ಭಾರತದಲ್ಲಿ ರೀಟೇಲ್ ಬ್ಯುಸಿನೆಸ್ ನಿಲ್ಲಿಸಲಿರುವ ಜರ್ಮನ್ ಮೂಲದ ಬ್ಯಾಂಕ್
Deutsche bank puts up its Indian retail assets for sale: ಜರ್ಮನಿ ಮೂಲದ ಡಾಯು ಬ್ಯಾಂಕ್ ತನ್ನ ರೀಟೇಲ್ ಬ್ಯುಸಿನೆಸ್ನಲ್ಲಿ ಬದಲಾವಣೆ ಮಾಡಲು ಹೊರಟಿದೆ. ಇದರ ಭಾಗವಾಗಿ ಭಾರತದಲ್ಲಿರುವ ತನ್ನ ಸಂಪೂರ್ಣ ರೀಟೇಲ್ ಆಸ್ತಿಗಳನ್ನು ಮಾರಾಟ ಮಾಡಲು ನಿರ್ಧರಿಸಿದೆ ಎನ್ನಲಾಗಿದೆ. ರಾಯ್ಟರ್ಸ್ ವರದಿ ಪ್ರಕಾರ ಇದರ ಭಾರತೀಯ ಬ್ಯುಸಿನೆಸ್ ಮಾರಾಟಕ್ಕಾಗಿ ವಿವಿಧ ಬ್ಯಾಂಕುಗಳಿಂದ ಬಿಡ್ ಕರೆಯಲಾಗಿತ್ತು.

ನವದೆಹಲಿ, ಸೆಪ್ಟೆಂಬರ್ 2: ಜರ್ಮನಿ ಮೂಲದ ಡಾಯ್ಶು ಬ್ಯಾಂಕ್ (Deutsche Bank) ಭಾರತದಲ್ಲಿರುವ ತನ್ನ ರೀಟೇಲ್ ಬ್ಯಾಂಕಿಂಗ್ ಬ್ಯುಸಿನೆಸ್ (Retail banking assents) ಅನ್ನು ಮಾರುವ ಆಲೋಚನೆಯಲ್ಲಿದೆ. ಈ ನಿಟ್ಟಿನಲ್ಲಿ ಪ್ರಯತ್ನಗಳೂ ಕೂಡ ನಡೆದಿವೆ. ರಾಯ್ಟರ್ಸ್ ಸುದ್ದಿ ಸಂಸ್ಥೆ ಬಿಡುಗಡೆ ಮಾಡಿರುವ ವರದಿ ಪ್ರಕಾರ, ತನ್ನ ಭಾರತೀಯ ರೀಟೇಲ್ ಬ್ಯುಸಿನೆಸ್ಗಳನ್ನು ಮಾರುವ ಸಲುವಾಗಿ ಭಾರತವೂ ಸೇರಿದಂತೆ ವಿವಿಧ ದೇಶಗಳ ಬ್ಯಾಂಕುಗಳಿಂದ ಬಿಡ್ ಆಹ್ವಾನಿಸಿರುವುದು ತಿಳಿದುಬಂದಿದೆ.
ಡಾಯ್ಶು ಬ್ಯಾಂಕ್ ತನ್ನ ರೀಟೇಲ್ ಬ್ಯುಸಿನೆಸ್ ಅನ್ನು ಹೆಚ್ಚು ಲಾಭದಾಯಕವಾಗಿ ಮಾಡುವ ಗುರಿ ಇಟ್ಟಿದೆ. ಸರಿಯಾಗಿ ಲಾಭ ತರದ ಬ್ಯಾಂಕ್ ಶಾಖೆಗಳನ್ನು ಮುಚ್ಚುವುದು ಸೇರಿದಂತೆ ವಿವಿಧ ಕ್ರಮಗಳನ್ನು ಈ ಜರ್ಮನ್ ಬ್ಯಾಂಕ್ ಕೈಗೊಳ್ಳುತ್ತಿದೆ. ಈ ವರ್ಷ 2,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುವ ಯೋಜನೆಯೂ ಇದರಲ್ಲಿದೆ.
