವ ಭಾಷಿಣಿ ಎನ್ನುವ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆ್ಯಪ್​ನ ಸಹಾಯದಿಂದ ಪಂಚಾಯತಿ ಸ್ತರದಲ್ಲಿ ಆಡಳಿತ ಕಾರ್ಯ ತುಸು ಸಲೀಸಾಗಿದೆ.

ಪಂಚಾಯತಿ ಸ್ತರದಲ್ಲಿ ಪರಿವರ್ತನೆ ತರುತ್ತಿರುವ ಕೃತಕ ಬುದ್ಧಿಮತ್ತೆಯ ಭಾಷಿಣಿ ಆ್ಯಪ್
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 03, 2024 | 11:51 AM

ನವದೆಹಲಿ, ಡಿಸೆಂಬರ್ 3: ಕೇಂದ್ರ ಸರ್ಕಾರ ರೂಪಿಸಿರುವ ಭಾಷಿಣಿಯು ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಒಳಗೊಂಡಿರುವ ಆ್ಯಪ್ ಆಗಿದೆ. ಇದು ದೇಶದ 22 ಭಾಷೆಗಳಲ್ಲಿ ಲಭ್ಯ ಇದೆ. ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಸಂವಹನ ನಡೆಸಲು ಇದು ಅನುಕೂಲವಾಗಿದೆ. ಗ್ರಾಮೀಣ ಭಾಗದಲ್ಲಿ ಆಡಳಿತಕ್ಕೆ ಇದು ಪರಿಣಾಮಕಾರಿ ಸಾಧನವಾಗಿ ಪರಿಣಮಿಸಿದೆ. ಕನ್ನಡ ಸೇರಿದಂತೆ ಭಾರತದ ಹೆಚ್ಚಿನ ಭಾಷೆಗಳಲ್ಲಿ ಈ ಎಐ ಟೂಲ್ ಲಭ್ಯ ಇದೆ.

ಪಂಚಾಯತ್ ರಾಜ್ ಸಚಿವಾಲಯದ ಅಡಿಗೆ ಬರುವ ಇ-ಗ್ರಾಮಸ್ವರಾಜ್ ಎನ್ನುವ ಪೋರ್ಟಲ್​ನಲ್ಲಿ ಎಐ ಟೂಲ್ ಅನ್ನು ಸಮರ್ಪಕವಾಗಿ ಬಳಸಲಾಗುತ್ತಿದೆ. ಕನ್ನಡ, ಹಿಂದಿ, ತಮಿಳು ಇತ್ಯಾದಿ ಮುಖ್ಯಸ್ತರದ ಭಾಷೆಗಳ ಜೊತೆಗೆ ಬೋಡೋ, ಸಂತಾಲಿಯಂತಹ ಬುಡಕಟ್ಟು ಭಾಷೆಗಳೂ ಇದರಲ್ಲಿವೆ. ನೇಪಾಳಿ, ಮೈಥಿಲಿ, ಡೋಗ್ರಿ, ಸಂಸ್ಕೃತ ಮೊದಲಾದ ಭಾಷೆಗಳೂ ಇದರಲ್ಲಿವೆ.

