AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದಲ್ಲಿ 7,000 ಕಿಮೀ ಬುಲೆಟ್ ರೈಲು ನೆಟ್ವರ್ಕ್​ನ ಗುರಿ; ದಕ್ಷಿಣ ಭಾರತದ 4 ನಗರಗಳಲ್ಲಿ ಬುಲೆಟ್ ರೈಲಿಗೆ ಸರ್ವೆ

Bangalore and other South Indian cities to be connected in high speed rail network: ಭಾರತದಲ್ಲಿ 7,000 ಕಿಮೀ ಉದ್ದದ ಹೈ ಸ್ಪೀಡ್ ರೈಲು ಜಾಲ ಸ್ಥಾಪಿಸುವ ಗುರಿಯನ್ನು ಪ್ರಧಾನಿ ನರೇಂದ್ರ ಮೋದಿ ಹೊಂದಿದ್ದಾರೆ. ಕಳೆದ ವಾರದ ಜಪಾನ್ ಭೇಟಿ ವೇಳೆ ಮೋದಿ ಈ ವಿಚಾರ ಬಹಿರಂಗಪಡಿಸಿದ್ದಾರೆ. ಇದೇ ವೇಳೆ, ಆಂಧ್ರ ಸಿಎಂ ಚಂದ್ರಬಾಬು ನಾಯ್ಡು, ದಕ್ಷಿಣ ಭಾರತದಲ್ಲಿ ಹೈಸ್ಪೀಡ್ ರೈಲು ಕಾರಿಡಾರ್ ರಚನೆಯನ್ನೂ ಪ್ರಸ್ತಾಪಿಸಿದ್ದಾರೆ.

ಭಾರತದಲ್ಲಿ 7,000 ಕಿಮೀ ಬುಲೆಟ್ ರೈಲು ನೆಟ್ವರ್ಕ್​ನ ಗುರಿ; ದಕ್ಷಿಣ ಭಾರತದ 4 ನಗರಗಳಲ್ಲಿ ಬುಲೆಟ್ ರೈಲಿಗೆ ಸರ್ವೆ
ಬುಲೆಟ್ ರೈಲು
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 01, 2025 | 1:33 PM

Share

ಬೆಂಗಳೂರು, ಸೆಪ್ಟೆಂಬರ್ 1: ಭಾರತ ಈ ಹೈಸ್ಪೀಡ್ ರೈಲು ಜಾಲವನ್ನು (Indian railways) ತ್ವರಿತವಾಗಿ ಹೆಚ್ಚಿಸಲು ಯೋಜಿಸಿದೆ. ಸದ್ಯ ಅಹ್ಮದಾಬಾದ್ ಮತ್ತು ಮುಂಬೈ ಮಾರ್ಗದಲ್ಲಿ ಬುಲೆಟ್ ರೈಲಿನ ಯೋಜನೆ (Bullet train project) ವೇಗವಾಗಿ ಕಾರ್ಯಗತಗೊಳ್ಳುತ್ತಿದೆ. ಈ ಮಧ್ಯೆ ಬುಲೆಟ್ ರೈಲು ವ್ಯವಸ್ಥೆ ತರಲು ವಿವಿಧ ಮಾರ್ಗಗಳನ್ನು ಅವಲೋಕಿಸಲಾಗುತ್ತಿದೆ. ಕಳೆದ ವಾರ ಆಂಧ್ರ ಸಿಎಂ ಎನ್ ಚಂದ್ರಬಾಬು ನಾಯ್ಡು ಅವರು ದಕ್ಷಿಣ ಭಾರತದಲ್ಲಿ ಹೈಸ್ಪೀಡ್ ಕಾರಿಡಾರ್ ಸ್ಥಾಪಿಸುವ ಉದ್ದೇಶ ಇರುವುದನ್ನು ತಿಳಿಸಿದ್ದಾರೆ. ಬೆಂಗಳೂರು ಸೇರಿದಂತೆ ದಕ್ಷಿಣ ಭಾರತದ ನಾಲ್ಕು ನಗರಗಳನ್ನು ಸಂಪರ್ಕಿಸುವ ಹೈಸ್ಪೀಡ್ ರೈಲು ಜಾಲಕ್ಕಾಗಿ ಸರ್ವೆ ಕಾರ್ಯಕ್ಕೆ ಆದೇಶ ಹೊರಡಿಸಿರುವುದಾಗಿ ನಾಯ್ಡು ತಿಳಿಸಿದ್ಧಾರೆ.

