AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೆರಿಕದಿಂದ ಭಾರತಕ್ಕೆ ಜಾಸ್ತಿ ಲಾಭವಾ? ಭಾರತದಿಂದ ಅಮೆರಿಕಕ್ಕೆ ಹೆಚ್ಚು ಲಾಭವಾ? ಇಲ್ಲಿದೆ ಕಣ್ಣಿಗೆ ಕಾಣದ ಸತ್ಯ

GTRI Analysis says US makes huge profit from India: ಭಾರತಕ್ಕೆ ಅಮೆರಿಕ ರಫ್ತು ಮಾಡುವುದಕ್ಕಿಂತ ಹೆಚ್ಚು ರಫ್ತನ್ನು ಭಾರತವು ಅಮೆರಿಕಕ್ಕೆ ಮಾಡುತ್ತದೆ ಎಂದು ಡೊನಾಲ್ಡ್ ಟ್ರಂಪ್ ಆಗಾಗ ಹೇಳುತ್ತಾರೆ. ಅಮೆರಿಕದಿಂದ ಲಾಭ ಮಾಡುವುದರ ಜೊತೆಗೆ ಭಾರತ ಟ್ಯಾರಿಫ್ ಕೂಡ ಹಾಕುತ್ತದೆ ಎಂದು ಟೀಕಿಸುತ್ತಾರೆ. ಆದರೆ, ವಾಸ್ತವದಲ್ಲಿ ಭಾರತದಿಂದ ಅಮೆರಿಕವೇ ಹೆಚ್ಚು ಲಾಭ ಮಾಡುತ್ತದೆ ಎಂದು ಜಿಟಿಆರ್​ಐನ ವರದಿಯೊಂದು ಹೇಳಿದೆ.

ಅಮೆರಿಕದಿಂದ ಭಾರತಕ್ಕೆ ಜಾಸ್ತಿ ಲಾಭವಾ? ಭಾರತದಿಂದ ಅಮೆರಿಕಕ್ಕೆ ಹೆಚ್ಚು ಲಾಭವಾ? ಇಲ್ಲಿದೆ ಕಣ್ಣಿಗೆ ಕಾಣದ ಸತ್ಯ
ಟ್ರೇಡಿಂಗ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 02, 2025 | 4:04 PM

Share

ನವದೆಹಲಿ, ಸೆಪ್ಟೆಂಬರ್ 2: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವ್ಯಾಪಾರ ವಿಚಾರದಲ್ಲಿ ಭಾರತಕ್ಕೆ ಪದೇ ಪದೇ ತಿವಿಯುತ್ತಲೇ ಬಂದಿದ್ದಾರೆ. ಅಮೆರಿಕದೊಂದಿಗೆ ಭಾರತ ದೊಡ್ಡ ಬ್ಯುಸಿನೆಸ್ (India US trade) ಮಾಡುತ್ತದೆ. ಭಾರತದೊಂದಿಗೆ ಅಮೆರಿಕದ ಬ್ಯುಸಿನೆಸ್ ಬಹಳ ಕಡಿಮೆ. ಭಾರತ ಸಿಕ್ಕಾಪಟ್ಟೆ ಟ್ಯಾರಿಫ್ ಹಾಕುತ್ತದೆ. ಅಮೆರಿಕದಿಂದ ಎಲ್ಲಾ ಪಡೆದು ತಾನು ಏನೂ ಕೊಡುವುದಿಲ್ಲ ಎಂದು ಭಾರತದ ಬಗ್ಗೆ ಟ್ರಂಪ್ ಬಾರಿ ಬಾರಿ ಆರೋಪ ಮಾಡುತ್ತಿದ್ದಾರೆ.

ಎರಡೂ ದೇಶಗಳ ಟ್ರೇಡಿಂಗ್ ಅನ್ನು ಮೇಲ್ನೋಟಕ್ಕೆ ಗಮನಿಸಿದರೆ ಅಮೆರಿಕವು ಟ್ರೇಡ್ ಡೆಫಿಸಿಟ್ ಹೊಂದಿದೆ. ಅಂದರೆ, ಅಮೆರಿಕದಿಂದ ಭಾರತಕ್ಕೆ ಹೋಗುವುದಕ್ಕಿಂತ ಹೆಚ್ಚು ವ್ಯಾಪಾರವು ಭಾರತದಿಂದ ಅಮೆರಿಕಕ್ಕೆ ಹೋಗುತ್ತದೆ. ಅಂದರೆ, ಭಾರತ ಅಮೆರಿಕಕ್ಕೆ ಹೆಚ್ಚು ರಫ್ತು ಮಾಡುತ್ತದೆ ಎಂಬುದು ಮೇಲ್ನೋಟಕ್ಕೆ ಕಾಣುವ ಸಂಗತಿ. ಆದರೆ, ಗ್ಲೋಬಲ್ ಟ್ರೇಡ್ ರಿಸರ್ಚ್ ಇನಿಷಿಯೇಟಿವ್ (ಜಿಟಿಆರ್​ಐ) ವಿಶ್ಲೇಷಣೆ ಪ್ರಕಾರ ಭಾರತದಿಂದ ಅಮೆರಿಕವೇ ಹೆಚ್ಚು ಲಾಭ ಮಾಡುತ್ತದಂತೆ. ಈ ವರದಿ ಪ್ರಕಾರ ಅಮೆರಿಕವು 35-40 ಟ್ರೇಡ್ ಸರ್​ಪ್ಲಸ್ ಹೊಂದಿದೆ.

