
ನವದೆಹಲಿ, ಸೆಪ್ಟೆಂಬರ್ 2: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವ್ಯಾಪಾರ ವಿಚಾರದಲ್ಲಿ ಭಾರತಕ್ಕೆ ಪದೇ ಪದೇ ತಿವಿಯುತ್ತಲೇ ಬಂದಿದ್ದಾರೆ. ಅಮೆರಿಕದೊಂದಿಗೆ ಭಾರತ ದೊಡ್ಡ ಬ್ಯುಸಿನೆಸ್ (India US trade) ಮಾಡುತ್ತದೆ. ಭಾರತದೊಂದಿಗೆ ಅಮೆರಿಕದ ಬ್ಯುಸಿನೆಸ್ ಬಹಳ ಕಡಿಮೆ. ಭಾರತ ಸಿಕ್ಕಾಪಟ್ಟೆ ಟ್ಯಾರಿಫ್ ಹಾಕುತ್ತದೆ. ಅಮೆರಿಕದಿಂದ ಎಲ್ಲಾ ಪಡೆದು ತಾನು ಏನೂ ಕೊಡುವುದಿಲ್ಲ ಎಂದು ಭಾರತದ ಬಗ್ಗೆ ಟ್ರಂಪ್ ಬಾರಿ ಬಾರಿ ಆರೋಪ ಮಾಡುತ್ತಿದ್ದಾರೆ.
ಎರಡೂ ದೇಶಗಳ ಟ್ರೇಡಿಂಗ್ ಅನ್ನು ಮೇಲ್ನೋಟಕ್ಕೆ ಗಮನಿಸಿದರೆ ಅಮೆರಿಕವು ಟ್ರೇಡ್ ಡೆಫಿಸಿಟ್ ಹೊಂದಿದೆ. ಅಂದರೆ, ಅಮೆರಿಕದಿಂದ ಭಾರತಕ್ಕೆ ಹೋಗುವುದಕ್ಕಿಂತ ಹೆಚ್ಚು ವ್ಯಾಪಾರವು ಭಾರತದಿಂದ ಅಮೆರಿಕಕ್ಕೆ ಹೋಗುತ್ತದೆ. ಅಂದರೆ, ಭಾರತ ಅಮೆರಿಕಕ್ಕೆ ಹೆಚ್ಚು ರಫ್ತು ಮಾಡುತ್ತದೆ ಎಂಬುದು ಮೇಲ್ನೋಟಕ್ಕೆ ಕಾಣುವ ಸಂಗತಿ. ಆದರೆ, ಗ್ಲೋಬಲ್ ಟ್ರೇಡ್ ರಿಸರ್ಚ್ ಇನಿಷಿಯೇಟಿವ್ (ಜಿಟಿಆರ್ಐ) ವಿಶ್ಲೇಷಣೆ ಪ್ರಕಾರ ಭಾರತದಿಂದ ಅಮೆರಿಕವೇ ಹೆಚ್ಚು ಲಾಭ ಮಾಡುತ್ತದಂತೆ. ಈ ವರದಿ ಪ್ರಕಾರ ಅಮೆರಿಕವು 35-40 ಟ್ರೇಡ್ ಸರ್ಪ್ಲಸ್ ಹೊಂದಿದೆ.
ಇದನ್ನೂ ಓದಿ: ಟ್ಯಾರಿಫ್ ಗದ್ದಲಗಳ ಮಧ್ಯೆ ಅಮೆರಿಕದೊಂದಿಗೆ ಟ್ರೇಡ್ ಡೀಲ್ಗೆ ಮಾತುಕತೆ ಪುನಾರಂಭಿಸಿದ ಭಾರತ
ಇದನ್ನೂ ಓದಿ: ಆಗಸ್ಟ್ನಲ್ಲಿ ದೈನಂದಿನ ಸರಾಸರಿ ಯುಪಿಐ ವಹಿವಾಟು 65 ಕೋಟಿ; ಒಂದು ತಿಂಗಳಲ್ಲಿ 25 ಲಕ್ಷ ಕೋಟಿ ರೂ ಟ್ರಾನ್ಸಾಕ್ಷನ್ಸ್
ಒಂದು ವರದಿ ಪ್ರಕಾರ ಅಮೆರಿಕದ ಔದ್ಯಮಿಕ ಉತ್ಪನ್ನಗಳು ಹಾಗೂ ಸೇಬು, ಆಲ್ಮಂಡ್ ಇತ್ಯಾದಿ ಕೆಲ ಕೃಷಿ ಉತ್ಪನ್ನಗಳ ಮೇಲಿನ ಸುಂಕವನ್ನು ತೆಗೆದುಹಾಕಲು ಭಾರತ ಸಿದ್ಧವಾಗಿದೆ.ಅಮೆರಿಕ ಭಾರತಕ್ಕೆ ಮಾಡುವ ಶೇ. 95ರಷ್ಟು ರಫ್ತು ಈ ಉತ್ಪನ್ನಗಳೇ ಇವೆ. ಇದರಿಂದ ಅಮೆರಿಕಕ್ಕೆ ಒಂದು ರೀತಿಯಲ್ಲಿ ಸುಂಕರಹಿತವಾಗಿ ಭಾರತದ ಮಾರುಕಟ್ಟೆ ಪ್ರವೇಶ ಸಿಕ್ಕಂತಾಗುತ್ತದೆ ಎಂಬುದು ಜಿಟಿಆರ್ಐನ ಅನಿಸಿಕೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