ಶೇ. 5 ಅಲ್ಲ, ಶೇ. 3.5 ಅಲ್ಲ, ಶೇ. 1ಕ್ಕೆ ಇಳಿಯಲಿದೆ ರೆಮಿಟೆನ್ಸ್ ಟ್ಯಾಕ್ಸ್; ಅಮೆರಿಕದ ಎನ್​ಆರ್​​ಐಗಳಿಗೆ ಖುಷಿ ಸುದ್ದಿ

NRIs happy with remittance tax being reduced to 1%: ರೆಮಿಟೆನ್ಸ್ ಟ್ಯಾಕ್ಸ್ ಅನ್ನು ಶೇ. 5ರಷ್ಟು ವಿಧಿಸುವ ಇರಾದೆಯಲ್ಲಿದ್ದ ಅಮೆರಿಕ ಸರ್ಕಾರ, ತೆರಿಗೆಯನ್ನು ಶೇ. 3.5ಕ್ಕೆ ಇಳಿಸಲು ನಿರ್ಧರಿಸಿತ್ತು. ಈಗ ಅದನ್ನು ಮತ್ತಷ್ಟೂ ಇಳಿಸಿ ಶೇ. 1ಕ್ಕೆ ನಿಗದಿ ಮಾಡಲು ಪರಿಷ್ಕೃತ ಮಸೂದೆಯಲ್ಲಿ ಪ್ರಸ್ತಾಪ ಮಾಡಿದೆ. 29 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಅಮೆರಿಕದಲ್ಲಿ ಕೆಲಸದಲ್ಲಿರುವ ಭಾರತೀಯ ಸಮುದಾಯದವರಿಗೆ ಮತ್ತು ಭಾರತದಲ್ಲಿರುವ ಅವರ ಕುಟುಂಬದವರಿಗೆ ಇದು ನಿರಾಳ ತರುವ ಸುದ್ದಿಯಾಗಿದೆ.

ಶೇ. 5 ಅಲ್ಲ, ಶೇ. 3.5 ಅಲ್ಲ, ಶೇ. 1ಕ್ಕೆ ಇಳಿಯಲಿದೆ ರೆಮಿಟೆನ್ಸ್ ಟ್ಯಾಕ್ಸ್; ಅಮೆರಿಕದ ಎನ್​ಆರ್​​ಐಗಳಿಗೆ ಖುಷಿ ಸುದ್ದಿ
ರೆಮಿಟೆನ್ಸ್ ಟ್ರಾನ್ಸ್​​ಫರ್ ಟ್ಯಾಕ್ಸ್

Updated on: Jun 29, 2025 | 6:28 PM

ನವದೆಹಲಿ, ಜೂನ್ 29: ಅಮೆರಿಕ ಸರ್ಕಾರವು ಶೇ. 3.5ರಷ್ಟು ರೆಮಿಟೆನ್ಸ್ ಟ್ರಾನ್ಸ್​​ಫರ್ ಟ್ಯಾಕ್ಸ್ ಹೇರುವ ನಿರ್ಧಾರದಲ್ಲಿ ಬದಲಾವಣೆ ಮಾಡಿದೆ. ರೆಮಿಟೆನ್ಸ್ ಟ್ಯಾಕ್ಸ್ ಅನ್ನು ಶೇ. 3.5 ಬದಲು ಶೇ. 1ರಷ್ಟು ಮಾತ್ರವೇ ಏರಿಕೆ ಮಾಡಲು ನಿರ್ಧರಿಸಿದೆ. ಟ್ರಂಪ್ ಸರ್ಕಾರ ರೂಪಿಸಿರುವ ‘ಒನ್ ಬಿಗ್ ಬ್ಯೂಟಿಫುಲ್ ಆ್ಯಕ್ಟ್’ನ ಪರಿಷ್ಕೃತ ಕರಡು ಕಾಯ್ದೆಯಲ್ಲಿ ರೆಮಿಟೆನ್ಸ್ ಟ್ಯಾಕ್ಸ್ ಏರಿಕೆಯನ್ನು ತಗ್ಗಿಸುವ ಪ್ರಸ್ತಾಪ ಇದೆ.

ಭಾರತದಿಂದ ದೂರದ ಅಮೆರಿಕಕ್ಕೆ ದುಡಿಯಲು ಹೋಗಿರುವ ಭಾರತೀಯರಿಗೆ ಈ ಬೆಳವಣಿಗೆ ತುಸು ನಿರಾಳ ತಂದಿದೆ. ಶೇ. 3.5ರಷ್ಟು ಟ್ಯಾಕ್ಸ್ ಜಾರಿಗೆ ಬಂದಿದ್ದರೆ ಭಾರತೀಯರು ತಮ್ಮ ತವರಿಗೆ ಹಣ ಕಳುಹಿಸಲು ಹಿಂದೇಟು ಹಾಕುವ ಸಾಧ್ಯತೆ ಇತ್ತು.