ಇದನ್ನೂ ಓದಿ: ಟ್ಯಾರಿಫ್ ಗದ್ದಲಗಳ ಮಧ್ಯೆ ಅಮೆರಿಕದೊಂದಿಗೆ ಟ್ರೇಡ್ ಡೀಲ್​ಗೆ ಮಾತುಕತೆ ಪುನಾರಂಭಿಸಿದ ಭಾರತ

ಭಾರತದಿಂದ ಅಮೆರಿಕ ಮಾಡುವ ಲಾಭ ಒಂದಾ ಎರಡಾ..!

  • ಭಾರತದ ಅಗಾಧ ಡಿಜಿಟಲ್ ಕ್ಷೇತ್ರದಿಂದ ಅಮೆರಿಕನ್ ಟೆಕ್ ಕಂಪನಿಗಳು ಭರಪೂರ ಲಾಭ ಮಾಡುತ್ತವೆ. ಗೂಗಲ್, ಮೆಟಾ, ಅಮೇಜಾನ್, ಆ್ಯಪಲ್, ಮೈಕ್ರೋಸಾಫ್ಟ್ ಮೊದಲಾದ ಕಂಪನಿಗಳು ಭಾರತದಲ್ಲಿ ವರ್ಷಕ್ಕೆ 15-20 ಬಿಲಿಯನ್ ಡಾಲರ್ ಆದಾಯ ಪಡೆಯುತ್ತವೆ.
  • ಮೆಕ್​ಡೊನಾಲ್ಡ್ಸ್, ಕೋಕಾ ಕೋಲಾ ಹಾಗೂ ಹಲವು ಅಮೆರಿಕನ್ ಕಂಪನಿಗಳು ಭಾರತದಲ್ಲಿ 15 ಬಿಲಿಯನ್ ಡಾಲರ್ ಬ್ಯುಸಿನೆಸ್ ಮಾಡುತ್ತವೆ.
  • ಷೇರುಪೇಟೆಯ ಹಣಕಾಸು ಸಂಸ್ಥೆಗಳು, ಕನ್ಸಲ್ಟಿಂಗ್ ಕಂಪನಿಗಳು ಶುಲ್ಕವಾಗಿ 10-15 ಬಿಲಿಯನ್ ಡಾಲರ್ ಆದಾಯ ಗಳಿಸುತ್ತವೆ.
  • ವಾಲ್ಮಾರ್ಟ್, ಐಬಿಎಂ, ಡೆಲ್ ಮತ್ತಿತರ ಕಂಪನಿಗಳ ಗ್ಲೋಬಲ್ ಕೇಪಬಿಲಿಟಿ ಸೆಂಟರ್​ಗಳು 15-20 ಬಿಲಿಯನ್ ಡಾಲರ್ ಆದಾಯ ಜನರೇಟ್ ಮಾಡುತ್ತವೆ.
  • ಫಾರ್ಮಾ ಕ್ಷೇತ್ರದಲ್ಲಿ ಪೇಟೆಂಟ್​ಗಳು, ಹಾಲಿವುಡ್ ಸಿನಿಮಾಗಳು, ಸ್ಟ್ರೀಮಿಂಗ್ ಸರ್ವಿಸ್, ಡಿಫೆನ್ಸ್ ಡೀಲ್ ಇತ್ಯಾದಿಗಳಿಂದ ಕೆಲ ಬಿಲಿಯನ್ ಡಾಲರ್ ಹಣ ಸಿಗುತ್ತದೆ.
  • ಅಮೆರಿಕದ ವಿವಿಧ ಯೂನಿವರ್ಸಿಟಿಗಳಿಗೆ ಓದಲು ಹೋಗುವ ಭಾರತೀಯ ವಿದ್ಯಾರ್ಥಿಗಳಿಂದ ಫೀಸು ಇತ್ಯಾದಿ ವೆಚ್ಚದಿಂದ ಆ ದೇಶಕ್ಕೆ ವರ್ಷಕ್ಕೆ 25 ಬಿಲಿಯನ್ ಡಾಲರ್ ಆದಾಯ ಬರುತ್ತದೆ.

ಇದನ್ನೂ ಓದಿ: ಆಗಸ್ಟ್​​ನಲ್ಲಿ ದೈನಂದಿನ ಸರಾಸರಿ ಯುಪಿಐ ವಹಿವಾಟು 65 ಕೋಟಿ; ಒಂದು ತಿಂಗಳಲ್ಲಿ 25 ಲಕ್ಷ ಕೋಟಿ ರೂ ಟ್ರಾನ್ಸಾಕ್ಷನ್ಸ್

ಒಂದು ವರದಿ ಪ್ರಕಾರ ಅಮೆರಿಕದ ಔದ್ಯಮಿಕ ಉತ್ಪನ್ನಗಳು ಹಾಗೂ ಸೇಬು, ಆಲ್ಮಂಡ್ ಇತ್ಯಾದಿ ಕೆಲ ಕೃಷಿ ಉತ್ಪನ್ನಗಳ ಮೇಲಿನ ಸುಂಕವನ್ನು ತೆಗೆದುಹಾಕಲು ಭಾರತ ಸಿದ್ಧವಾಗಿದೆ.ಅಮೆರಿಕ ಭಾರತಕ್ಕೆ ಮಾಡುವ ಶೇ. 95ರಷ್ಟು ರಫ್ತು ಈ ಉತ್ಪನ್ನಗಳೇ ಇವೆ. ಇದರಿಂದ ಅಮೆರಿಕಕ್ಕೆ ಒಂದು ರೀತಿಯಲ್ಲಿ ಸುಂಕರಹಿತವಾಗಿ ಭಾರತದ ಮಾರುಕಟ್ಟೆ ಪ್ರವೇಶ ಸಿಕ್ಕಂತಾಗುತ್ತದೆ ಎಂಬುದು ಜಿಟಿಆರ್​ಐನ ಅನಿಸಿಕೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