ಪ್ರಸ್ತಾಪಿತ ಬುಲೆಟ್ ರೈಲು ಕಾರಿಡಾರ್​ನಲ್ಲಿ ಹೈದರಾಬಾದ್, ಚೆನ್ನೈ, ಅಮರಾವತಿ ಮತ್ತು ಬೆಂಗಳೂರು ನಗರಗಳು ಹೈಸ್ಪೀಡ್ ರೈಲು ಮಾರ್ಗದಲ್ಲಿ ಒಳಗೊಳ್ಳಲಿವೆ. ಈ ಕಾರಿಡಾರ್​ನಲ್ಲಿರುವ ನಾಲ್ಕು ನಗರಗಳಲ್ಲಿ ಐದು ಕೋಟಿಗೂ ಅಧಿಕ ಜನಸಂಖ್ಯೆ ಇದ್ದು, ಹೈಸ್ಪೀಡ್ ರೈಲಿಗೆ ವಾಣಿಜ್ಯಾತ್ಮಕವಾಗಿ ಬಹಳ ಬೇಡಿಕೆಯಲ್ಲಿರುವ ಮಾರ್ಗವೆನಿಸಲಿದೆ ಎಂಬುದು ಆಂಧ್ರ ಸಿಎಂ ಅವರ ಅನಿಸಿಕೆ. ಈ ಸೌತ್ ಇಂಡಿಯಾ ಹೈಸ್ಪೀಡ್ ರೈಲು ಕಾರಿಡಾರ್ ಸಿದ್ಧವಾದಲ್ಲಿ ದಕ್ಷಿಣ ಭಾರತದಲ್ಲಿ ಆರ್ಥಿ ಬೆಳವಣಿಗೆಗೆ ಪುಷ್ಟಿ ಸಿಗುತ್ತದೆ ಎಂದಿದ್ದಾರೆ ಅವರು.

ಇದನ್ನೂ ಓದಿ: ಭಾರತದ ಮೊದಲ ಬುಲೆಟ್ ಟ್ರೈನ್​ಗೆ ಜಪಾನ್​ನ ಶೀನ್ಕಾನ್​ಸೆನ್ ತಂತ್ರಜ್ಞಾನ; ಈ ಅಪ್ಪಟ ಸುರಕ್ಷಿತ ರೈಲು ವ್ಯವಸ್ಥೆ ಬಗ್ಗೆ ತಿಳಿಯಬೇಕಾದ ಸಂಗತಿ

7,000 ಕಿಮೀ ಬುಲೆಟ್ ಟ್ರೈನ್ ನೆಟ್ವರ್ಕ್: ಮೋದಿ

ಕಳೆದ ವಾರ ನರೇಂದ್ರ ಮೋದಿ ಅವರು ಜಪಾನ್ ದೇಶಕ್ಕೆ ಭೇಟಿ ನೀಡಿದ್ದರು. ಜಪಾನ್ ಪ್ರಧಾನಿ ಶಿಗೆರು ಇಶಿಬಾ ಜೊತೆ ಮೋದಿ ಅವರು ಟೋಕಿಯೋದಿಂದ ಸೆಂಡೈವರೆಗೆ ಶೀನ್​ಕಾನ್ಸೆನ್ ಬುಲೆಟ್ ಟ್ರೈನ್​ನಲ್ಲಿ ಪ್ರಯಾಣಿಸಿದರು. ಈ ವೇಳೆ ಅಲ್ಲಿಯ ಮಾಧ್ಯಮವೊಂದರಲ್ಲಿ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ದೇಶದಲ್ಲಿ 7,000 ಕಿಮೀ ಉದ್ದದ ಬುಲೆಟ್ ರೈಲು ಜಾಲ ನಿರ್ಮಿಸುವ ಗುರಿ ಬಗ್ಗೆ ಹೇಳಿಕೊಂಡಿದ್ದಾರೆ.

