AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Nestle CEO: ಸಹೋದ್ಯೋಗಿ ಜೊತೆ ಸಂಬಂಧ; ನೆಸ್ಲೆ ಸಿಇಒ ಲಾರೆಂಟ್ ವಜಾ

Romantic relationship with subordinate, Nestle CEO fired: ಸ್ವಿಟ್ಜರ್​ಲ್ಯಾಂಡ್ ಮೂಲಕ ನೆಸ್ಲೆ ಕಂಪನಿಯಲ್ಲಿ ಒಂದು ವರ್ಷದ ಅಂತರದಲ್ಲಿ ಎರಡನೇ ಬಾರಿ ಸಿಇಒ ಬದಲಾವಣೆ ಆಗಿದೆ. ಲಾರೆಂಟ್ ಫ್ರೀಕ್ಸ್ ಅವರನ್ನು ವಜಾಗೊಳಿಸಲಾಗಿದೆ. ಫಿಲಿಪ್ ನವ್ರಾಟಿಲ್ ಅವರನ್ನು ನೂತನ ಸಿಇಒ ಆಗಿ ನೇಮಿಸಲಾಗಿದೆ. ಲಾರೆಂಟ್ ಅವರು ಸಹೋದ್ಯೋಗಿ ಮಹಿಳೆಯೊಂದಿಗೆ ರೋಮ್ಯಾಂಟಿಕ್ ಸಂಬಂಧ ಇಟ್ಟುಕೊಂಡಿರುವ ವಿಚಾರ ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ತೆಗೆಯಲಾಗಿದೆ.

Nestle CEO: ಸಹೋದ್ಯೋಗಿ ಜೊತೆ ಸಂಬಂಧ; ನೆಸ್ಲೆ ಸಿಇಒ ಲಾರೆಂಟ್ ವಜಾ
ಲಾರೆಂಟ್ ಫ್ರೀಕ್ಸೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 02, 2025 | 11:04 AM

Share

ನವದೆಹಲಿ, ಸೆಪ್ಟೆಂಬರ್ 2: ತನ್ನ ಕೈಕೆಳಗೆ ಕೆಲಸ ಮಾಡುವ ಮತ್ತು ತನಗೆ ನೇರವಾಗಿ ರಿಪೋರ್ಟ್ ಮಾಡುವ ಸಹೋದ್ಯೊಗಿ ಮಹಿಳೆಯೊಂದಿಗೆ ಪ್ರೇಮ ಸಂಬಂಧ ಇರಿಸಿಕೊಂಡಿದ್ದ ನೆಸ್ಲೆ ಸಿಇಒ ಲಾರೆಂಟ್ ಫ್ರೀಕ್ಸ್ (Laurent Freixe) ಅವರನ್ನು ವಜಾಗೊಳಿಸಲಾಗಿದೆ. ಸಹೋದ್ಯೋಗಿ ಜೊತೆಗಿನ ಸಂಬಂಧವನ್ನು ಮುಚ್ಚಿಟ್ಟ ಕಾರಣಕ್ಕೆ ಈ ಕ್ರಮ ತೆಗೆದುಕೊಳ್ಳಲಾಗಿದೆ. ನೆಸ್ಸೆ ಕಂಪನಿಯಲ್ಲೇ ಹಿರಿಯ ಎಕ್ಸಿಕ್ಯೂಟಿವ್ ಆಗಿರುವ ಫಿಲಿಪ್ ನವ್ರಾಟಿಲ್ (Philipp Navratil) ಅವರನ್ನು ನೂತನ ಸಿಇಒ ಆಗಿ ನೇಮಕ ಮಾಡಲಾಗಿದೆ.

ಸ್ವಿಟ್ಜರ್​ಲ್ಯಾಂಡ್ ಮೂಲದ ನೆಸ್ಲೆ ಕಂಪನಿಯಲ್ಲೇ ಸಹೋದ್ಯೋಗಿ ಜೊತೆ ಲಾರೆಂಟ್ ಫ್ರೀಕ್ಸೆ ಅವರಿಗೆ ರೋಮ್ಯಾಂಟಿಕ್ ರಿಲೇಶನ್​ಶಿಪ್ ಇರುವುದಾಗಿ ರಹಸ್ಯವಾಗಿ ದೂರೊಂದು ದಾಖಲಾಗಿತ್ತು. ಕಂಪನಿಯ ಛೇರ್ಮನ್ ಪೌಲ್ ಬುಲ್ಕೆ (Paul Bulcke) ಮತ್ತು ಸ್ವತಂತ್ರ ನಿರ್ದೇಶಕ ಪಾಬ್ಲೊ ಇಸ್ಲಾ ಅವರ ಕಣ್ಗಾವಲಿನಲ್ಲಿ ಆಂತರಿಕ ಮತ್ತು ಬಾಹ್ಯ ತನಿಖೆ ನಡೆಸಲಾಯಿತು. ಅದರಲ್ಲಿ ಲಾರೆಂಟ್ ಅವರು ಸಹೋದ್ಯೋಗಿ ಜೊತೆ ಸಂಬಂಧ ಹೊಂದಿರುವುದು ಜಾಹೀರಾಗಿದೆ. ನಂತರ ಅವರನ್ನು ತತ್​ಕ್ಷಣದಿಂದಲೇ ಜಾರಿಗೆ ಬರುವಂತೆ ಸಿಇಒ ಸ್ಥಾನದಿಂದ ವಜಾಗೊಳಿಸುವ ನಿರ್ಧಾರ ಕೈಗೊಳ್ಳಲಾಯಿತು.