ಇದನ್ನೂ ಓದಿ: Nestle CEO: ಸಹೋದ್ಯೋಗಿ ಜೊತೆ ಸಂಬಂಧ; ನೆಸ್ಲೆ ಸಿಇಒ ಲಾರೆಂಟ್ ವಜಾ
ಭಾರತದಲ್ಲಿ ಡಾಯ್ಶು ಬ್ಯಾಂಕ್ ತನ್ನ ರೀಟೇಲ್ ಸೆಕ್ಟರ್ನಲ್ಲಿ 17 ಶಾಖೆಗಳನ್ನು ಹೊಂದಿದೆ. ಇಷ್ಟೂ ಬ್ಯಾಂಕ್ ಬ್ರ್ಯಾಂಚ್ಗಳನ್ನು ಅದು ಮಾರಾಟ ಮಾಡಲು ಹೊರಟಿದೆ ಎಂದು ರಾಯ್ಟರ್ಸ್ ವರದಿಯು ಎರಡು ಮೂಲಗಳನ್ನು ಉಲ್ಲೇಖಿಸಿ ಮಾಹಿತಿ ನೀಡಿದೆ.
ಆದರೆ, ಡಾಯ್ಶೆ ಬ್ಯಾಂಕ್ನ ವಕ್ತಾರರು ಈ ಸುದ್ದಿಯನ್ನು ಅಲ್ಲಗಳೆದಿದ್ದಾರೆ. ಇದೆಲ್ಲವೂ ಊಹಾಪೋಹ ಮತ್ತು ಮಾರುಕಟ್ಟೆಯ ಗಾಳಿ ಸುದ್ದಿ ಎಂದು ವಕ್ತಾರರು ತಳ್ಳಿ ಹಾಕಿದ್ದಾರೆ. ರಾಯ್ಟರ್ಸ್ಗೆ ಈ ಮಾರಾಟ ಪ್ರಯತ್ನದ ಬಗ್ಗೆ ಮಾಹಿತಿ ನೀಡಿರುವ ಎರಡು ಮೂಲಗಳು ಹೇಳುವ ಪ್ರಕಾರ, ಮಾರಾಟ ಸಂಬಂಧದ ಮಾತುಕತೆಗಳು ಇನ್ನೂ ಖಾಸಗಿಯಾಗಿ ಇರುವುದರಿಂದ ಸ್ಪಷ್ಟವಾಗಿ ಹೇಳಲು ಆಗುವುದಿಲ್ಲ.
ಇದನ್ನೂ ಓದಿ: ಆಗಸ್ಟ್ನಲ್ಲಿ ದೈನಂದಿನ ಸರಾಸರಿ ಯುಪಿಐ ವಹಿವಾಟು 65 ಕೋಟಿ; ಒಂದು ತಿಂಗಳಲ್ಲಿ 25 ಲಕ್ಷ ಕೋಟಿ ರೂ ಟ್ರಾನ್ಸಾಕ್ಷನ್ಸ್
ಈ ಮೂಲಗಳ ಪ್ರಕಾರ, ಭಾರತದಲ್ಲಿರುವ ತಮ್ಮ ರೀಟೇಲ್ ಬ್ಯಾಂಕಿಂಗ್ ಬ್ಯುಸಿನೆಸ್ಗೆ ಬಿಡ್ಗಳನ್ನು ಸಲ್ಲಿಸಲು ಆಗಸ್ಟ್ 29ಕ್ಕೆ ಡೆಡ್ಲೈನ್ ನಿಗದಿ ಮಾಡಲಾಗಿತ್ತು. ಆದರೆ, ಯಾವ್ಯಾವ ಬ್ಯಾಂಕುಗಳಿಂದ ಬಿಡ್ ಸಲ್ಲಿಕೆಯಾಗಿವೆ ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ ಎಂದು ರಾಯ್ಟರ್ಸ್ ವರದಿ ಹೇಳಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