ಜಪಾನ್ ದೇಶದ ತಂತ್ರಜ್ಞಾನದ ಸಹಾಯದಿಂದ ಮುಂಬೈ ಮತ್ತು ಅಹ್ಮದಾಬಾದ್ ನಡುವೆ ಹೈ ಸ್ಪೀಡ್ ರೈಲು ನೆಟ್ವರ್ಕ್ ನಿರ್ಮಿಸಲಾಗುತ್ತಿದೆ. ಈ ಮಾರ್ಗದಲ್ಲಿ ಜಪಾನ್​ನ ಶೀಂಕಾನ್ಸೆನ್ ಇ5 ಅಥವಾ ಇ10 ಟ್ರೈನ್ ಅನ್ನು ಓಡಿಸುವ ಗುರಿ ಇದೆ. ಇನ್ನು 2-3 ವರ್ಷದಲ್ಲಿ ಈ ರೈಲು ಮಾರ್ಗ ಸಿದ್ಧವಾಗಲಿದೆ.

ಬುಲೆಟ್ ರೈಲುಗಳಿಗೆ ಸಂಭಾವ್ಯ ಮಾರ್ಗಗಳು

ಬುಲೆಟ್ ಟ್ರೈನುಗಳನ್ನು ಎಲ್ಲೆಲ್ಲಿ ಚಲಾಯಿಸಬಹುದು ಎಂದು ಅವಲೋಕಿಸುವ ಕಾರ್ಯ ನಡೆದಿದೆ. ನ್ಯಾಷನಲ್ ರೈಲ್ ಪ್ಲಾನ್​ನಿಂದ ಹಲವು ಸಂಭಾವ್ಯ ಮಾರ್ಗಗಳನ್ನು ಗುರುತಿಸಲಾಗಿದೆ. ಇದರಲ್ಲಿ ಮೈಸೂರು ಕೂಡ ಸೇರಿದೆ. ಸದ್ಯ ಗುರುತಿಸಲಾಗಿರುವ ಕೆಲ ಮಾರ್ಗಗಳು ಈ ಕೆಳಕಂಡಂತಿವೆ:

  • ದೆಹಲಿ – ವಾರಾಣಸಿ
  • ದೆಹಲಿ – ಅಹ್ಮದಾಬಾದ್
  • ಮುಂಬೈ – ನಾಗಪುರ್
  • ಮುಂಬೈ – ಹೈದರಾಬಾದ್
  • ಚೆನ್ನೈ – ಮೈಸೂರು
  • ದೆಹಲಿ – ಅಮೃತಸರ್
  • ವಾರಾಣಸಿ – ಹೌರಾ