ಇದನ್ನೂ ಓದಿ: ಆಗಸ್ಟ್​​ನಲ್ಲಿ ದೈನಂದಿನ ಸರಾಸರಿ ಯುಪಿಐ ವಹಿವಾಟು 65 ಕೋಟಿ; ಒಂದು ತಿಂಗಳಲ್ಲಿ 25 ಲಕ್ಷ ಕೋಟಿ ರೂ ಟ್ರಾನ್ಸಾಕ್ಷನ್ಸ್

ಲಾರೆಂಟ್ ಅವರು ನೆಸ್ಲೆಯಲ್ಲಿ ನಾಲ್ಕು ದಶಕಗಳಿಂದ ಕೆಲಸ ಮಾಡಿದ್ದಾರೆ. ಕಳೆದ ವರ್ಷ ಸಿಇಒ ಆಗಿದ್ದ ಮಾರ್ಕ್ ಶ್ನೀಡರ್ ಅವರನ್ನು ಮ್ಯಾನೇಜ್ಮೆಂಟ್ ಕಿತ್ತುಹಾಕಿತ್ತು. ಅವರ ಜಾಗಕ್ಕೆ ಲಾರೆಂಟ್ ಅವರನ್ನು ಸಿಇಒ ಆಗಿ ನೇಮಕ ಮಾಡಲಾಯಿತು. ಒಂದು ವರ್ಷದ ಅಂತರದಲ್ಲಿ ಲಾರೆಂಟ್ ಕೂಡ ನಿರ್ಗಮಿಸುತ್ತಿದ್ದಾರೆ. ಸಿಇಒ ಸ್ಥಾನ ಮಾತ್ರವಲ್ಲ, ನೌಕರಿಯಿಂದಲೇ ಅವರನ್ನು ತೆಗೆಯಲಾಗಿದೆ. ಇಷ್ಟು ಮಾತ್ರವಲ್ಲ, ಅವರಿಗೆ ಎಕ್ಸಿಟ್ ಪ್ಯಾಕೇಜ್ ಕೂಡ ನೀಡದೇ ಕಳುಹಿಸಲಾಗಿದೆ.

‘ಇದು ಅಗತ್ಯವಾಗಿರುವ ನಿರ್ಧಾರ. ನೆಸ್ಲೆಯ ಬಲ ಇರುವುದೇ ಅದರ ಮೌಲ್ಯಗಳಲ್ಲಿ. ಇಷ್ಟು ವರ್ಷ ಕಂಪನಿಗೆ ಸೇವೆ ಸಲ್ಲಿಸಿದ ಲಾರೆಂಟ್ ಅವರಿಗೆ ಧನ್ಯವಾದ ಹೇಳಬಯಸುತ್ತೇನೆ’ ಎಂದು ಛೇರ್ಮನ್ ಪೌಲ್ ಬಲ್ಕೆ ತಿಳಿಸಿದ್ದಾರೆ. ನೆಸ್ಲೆ ಛೇರ್ಮನ್ ಅವರು ಮುಂದಿನ ವರ್ಷದವರೆಗೂ ಕಂಪನಿಯ ಸೇವೆಯಲ್ಲಿ ಮುಂದುವರಿಯುತ್ತಾರೆ.

ಇದನ್ನೂ ಓದಿ: ಭಾರತದಲ್ಲಿ 7,000 ಕಿಮೀ ಬುಲೆಟ್ ರೈಲು ನೆಟ್ವರ್ಕ್​ನ ಗುರಿ; ದಕ್ಷಿಣ ಭಾರತದ 4 ನಗರಗಳಲ್ಲಿ ಬುಲೆಟ್ ರೈಲಿಗೆ ಸರ್ವೆ

ಎರಡು ತಿಂಗಳ ಹಿಂದೆ ಆಸ್ಟ್ರಾನಾಮರ್ ಎನ್ನುವ ಕಂಪನಿಯ ಸಿಇಒ ಆಂಡಿ ಬೈರೋನ್ ತಮ್ಮ ಸಹೋದ್ಯೋಗಿಯೊಬ್ಬರೊಂದಿಗೆ ರೋಮ್ಯಾಂಟಿಕ್ ಆಗಿ ಕಾಣಿಸಿಕೊಂಡ ದೃಶ್ಯ ವಿಶ್ವದೆಲ್ಲೆಡೆ ವೈರಲ್ ಆಗಿತ್ತು. ಕೋಲ್ಡ್​ಪ್ಲೇ ಮ್ಯೂಸಿಕ್ ಶೋನಲ್ಲಿ ಕ್ಯಾಮೆರಾ ಕಣ್ಣಿಗೆ ಇವರಿಬ್ಬರು ಸಿಕ್ಕಿಬಿದ್ದಿದ್ದರು. ಅದಾದ ಬಳಿಕ ಆಂಡಿ ಅವರು ರಾಜೀನಾಮೆ ನೀಡಬೇಕಾಯಿತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