ರಾಷ್ಟ್ರೀಯ ಮಟ್ಟದ ಮಾಹಿತಿಯೋ, ಕೇಂದ್ರ ಸರ್ಕಾರದ ಯೋಜನೆಯ ಮಾಹಿತಿಯೋ ದೇಶದ ಯಾವುದೋ ರಾಜ್ಯದ ಮೂಲೆಯಲ್ಲಿರುವ ಪಂಚಾಯಿತಿಗಳ ಮಟ್ಟವನ್ನು ತಲುಪಬೇಕಾದರೆ ಭಾಷಾ ತಡೆಗೋಡೆ ದಾಟಬೇಕಾಗುತ್ತದೆ. ಹಿಂದಿಯಲ್ಲಿರುವ ಮಾಹಿತಿಯು ತಮಿಳುನಾಡಿನ ಜನರಿಗೆ ಅರ್ಥವಾಗುವುದಿಲ್ಲ. ಇಂಗ್ಲೀಷ್​ನಲ್ಲಿರುವ ಮಾಹಿತಿ ಬಹಳ ಕಡೆ ತಿಳಿಯದೇ ಹೋಗಬಹುದು. ಭಾಷಿಣಿ ಎಐ ಮೂಲಕ ಈ ಕೊರತೆಯನ್ನು ನಿವಾರಿಸಲು ಸಾಧ್ಯವಾಗುತ್ತದೆ. ಸ್ಥಳೀಯ ಮಟ್ಟದಲ್ಲಿ ಸಮರ್ಪಕವಾಗಿ ಆಡಳಿತ ನಿರ್ವಹಣೆ ಸಾಧ್ಯವಾಗಬಲ್ಲುದು.

ಇದನ್ನೂ ಓದಿ: ಸಿಗರೇಟ್, ಪೆಪ್ಸಿ, ಕೋಕಾಕೋಲಾ ಬೆಲೆಗಳ ಏರಿಕೆ ಸಾಧ್ಯತೆ; ಪಾಪ ತೆರಿಗೆ ಶೇ. 35ಕ್ಕೆ ಏರಿಸಲು ನಿರ್ಧಾರ