ಇದನ್ನೂ ಓದಿ: ರೈಲುಗಳಲ್ಲಿ ಹೊಸ ಲಗೇಜ್ ನಿಯಮ; ಗಂಟುಮೂಟೆ ಕಟ್ಟಿ ರೈಲು ಹತ್ತುವ ಮುನ್ನ ಹುಷಾರ್

ಈ ಮೊದಲು ಬೆಂಗಳೂರು ಮತ್ತು ಚೆನ್ನೈ ನಡುವೆ ಬುಲೆಟ್ ರೈಲು ಓಡಿಸುವ ಪ್ರಸ್ತಾಪ ಇತ್ತು. ಈಗ ಮೈಸೂರಿನಿಂದ ಚೆನ್ನೈವರೆಗೆ ಬುಲೆಟ್ ರೈಲು ಹೋಗಬೇಕಾದರೆ, ಬೆಂಗಳೂರು ಮೂಲಕ ಹಾದುಹೋಗಬೇಕು. ಹೀಗಾಗಿ, ಬೆಂಗಳೂರು ಮತ್ತು ಚೆನ್ನೈ ಬದಲು ಮೈಸೂರು ಚೆನ್ನೈ ರೈಲು ಮಾರ್ಗವನ್ನು ಅವಲೋಕಿಸುತ್ತಿರಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ರಿಷಬ್ ಶೆಟ್ಟಿ ಹೊಸ ಸಿನಿಮಾನಲ್ಲಿ ನಟಿಸಲು ನೂಕು ನುಗ್ಗಲು: ವಿಡಿಯೋ ನೋಡಿ
ರಿಷಬ್ ಶೆಟ್ಟಿ ಹೊಸ ಸಿನಿಮಾನಲ್ಲಿ ನಟಿಸಲು ನೂಕು ನುಗ್ಗಲು: ವಿಡಿಯೋ ನೋಡಿ
ಕಾಂಗ್ರೆಸ್ ಸೇವಾದಳದಿಂದ ಎಡವಟ್ಟು: ಉಲ್ಟಾ ಧ್ವಜ ನೀಡಿ ಅಧಿಕಾರ ಹಸ್ತಾಂತರ
ಕಾಂಗ್ರೆಸ್ ಸೇವಾದಳದಿಂದ ಎಡವಟ್ಟು: ಉಲ್ಟಾ ಧ್ವಜ ನೀಡಿ ಅಧಿಕಾರ ಹಸ್ತಾಂತರ
ಉಪ್ಪಿನ ಕೇಕ್ ತಿಂದ ಶಾಸ್ತ್ರಿ, ಅದ್ಭುತ ನಟನೆ ಎಂದ ಕಿಚ್ಚ: ವಿಡಿಯೋ ನೋಡಿ
ಉಪ್ಪಿನ ಕೇಕ್ ತಿಂದ ಶಾಸ್ತ್ರಿ, ಅದ್ಭುತ ನಟನೆ ಎಂದ ಕಿಚ್ಚ: ವಿಡಿಯೋ ನೋಡಿ
ಗಣಪತಿ ಮೂರ್ತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್ ಫೋಟೋ!
ಗಣಪತಿ ಮೂರ್ತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್ ಫೋಟೋ!
ಶೌಚಾಲಯಕ್ಕೂ ಜಾತಿ ಕೇಳಿದ ಅಧಿಕಾರಿಗಳು: ಪ್ರಜಾಸೇವಾಯಲ್ಲಿ ಕಣ್ಣೀರಿಟ್ಟ ಮಹಿಳೆ
ಶೌಚಾಲಯಕ್ಕೂ ಜಾತಿ ಕೇಳಿದ ಅಧಿಕಾರಿಗಳು: ಪ್ರಜಾಸೇವಾಯಲ್ಲಿ ಕಣ್ಣೀರಿಟ್ಟ ಮಹಿಳೆ
ನೆಲಮಂಗಲ ಭಾಗದಲ್ಲಿ ಮಿತಿಮೀರಿದ ಕಳ್ಳರ ಹಾವಳಿ: ದೇವರನ್ನೂ ಬಿಡದ ಖದೀಮರು
ನೆಲಮಂಗಲ ಭಾಗದಲ್ಲಿ ಮಿತಿಮೀರಿದ ಕಳ್ಳರ ಹಾವಳಿ: ದೇವರನ್ನೂ ಬಿಡದ ಖದೀಮರು
ಬಿ.ವೈ.ವಿಜಯೇಂದ್ರ ಸಮ್ಮುಖದಲ್ಲೇ ಕಿತ್ತಾಡಿಕೊಂಡ ಬಿಜೆಪಿ ಮುಖಂಡರು
ಬಿ.ವೈ.ವಿಜಯೇಂದ್ರ ಸಮ್ಮುಖದಲ್ಲೇ ಕಿತ್ತಾಡಿಕೊಂಡ ಬಿಜೆಪಿ ಮುಖಂಡರು
ಗದಗ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಆವಿಷ್ಕಾರ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
ಗದಗ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಆವಿಷ್ಕಾರ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
ದಸರಾ ಸಮಿತಿಯಿಂದ ಕೊಪ್ಪಳ ಶ್ರೀಗಳಿಗೆ ಅಧಿಕೃತ ಆಹ್ವಾನ
ದಸರಾ ಸಮಿತಿಯಿಂದ ಕೊಪ್ಪಳ ಶ್ರೀಗಳಿಗೆ ಅಧಿಕೃತ ಆಹ್ವಾನ
SIR ಗೊಂದಲ: ಜೀವಂತ ವ್ಯಕ್ತಿಗಳ ಮರಣ ಪತ್ರ ಪ್ರದರ್ಶಿಸಿದ ಯತ್ನಾಳ್
SIR ಗೊಂದಲ: ಜೀವಂತ ವ್ಯಕ್ತಿಗಳ ಮರಣ ಪತ್ರ ಪ್ರದರ್ಶಿಸಿದ ಯತ್ನಾಳ್