ಇದನ್ನೂ ಓದಿ: ಕ್ಯಾಷಿಯರ್, ಕ್ಲರ್ಕ್, ಸೆಕ್ರೆಟಿರಿಗಳಿರಲ್ಲ… ನಿಖಿಲ್ ಕಾಮತ್ ಪ್ರಕಾರ ಮುಂದಿನ ಕೆಲ ವರ್ಷದಲ್ಲಿ ಹೆಚ್ಚಲಿರುವ ಉದ್ಯೋಗಗಳು ಯಾವುವು ಗೊತ್ತಾ?

ಬಿಗ್ ಬ್ಯೂಟಿಫುಲ್ ಬಿಲ್​ನ ಪರಿಷ್ಕೃತ ಕರಡು ಮಸೂದೆಯಲ್ಲಿ ಮತ್ತೊಂದು ನಿರಾಳ ಮೂಡಿಸುವ ಸಂಗತಿ ಇದೆ. ಬ್ಯಾಂಕ್ ಹಾಗೂ ಇತರ ಹಣಕಾಸು ಸಂಸ್ಥೆಗಳಲ್ಲಿನ ಅಕೌಂಟ್​​​ಗಳ ಮೂಲಕ ಕಳುಹಿಸುವ ಹಣ ರವಾನೆಯನ್ನು ಟ್ಯಾಕ್ಸ್ ವ್ಯಾಪ್ತಿಯಿಂದ ಹೊರಗಿಡುವ ಪ್ರಸ್ತಾಪ ಇದೆ. ಹಾಗೆಯೇ, ಅಮೆರಿಕದಲ್ಲಿ ನೀಡಲಾಗಿರುವ ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್​​ಗಳ ಮೂಲಕ ಮಾಡಲಾದ ಹಣ ರವಾನೆಗೂ ಟ್ಯಾಕ್ಸ್ ಇರುವುದಿಲ್ಲ. ಅಂದರೆ, ಹೆಚ್ಚಿನ ರೆಮಿಟೆನ್ಸ್​​ಗಳಿಗೆ ಟ್ಯಾಕ್ಸ್ ಇರುವುದಿಲ್ಲ.

ಶೇ. 5ರಷ್ಟು ಟ್ಯಾಕ್ಸ್ ಹಾಕುವ ಪ್ರಸ್ತಾಪ ಇತ್ತು…

ಮೂಲ ಮಸೂದೆಯಲ್ಲಿ ಶೇ. 5ರಷ್ಟು ರೆಮಿಟೆನ್ಸ್ ಟ್ಯಾಕ್ಸ್ ಹಾಕುವ ಪ್ರಸ್ತಾಪ ಇತ್ತು. ಅನಿವಾಸಿ ಭಾರತೀಯರು ಅಕ್ಷರಶಃ ಹತಾಶಗೊಂಡಿದ್ದರು. ಬಳಿಕ ಅದನ್ನು ಶೇ. 3.5ಕ್ಕೆ ಇಳಿಸಲು ನಿರ್ಧರಿಸಲಾಯಿತು. ಈಗ ಪರಿಷ್ಕೃತ ಕರಡು ಮಸೂದೆಯಲ್ಲಿ ರೆಮಿಟೆನ್ಸ್ ಟ್ಯಾಕ್ಸ್ ಶೇ. 1ಕ್ಕೆ ಇಳಿಸಲು ಪ್ರಸ್ತಾಪಿಸಲಾಗಿದೆ.

ಇದನ್ನೂ ಓದಿ: ಕಡಿಮೆ ಹಣದುಬ್ಬರ, ಹೆಚ್ಚು ಉದ್ಯೋಗ, ಉತ್ತಮ ರಫ್ತು: ಉತ್ತಮ ಮುನ್ನಡೆಯಲ್ಲಿ ಭಾರತದ ಆರ್ಥಿಕತೆ

ಅಮೆರಿಕದಲ್ಲಿ ವಿದೇಶೀ ಸಮುದಾಯಗಳ ಸಂಖ್ಯೆ ಬಹಳ ಇದೆ. ಚೀನೀಯರನ್ನು ಬಿಟ್ಟರೆ ಅತಿಹೆಚ್ಚು ವಿದೇಶೀ ಸಮುದಾಯ ಎಂದರೆ ಭಾರತೀಯರದ್ದು. 2023ರಲ್ಲಿ ಅಮೆರಿಕದಲ್ಲಿ ಭಾರತ ಸಂಜಾತ ವ್ಯಕ್ತಿಗಳ ಸಂಖ್ಯೆ 29 ಲಕ್ಷ ಇತ್ತು. 2023-24ರ ವರ್ಷದಲ್ಲಿ ಭಾರತಕ್ಕೆ ಅಮೆರಿಕದಿಂದ ರೆಮಿಟೆನ್ಸ್ ಮೂಲಕ ಬಂದಿದ್ದು 32 ಬಿಲಿಯನ್ ಡಾಲರ್​​ನಷ್ಟು ಮೊತ್ತ. ಭಾರತಕ್ಕೆ ಬರುವ ಒಟ್ಟಾರೆ ರೆಮಿಟೆನ್ಸ್ ಆದಾಯದಲ್ಲಿ ಅಮೆರಿಕದ ಪಾಲು ಶೇ. 27.7 ಎನ್ನಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