ಭಾಷಿಣಿಯ ವಾಣಿ ಅನುವಾದ್ ಸೇವೆಯಲ್ಲಿ ಧ್ವನಿಯಿಂದ ಧ್ವನಿಗೆ ತರ್ಜುಮೆ ಆಗುತ್ತದೆ. ಸಮಾವೇಶ, ಉಪನ್ಯಾಸಗಳಲ್ಲಿ ಹಿಂದಿಯಲ್ಲೋ, ಇಂಗ್ಲೀಷ್​ನಲ್ಲೋ ಯಾರಾದರೂ ಭಾಷಣ ಮಾಡಿದರೆ, ಅದನ್ನು ಎಐ ಟೂಲ್ ಮೂಲಕ ಸ್ಥಳೀಯ ಭಾಷೆಗಳಿಗೆ ತರ್ಜುಮೆಗೊಳಿಸಿ ಪ್ರಸ್ತುತಪಡಿಸಲಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪ್ರವಾಹದ ನೀರಿಗಿಳಿದು 3 ಬೆಕ್ಕಿನ ಮರಿಗಳನ್ನು ರಕ್ಷಿಸಿದ ಪುಟ್ಟ ಬಾಲಕ
ಪ್ರವಾಹದ ನೀರಿಗಿಳಿದು 3 ಬೆಕ್ಕಿನ ಮರಿಗಳನ್ನು ರಕ್ಷಿಸಿದ ಪುಟ್ಟ ಬಾಲಕ
ಸಿಂಗಾಪುರ್ ವಿಮಾನ ನಿಲ್ದಾಣಕ್ಕೆ ನುಗ್ಗಿದ ಕೋತಿ; ಸಿಬ್ಬಂದಿ ಮಾಡಿದ್ದೇನು?
ಸಿಂಗಾಪುರ್ ವಿಮಾನ ನಿಲ್ದಾಣಕ್ಕೆ ನುಗ್ಗಿದ ಕೋತಿ; ಸಿಬ್ಬಂದಿ ಮಾಡಿದ್ದೇನು?
ಕ್ಲಿಯೋಪಾತ್ರ ಸ್ನಾನ ಮಾಡುತ್ತಿದ್ದ ಕತ್ತೆ ಹಾಲು ಕುಡಿದ ಬಾಬಾ ರಾಮದೇವ್
ಕ್ಲಿಯೋಪಾತ್ರ ಸ್ನಾನ ಮಾಡುತ್ತಿದ್ದ ಕತ್ತೆ ಹಾಲು ಕುಡಿದ ಬಾಬಾ ರಾಮದೇವ್
ಕಾರ್ಯಕರ್ತರಿಗೆ ಖುಷಿಯಾಗುವ ನಿರ್ಧಾರ: ನಡ್ಡಾ ಭೇಟಿ ಬಳಿಕ ಅಶೋಕ್ ಸಂತಸದ ಮಾತು
ಕಾರ್ಯಕರ್ತರಿಗೆ ಖುಷಿಯಾಗುವ ನಿರ್ಧಾರ: ನಡ್ಡಾ ಭೇಟಿ ಬಳಿಕ ಅಶೋಕ್ ಸಂತಸದ ಮಾತು
ಪಾರ್ಕ್​ನಲ್ಲಿ ಹಾಡಿನ ಶೂಟಿಂಗ್ ಮಾಡಿದ್ರೆ ನೋಡ್ತೀರಾ? ಉಪೇಂದ್ರ ಪ್ರಶ್ನೆ
ಪಾರ್ಕ್​ನಲ್ಲಿ ಹಾಡಿನ ಶೂಟಿಂಗ್ ಮಾಡಿದ್ರೆ ನೋಡ್ತೀರಾ? ಉಪೇಂದ್ರ ಪ್ರಶ್ನೆ
ಹಿಂದಿ ಹಾಡಿಗೆ ಸಖತ್ತಾಗಿ ಅಭಿನಯ ಮಾಡಿದ 5 ವರ್ಷದ ಪುಟ್ಟ ಬಾಲಕಿ
ಹಿಂದಿ ಹಾಡಿಗೆ ಸಖತ್ತಾಗಿ ಅಭಿನಯ ಮಾಡಿದ 5 ವರ್ಷದ ಪುಟ್ಟ ಬಾಲಕಿ
ಸುಳ್ಳು ಕೇಸಲ್ಲಿ ರೇವಣ್ಣನನ್ನು ಸಿಕ್ಕಿಸುವ ಪ್ರಯತ್ನ ಮಾಡಲಾಗಿತ್ತು:ಹೆಚ್ಡಿಕೆ
ಸುಳ್ಳು ಕೇಸಲ್ಲಿ ರೇವಣ್ಣನನ್ನು ಸಿಕ್ಕಿಸುವ ಪ್ರಯತ್ನ ಮಾಡಲಾಗಿತ್ತು:ಹೆಚ್ಡಿಕೆ
ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ನಾವು ನೀಡಿದ ವರದಿ ನೆರವಾಗಲಿದೆ:ಬಂಗಾರಪ್ಪ
ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ನಾವು ನೀಡಿದ ವರದಿ ನೆರವಾಗಲಿದೆ:ಬಂಗಾರಪ್ಪ
‘ಪುಷ್ಪ 2’ ಸಿನಿಮಾ ಮೊದಲ ದಿನ ಎಷ್ಟು ಗಳಿಸಲಿದೆ: ವಿತರಕರ ನಿರೀಕ್ಷೆ ಏನು?
‘ಪುಷ್ಪ 2’ ಸಿನಿಮಾ ಮೊದಲ ದಿನ ಎಷ್ಟು ಗಳಿಸಲಿದೆ: ವಿತರಕರ ನಿರೀಕ್ಷೆ ಏನು?
‘ಹೆಣ್ಮಕ್ಕಳ ಹಿಂದೆ ತಿರುಗುವ ಜೊಲ್ಲ’: ಶಿಶಿರ್ ಬಗ್ಗೆ ಚೈತ್ರಾ ಗಂಭೀರ ಆರೋಪ
‘ಹೆಣ್ಮಕ್ಕಳ ಹಿಂದೆ ತಿರುಗುವ ಜೊಲ್ಲ’: ಶಿಶಿರ್ ಬಗ್ಗೆ ಚೈತ್ರಾ ಗಂಭೀರ ಆರೋಪ